ಕುವೆಂಪು ವಿಶ್ವವಿದ್ಯಾಲಯ
ಕುವೆಂಪು ವಿಶ್ವವಿದ್ಯಾನಿಲಯ - ಕರ್ನಾಟಕ ರಾಜ್ಯದಲ್ಲಿರುವ ವಿಶ್ವವಿದ್ಯಾನಿಲಯಗಳಲ್ಲಿ ಒಂದು. ಇದರ ಧ್ಯೇಯವಾಕ್ಯ ವಿಶ್ವಮಾನವ ಪರಿಕಲ್ಪನೆಯನ್ನು ಒಳಗೊಂಡಿದೆ. ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಠಿ ಎಂಬ ಮಾತುಗಳೊಂದಿಗೆ ಲಾಂಛನವನ್ನು ಮಾಡಲಾಗಿದೆ.[೫]
ಹಿಂದಿನ ಹೆಸರು | Sahyadri University |
---|---|
ಧ್ಯೇಯ | ಬೋಧನೆ ಮೂಲಕ ಕ್ರಿಯಾಶೀಲತೆಯ ಪೋಷಣೆ |
Motto in English | "Foster Creativity in Teaching" |
ಪ್ರಕಾರ | Public |
ಸ್ಥಾಪನೆ | 1987[೧] |
ಕುಲಪತಿಗಳು | Vajubhai Rudabhai Vala Governor of Karnataka |
ಉಪ-ಕುಲಪತಿಗಳು | Prof. Jogan Shankar[೨] |
ವಿದ್ಯಾರ್ಥಿಗಳು | 9,386[೩] |
ಪದವಿ ಶಿಕ್ಷಣ | 5,831[೩] |
ಸ್ನಾತಕೋತ್ತರ ಶಿಕ್ಷಣ | 3,308[೩] |
238 | |
ಇತರೆ ವಿದ್ಯಾರ್ಥಿಗಳು | 12 |
ಸ್ಥಳ | Shimoga, Karnataka, India 13°55′0.12″N 75°34′0.12″E / 13.9167000°N 75.5667000°E |
ಆವರಣ | Rural 230 acres (93 ha) (Main campus)[೪] |
ಕ್ರೀಡೆಗಳು | Football, cricket, basketball, hockey, tennis, swimming, etc. |
ಮಾನ್ಯತೆಗಳು | UGC, NAAC, AIU |
ಜಾಲತಾಣ | www |
ಪರಿಚಯ
ಬದಲಾಯಿಸಿಈ ವಿಶ್ವವಿದ್ಯಾನಿಲಯವನ್ನು ಕನ್ನಡ ಸಾಹಿತ್ಯಲೋಕದ ಅಗ್ರಗಣ್ಯರಲ್ಲೊಬ್ಬರಾದ, ಜ್ಞಾನಪೀಠ ಪ್ರಶಸ್ತಿ ವಿಜೇತ, ರಾಷ್ಟ್ರಕವಿ ಕುವೆಂಪು ಅವರ ಹೆಸರಿನಲ್ಲಿ ೧೯೮೭ನೇ ಇಸ್ವಿ ಜೂನ್ ೨೯ರಂದು ಪ್ರಾರಂಭಿಸಲಾಯಿತು. ಇದರ ಮೊದಲ ಕುಲಪತಿಗಳು ಲೇಖಕರಾದ ಶಾಂತಿನಾಥ ದೇಸಾಯಿ ಅವರು. ಮಲೆನಾಡಿನ ಪ್ರಕೃತಿ ಮಡಿಲಲ್ಲಿರುವ ಜ್ಞಾನ ಸಹ್ಯಾದ್ರಿ ಪ್ರಾಂಗಣದಲ್ಲಿ ಈ ವಿಶ್ಯವಿದ್ಯಾನಿಲಯ ಸ್ಥಾಪಿತವಾಗಿದೆ. ಈ ಪ್ರಾಂಗಣವು ಭದ್ರಾ ನದಿಯ ಹತ್ತಿರವಿದ್ದು, ಶಿವಮೊಗ್ಗದಿಂದ ೨೮ಕಿ.ಮೀ. ದೂರದಲ್ಲಿಯೂ, ಭದ್ರಾವತಿಯ ಕೈಗಾರಿಕಾ ಪಟ್ಟಣದಿಂದ ೧೮ ಕಿ.ಮೀ ದೂರದಲ್ಲಿಯೂ ಇರುವ ಶಂಕರಘಟ್ಟ ಎಂಬ ಗ್ರಾಮಕ್ಕೆ ಹೊಂದಿಕೊಂಡಿದೆ. ತರೀಕೆರೆಯಿಂದ ೧೮ ಕಿ.ಮೀ ದೂರದಲ್ಲಿದೆ. ಈ ವಿಶ್ವವಿದ್ಯಾಲಯದ ಕುರಿತಾದ ಗೀತೆಯನ್ನು ಕನ್ನಡದ ಪ್ರೇಮ ಕವಿ ಎಂದೇ ಖ್ಯಾತರಾದ ಕೆ.ಎಸ್. ನರಸಿಂಹಸ್ವಾಮಿಯವರು ರಚಿಸಿದ್ದಾರೆ.
ಉಲ್ಲೇಖಗಳು
ಬದಲಾಯಿಸಿ- ↑ https://www.google.co.in/search?q=establishment+of+kuvempu+university&oq=establishm&aqs=chrome.0.35i39j69i57j0l2.5848j0j7&client=ms-android-lenovo&sourceid=chrome-mobile&ie=UTF-8
- ↑ https://www.google.co.in/search?q=kuvempu+university+vice+chancellor&oq=kevempu+University+v&aqs=chrome.1.69i57j0l3.14824j0j7&client=ms-android-lenovo&sourceid=chrome-mobile&ie=UTF-8
- ↑ ೩.೦ ೩.೧ ೩.೨ "Kuvempu University - Student enrollment details". UGC. Retrieved 12 February 2012.
- ↑ https://www.google.co.in/search?q=location+of+kuvempu+university&oq=location+of+kuvem&aqs=chrome.1.69i57j33.11112j0j7&client=ms-android-lenovo&sourceid=chrome-mobile&ie=UTF-8
- ↑ http://www.kuvempu.ac.in/php/about.php
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |