ಕೃಷ್ಣಮೂರ್ತಿ ಪುರಾಣಿಕ

ಕೃಷ್ಣಮೂರ್ತಿ ಪುರಾಣಿಕರು ಬಾಗಲಕೋಟೆ ಜಿಲ್ಲೆಯ ಬೀಳಗಿಯವರು, ಆದರೆ ನೆಲೆಸಿದ್ದು ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ. ಇವರ ಜನನ ೧೯೧೧ ಸೆಪ್ಟೆಂಬರ ೫ರಂದು. ಕೃಷ್ಣಮೂರ್ತಿ ಪುರಾಣಿಕರು ಬಿ.ಏ.ಬಿ.ಟಿ ಪದವಿ ಪಡೆದ ಬಳಿಕ ಗೋಕಾಕ ಪ್ರೌಢಶಾಲೆಯಲ್ಲಿ ಅಧ್ಯಾಪಕ ವೃತ್ತಿಯನ್ನು ಪ್ರಾರಂಭಿಸಿದರು.[೧]

ಕಾದಂಬರಿಗಳು ಬದಲಾಯಿಸಿ

ಪುರಾಣಿಕರು ಒಟ್ಟು ಎಂಬತ್ತು ಕಾದಂಬರಿಗಳನ್ನು ಬರೆದಿದ್ದಾರೆ. ಇವುಗಳಲ್ಲಿ ಹನ್ನೊಂದು ಕಾದಂಬರಿಗಳು ಚಲನಚಿತ್ರಗಳಾಗಿವೆ. ಇವರ ಕಾದಂಬರಿ ‘ ಧರ್ಮದೇವತೆ’ಯೆ ಕರುಣೆಯೇ ಕುಟುಂಬದ ಕಣ್ಣು ಎಂದು ಕನ್ನಡದ ಪ್ರಥಮ ಕಾದಂಬರಿ ಆಧಾರಿತ ಚಲನಚಿತ್ರವಾಯಿತು. ‘ಮುತ್ತೈದೆ’ ಕಾದಂಬರಿಯು ತಮಿಳಿನಲ್ಲಿ ಚಲನಚಿತ್ರವಾಗಿದೆ. ಹಾಲುಂಡ ತವರು ಎಂಬ ಕಾದಂಬರಿ ಅದೇ ಹೆಸರಿನಿಂದ ಚಲನಚಿತ್ರವಾಗಿ ಪ್ರಸಿದ್ಧವಾಗಿದೆ. ಕಾದಂಬರಿಗಳನ್ನಲ್ಲದೆ ಕೃಷ್ಣಮೂರ್ತಿ ಪುರಾಣಿಕರು ಹನ್ನೆರಡು ಸಣ್ಣ ಕಥಾಸಂಗ್ರಹಗಳನ್ನೂ, ನಾಲ್ಕು ಕವನಸಂಗ್ರಹಗಳನ್ನೂ ಹೊರತಂದಿದ್ದಾರೆ. ಇವರಮಣ್ಣಿನ ಮಗಳು ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭಿಸಿದೆ.[೨]

 • ಮುತ್ತೈದೆ
 • ಮಣ್ಣಿನ ಮಗಳು
 • ಧರ್ಮದೇವತೆ
 • ಕಣ್ಣು ತುಂಬಿದ ಕರುಣೆ
 • ವೇಷಧಾರಿ
 • ಮಂಗಲಾಕ್ಷತೆ
 • ಮಂದಾರ ಮಂದಾಕಿನಿ
 • ಗಂಧದ ಬಳ್ಳಿ,
 • ಹಾಲುಂಡ ತವರು
 • ಬೆವರಿನ ಬೆಲೆ
 • ಹಿಮಗಿರಿಯ ಗೌರಿ

ಕವನ ಸಂಗ್ರಹಗಳು ಬದಲಾಯಿಸಿ

 • ಬಾಳಕನಸು
 • ಜೀವನಾದ

ವಿಮರ್ಶೆ ಬದಲಾಯಿಸಿ

 • ಸಾಹಿತ್ಯ ಪ್ರಬಂಧಗಳು

ನಾಟಕಗಳು ಬದಲಾಯಿಸಿ

 • ಸೈರಂಧ್ರಿ
 • ಜಯಭೇರಿ

ಮಕ್ಕಳ ಕೃತಿಗಳು ಬದಲಾಯಿಸಿ

 • ಬೆಳವಡಿ ಮಲ್ಲಮ್ಮ
 • ಅಳಿಯದೇವರ ಆಟ.[೩]

ಅಭಿನಂದನ ಗ್ರಂಥ ಬದಲಾಯಿಸಿ

 • ಕಾದಂಬರಿ ದರ್ಶನ

ಕೃಷ್ಣಮೂರ್ತಿ ಪುರಾಣಿಕರು ೧೯೮೫ ನವೆಂಬರ ೧೩ ರಂದು ತೀರಿಕೊಂಡರು.

ಉಲ್ಲೇಖಗಳು ಬದಲಾಯಿಸಿ

 1. Bhatt, S. C. (2006). "Land and People of Indian States and Union Territories: In 36 Volumes. Karnataka". Gyan Publishing House. p. 547. Retrieved 27 June 2018.
 2. ಕೃಷ್ಣಮೂರ್ತಿ ಪುರಾಣಿಕ kanaja.in [ಶಾಶ್ವತವಾಗಿ ಮಡಿದ ಕೊಂಡಿ]
 3. ಕೃಷ್ಣಮೂರ್ತಿ ಪುರಾಣಿಕರ ಕಾದಂಬರಿ ಪ್ರತಿಗಳಿದ್ದರೆ ತಿಳಿಸಿ