ಕುಲಮುದ್ದನ ಮಾವಳಿ ಶಾಸನ

ಕುಲಮುದ್ದನ ಮಾವಳಿ ಶಾಸನ ರಾಷ್ಟ್ರಕೂಟ ಮೂರನೇ ಗೋವಿಂದನ ಕಾಲದಲ್ಲಿ ಪ್ರಸಿದ್ದವಾಗಿತ್ತು. ಇದು ಮೂರನೇ ಗೋವಿಂದನ ಸಾಮ್ರಾಜ್ಯದ ಒಳಗೆ ಮಹಾಮಾಂಡಲೀಕರಾದ ರಾಜಾದಿತ್ಯ ಮತ್ತು ಚಿತ್ರವಾಹನ ನಡೆಸಿದ ಕಾಳಗವೊಂದನ್ನು ನಿರೂಪಿಸುತ್ತದೆ.

ಇತಿವೃತ್ತ ಬದಲಾಯಿಸಿ

ಕುಲಮುದ್ದ ಎಂಬ ವೀರ, ಮಹಾಮಾಂಡಲೀಕರಾದ ರಾಜಾದಿತ್ಯ ಮತ್ತು ಚಿತ್ರವಾಹನ ನಡೆಸಿದ ಕಾಳಗವೊಂದರಲ್ಲಿ ತನ್ನ ಒಡೆಯ ಮೂರನೇ ಗೋವಿಂದನಿಗೆ ಜಯವನ್ನು ಗಳಿಸಿಕೊಟ್ಟು, ಯುದ್ದದಲ್ಲಿ ಮರಣ ಹೊಂದಿದನು. ವೀರ ಕುಲಮುದ್ದನಿಗೆ ಮರಣೋತ್ತರ ದಾನವನ್ನು ನೀಡಿರುವುದನ್ನು ಈ ಶಾಸನ ಕ್ರಮಬದ್ದವಾಗಿ ನಿರೂಪಿಸುತ್ತದೆ. ಆದುದರಿಂದ ಈ ಶಾಸನ ವೀರಗಲ್ಲೂ ಹೌದು, ದಾನಶಾಸನವೂ ಹೌದು. ಈ ಶಾಸನದಲ್ಲಿ ಹಳಗನ್ನಡ ಮತ್ತು ಪೂರ್ವದ ಹಳಗನ್ನಡದ ರೂಪಗಳೆರಡನ್ನು ಕಾಣಬಹುದಾಗಿದೆ. ಅದರಲ್ಲೂ ಹಳಗನ್ನಡದ ಗದ್ಯಕ್ಕೆ ಈ ಶಾಸನ ಮಾದರಿಯಾಗಿದೆ. ಈ ಶಾಸನದ ಕಾಲ ಕ್ರಿ.ಶ.೮೦೦.

ಶಾಸನದ ವೈಶಿಷ್ಟ್ಯ ಬದಲಾಯಿಸಿ

ರಾಷ್ಟ್ರಕೂಟರ ಕಾಲದಲ್ಲಿ ಪ್ರಸಿದ್ದನೆನಿಸಿದ ರಾಜ ಮೂರನೆ ಗೋವಿಂದ ಪ್ರಜಾನುರಾಗಿಯಾಗಿದ್ದ. ತನ್ನ ಅಂಗರಕ್ಷಣೆಗೆ ಹಲವಾರು ಯೋಧರನ್ನು ತನ್ನೊಂದಿಗೆ ಇಟ್ಟುಕೊಂಡಿದ್ದ. ಅಂತಹವರಲ್ಲಿ ಕುಲಮುದ್ದ ಪ್ರಮುಖನಾಗಿದ್ದಾನೆ. ಇವನು ತನ್ನ ಸ್ವಾಮಿನಿಷ್ಠೆಯನ್ನು ಮೆರೆಯಲು, ಮಹಾ ಮಾಂಡಲೀಕರಾದ ರಾಜಾದಿತ್ಯ ಮತ್ತು ಚಿತ್ರವಾಹನರು ನಡೆಸಿದ ಕದನದಲ್ಲಿ ವೀರಾವೇಶದಿಂದ ಹೋರಾಡಿ, ತನ್ನ ಪ್ರಾಣವನ್ನೇ ಪಣವಾಗಿಟ್ಟು ವಿಜಯವನ್ನು ತನ್ನ ರಾಜನಿಗೆ ತಂದು ಕೊಡುತ್ತಾನೆ. ಅವನ ಕರ್ತವ್ಯನಿಷ್ಠೆಯನ್ನು ಗೌರವಿಸಲೋಸುಗ, ಮೂರನೇ ಗೋವಿಂದ ಈ ಶಾಸನವನ್ನು 'ಮಾವಳಿ' ಎಂಬ ಊರಿನಲ್ಲಿ ಬರೆಸಿದನೆಂದು ಹೇಳಲಾಗಿದೆ. ಆದುದರಿಂದ ಈ ಶಾಸನವನ್ನು 'ಕುಲಮುದ್ದನ ಮಾವಳಿ ಶಾಸನ'ವೆಂದು ಕರೆಯಲಾಗಿದೆ.