ಕೃತ್ತಿಕಾ ರವೀಂದ್ರ
ಕೃತ್ತಿಕಾ ರವೀಂದ್ರ ಕರ್ನಾಟಕದ ಚಲನಚಿತ್ರ ಹಾಗೂ ಕಿರುತೆರೆ ನಟಿಯಾಗಿದ್ದಾರೆ. ಇವರು "ರಾಧಾ ಕಲ್ಯಾಣ" ಎಂಬ ಧಾರವಾಹಿಯ ಮೂಲಕ ಖ್ಯಾತರಾಗಿದ್ದಾರೆ. ೨೦೧೫ರಲ್ಲಿ ನಡೆದ ಕಿರುತೆರೆ ಕಾರ್ಯಕ್ರಮ "ಬಿಗ್ ಬಾಸ್ - ಕನ್ನಡ ೩" ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು[೧].[೨]
ಕೃತ್ತಿಕಾ ರವೀಂದ್ರ | |
---|---|
ಜನನ | ಕೃತ್ತಿಕಾ ಆರ್ ೧೭ ಮಾರ್ಚ್ ೧೯೯೪ |
ವೃತ್ತಿ | ಚಲನಚಿತ್ರ ನಟಿ |
ಸಕ್ರಿಯ ವರ್ಷಗಳು | ೨೦೦೮ರಿಂದ ಪ್ರಸ್ತುತ |
ಜಾಲತಾಣ | https://kruttikaravindra.com/ |
ಕೌಟುಂಬಿಕ ಹಿನ್ನಲೆ
ಬದಲಾಯಿಸಿಕೃತ್ತಿಕಾ, ಶಿವಮೊಗ್ಗ ಜಿಲ್ಲೆಯ, ಸಾಗರ ತಾಲೂಕಿನ ಅನಂದಪುರದ ಹವ್ಯಕ ಬ್ರಾಹ್ಮಣ ಸಮುದಾಯದ ರವೀಂದ್ರ ಹಾಗೂ ಮೀನಾರವರಿಗೆ ದಿನಾಂಕ ೧೭ ಮಾರ್ಚ್ ೧೯೯೪ರಂದು ಜನಿಸಿದರು. ಇವರು ಬಾಲ್ಯದಲ್ಲಿಯೇ ತಮ್ಮ ತಂದೆಯನ್ನು ಕಳೆದುಕೊಂಡರು. ತಾಯಿ ಮೀನಾರವರು ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದಾರೆ. ಕೃತ್ತಿಕಾ ತಮ್ಮ ಶಿಕ್ಷಣವನನ್ನು ಆನಂದಪುರದ ಸಾಧನಾ ವಿದ್ಯಾ ಕೇಂದ್ರದಲ್ಲಿ ಪಡೆದರು.
ವೃತ್ತಿ ಜೀವನ
ಬದಲಾಯಿಸಿಕೃತ್ತಿಕಾರವರು ೨೦೦೮ರಲ್ಲಿ ತಮ್ಮ ೧೪ನೇ ವಯಸ್ಸಿನಲ್ಲಿ "ಪಟ್ರೆ ಲವ್ಸ್ ಪದ್ಮ", ಎಂಬ ಚಿತ್ರದ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಬಳಿಕ "ಮನೆ ಮಗಳು" ಎಂಬ ಧಾರಾವಾಹಿಯ ಮುಲಕ ಕಿರುತೆರೆಯನ್ನು ಪ್ರವೇಶಿಸಿದರು. ಇವರು ನಟಿಸಿದ "ರಾಧಾ ಕಲ್ಯಾಣ" ರಾಧಿಕಾ ಪಾತ್ರ ಪ್ರಸಿದ್ದಿ ಪಡೆಯಿತು. ಈ ಧಾರಾವಾಹಿಯು ಸುಮಾರು ಮೂರುವರೆ ವರ್ಷಗಳ ಕಾಲ ಪ್ರಸಾರವಾಯಿತು.[೩] ೨೦೧೫ರಲ್ಲಿ ನಡೆದ "ಬಿಗ್ ಬಾಸ್ - ಕನ್ನಡ ೩"ರಲ್ಲಿ ಸ್ಫರ್ಧಿಯಾಗಿ ಭಾಗವಹಿಸಿದ್ದರು.
ಚಲನಚಿತ್ರ/ಧಾರಾವಾಹಿಗಳ ಪಟ್ಟಿ
ಬದಲಾಯಿಸಿಅಭಿನಯಿಸಿದ ಕನ್ನಡ ಚಲನಚಿತ್ರಗಳು
ಬದಲಾಯಿಸಿವರ್ಷ | ತಲೆಬರಹ | ಪಾತ್ರ | ಟಿಪ್ಪಣಿಗಳು |
---|---|---|---|
೨೦೦೮ | ಪಟ್ರೆ ಲವ್ಸ್ ಪದ್ಮ[೪] | ಪದ್ಮ | ಮೊದಲ ಚಿತ್ರ |
೨೦೦೮ | ಆಟೋ | ||
೨೦೧೦ | ಲಿಫ್ಟ್ ಕೊಡ್ಲಾ..? | ||
೨೦೧೮ | ಕೆಂಗುಲಾಬಿ[೫][೨] | ಶಾರಿ | ಈ ಚಿತ್ರವು ಅತ್ಯತ್ತಮ ಕಥೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದೆ |
೨೦೦೮ | ಯಾರಿಗೆ ಯಾರುಂಟು | ||
೨೦೨೧ | ಶಾರ್ದೂಲ | ಬಿಡುಗಡೆಗೆ ಸಿದ್ದವಿರುವ ಚಿತ್ರ | |
೨೦೨೧ | ರಾಜನಿವಾಸ | ಚಿತ್ರೀಕರಣ ನಡೆಯುತ್ತಿದೆ | |
೨೦೨೧ | ಮಾರೀಚ[೬] | ಪ್ರತಿಮಾ | ಚಿತ್ರಿಕರಣ ಮುಗಿದಿದೆ |
ಅಭಿನಯಿಸಿದ ಧಾರಾವಾಹಿಗಳು
ಬದಲಾಯಿಸಿವರ್ಷ | ತಲೆಬರಹ | ಪಾತ್ರ | ಟಿಪ್ಪಣಿಗಳು |
---|---|---|---|
೨೦೧೦ | ಮನೆ ಮಗಳು | ಇಂಚರ | ಉದಯ ಟೀವಿಯಲ್ಲಿ ಪ್ರಸಾರವಾದ ಧಾರಾವಾಹಿ |
೨೦೧೧ | ರಾಧಾ ಕಲ್ಯಾಣ | ರಾಧಿಕಾ | ಝೀ ಕನ್ನಡ ವಾಹಿನಿಯಲ್ಲಿ ಸುಮಾರು ೧೦೭೪ ಕಂತುಗಳು ಪ್ರಸಾರವಾದ ಧಾರಾವಾಹಿ |
ಉಲ್ಲೇಖಗಳು
ಬದಲಾಯಿಸಿ- ↑ "9 Things You Must Know About Bigg Boss Kannada Contestant Kruttika Ravindra". Desimartini (in ಇಂಗ್ಲಿಷ್). 2015-12-23. Retrieved 2021-07-25.
- ↑ ೨.೦ ೨.೧ Aug 15, Bangalore Mirror Bureau / Updated:; 2018; Ist, 04:00. "Kruttika has taken 3 bold steps into Sandalwood". Bangalore Mirror (in ಇಂಗ್ಲಿಷ್). Retrieved 2021-07-25.
{{cite web}}
:|last2=
has numeric name (help)CS1 maint: extra punctuation (link) CS1 maint: numeric names: authors list (link) - ↑ "Chandan Kumar completes a decade in the Kannada entertainment industry: A look at his journey". The Times of India (in ಇಂಗ್ಲಿಷ್). 2020-11-09. Retrieved 2021-07-25.
- ↑ "Patre Loves Padma (2008) | Patre Loves Padma Movie | Patre Loves Padma Kannada Movie Cast & Crew, Release Date, Review, Photos, Videos". FilmiBeat (in ಇಂಗ್ಲಿಷ್). Retrieved 2021-07-25.
- ↑ https://www.indiaglitz.com/kengulabi-complete-bhandage-confident-kannada-news-183355 Kannada Movie
- ↑ "Nataraj turns undercover cop in a Sudheer Shanbhogue directorial - Times of India". The Times of India (in ಇಂಗ್ಲಿಷ್). Retrieved 2021-07-25.