ಕೂಡ್ಲಿ
ಕೂಡ್ಲಿ (ಕೂಡಲಿ) ಶಿವಮೊಗ್ಗ ಜಿಲ್ಲೆಯ ಒಂದು ಪುಟ್ಟ ಊರು. ಈ ಊರು ಭಾರತ ದೇಶದ ಕರ್ನಾಟಕ ರಾಜ್ಯಕ್ಕೆ ಸೇರುತ್ತದೆ.
ತುಂಗಾ ಮತ್ತು ಭದ್ರಾ - ನದಿಗಳು, ಬೇರೆ ಬೇರೆಯಾಗಿ ಉಗಮಿಸಿ, ಕೂಡ್ಲಿ (ಕೂಡಲಿ) ಎಂಬಲ್ಲಿ ಈ ಜೀವನದಿಗಳ ಸಂಗಮವಾಗುತ್ತವೆ. ಈ ಊರು ತುಂಗಭದ್ರಾ ನದಿಗೆ ಜನ್ಮ ನೀಡುವ ಸ್ಥಳ.
ಪ್ರಾಮುಖ್ಯತೆಸಂಪಾದಿಸಿ
ಆದಿ ಕಾಲದ ಸಂಗಮೇಶ್ವರ ದೇವಾಲಯ, ಸಂಗಮ ಹಾಗೂ ಪರಿಸರದ ವಿಹಂಗಮ ನೋಟ ಈ ಪ್ರದೇಶವನ್ನು ಸುಂದರಗೊಳಿಸಿದೆ. ಮಗದೊಂದು ಪ್ರವಾಸಿ ತಾಣವೆಂದೂ ಹೇಳಿದರೆ ತಪ್ಪಾಗದು. ಇಲ್ಲಿಯ ರಂಗನಾಥ ಸ್ವಾಮಿ ದೇವಾಲಯವೂ ಜನಪ್ರಿಯ. ಸಂಗಮ ಸ್ಥಳದಲ್ಲಿ ಸಂಗಮೇಶ್ವರನ ಗುಡಿ ಇದೆ. ಈ ಪುಟ್ಟ ಗುಡಿ ಸಂಗಮ ಸ್ಥಳವನ್ನು ಸೂಚಿಸುತ್ತದೆ. ಸಂಗಮೇಶ್ವರ ದೇವಾಲಯಕ್ಕೆ ಮಹತ್ತರ ಇತಿಹಾಸವಿರುವುದು. ಈ ದೇವಾಲಯ ಹೊಯ್ಸಳರ ಕಾಲದ್ದೆಂದು ಹೇಳಲಾಗುತ್ತದೆ. ಪ್ರಾಚೀನ ಶಿಲ್ಪಕಲೆಗಳಿಂದ ರಾರಾಜಿಸುವ ಈ ದೇವಾಲಯ ಕೂಡ್ಲಿಯ ಪ್ರಮುಖ ಆಕರ್ಷಣೆಗಳಲ್ಲೊಂದು.
ಇತಿಹಾಸಸಂಪಾದಿಸಿ
ಇಲ್ಲಿಯ ಪ್ರಾಚೀನ ಸಂಗಮೇಶ್ವರ ದೇವಾಲಯ ಹೊಯ್ಸಳರ ಕಾಲದ್ದೆಂದು ಹೇಳಲಾಗುತ್ತದೆ. ಇಲ್ಲಿ ಕೆಲವು ಪ್ರಾಚೀನ ಶಾಸನಗಳಿರುವುದುಂಟು. ದೇವಾಲಯದ ಸುಂದರ ಶಿಲ್ಪಕಲೆ ಜನರ ಮನ ಸೂರೆಗೊಳಿಸುತ್ತದೆ. ಇದಲ್ಲದೆ ಇನ್ನೂ ಕೆಲವು ಚಿಕ್ಕ ಪುಟ್ಟ ಪ್ರಾಚೀನ ದೇವಾಲಯಗಳು ಇಲ್ಲಿ ಇರುವುದುಂಟು. ಕೂಡಲಿಯಲ್ಲಿ ಶಾರದ ಪೀಠವಾದ ಕೂಡಲಿ ಶೃಂಗೇರಿ ಮಠ.
ಕೂಡ್ಲಿಯಲ್ಲಿ ಆರ್ಯ ಅಕ್ಷೋಭ್ಯ ತೀರ್ಥರ ಮಠವಿದೆ.