ರಾಖಿಗಢಿ ಹರ್ಯಾಣಾದ ಹಿಸಾರ್ ಜಿಲ್ಲೆಯಲ್ಲಿನ ಒಂದು ಹಳ್ಳಿ. ಇದು ಸಿಂಧೂತಟದ ನಾಗರೀಕತೆಯ ಒಂದು ನೆಲಸುಸ್ಥಳದ ತಾಣ. ಇದರ ಕಾಲ ಕ್ರಿ.ಪೂ ೨೬೦೦ ರಿಂದ ಕ್ರಿ.ಪೂ. ೧೯೦೦ ಮತ್ತು ಘಗ್ಗರ ಹಾಕ್ರಾ ನದಿ ಬಯಲಿನಲ್ಲಿ ನೆಲೆಗೊಂಡಿದೆ.[] ಇದರ ವಿಸ್ತೀರ್ಣ ೮೦ ರಿಂದ ೧೦೦ ಹೆಕ್ಟೇರ್ ನಡುವಿದೆ ಎಂದು ಅನೇಕ ವಿದ್ವಾಂಸರು ನಂಬುತ್ತಾರೆ. ಆದರೆ, ರಾಖಿಗಡಿಯಲ್ಲಿನ ಅತ್ಯಂತ ಮುಂಚಿನ ನೆಲಸುಸ್ಥಳಗಳು ಸಿಂಧೂತಟದ ನಾಗರೀಕತೆಗಿಂತ ಹಿಂದಿನದು ಮತ್ತು ತಾಣವು ಗಾತ್ರದಲ್ಲಿ ೩೦೦ ಹೆಕ್ಟೇರ್ ಇದೆ ಎಂದು ಕೆಲವು ಭಾರತೀಯ ಪುರಾತತ್ವಶಾಸ್ತ್ರಜ್ಞರು ಸಾಧಿಸುತ್ತಾರೆ.

ರಾಖಿಗಡಿಯಲ್ಲಿ ದೊರೆತ ಒಂದು ಅಸ್ಥಿಪಂಜರ

ಈ ತಾಣದಲ್ಲಿ ಭಾರತದ ಪುರಾತತ್ವ ಸರ್ವೇಕ್ಷಣೆಯು (ಎ.ಎಸ್.ಐ) ೧೯೬೩ರಲ್ಲಿ ಉತ್ಖನನಗಳನ್ನು ಆರಂಭಿಸಿತು. ತಾಣದಲ್ಲಿ ಎ.ಎಸ್.ಐ ನ ವಿವರವಾದ ಉತ್ಖನನವು ಕಳೆದುಹೋದ ನಗರದ ಗಾತ್ರವನ್ನು ಬಹಿರಂಗಗೊಳಿಸಿತು ಮತ್ತು ಅಸಂಖ್ಯ ಐತಿಹಾಸಿಕ ವಸ್ತುಗಳನ್ನು ಕಂಡುಹಿಡಿಯಲಾಯಿತು, ಕೆಲವು ೫೦೦೦ ವರ್ಷಗಳಿಗಿಂತ ಹಳೆಯವು. ರಾಖಿಗಢಿಯಲ್ಲಿ ಪೂರ್ವ ಹರಪ್ಪನ್ ಕಾಲಗಳಲ್ಲಿ ಜನರು ನೆಲೆಸಿದ್ದರು. ಸುಸಜ್ಜಿತ ರಸ್ತೆಗಳು, ಒಳಚರಂಡಿ ವ್ಯವಸ್ಥೆ, ದೊಡ್ಡ ಮಳೆನೀರು ಸಂಗ್ರಹ, ಶೇಖರಣಾ ವ್ಯವಸ್ಥೆ, ಬೇಯುಮಣ್ಣಿನ ಇಟ್ಟಿಗೆಗಳು, ವಿಗ್ರಹ ಉತ್ಪಾದನೆ, ಮತ್ತು ಕಂಚು ಹಾಗೂ ಅಮೂಲ್ಯ ಲೋಹಗಳ ಕುಶಲ ಕೆಲಸವನ್ನು ಬಹಿರಂಗಪಡಿಸಲಾಗಿದೆ. ಬೇಯುಮಣ್ಣಿನಿಂದ ಮಾಡಿದ ಬಳೆಗಳನ್ನು ಒಳಗೊಂಡಂತೆ ಆಭರಣ, ಶಂಖಗಳು, ಬಂಗಾರ ಮತ್ತು ಅರೆಅಮೂಲ್ಯ ಕಲ್ಲುಗಳನ್ನೂ ಕಂಡುಹಿಡಿಯಲಾಗಿದೆ.

ಇಲ್ಲಿಯವರೆಗಿನ ಅಗೆತವು ೧.೯೨ ಮೀಟರ್ ಅಗಲದ ರಸ್ತೆಗಳಿರುವ ಸುಯೋಜಿತ ನಗರವನ್ನು ಬಹಿರಂಗಪಡಿಸುತ್ತದೆ, ಕಾಲಿಬಂಗಾದಲ್ಲಿರುವುದಕ್ಕಿಂತ ಸ್ವಲ್ಪ ಹೆಚ್ಚು ಅಗಲ. ಕುಂಬಾರಿಕೆ ಕಾಲಿಬಂಗಾ ಮತ್ತು ಬನಾವಲಿಯಲ್ಲಿರುವುದನ್ನು ಹೋಲುತ್ತದೆ. ಗೋಡೆಗಳಿಂದ ಸುತ್ತುವರಿಯಲ್ಪಟ್ಟ ಗುಂಡಿಗಳು ಸಿಕ್ಕಿವೆ. ಇವು ಯಜ್ಞ ಸಂಬಂಧಿ ಅಥವಾ ಕೆಲವು ಧಾರ್ಮಿಕ ಸಮಾರಂಭಗಳಿಗೆ ಎಂದು ಭಾವಿಸಲಾಗಿದೆ. ಅವರ ಧಾರ್ಮಿಕ ಸಮಾರಂಭಗಳಲ್ಲಿ ಬೆಂಕಿಯನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು. ಮನೆಗಳ ಹೊಲಸನ್ನು ನಿರ್ವಹಿಸಲು ಇಟ್ಟಿಗೆಗಳ ಪದರಹೊಂದಿದ ಚರಂಡಿಗಳಿವೆ. ಬೇಯುಮಣ್ಣಿನ ವಿಗ್ರಹಗಳು, ತೂಕದ ಬಟ್ಟುಗಳು, ಕಂಚಿನ ವಸ್ತುಗಳು, ಹಣಿಗೆ, ತಾಮ್ರದ ಮೀನು ಕೊಕ್ಕೆಗಳು, ಸೂಜಿಗಳು ಮತ್ತು ಬೇಯುಮಣ್ಣಿನ ಮುದ್ರೆಗಳನ್ನೂ ಕಂಡುಹಿಡಿಯಲಾಗಿದೆ. ಬೆಳ್ಳಿ ಮತ್ತು ಚಿನ್ನದಿಂದ ಅಲಂಕೃತವಾದ ಒಂದು ಕಂಚಿನ ಪಾತ್ರೆ ಸಿಕ್ಕಿದೆ. ಸುಮಾರು ೩೦೦೦ ನಯಗೊಳಿಸದ ಅರೆಅಮೂಲ್ಯ ಕಲ್ಲುಗಳಿರುವ ಚಿನ್ನದ ಎರಕದ ಮನೆ ಸಿಕ್ಕಿದೆ. ಅಲ್ಲೇ ಈ ಕಲ್ಲುಗಳನ್ನು ನಯಗೊಳಿಸಲು ಬಳಸಲಾದ ಅನೇಕ ಉಪಕರಣಗಳು ಮತ್ತು ಒಂದು ಕುಲುಮೆ ಸಿಕ್ಕಿವೆ. ೧೧ ಅಸ್ಥಿಪಂಜರಗಳಿರುವ ಸಮಾಧಿ ಸ್ಥಳ ಸಿಕ್ಕಿದೆ. ಅವುಗಳ ತಲೆಗಳು ಉತ್ತರ ದಿಕ್ಕಿನತ್ತ ಇವೆ. ಈ ಅಸ್ಥಿಪಂಜರಗಳ ತಲೆಗಳ ಹತ್ತಿರ, ದೈನಂದಿನ ಬಳಕೆಯ ಪಾತ್ರೆಗಳನ್ನು ಇಡಲಾಗಿತ್ತು. ಒಂದು ಅಸ್ಥಿಪಂಜರದ ಹತ್ತಿರ, ಚಿನ್ನದ ತೋಳ್ಬಂದಿ ಸಿಕ್ಕಿದೆ.

ಉಲ್ಲೇಖಗಳು

ಬದಲಾಯಿಸಿ
  1. Wright, Rita P. (2009), The Ancient Indus: Urbanism, Economy, and Society, Cambridge University Press, p. 133, ISBN 978-0-521-57219-4 Quote: "There are a large number of settlements to the east on the continuation of the Ghaggar Plain in northwest India. ... Kalibangan, Rakhigarhi, and Banawali are located here. Rakhigarhi was over 100 hectares in size."
"https://kn.wikipedia.org/w/index.php?title=ರಾಖಿಗಢಿ&oldid=785265" ಇಂದ ಪಡೆಯಲ್ಪಟ್ಟಿದೆ