ಕುಕ್ಕರಹಳ್ಳಿ ಕೆರೆ

ಕುಕ್ಕರಹಳ್ಳಿ ಕೆರೆ ಮೈಸೂರು ನಗರದ ಪಶ್ಚಿಮ ದಿಕ್ಕಿನಲ್ಲಿದೆ. ಮೈಸೂರು ನಗರ ರೈಲು ನಿಲ್ದಾಣದಿಂದ ಸುಮಾರು ೩ ಕಿಮೀ (೧.೯ ಮೈಲು) ದೂರ ಈ ಕೆರೆಯು ಇದೆ. ಮಾನಸ ಗಂಗೋತ್ರಿ,ರಂಗಾಯಣ ಮಧ್ಯದಲ್ಲಿರುವ ಈ ಕೆರೆ ಪಕ್ಷಿವೀಕ್ಷಣೆ ಮತ್ತು ವಾಯುವಿಹಾರಕ್ಕೆ ಸುಪ್ರಸಿದ್ದಿ.

ಕುಕ್ಕರಹಳ್ಳಿ ಕೆರೆ

ಛಾಯಾಂಕಣ

ಬದಲಾಯಿಸಿ

ಕುಕ್ಕರಹಳ್ಳಿ ಕೆರೆಬಳಿ ಕಾಣಬರುವ ಪಕ್ಷಿಗಳು

ಮುಮ್ಮಡಿ ಕೃಷ್ಣರಾಜ ಒಡೆಯರ್ ( ೧೭೯೪-೧೮೬೮ ) ಮೈಸೂರು ರಾಜವಂಶದ ರಾಜರು, ಇವರು ಈ ಕೆರೆಯನ್ನು ನಿರ್ಮಾಣದ ಮಾಡಿಸಿದವರು. ಸರೋವರದ ಭೂಮಿ ಸುಮಾರು ೪೦೦೦ ಹೆಕ್ಟೇರ್ (೧೦,೦೦೦ ಎಕರೆ). ಇದನ್ನು ನಗರದ ಹೊರಗೆ ನೀರಾವರಿಗೆ ಒದಗಿಸಲು, ೧೮೬೪ ರಲ್ಲಿ ಕಟ್ಟಿಸಲಾಯಿತು. ಈ ಕೆರೆಯನ್ನು ಮೈಸೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಮೂಲವಾಗಿ ಉಪಯೋಗಿಸಲ್ಪಡುತ್ತದೆ.