ಕುತ
ಇದು ಆಡಳಿತಾತ್ಮಕವಾಗಿ ಒಂದು ಜಿಲ್ಲೆಯಾಗಿದ್ದು,ಇದು ಇಂಡೋನೇಷ್ಯಾದ ದಕ್ಷಿಣ ಬಾಲಿ ಪ್ರಾಂತ್ಯದಲ್ಲಿದೆ. ಈ ಮೀನುಗಾರರ ಗ್ರಾಮ ಬಾಲಿ ಪ್ರಾಂತ್ಯದಲ್ಲಿಯೇ ಮೊದಲ ಪ್ರವಾಸಿ ತಾಣವಾಗಿ ಹೆಸರುಗಳಿಸಿತು. ಇದು ತನ್ನ ಉದ್ದವಾದ ಕಡಲ ತೀರಕ್ಕೆ ಪ್ರಸಿದ್ದವಾಗಿದೆ.ಇದು ಇಂಡೋನೇಷ್ಯಾದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.
ಆಡಳಿತ
ಬದಲಾಯಿಸಿಕುತ ಜಿಲ್ಲೆ (ಇಂಡೋನೇಶಿಯನ್: ಕೆಕಮತನ್ ಕುತ)ಯು ಸುತ್ತಮುತ್ತಲಿನ ಹಳ್ಳಿಗಳಾದ ಕುತ, ಲೆಜಿಯನ್, ಸೆಮಿನ್ಯಕ್, ಕೆಡೊಂಗನನ್ ಮತ್ತು ತುಬನ್ ಹಳ್ಳಿಗಳನ್ನು ಒಳಗೊಂಡಿದೆ. ಇದಲ್ಲದೇ ಬಡುಂಗ್ ಆಳ್ವಿಕೆಯಲ್ಲಿ ಕುತ ಹೆಸರನ್ನೊಳಗೊಂಡು ಮೂರು ಜಿಲ್ಲೆಗಳಿವೆ:ಕುತ, ದಕ್ಷಿಣ ಕುತ( ಕೆಕಮತನ್ ಕುತ ಸೆಲತನ್ )ಮತ್ತು ಉತ್ತರ ಕುತ( ಕೆಕಮತನ್ ಕುತ ಉತಾರಾ )
ಇಲ್ಲಿ ಅಕ್ಟೋಬರ್ ೧೨ ೨೦೦೨ ಮತ್ತು ಅಕ್ಟೋಬರ್ ೧ ೨೦೦೫ ರಲ್ಲಿ ಬಾಂಬ್ ಸ್ಪೋಟಗೊಂಡು ಕ್ರಮವಾಗಿ ೨೦೨ ಮತ್ತು ೨೬ ಮಂದಿ ಸಾವನ್ನಪ್ಪಿದ್ದಾರೆ.
ಬಾಲಿಯ ಪ್ರಾಂತೀಯ ಸರ್ಕಾರವು ಬಾಲಿಯ ಸಂಸ್ಕೃತಿ, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ವನ್ಯಜೀವಿ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಿ ಉತ್ತರ ದಿಕ್ಕಿನಲ್ಲಿ ಪರ್ಯಾಯದ್ವೀಪದ ಅಭಿವೃದ್ಧಿಗೆ ಅನುಮತಿ ನೀಡಲಾಗಿದೆ.ಕುತ ಕಡಲ್ತಡಿಯು ದ್ವೀಪದ ಪಶ್ಚಿಮ ಹಾಗೂ ಸಾನೂರು ಪೂರ್ವ ದಿಕ್ಕಿನಲ್ಲಿದೆ. ದಕ್ಷಿಣದಲ್ಲಿ ಕುತ ಕಡಲ್ತಡಿಯು ವಿಮಾನ ನಿಲ್ದಾಣವನ್ನು ಮೀರಿ ಜಿಂಬರನ್ ಮುಟ್ಟುತ್ತದೆ.
ಕುತ ಕಡಲ್ತಡಿ
ಬದಲಾಯಿಸಿಇದು ೧೯೭೦ರಿಂದ ಗಮನಾರ್ಹ ರೀತಿಯಲ್ಲಿ ಪ್ರಸಿದ್ದತೆಯನ್ನು ಪಡೆದುಕೊಂಡಿದೆ.ಇದನ್ನು ಸೂರ್ಯಾಸ್ತದ ಕಡಲ್ತಡಿ ಎಂದೂ ಸಹ ಕರೆಯುತ್ತಾರೆ.ಇಲ್ಲಿ ಅನೇಕ ದುಬಾರಿ ಹೊಟೆಲ್ಗಳು, ಕೂಟಗಳನ್ನು ನಿರ್ಮಿಸಿದ್ದಾರೆ[೧].
೨೦೧೧ ರಲ್ಲಿ ಕಡಲ್ತಡಿಯಿಂದ ಉಪಹಾರಗೃಹಗಳಿಗೆ ಮರಳು ಹೊಕ್ಕುವುದನ್ನು ತಡೆಯಲು ಎರಡು ಮೀಟರ್ ಉದ್ದದ ಬಿಳಿ ಸ್ಯಾಂಡ್ ಸ್ಟೋನ್ (ಮರಳುಗಲ್ಲು) ನ ಬೇಲಿಯನ್ನು ಬಲೀನೀಸ್ ವಾಸ್ತುಶಿಲ್ಪದ ಶೈಲಿಯಲ್ಲಿ ನಿರ್ಮಿಸಲಾಯಿತು.ಈ ಯೋಜನೆಗೆ ತಗುಲಿದ ವೆಚ್ಚ ೪ ಶತಕೋಟಿ ರೂಪಾಯಿಗಳು.
ಪ್ರವಾಸೋದ್ಯಮ
ಬದಲಾಯಿಸಿಇದು ಅಗ್ಗದ ಪ್ರವಾಸಿತಾಣ ಮತ್ತು ಆಸ್ಟ್ರೇಲಿಯನ್ನರಿಗೆ ಹತ್ತಿರದ ಸ್ಥಳವಾಗಿರುವುದರಿಂದ `ಇಲ್ಲಿಗೆ ಅನೇಕ ಆಸ್ಟ್ರೇಲಿಯನ್ನರು ಭೇಟಿ ನೀಡುತ್ತಾರೆ[೨].
ಉಲ್ಲೇಖನಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ http://mastugino.blogspot.in/2012/08/daftar-nama-pantai-di-indonesia.html[ಶಾಶ್ವತವಾಗಿ ಮಡಿದ ಕೊಂಡಿ]
- ↑ http://wikitravel.org/en/Kuta