ಕುನಾಲ್
ಕುನಾಲ್ ಭಾರತದ ಹರಿಯಾಣ ರಾಜ್ಯದ ಫತೇಹಾಬಾದ್ ಜಿಲ್ಲೆಯಲ್ಲಿರುವ ಹರಪ್ಪನ್ ಪೂರ್ವ ಕಾಲದ ವಸಾಹತು. ಈ ಸಿಂಧೂ ಕಣಿವೆ ನಾಗರೀಕತೆಯ ತಾಣವು ಕಾಲಿಬಂಗಾದಂತಹ ಪಟ್ಟಣಗಳು ಮತ್ತು ಐವಿಸಿಯ ರಾಖಿಗಢಿಯಂತಹ ನಗರಗಳಿಗೆ ಹೋಲಿಸಿದರೆ ಒಂದು ಹಳ್ಳಿಯಾಗಿತ್ತು.[೧] ಈ ತಾಣವು ಸರಸ್ವತಿ ಬಯಲಿನಲ್ಲಿ ಸ್ಥಿತವಾಗಿದೆ.[೨]
ಆವಿಷ್ಕಾರಗಳು
ಬದಲಾಯಿಸಿಮಡಕೆಗಳ ಮೇಲಿನ ವಿನ್ಯಾಸಗಳಲ್ಲಿ ಅಶ್ವತ್ಥದ ಎಲೆಗಳು ಮತ್ತು ಹಿಳಲುಳ್ಳ ಗೂಳಿ[೩] ಸೇರಿದ್ದವು. ಇವು ಪ್ರಬುದ್ಧ ಹರಪ್ಪನ್ ಮುದ್ರೆಗಳ ಮೇಲೆ ಕಂಡುಬಂದ ಪ್ರಮುಖ ವಿನ್ಯಾಸಗಳಾಗಿವೆ. ಮೂಳೆಯ ಉಪಕರಣಗಳು, ಕ್ಯಾಲ್ಸೆಡನಿಯಿಂದ ತಯಾರಿಸಿದ ಸೂಕ್ಷ್ಮ ಅಲಗುಗಳು, ತಾಮ್ರದ ಮೀನು ಕೊಕ್ಕೆಗಳು ಮತ್ತು ಅಂಬುತಲೆಗಳು ಸಹ ಇಲ್ಲಿ ಕಂಡುಬಂದವು. ಆರು ಬಳಪದ ಕಲ್ಲಿನ ಮುದ್ರೆಗಳು ಮತ್ತು ಜ್ಯಾಮಿತೀಯ ಮಾದರಿಗಳುಳ್ಳ ಒಂದು ಚಿಪ್ಪಿನ ಮುದ್ರೆ ಕಂಡುಬಂದವು. ಈ ಆರು ಮುದ್ರೆಗಳು ಚೌಕ ಆಕಾರದ್ದಾಗಿದ್ದು, ಬೂದು ಕಲ್ಲಿನಿಂದ ತಯಾರಿಸಲ್ಪಟ್ಟಿದ್ದವು ಮತ್ತು ವಿಶಿಷ್ಟ ಪ್ರಬುದ್ಧ ಹರಪ್ಪನ್ ಮುದ್ರೆಗಳನ್ನು ಹೋಲುತ್ತಿದ್ದವು.[೨] ಈ ಸ್ಥಳದಲ್ಲಿ ತಾಮ್ರದ ಕೋಲುಗಳು, ಉಂಗುರಗಳು, ಬಳೆ ಚೂರುಗಳು, ಬಳೆಗಳು, ಚೆಂಡುಗಳು, ಪ್ರಾಣಿಗಳ ಪ್ರತಿಮೆಗಳು, ಬಲೆಯನ್ನು ಮುಳುಗಿಸುವ ಸಾಧನ, ಆಟಿಕೆ ಬಂಡಿ ಚೌಕಟ್ಟುಗಳು, ಬಿಲ್ಲೆ ಹಾಗೂ ಆಟಿಕೆಗಳು, ಕಲ್ಲಿನ ಚೆಂಡುಗಳು, ಚಿಪ್ಪಿನ ಬಳೆಗಳು, ಇತ್ಯಾದಿಗಳಂತಹ ಟೆರಾಕೊಟಾ ವಸ್ತುಗಳು ಕೂಡ ಸಿಕ್ಕವು.[೪]
ಹೊರಗಿನ ಕೊಂಡಿಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "In Haryana's Kunal village, a glimpse of life before Harappa".
- ↑ ೨.೦ ೨.೧ McIntosh, Jane R. (2008). The Ancient Indus Valley : New Perspectives. Santa Barbara, Calif.: ABC-CLIO. pp. 68, 80, 82, 105, 113. ISBN 9781576079072.
- ↑ Singh, Upinder (2008). A History of Ancient and Early Medieval India : from the Stone Age to the 12th century. New Delhi: Pearson Education. pp. 109, 145–6. ISBN 9788131711200.
- ↑ Archaeological Survey of, India (2004). "Excavations at Kunal,Haryana" (PDF). Indian Archaeology 1998-99 a Review: 11–12. Archived from the original (PDF) on 8 May 2012. Retrieved 13 July 2012.