ಕೀಲಿಮಣೆ
ಕೀಲಿಮಣೆ ಅಥವಾ ಕೀಬೋರ್ಡ್ ಎಂದರೆ ಗಣಕೀಕರಣದಲ್ಲಿ ಯಾಂತ್ರಿಕಪಟ್ಟಿಯಂತೆ ಅಥವಾ ವಿದ್ಯುಚ್ಚಾಲಿತ ಸ್ವಿಚ್ಚಿನಂತೆ ವರ್ತಿಸುವ ಗುಂಡಿಗಳ ಅಥವಾ ಕೀಲಿಗಳ ಜೋಡಣೆಯನ್ನು ಹೊಂದಿರುವ ಬೆರಳಚ್ಚು ಯಂತ್ರದ ಕೀಬೋರ್ಡ್ ಆಗಿದೆ. ಪೇಪರ್ ಟೇಪ್ ಮತ್ತು ಪಂಚ್ ಕಾರ್ಡ್‌ಗಳ ಬಳಕೆಯು ಇಳಿಮುಖವಾಗುವುದರೊಂದಿಗೆ, ಟೆಲಿಟೈಪ್ ಮಾದರಿಯ ಕೀಬೋರ್ಡ್‌ಗಳ ಮೂಲಕ ಗಣಕಯಂತ್ರವನ್ನು ಸಂಪರ್ಕಿಸುವ ವಿಧಾನ ಮುಂದುವರೆದು ಗಣಕಯಂತ್ರಗಳಲ್ಲಿ ಇದೊಂದು ಮುಖ್ಯ ಇನ್‌ಪುಟ್ ಸಾಧನವಾಗಿ ಬೆಳೆದುಬಂದಿದೆ.
raj ಮೌಸ್, ಟಚ್‌ಸ್ಕ್ರೀನ್, ಪೆನ್ ಡ್ರೈವ್‌ಗಳು, ಅಕ್ಷರಗಳ ಗುರುತಿಸುವಿಕೆ(ಕ್ಯಾರೆಕ್ಟರ್ ರೆಕಗ್ನಿಶನ್), ಧ್ವನಿಗ್ರಾಹಕಗಳೇ ಮೊದಲಾದ ಇತರ ಇನ್‌ಪುಟ್ ಸಾಧನಗಳ ಅಭಿವೃದ್ಧಿಯ ಹೊರತಾಗಿಯೂ, ಗಣಕಯಂತ್ರದ ನೇರ (ಬಳಕೆದಾರರ) ಇನ್‌ಪುಟ್ ಸಾಧನವಾಗಿ ಕೀಬೋರ್ಡ್ ಅತ್ಯಂತ ಸಾಮಾನ್ಯವಾಗಿ ಬಳಸುವ ಮತ್ತು ಬಹುಮುಖ ಸಾಮರ್ಥ್ಯ ಹೊಂದಿರುವ ಸಾಧನವಾಗಿಯೇ ಮುಂದುವರೆಯಿತು.
ಕೀಬೋರ್ಡ್ ಸಾಮಾನ್ಯವಾಗಿ ಕೊರೆದ ಅಥವಾ ಮುದ್ರಿಸಿದ ಸಂಕೇತಗಳನ್ನು ತನ್ನ ಕೀಲಿಗಳಲ್ಲಿ ಹೊಂದಿದ್ದು ಇವುಗಳನ್ನು ಪ್ರತೀಭಾರಿ ಒತ್ತಿದಾಗಲೂ ಅದು ಬರೆಯಲ್ಪಟ್ಟ ಒಂದು ಸಂಕೇತವನ್ನು ಪ್ರತಿನಿಧಿಸುತ್ತದೆ. ಆದರೂ, ಕೆಲವು ಸಂಕೇತಗಳನ್ನು ಮೂಡಿಸಲು ಹಲವು ಕೀಲಿಗಳನ್ನು ಏಕಕಾಲದಲ್ಲಿ ಅಥವಾ ಅನುಕ್ರಮವಾಗಿ ಹಿಡಿದುಕೊಳ್ಳುವುದು ಮತ್ತು ಒತ್ತುವುದನ್ನು ಮಾಡಬೇಕಾದ ಅನಿವಾರ್ಯತೆಯಿದೆ. ಆದರೆ, ಹೆಚ್ಚಿನ ಕೀಬೋರ್ಡ್‌ಗಳ ಕೀಲಿಗಳು ಅಕ್ಷರಗಳು, ಸಂಖ್ಯೆಗಳು ಮತ್ತು ಸಂಕೇತಗಳನ್ನು ಮೂಡಿಸುತ್ತವೆ, ಇತರ ಕೀಲಿಗಳು ಅಥವಾ ಏಕಕಾಲದಲ್ಲಿ ಒತ್ತಬೇಕಾದ ಕೀಲಿಗಳು ಹಲವು ವಿಶೇಷ ಕಾರ್ಯಗಳನ್ನು ನಿರ್ವಹಿಸುತ್ತವೆ ಅಥವಾ ಗಣಕಯಂತ್ರದ ಆದೇಶಗಳನ್ನು ಪಾಲಿಸುತ್ತವೆ.
ಸಾಮಾನ್ಯ ಬಳಕೆಯಲ್ಲಿ ಪಠ್ಯ ಹಾಗೂ ಸಂಖ್ಯೆಗಳನ್ನು ಪದ ಸಂಸ್ಕರಣ (ವರ್ಡ್ ಪ್ರೊಸೆಸರ್), ಪಠ್ಯ ಸಂಪಾದಕ(ಟೆಕ್ಸ್ಟ್ ಎಡಿಟರ್) ಅಥವಾ ಇತರ ತಂತ್ರಾಂಶಗಳಲ್ಲಿ ಬೆರಳಚ್ಚು ಮಾಡಲು ಕೀಬೋರ್ಡ್‌ನನ್ನು ಬಳಸಲಾಗುತ್ತದೆ. ಆಧುನಿಕ ಕಂಪ್ಯೂಟರ್‌ಗಳಲ್ಲಿ ಕೀಲಿಗಳ ಒತ್ತುವಿಕೆಯು ತಂತ್ರಾಂಶದ ಮೇಲೆ ಆಧಾರಿತವಾಗಿರುತ್ತದೆ. ಗಣಕಯಂತ್ರದ ಕೀಬೋರ್ಡ್ ತನ್ನ ಪ್ರತೀ ಕೀಲಿಯನ್ನು ಇತರ ಕೀಲಿಯಿಂದ ಪ್ರತ್ಯೇಕಿಸುವುದರೊಂದಿಗೆ ಎಲ್ಲಾ ಕೀಲಿಗಳ ಒತ್ತುವಿಕೆಯ ಬಗೆಗಿನ ವರದಿಯನ್ನು ನಿಯಂತ್ರಕ ತಂತ್ರಾಂಶಕ್ಕೆ (ಆಪರೇಟಿಂಗ್ ಸಿಸ್ಟಮ್‌ಗೆ) ನೀಡುತ್ತದೆ. ಕೀಬೋರ್ಡ್‌ಗಳು ಗಣಕಯಂತ್ರದ ಆಟಗಳಲ್ಲಿಯೂ ಬಳಸಲಾಗುತ್ತಿದ್ದು, ರೂಢಿಯಲ್ಲಿರುವ ಕೀಬೋರ್ಡ್‌ನನ್ನು ಅಥವಾ ಅಗಾಗ ಬಳಸಲ್ಪಡುವ ಕೀಲಿಒತ್ತುಗಳನ್ನು, ಅವುಗಳ ಸಂಯೋಜನೆಗಳನ್ನು ಶೀಘ್ರವಾಗಿ ನಡೆಸುವಂತಹ ಆಟಕ್ಕೆ ಸೀಮಿತವಾದ ವಿಶೇಷ ವ್ಯವಸ್ಥೆಯನ್ನು ಹೊಂದಿರುವ ಕೀಬೋರ್ಡ್‌ನನ್ನೂ ಸಹ ಇದರಲ್ಲಿ ಬಳಸಲಾಗುತ್ತದೆ. ವಿಂಡೋಸ್‌ನ ಕಂಟ್ರೋಲ್-ಆಲ್ಟ್-ಡಿಲೀಟ್ ಕೀಲಿ ಸಂಯೋಜನೆಯು ಟಾಸ್ಕ್ ವಿಂಡೋವನ್ನು ತೆರೆಯುವ ಅಥವಾ ಗಣಕಯಂತ್ರವನ್ನು ಮುಚ್ಚುವಂತಹ ಆದೇಶವಾಗಿದ್ದು, ಇಂತಹ ಹಲವು ಸೂಕ್ತ ಅದೇಶಗಳನ್ನು ಗಣಕಯಂತ್ರದ ಕಾರ್ಯನಿರ್ವಹಣಾ ತಂತ್ರಾಂಶಕ್ಕೆ (ಆಪರೇಟಿಂಗ್ ಸಿಸ್ಟಮ್)ನೀಡುವುದಕ್ಕೂ ಕೂಡಾ ಕೀಬೋರ್ಡ್‌ನನ್ನೇ ಬಳಸಲಾಗುತ್ತಿದೆ. ಒಂದು ಕಮ್ಯಾಂಡ್-ಲೈನ್ ಇಂಟರ್‌ಫೇಸ್‌ಗೆ ಕಮ್ಯಾಂಡ್‌ಗಳನ್ನು ನಮೂದಿಸುವುದಕ್ಕೆ ಇದೊಂದೇ ಮಾರ್ಗವಾಗಿದೆ.
ಕೀಬೋರ್ಡ್‌ನ ಪ್ರಕಾರಗಳು
ಬದಲಾಯಿಸಿಸ್ಟ್ಯಾಂಡರ್ಡ್
ಬದಲಾಯಿಸಿಸ್ಟಾಂಡರ್ಡ್ "ಫುಲ್ ಟ್ರಾವೆಲ್" ಅಕ್ಷರ-ಅಂಕೆಗಳ ಕೀಬೋರ್ಡ್‌ಗಳ ಕೀಲಿಗಳು ಮುಕ್ಕಾಲು ಇಂಚು ವಿಸ್ತೀರ್ಣವನ್ನು ಹೊಂದಿದ್ದು (೦.೭೫೦ ಇಂಚುಗಳು, ೧೯.೦೫ ಮಿ.ಮೀ) ಸುಮಾರು ೦.೧೫೦ ಇಂಚುಗಳಷ್ಟು (೩.೮೧ಮಿ.ಮೀ) ಕೀ ಟ್ರಾವೆಲ್‌ನ್ನು ಹೊಂದಿದೆ. ೧೦೧ ಕೀಲಿಗಳನ್ನು ಹೊಂದಿರುವ ಯುಎಸ್‌ನ ಸಾಂಪ್ರದಾಯಿಕ ಕೀಬೋರ್ಡ್ ಅಥವಾ ೧೦೪ ಕೀಲಿಗಳನ್ನು ಹೊಂದಿರುವ ವಿಂಡೋಸ್ ಕೀಬೋರ್ಡ್‌ಗಳಂತಹ ಡೆಸ್ಕ್‌ಟಾಪ್ ಕಂಪ್ಯೂಟರ್ ಕೀಬೋರ್ಡ್‌ಗಳು ಅಕ್ಷರ ಸಂಕೇತಗಳು, ವಿರಾಮ ಚಿಹ್ನೆಗಳು, ಸಂಖ್ಯಾ ಕೀಲಿಗಳು ಮತ್ತು ಅನೇಕ ವಿಧದ ವಿಶೇಷಕಾರ್ಯ ಕೀಲಿಗಳನ್ನು ಹೊಂದಿರುತ್ತವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಮಾನ್ಯ ಬಳಕೆಯಲ್ಲಿರುವ ೧೦೨/೧೦೫ ಕೀಲಿಗಳುಳ್ಳ ಕೀಬೋರ್ಡ್‌ಗಳು ಎಡಭಾಗದಲ್ಲಿ ಪುಟ್ಟದಾದ ಶಿಫ್ಟ್ ಕೀಲಿಯನ್ನು ಹೊಂದಿದ್ದು ಅದರ ಮತ್ತು ಅದಕ್ಕಿಂತ ಬಲಗಡೆಯಿರುವ ಕೀಲಿಯ (ಸಾಮಾನ್ಯವಾಗಿ ಝೆಡ್ ಅಥವಾ ವೈ) ನಡುವೆ ಹಲವು ಸಂಕೇತಗಳನ್ನು ಹೊಂದಿರುವ ಕೀಲಿಯೊಂದನ್ನು ಹೆಚ್ಚುವರಿಯಾಗಿ ಹೊಂದಿರುತ್ತದೆ. ಅಲ್ಲದೆ, "ಎಂಟರ್" ಕೀಲಿಯು ಕೂಡಾ ವಿಭಿನ್ನ ಆಕಾರವನ್ನು ಹೊಂದಿರುತ್ತದೆ.[೧] ಗಣಕಯಂತ್ರದ ಕೀಬೋರ್ಡ್‌ಗಳು ವಿದ್ಯುತ್‌ಚಾಲಿತ ಬೆರಳಚ್ಚುಯಂತ್ರದ ಕೀಬೋರ್ಡ್‌ನಂತೆಯೇ ಇದೆಯಾದರೂ, ಇದು ಹೆಚ್ಚುವರಿ ಕೀಲಿಗಳನ್ನು ಹೊಂದಿರುತ್ತದೆ. ಸ್ಟ್ಯಾಂಡರ್ಡ್ ಯುಎಸ್‌ಬಿ ಕೀಬೋರ್ಡ್‌ಗಳನ್ನು ಕೆಲವು ಡೆಸ್ಕ್‌ಟಾಪ್ ಅಲ್ಲದೇ ಇರುವ (ನಾನ್ ಡೆಸ್ಕ್‌ಟಾಪ್)ಸಾಧನಗಳಿಗೂ ಸಂಪರ್ಕಿಸಲಾಗುತ್ತದೆ.[೨]
ಲ್ಯಾಪ್‌ಟಾಪ್-ಗಾತ್ರ
ಬದಲಾಯಿಸಿಲ್ಯಾಪ್ಟಾಪ್ಗಳು ಮತ್ತು ನೋಟ್‌ಬುಕ್ ಕಂಪ್ಯೂಟರ್‌ಗಳಲ್ಲಿನ ಕೀಬೋರ್ಡ್‌ಗಳು ಕೀಲಿಗಳ ಒತ್ತುವಿಕೆಯಲ್ಲಿ ಕಡಿಮೆ "ಟ್ರಾವೆಲ್" ಅಂತರವನ್ನು ಹೊಂದಿದ್ದು ಗಾತ್ರ ಕಡಿಮೆ ಹೊಂದಿರುವ ಕೀಲಿಗಳ ಗುಂಪನ್ನು ಹೊಂದಿದೆ. ಇವುಗಳು ಸಂಖ್ಯಾತ್ಮಕ ಕೀಲಿಗಳ ಫಲಕವನ್ನು ಪ್ರತ್ಯೇಕವಾಗಿ ಹೊಂದಿಲ್ಲದೇ ಇರಬಹುದು ಮತ್ತು ವಿಶೇಷಕಾರ್ಯ ಕೀಲಿಗಳು ಮಾದರಿಯ, ವಿಸ್ತೃತ ಗಾತ್ರ ಹೊಂದಿರುವ ಕೀಬೋರ್ಡ್‌ಗಳಲ್ಲಿ ಜೋಡಿಸಿರುವ ಸ್ಥಳಗಳಿಗಿಂತ ಭಿನ್ನವಾದ ಸ್ಥಳಗಳಲ್ಲಿ ಜೋಡಿಸಲ್ಪಟ್ಟಿರಬಹುದು.
ಹೆಬ್ಬೆರಳ ಗಾತ್ರದ ಕೀಬೋರ್ಡ್‌ಗಳು
ಬದಲಾಯಿಸಿಲ್ಯಾಪ್ಟಾಪ್ಗಳು (ಮುಖ್ಯವಾಗಿ ನೆಟ್ ಟಾಪ್‌ಗಳು), ಪಿಡಿಎಗಳು, ಸ್ಮಾರ್ಟ್‌ಫೋನ್‌ಗಳಿಗಾಗಿ ಅಥವಾ ಸೀಮಿತ ಸ್ಥಳಾವಕಾಶವನ್ನು ಹೊಂದಿರುವ ಬಳಕೆದಾರರಿಗಾಗಿ ಚಿಕ್ಕ ಗಾತ್ರದ ಕೀಬೋರ್ಡ್‌ಗಳನ್ನು ಪರಿಚಯಿಸಲಾಗಿದೆ. ಕೀಬೋರ್ಡ್‌ನ ಕೀಲಿಗಳು ಬೆರಳಿನಿಂದ ಸುಲಭವಾಗಿ ಒತ್ತಲು ಅನುಕೂಲವಾಗುವಂತೆ ಸಾಕಷ್ಟು ವಿಶಾಲವಾಗಿರಬೇಕು ಎಂಬ ಪ್ರಾಯೋಗಿಕ ಪರಿಶೀಲನೆಯ ಮೂಲಕ ತಳೆದ ಅಭಿಪ್ರಾಯಗಳಿಂದ ಮಾದರಿ ಕೀಬೋರ್ಡ್‌ನ ಗಾತ್ರವನ್ನು ನಿರ್ದೇಶಿಸಲಾಗಿದೆ. ಕೀಬೋರ್ಡ್‌ನ ಗಾತ್ರವನ್ನು ಕಿರಿದಾಗಿಸಲು ಅಕ್ಷರ ಕೀಬೋರ್ಡ್‌ನ ಬಲಭಾಗದಲ್ಲಿರುವ ಅಂಕೆಗಳ ಕೀಲಿ ಫಲಕವನ್ನು ತೆಗೆದುಹಾಕಬಹುದು ಅಥವಾ ಪಠ್ಯವನ್ನು ತುಂಬಲು ಕಷ್ಟವಾಗುವಂತೆ ಮಾಡಬಹುದಾದರೂ, ಪ್ರತೀ ಕೀಲಿಗಳ ಗಾತ್ರವನ್ನೂ ಸಹ ಕಡಿಮೆಗೊಳಿಸಬಹುದು.
ಒಟ್ಟು ಕೀಲಿಗಳ ಸಂಖ್ಯೆಯನ್ನು ಕಡಿಮೆಗೊಳಿಸುವುದು ಮತ್ತು ಹಲವು ಕೀಲಿಗಳನ್ನು ಏಕಕಾಲದಲ್ಲಿ ಒತ್ತುವ ಮೂಲಕ ಕಾರ್ಯನಿರ್ವಹಿಸಬಹುದಾದ ಕಾರ್ಡಿಂಗ್ ಕೀಯರ್‌ನ್ನು ಬಳಸುವುದು ಕೀಬೋರ್ಡ್‌ನ ಗಾತ್ರವನ್ನು ಕಿರಿದಾಗಿಸಬಲ್ಲ ಇನ್ನೊಂದು ವಿಧಾನವಾಗಿದೆ. ಉದಾಹರಣೆಗೆ, ಜಿಕೆಓಎಸ್ ಕೀಬೋರ್ಡ್ ಚಿಕ್ಕ ಗಾತ್ರದ ನಿಸ್ತಂತು ಸಾಧನಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇತರ ಎರಡು-ಕೈಯುಳ್ಳ ಪರ್ಯಾಯ ಸಾಧನಗಳು ಅಲ್ಫಾ ಗ್ರಿಪ್‌ಗಳಂತಹ ಆಟ ನಿಯಂತ್ರಕಗಳಿಗೆ ಸಮಾನವಾಗಿದ್ದು ಮಾಹಿತಿ ಮತ್ತು ದತ್ತಾಂಶಗಳನ್ನು ಒದಗಿಸಲು ಕೂಡಾ ಬಳಸಲಾಗುತ್ತದೆ. ಕೀಬೋರ್ಡ್‌ನ ಗಾತ್ರವನ್ನು ಕಿರಿದಾಗಿಸುವ ಇನ್ನೊಂದು ವಿಧಾನವೆಂದರೆ, ಸಣ್ಣ ಗಾತ್ರದ ಗುಂಡಿಗಳನ್ನು ಬಳಸುವುದು ಮತ್ತು ಅವುಗಳನ್ನು ಪರಸ್ಪರ ಸಮೀಪದಲ್ಲಿ ಜೋಡಿಸುವುದು. ಇಂತಹ ಕೀಬೋರ್ಡ್‌ಗಳು ಥಂಬ್‌ಬೋರ್ಡ್ (ಥಂಬಿಂಗ್) ಎಂದು ಸಾಮಾನ್ಯವಾಗಿ ಕರೆಯಲ್ಪಡುತ್ತಿದ್ದು, ಇವು ಕೆಲವು ಪರ್ಸನಲ್ ಡಿಜಿಟಲ್ ಅಸಿಸ್ಟೆಂಟ್‌ಗಳಂತಹ ಪಾಮ್ ಟ್ರಿಯೋ ಮತ್ತು ಬ್ಲಾಕ್ ಬೆರ್ರಿ ಮತ್ತು ಒಕ್ಯೂಒದಂತಹ ಕೆಲವು ಅಲ್ಟ್ರಾ-ಮೊಬೈಲ್ ಪರ್ಸನಲ್ ಕಂಪ್ಯೂಟರ್‌ಗಳಲ್ಲಿ ಬಳಸಲಾಗುತ್ತಿದೆ.
ಸಾಂಖ್ಯಿಕ ಕೀಬೋರ್ಡ್‌ಗಳು
ಬದಲಾಯಿಸಿಸಂಖ್ಯಾತ್ಮಕ ಕೀಬೋರ್ಡ್‌ಗಳು ಕೇವಲ ಅಂಕೆಗಳನ್ನು, ಗಣಿತೀಯ ಸಂಕೇತಗಳಾದ ಸಂಕಲನ, ವ್ಯವಕಲನ, ಗುಣಾಕಾರ ಮತ್ತು ಭಾಗಾಕಾರ, ದಶಮಾಂಶ ಬಿಂದು ಮತ್ತು ಹಲವು ವಿಶೇಷ ಕಾರ್ಯಕೀಲಿಗಳನ್ನು ಮಾತ್ರ ಹೊಂದಿವೆ. ಸಾಮಾನ್ಯವಾಗಿ ಸಂಖ್ಯಾತ್ಮಕ ಕೀಬೋರ್ಡ್‌ನನ್ನು ಹೊಂದಿರದ ಲಾಪ್‌ಟಾಪ್ ಕಂಪ್ಯೂಟರ್‌ಗಳಲ್ಲಿ ದತ್ತಾಂಶಗಳನ್ನು ತುಂಬಲು ಮತ್ತು ನಿರ್ವಹಿಸಲು ಇಂತಹ ಕೀಬೋರ್ಡ್‌ಗಳನ್ನು ಬಳಸಲಾಗುತ್ತದೆ. ಈ ಕೀಲಿಗಳನ್ನು ಒಟ್ಟಾಗಿ ಸಂಖ್ಯಾತ್ಮಕ ಫಲಕ (ನ್ಯೂಮರಿಕ್ ಪ್ಯಾಡ್), ಸಂಖ್ಯಾತ್ಮಕ ಕೀಲಿಗಳು (ನ್ಯೂಮರಿಕ್ ಕೀಲಿಗಳು) ಮತ್ತು ಸಂಖ್ಯಾತ್ಮಕ ಕೀಬೋರ್ಡ್ (ನ್ಯೂಮರಿಕ್ ಕೀಬೋರ್ಡ್) ಎಂದು ಕರೆಯಲಾಗುತ್ತಿದ್ದು ಇದು ಈ ಕೆಳಗೆ ನೀಡಿದ ಕೀಲಿ ವಿಧಗಳನ್ನು ಹೊಂದಿರುತ್ತದೆ.
- ಅಂಕಗಣಿತೀಯ ಕ್ರಿಯಾಚಿಹ್ನೆಗಳಾದ +, -, *, /
- ಸಂಖ್ಯಾತ್ಮಕ ಅಂಕೆಗಳು ೦–೯
- ಕರ್ಸರ್ ಆಯ್‌ರೊ ಕೀಲಿಗಳು
- ಕರ್ಸರ್‌ನ್ನು ಚಲಿಸಲು ಬಳಸುವ ಹೋಮ್, ಎಂಡ್, ಪೇಜ್ ಅಪ್, ಪೇಜ್ ಡೌನ್ ಇತ್ಯಾದಿಗಳು
- ಸಂಖ್ಯಾತ್ಮಕ ಕೀಲಿಫಲಕವನ್ನು ಕಾರ್ಯಗತಗೊಳಿಸಲು ಮತ್ತು ಸ್ಥಗಿತಗೊಳಿಸಲು ಬಳಸುವ ನಂ ಲಾಕ್ ಬಟನ್
- ಎಂಟರ್ ಕೀಲಿ
ನಾನ್-ಸ್ಟಾಂಡರ್ಡ್ ವಿನ್ಯಾಸ ಮತ್ತು ವಿಶೇಷ ಬಳಕೆಯ ವಿಧಗಳು
ಬದಲಾಯಿಸಿಕಾರ್ಡೆಡ್
ಬದಲಾಯಿಸಿಇತರ ಕೀಬೋರ್ಡ್‌ಗಳಲ್ಲಿ ಒಂದು ಕೀಲಿಗೆ ಒಂದೇ ಕಾರ್ಯವನ್ನು ನಿಯುಕ್ತಿಗೊಳಿಸಲಾಗಿದ್ದರೆ ಕಾರ್ಡೆಡ್ ಕೀಳಿಮಣೆಯು ಕೀಲಿಗಳ ಸಂಯೋಜನೆಯನ್ನು ಒತ್ತುವುದರ ಮೂಲಕ ಕೆಲವು ವಿಶೇಷ ಕಾರ್ಯನಿರ್ವಹಣೆಯನ್ನು ಮಾಡುವಂತಹ ವ್ಯವಸ್ಥೆಯನ್ನು ಹೊಂದಿರುತ್ತವೆ. ಇಲ್ಲಿ ಹಲವು ಕೀಲಿ-ಸಂಯೋಜನೆಗಳು ಒದಗುವ ಕಾರಣ, ಕಾರ್ಡೆಡ್ ಕೀಬೋರ್ಡ್‌ಗಳು ಕೆಲವೇ ಕೀಲಿಗಳ ಸಹಾಯದಿಂದ ಹಲವಾರು ಪರಿಣಾಮಾತ್ಮಕ ಕಾರ್ಯಗಳನ್ನು ನಿರ್ವಹಿಸುತ್ತದೆ. ನ್ಯಾಯಾಲಯದ ವರದಿಗಾರರ ಸ್ಟೆನೋಟೈಪ್ ಯಂತ್ರಗಳು ಕಾರ್ಡೆಡ್ ಕೀಬೋರ್ಡ್‌ಗಳನ್ನೇ ಬಳಸುತ್ತಿದ್ದು ಇವು ಪ್ರತೀ ಕೀಲಿಯನ್ನು ಒತ್ತಿದಾಗ ಒಂದು ಅಕ್ಷರವನ್ನು ಒಮ್ಮೆ ಮೂಡಿಸುವ ಬದಲಿಗೆ, ಪ್ರತೀ ಕೀಲಿಯನ್ನು ಒತ್ತಿದಾಗ ಪೂರ್ತಿ ಉಚ್ಚಾರಾಂಶಗಳನ್ನು ಶೀಘ್ರವಾಗಿ ಬೆರಳಚ್ಚು ಮಾಡಿ ಪಠ್ಯವನ್ನು ತುಂಬಿಸುವ ಅವರ ಕಾರ್ಯಗಳನ್ನು ವೇಗವಾಗಿ ನಿರ್ವಹಿಸುವಂತೆ ಮಾಡುತ್ತದೆ. ಅತಿವೇಗದ ಬೆರಳಚ್ಚುಗಾರರು (೨೦೦೭ರಂತೆ) ಸ್ಟೆನೊಗ್ರಾಫ್ ಬಳಸುತ್ತಾರೆ. ಇದೊಂದು ಕಾರ್ಡೆಡ್ ಕೀಬೋರ್ಡ್ ಆಗಿದ್ದು, ಇದನ್ನು ಹೆಚ್ಚಿನ ನ್ಯಾಯಾಲಯದ ವರದಿಗಾರರು ಮತ್ತು ಕ್ಲೋಸ್ಡ್-ಕ್ಯಾಪ್ಶನ್ ವರದಿಗಾರರು ಬಳಸುತ್ತಾರೆ. ಒಂದೇ ಕೈಯಲ್ಲಿ ಬಳಸುವಂತಹ ಸಾಧನಗಳು ಮತ್ತು ದೊಡ್ಡ ಕೀಬೋರ್ಡ್‌ನನ್ನು ಇಡಲು ಸ್ಥಳಾವಕಾಶ ಕಡಿಮೆಯಿರುವಂತಹ ಚಿಕ್ಕ ಮೊಬೈಲ್ ಸಾಧನಗಳು ಇವೇ ಮೊದಲಾದ ಕಡಿಮೆ ಕೀಲಿಗಳ ಬಳಕೆಯನ್ನು ಆಧರಿಸಿದ ಸಾಧನಗಳಲ್ಲಿ ಕೆಲವು ಕಾರ್ಡೆಡ್ ಕೀಬೋರ್ಡ್‌ಗಳು ಬಳಕೆಯಾಗುತ್ತಿದೆ. ಸತತ ಅಭ್ಯಾಸದ ಅಗತ್ಯವನ್ನು ಹೊಂದಿರುವುದರಿಂದ ಮತ್ತು ಇದರ ಬಳಕೆಯಲ್ಲಿ ದಕ್ಷತೆಯನ್ನು ಸಾಧಿಸಲು ಕೀಲಿಗಳ ಸಂಯೋಜನೆಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಅನಿವಾರ್ಯವಾದುದರಿಂದ ಹೆಚ್ಚಿನ ಸಂದರ್ಭಗಳಲ್ಲಿ ಕಾರ್ಡೆಡ್ ಕೀಬೋರ್ಡ್‌ಗಳು ಕಡಿಮೆ ಅಪೇಕ್ಷೆಯನ್ನು ಹೊಂದಿವೆ.
ತಂತ್ರಾಂಶ
ಬದಲಾಯಿಸಿತಂತ್ರಾಂಶ ಕೀಬೋರ್ಡ್ ಅಥವಾ, ತೆರೆಯ ಮೇಲಿನ ಕೀಬೋರ್ಡ್‌ಗಳು (ಆನ್‌ಸ್ಕ್ರೀನ್ ಕೀಬೋರ್ಡ್) ತೆರೆಯ ಮೇಲೆ ಕೀಬೋರ್ಡ್‌ನ ಚಿತ್ರವನ್ನು ಪ್ರದರ್ಶಿಸುವಂತಹ ಗಣಕಯಂತ್ರ ತಂತ್ರಾಂಶಗಳ ರೂಪದಲ್ಲಿರುತ್ತವೆ. ಮೌಸ್ ಅಥವಾ ಟಚ್‌ಸ್ಕ್ರೀನ್‌ನಂತಹ ಇನ್ನೊಂದು ಇನ್‌ಪುಟ್ ಸಾಧನವು ಪಠ್ಯವನ್ನು ತುಂಬಲು ಪ್ರತಿಯೊಂದು ಕೀಲಿಗಳನ್ನು ಬಳಸುತ್ತವೆ. ಯಾಂತ್ರಿಕ ಕೀಬೋರ್ಡ್‌ಗಳಂತಹ ಇತರ ವಿಧದ ಕೀಬೋರ್ಡ್‌ಗಳು ಅಧಿಕ ಸ್ಥಳವನ್ನು ಆವರಿಸುವುದರಿಂದ ಮತ್ತು ಇದಕ್ಕೆ ತಗುಲುವ ವೆಚ್ಚವೂ ಅಧಿಕವಾದುದುದರಿಂದ ಟಚ್ ಸ್ಕ್ರೀನ್ ಮೂಲಕ ಕಾರ್ಯನಿರ್ವಹಿಸುವ ಸೆಲ್ ಫೋನ್‌ಗಳಲ್ಲಿ ತಂತ್ರಾಂಶ ಕೀಬೋರ್ಡ್‌ಗಳು ಬಹು ಪ್ರಸಿದ್ಧವಾಗಿವೆ. ಮೈಕ್ರೋಸಾಫ್ಟ್ ವಿಂಡೋಸ್, ಮ್ಯಾಕ್ ಒಎಸ್ ಎಕ್ಸ್, ಮತ್ತು ಲಿನಕ್ಸ್‌ನ ಕೆಲವು ಬಗೆಯ ವಿನ್ಯಾಸಗಳು ಮೌಸ್ ಮೂಲಕ ನಿಯಂತ್ರಿಸಬಹುದಾದ ತೆರೆಯ ಮೇಲಿನ ಕೀಬೋರ್ಡ್‌ಗಳನ್ನು ಹೊಂದಿವೆ.
ಮಡಿಚಬಲ್ಲ ಕೀಬೋರ್ಡ್‌ಗಳು
ಬದಲಾಯಿಸಿಮಡಿಚಬಲ್ಲ ಕೀಬೋರ್ಡ್‌ಗಳು, (ಬಾಗುವ ಕೀಬೋರ್ಡ್) ಮೃದುವಾದ ಪ್ಲಾಸ್ಟಿಕ್ ಅಥವಾ ಸಿಲಿಕಾನ್‌ನಿಂದ ರಚಿಸಲ್ಪಟ್ಟಿದ್ದು ಪ್ರಯಾಣದ ಸಂದರ್ಭದಲ್ಲಿ ಇವನ್ನು ಸುರುಳಿಯಾಕಾರದಲ್ಲಿ ಸುತ್ತಬಹುದು ಮತ್ತು ಮಡಿಚಬಹುದು.[೩] ಉಪಯೋಗಿಸುತ್ತಿರುವ ಸಂದರ್ಭದಲ್ಲಿ ಈ ಕೀಬೋರ್ಡ್‌ಗಳು ಅಸಮ ಮೇಲ್ಮೈಗೆ ಅನುಗುಣವಾಗಿ ಹೊಂದಿಕೊಂಡು ಮಾದರಿ ಕೀಬೋರ್ಡ್‌ಗಳಿಗಿಂತ ಹೆಚ್ಚಾಗಿ ದ್ರವಪದಾರ್ಥಗಳ ವಿರುದ್ಧ ನಿರೋಧಕ ಶಕ್ತಿಯನ್ನು ಹೊಂದಿವೆ. ಇವನ್ನು ಒಯ್ಯಲನುಕೂಲವಾದ; ಸಾಗಿಸಬಹುದಾದ ಸಾಧನಗಳಲ್ಲಿ ಮತ್ತು ಸ್ಮಾರ್ಟ್ ಫೋನ್‌ಗಳಲ್ಲಿ ಕೂಡಾ ಬಳಸಲಾಗುತ್ತದೆ. ಕೆಲವು ವಿನ್ಯಾಸಗಳನ್ನು ನೀರಿನಲ್ಲಿ ಪೂರ್ತಿಯಾಗಿ ಮುಳುಗಿಸಬಹುದಾಗಿದ್ದು ಈ ಸ್ವಭಾವದಿಂದ ಸೋಂಕು ತಗುಲುವ ಸಾಧ್ಯತೆ ಇಲ್ಲದೇ ಇರುವುದರಿಂದ ಇವುಗಳನ್ನು ಆಸ್ಪತ್ರೆಗಳಲ್ಲಿ, ಪ್ರಯೋಗಾಲಯಗಳಲ್ಲಿ ಬಳಸಲಾಗುತ್ತದೆ.
ಪ್ರಕ್ಷೇಪಣ/ಲೇಸರ್
ಬದಲಾಯಿಸಿಪ್ರಕ್ಷೇಪಣಾ ಕೀಬೋರ್ಡ್ ಕೀಲಿಗಳ ಚಿತ್ರವನ್ನು ಲೇಸರ್ ಜೊತೆಗೆ ಸಮತಟ್ಟಾದ ಮೇಲ್ಮೈ ಮೇಲೆ ಪ್ರಕ್ಷೇಪಿಸುತ್ತದೆ. ಈ ಸಾಧನವು ಬಳಕೆದಾರರ ಕೈಬೆರಳುಗಳು ಎಲ್ಲಿ ಚಲಿಸುತ್ತವೆ ಎಂಬುದನ್ನು ಎಚ್ಚರವಾಗಿ "ಗ್ರಹಿಸು"ತ್ತಿರುತ್ತದೆ ಮತ್ತು , ಬಳಕೆದಾರರ ಬೆರಳು ಪ್ರಕ್ಷೇಪಣಗೊಂಡ ಚಿತ್ರದ ಕೀಲಿಯನ್ನು ಸ್ಪರ್ಶಿಸುವುದನ್ನು ಈ ಗ್ರಾಹಕವು ನೋಡಿದ ಕೂಡಲೆ ಒತ್ತಲ್ಪಟ್ಟ ಪ್ರತೀ ಒತ್ತುಗಳನ್ನೂ ಲೆಕ್ಕ ಮಾಡಲು ಇದು ಕ್ಯಾಮರಾ ಅಥವಾ ಇನ್ಫ್ರಾರೆಡ್ ಗ್ರಾಹಕಗಳನ್ನು ಬಳಸುತ್ತದೆ. ಪ್ರಕ್ಷೇಪಣಾ ಕೀಬೋರ್ಡ್ ಅತೀ ಚಿಕ್ಕ ಪ್ರೊಜೆಕ್ಟರ್ ಸಹಾಯದಿಂದಲೂ ಕೂಡಾ ಪೂರ್ಣ ಗಾತ್ರದ ಕೀಬೋರ್ಡ್‌ನನ್ನು ಪ್ರತಿಬಿಂಬಿಸುತ್ತದೆ. ಕೀಲಿಗಳು ಕೇವಲ ಪ್ರಕ್ಷೇಪಿಸಿದ ಚಿತ್ರವಾದುದರಿಂದ, ಅವುಗಳನ್ನು ಒತ್ತಿದ ಅನುಭವವಾಗುವುದಿಲ್ಲ. ಬೆರಳಚ್ಚು ಮಾಡುವಾಗ ಕಡಿಮೆ ಪ್ರಮಾಣ "ಕೊಡುವ" ಗುಣವುಳ್ಳ ಪ್ರಕ್ಷೇಪಣಾ ಕೀಬೋರ್ಡ್‌ನ ಬಳಕೆದಾರರು ತಮ್ಮ ಬೆರಳಿನ ತುದಿಯಲ್ಲಿ ಸ್ವಲ್ಪಮಟ್ಟಿನ ಪ್ರತಿಕೂಲತೆಯನ್ನು ಅನುಭವಿಸುವರು. ಕೀಲಿಗಳು ಪ್ರಕ್ಷೇಪಿಸಲ್ಪಡಲು ಸಮತಟ್ಟಾದ, ಪ್ರತಿಫಲಿಸದೇ ಇರುವಂತಹ ಮೇಲ್ಮೈಯ ಅಗತ್ಯವೂ ಇದೆ. ಹೆಚ್ಚಿನ ಪ್ರಕ್ಷೇಪಣಾ ಕೀಬೋರ್ಡ್‌ಗಳು ಅತ್ಯಂತ ಚಿಕ್ಕ ಗಾತ್ರ ಹೊಂದಿರುವ ಪಿಡಿಎಗಳಿಗಾಗಿ ತಯಾರಿಸಲ್ಪಟ್ಟಿವೆ.
ಫೋಟೋ ಆಪ್ಟಿಕಲ್ ತಂತ್ರಜ್ಞಾನ
ಬದಲಾಯಿಸಿಫೋಟೋ ಆಪ್ಟಿಕಲ್ ತಂತ್ರಜ್ಞಾನವು ಫೋಟೋ ಆಪ್ಟಿಕಲ್ ಕೀಬೋರ್ಡ್ ಎಂದೂ ಕರೆಯಲ್ಪಡುತ್ತದೆ. ಇದು ಬೆಳಕಿಗೆ ಸ್ಪಂದಿಸುವ ಕೀಬೋರ್ಡ್‌ನಾಗಿದೆ ಮತ್ತು ಆಪ್ಟಿಕಲ್ ಕೀಲಿಗಳಿಂದ ಪ್ರಚೋದನೆಗಳನ್ನು ಗುರುತಿಸುವ ತಂತ್ರಜ್ಞಾನವನ್ನು ಇದು ಹೊಂದಿದೆ.
ಆಪ್ಟಿಕಲ್ ಕೀಬೋರ್ಡ್ ತಂತ್ರಜ್ಞಾನವು ಬೆಳಕನ್ನು ಹೊರಸೂಸುವ ಸಾಧನಗಳನ್ನು ಬಳಸುತ್ತಿದ್ದು ಪ್ರಚೋದನಾ ಕೀಲಿಗಳನ್ನು ಬೆಳಕಿನ ಮೂಲಕ ಗುರುತಿಸಲು ಬೆಳಕಿನ ಗ್ರಾಹಕಗಳನ್ನು ಬಳಸುತ್ತವೆ. ಉತ್ಸರ್ಜಕ (ಎಮಿಟರ್)ಗಳು ಮತ್ತು ಗ್ರಾಹಕಗಳನ್ನು ಸಾಮಾನ್ಯವಾಗಿ ಪರಿಧಿಯಲ್ಲಿದ್ದು ಇದು ಚಿಕ್ಕ ಪಿಸಿಬಿ ಮೇಲೆ ಜೋಡಿಸಲಾಗಿದೆ. ಕೀಬೋರ್ಡ್‌ನ ಎರಡೂ ಪಕ್ಕಗಳಿಂದಲೂ ಬೆಳಕನ್ನು ಒಳಕ್ಕೆ ಹಾಯಿಸಲಾಗುತ್ತಿದ್ದು ಅದು ಕೇವಲ ಬೆಳಕಿನ ಪ್ರಚೋದಕ ಕೀಲಿಗಳಿಂದ ತಡೆಹಿಡಿಯಲ್ಪಡುತ್ತದೆ. ಪ್ರಚೋದನಾ ಕೀಲಿಗಳನ್ನು ಕಂಡುಹಿಡಿಯಲು ಹೆಚ್ಚಿನ ಆಪ್ಟಿಕಲ್ ಕೀಬೋರ್ಡ್‌ಗಳಿಗೆ ಎರಡು ಬೆಳಕಿನ ಕಿರಣಗಳಾದರೂ ಅಗತ್ಯವಾಗಿದೆ (ಸಾಮಾನ್ಯವಾಗಿ ನೇರ ಮತ್ತು ಅಡ್ಡ ಕಿರಣಗಳು). ಕೆಲವು ಆಪ್ಟಿಕಲ್ ಕೀಬೋರ್ಡ್‌ಗಳು ಕೆಲವು ನಿರ್ಧಿಷ್ಟ ವಿನ್ಯಾಸಗಳಿಂದ ಮಾತ್ರ ಬೆಳಕಿನ ಕಿರಣಗಳನ್ನು ತಡೆಹಿಡಿದು, ಕೇವಲ ಒಂದೇ ಕಿರಣ ಮಾತ್ರ ಒಂದು ಸಾಲಿನ ಕೀಲಿಗಳ ಮೇಲೆ ಬೀಳುವಂತೆ ಮಾಡುವ ಕೆಲವು ವಿಶೇಷ ಕೀಲಿ ರಚನೆಗಳನ್ನು ಬಳಸುತ್ತವೆ(ಸಾಮಾನ್ಯವಾಗಿ ಅಡ್ಡವಾದ ಕಿರಣ).
ಪ್ರದರ್ಶನ ವಿನ್ಯಾಸ
ಬದಲಾಯಿಸಿಅಕ್ಷರಗಳ ರೀತಿಯಲ್ಲಿ
ಬದಲಾಯಿಸಿಕೀಲಿಗಳಲ್ಲಿ ಹಲವು ಬಗೆಯ ವಿನ್ಯಾಸಗಳಿದ್ದು ಇವುಗಳಲ್ಲಿ ಅಕ್ಷರಗಳ, ಅಂಕೆಗಳ ಮತ್ತು ವಿರಾಮ ಚಿಹ್ನೆ ಕೀಲಿಗಳ ಅನೇಕ ವಿಧದ ಜೋಡಣೆಗಳಿವೆ. ಬೇರೆ ಬೇರೆ ಜನರು ಬೇರೆ ಬೇರೆ ಭಾಷೆಗಳಲ್ಲಿ ಪಠ್ಯವನ್ನು ಗಣಕಯಂತ್ರಕ್ಕೆ ಇನ್‌ಪುಟ್ ಮಾಡುವುದರಿಂದ ಕೀಬೋರ್ಡ್‌ನಲ್ಲಿರುವ ಹಲವು ಚಿಹ್ನೆಗಳನ್ನು ಸುಲಭವಾಗಿ ಬಳಸುವಂತೆ ಅಥವಾ ಅವರಿಗೆ ಗಣಿತ, ಲೆಕ್ಕಾಚಾರ ಮತ್ತು ಗಣಕಯಂತ್ರಗಳಿಗೆ ಆದೇಶ ಸರಣಿಗಳನ್ನು ನೀಡಲು ಅನುಕೂಲವಾಗುವಂತೆ ಅಥವಾ ಇತರ ಉದ್ದೇಶಗಳಿಗಾಗಿ ವಿಶೇಷ ವಿನ್ಯಾಸದ ಅಗತ್ಯವಿರುವುದರಿಂದ ಈ ವೈವಿಧ್ಯಮಯ ಕೀಬೋರ್ಡ್ ವಿನ್ಯಾಸಗಳು ಬೆಳಕಿಗೆ ಬಂದಿವೆ. ಅಮೇರಿಕಾ ಸಂಯುಕ್ತ ಸಂಸ್ತಾನದ ಕೀಬೋರ್ಡ್ ವಿನ್ಯಾಸವನ್ನು ಈಗಿನ ವಿಂಡೋಸ್[೪], ಮ್ಯಾಕ್ ಓಎಸ್ ಎಕ್ಸ್ [೫] ಮತ್ತು ಲಿನಕ್ಸ್‌ನಂತಹ[೬] ಎಲ್ಲಾ ಪ್ರಸಿದ್ಧ ಆಪರೇಟಿಂಗ್ ಸಿಸ್ಟಂಗಳಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ.[೭] ಸಾಮಾನ್ಯ ವಿನ್ಯಾಸವುಳ್ಳ ಹೆಚ್ಚಿನ ಎಲ್ಲಾ ಕೀಬೋರ್ಡ್‌ಗಳನ್ನು (ಕ್ಯೂಡಬ್ಲ್ಯುಇಆರ್‌ಟಿಐ-ಅಧಾರಿತ ಅಥವಾ ಇದಕ್ಕೆ ಸಮವಾದ) ಯಾಂತ್ರಿಕ ಬೆರಳಚ್ಚು ಯಂತ್ರದ ಕಾಲದಲ್ಲಿ ವಿನ್ಯಾಸಗೊಳಿಸಲಾಗಿದೆ. ಆದುದರಿಂದ ಬೆರಳಚ್ಚು ಯಂತ್ರದ ಕೆಲವು ಯಾಂತ್ರಿಕ ಮಿತಿಗಳನ್ನು ಅಥವಾ ಕೊರತೆಗಳನ್ನು ನಿರ್ವಹಿಸಲು ಸಾಧ್ಯವಾಗುವಂತೆ ಈ ಕೀಬೋರ್ಡ್‌ಗಳ ದಕ್ಷತೆಯಲ್ಲಿ ಸ್ವಲ್ಪ ಪ್ರಮಾಣದ ಹೊಂದಾಣಿಕೆಯನ್ನು ಮಾಡಲಾಗಿದೆ.
ಪಟ್ಟಿಯ ಮೇಲೆ ಜೋಡಿಸಲ್ಪಟ್ಟ ಅಕ್ಷರ ಕೀಲಿಗಳು ಪರಸ್ಪರ ಸಿಕ್ಕಿಹಾಕಿಕೊಳ್ಳದಂತೆ ಕಾರ್ಯನಿರ್ವಹಿಸುವ ಸಮಯದಲ್ಲಿ ಅವು ಸುಲಭವಾಗಿ ಚಲಿಸುವಂತೆ ಮಾಡಲು ಸೃಷ್ಟಿಕರ್ತ ಕ್ರಿಸ್ಟೋಫರ್ ಶೋಲೆಸ್ ಕ್ಯೂಡಬ್ಲ್ಯುಇಆರ್‌ಟಿವೈ ವಿನ್ಯಾಸವನ್ನು ಅಭಿವೃದ್ಧಿಪಡಿಸಿದನು. ಗಣಕಯಂತ್ರಗಳ ಆಗಮನದ ಜೊತೆಗೆ ಕೀಲಿಪಟ್ಟಿಗಳ ಮೇಲಿನ ಒತ್ತಡ ಅಥವಾ ಅವುಗಳು ಅಡಚಿಕೊಳ್ಳುವುದು ಒಂದು ಸಮಸ್ಯೆಯಾಗಿ ಪರಿಣಮಿಸಲಿಲ್ಲ ಆದರೆ, ಹೀಗಿದ್ದರೂ, ಕ್ಯೂಡಬ್ಲ್ಯುಇಆರ್‌ಟಿಐ ವಿನ್ಯಾಸಗಳು ವಿಸ್ತೃತ ಬಳಕೆಯಲ್ಲಿರುವುದರಿಂದ ವಿದ್ಯುಚ್ಚಾಲಿತ ಕೀಬೋರ್ಡ್‌ಗಳಿಗೂ ಸಹ ಬಳಸಿಕೊಳ್ಳಬಹುದಾಗಿದೆ. ಪರ್ಯಾಯ ವಿನ್ಯಾಸಗಳಾದ ಡ್ವೋರಕ್ ಸಿಂಪ್ಲಿಫೈಡ್ ಕೀಬೋರ್ಡ್‌ಗಳು ವಿಸ್ತೃತ ಬಳಕೆಯಲ್ಲಿಲ್ಲ.
ಕ್ಯೂಡಬ್ಲ್ಯುಇಆರ್‌ಟಿಝೆಡ್ ವಿನ್ಯಾಸವು ಜರ್ಮನಿ ಮತ್ತು ಮಧ್ಯ ಯೂರೋಪ್‌ಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ. ಕ್ಯೂಡಬ್ಲ್ಯುಇಆರ್‌ಟಿಝೆಡ್ ಮತ್ತು ಕ್ಯೂಡಬ್ಲ್ಯುಇಆರ್‌ಟಿವೈ ವಿನ್ಯಾಸಗಳ ನಡುವಿನ ಮುಖ್ಯ ವ್ಯತ್ಯಾಸವೆಂದರೆ, ವೈ ಮತ್ತು ಝೆಡ್ ಕೀಲಿಗಳು ಅದಲು ಬದಲು ಸ್ಥಳಗಳಲ್ಲಿ ಜೋಡಿಸಲ್ಪಟ್ಟಿವೆ ಮತ್ತು ಆವರಣಗಳೇ ಮೊದಲಾದ ಹೆಚ್ಚಿನ ವಿಶೇಷ ಸಂಕೇತ ಕೀಲಿಗಳ ಸ್ಥಾನಗಳು ಉಚ್ಛಾರಣಾ ಚಿಹ್ನೆಗಳಿಂದ ತುಂಬಿಸಲ್ಪಟ್ಟಿವೆ.
ಇನ್ನೊಂದು ಪರಿಸ್ಥಿತಿಯು ರಾಷ್ಟ್ರೀಯ ವಿನ್ಯಾಸ( ನ್ಯಾಷನಲ್ ಲೇಔಟ್) ದೊಂದಿಗೆ ಒದಗಿಬಂತು. ಸ್ಪಾನಿಷ್ ಭಾಷೆಯಲ್ಲಿ ಬೆರಳಚ್ಚು ಮಾಡಲು ಬಳಸುವ ಕೀಬೋರ್ಡ್‌ಗಳಲ್ಲಿ Ñ ñ; ಗಳನ್ನು ಬೆರಳಚ್ಚು ಮಾಡಲನುಕೂಲವಾಗುವಂತೆ ಕೆಲವು ಸಂಕೇತಗಳನ್ನು ಸ್ಥಳಾಂತರಿಸಲಾಗಿದೆ. ಅಂತೆಯೇ, ಫ್ರೆಂಚ್ ಮತ್ತು ಇತರ ಯೂರೋಪ್ ಭಾಷೆಗಳ ಬಳಕೆಯಿರುವ ಕೀಬೋರ್ಡ್‌ಗಳಲ್ಲಿ Ç ç ನಂತಹ ಕೆಲವು ವಿಶೇಷ ಕೀಲಿಗಳ ಜೋಡಣೆಯಿರುತ್ತವೆ. ಎಝೆಡ್ಇಆರ್‌ಟಿವೈ ವಿನ್ಯಾಸವು ಫ್ರಾನ್ಸ್, ಬೆಲ್ಜಿಯಂ ಮತ್ತು ಕೆಲವು ನೆರೆಯ ರಾಷ್ಟ್ರಗಳಲ್ಲಿ ಬಳಕೆಯಲ್ಲಿವೆ. ಇದರಲ್ಲಿ ಎ ಮತ್ತು ಕ್ಯೂ ಕೀಲಿಗಳು ಮತ್ತು ಝೆಡ್ ಮತ್ತು ಡಬ್ಲ್ಯು ಕೀಲಿಗಳು ಪರಸ್ಪರ ಅದಲುಬದಲಾಗಿ ಜೋಡಿಸಲ್ಪಟ್ಟಿದ್ದು, ಎಮ್ ಕೀಲಿಯು ಎನ್ ಕೀಲಿಯ ಬಲಬದಿಯಿಂದ ಎಲ್ ಕೀಲಿಯ ಬಲಬದಿಗೆ ಸ್ಥಳಾಂತರಗೊಂಡಿದ್ದು (ಯುಎಸ್ ಕೀಬೋರ್ಡ್‌ನ ವಿವರಣ ಚಿಹ್ನೆ ಮತ್ತು ಅರ್ಧ ವಿರಾಮ ಚಿಹ್ನೆಗಳಿರುವ ಸ್ಥಳ) ಕ್ಯೂಡಬ್ಲ್ಯುಇಆರ್‌ಟಿವೈ ವಿನ್ಯಾಸಕ್ಕಿಂತ ವ್ಯತ್ಯಾಸವುಳ್ಳ ರಚನೆಯನ್ನು ಹೊಂದಿದೆ. ೦ ಯಿಂದ ೯ರವರೆಗಿನ ಸಂಖ್ಯೆಗಳು ಅದೇ ಕೀಲಿಗಳಲ್ಲಿದ್ದರೂ, ಇವನ್ನು ಬೆರಳಚ್ಚು ಮಾಡಲು ಶಿಫ್ಟ್ ಕೀಲಿಯನ್ನೂ ಒತ್ತಿ ಹಿಡಿದೇ ಮಾಡಬೇಕಾಗುತ್ತದೆ. ಶಿಫ್ಟ್ ಬಳಸದೇ ಈ ಕೀಲಿಗಳಿಂದ ಒತ್ತಕ್ಷರಗಳನ್ನು ಬೆರಳಚ್ಚು ಮಾಡಲಾಗುತ್ತದೆ.
ಏಷ್ಯಾದ ಹಲವು ಭಾಗಗಳಲ್ಲಿನ ಕೀಬೋರ್ಡ್‌ಗಳು ಲ್ಯಾಟೀನ್ ಸಂಕೇತಗಳ ಪಟ್ಟಿ ಮತ್ತು ಇದಕ್ಕಿಂತ ಪೂರ್ತಿ ಭಿನ್ನವಾದ ಬೆರಳಚ್ಚು ವ್ಯವಸ್ಥೆಗಳ ನಡುವೆ ಬದಲಾವಣೆಗಾಗಿ ಹಲವು ವಿಶೇಷ ಕೀಲಿಗಳನ್ನು ಹೊಂದಿರಬಹುದು. ಜಪಾನ್‌ನಲ್ಲಿ ಕೀಬೋರ್ಡ್‌ಗಳು ಜಪಾನೀ ಮತ್ತು ಲ್ಯಾಟೀನ್ ಅಕ್ಷರಗಳ ನಡುವೆ ಬದಲಾಣೆಯ ಅಗತ್ಯವನ್ನು ಹೊಂದಿದ್ದು ಸಂಕೇತ ¥ (ಯೆನ್)ನ್ನು "\" ಸಂಕೇತದ ಬದಲಿಗೆ ಬಳಸಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು] ಅರಬ್ ಜಗತ್ತಿನಲ್ಲಿ ಅರೇಬಿಕ್ ಮತ್ತು ಲ್ಯಾಟೀನ್ ಅಕ್ಷರಗಳ ನಡುವೆ ಕೀಬೋರ್ಡ್‌ಗಳು ಬದಲಾವಣೆಯನ್ನು ಮಾಡಬೇಕಾಗಿರುತ್ತವೆ.
ಕೆನಡಾದ ದ್ವಿಭಾಷಾ ಪ್ರದೇಶಗಳಲ್ಲಿ ಮತ್ತು ಕ್ಯೂಬೆಕ್‌ನ ಫ್ರೆಂಚ್ ಭಾಷೆಯನ್ನಾಡುವ ಪ್ರದೇಶಗಳಲ್ಲಿ ಕೀಬೋರ್ಡ್‌ಗಳು ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಗಳ ನಡುವೆ ಬದಲಾವಣೆಯನ್ನು ಹೊಂದಬೇಕಾಗುತ್ತದೆ. ಎರಡೂ ಕೀಬೋರ್ಡ್‌ಗಳು ಕ್ಯೂಡಬ್ಲ್ಯುಇಆರ್‌ಟಿವೈ ಅಕ್ಷರ ವಿನ್ಯಾಸವನ್ನು ಪರಸ್ಪರ ಹಂಚಿಕೊಂಡಿದೆ ಮತ್ತು ಫ್ರೆಂಚ್ ಭಾಷೆಯ ಕೀಬೋರ್ಡ್‌ನ ವಿನ್ಯಾಸವು "é" ಅಥವಾ "à" ಯಂತಹ ಸ್ವರಾಕ್ಷರಗಳನ್ನು ಒಂದೇ ಕೀಲಿ ಒತ್ತಿನಲ್ಲಿ ಬೆರಳಚ್ಚು ಮಾಡಲು ಬಳಕೆದಾರರಿಗೆ ಸಹಕರಿಸುತ್ತದೆ. ಇತರ ಭಾಷೆಗಳಿಗಾಗಿ ಕೀಬೋರ್ಡ್‌ನನ್ನು ಬಳಸುವುದರಿಂದ ಕೀಲಿ ಮೇಲಿನ ಚಿತ್ರವು ಅದು ನಿಯುಕ್ತಿಗೊಂಡ ಸಂಕೇತವನ್ನು ಬೆರಳಚ್ಚು ಮಾಡದೇ ಇರುವಂತಹ ಕೆಲವು ಸಂಘರ್ಷಗಳಿಗೆ ಎಡೆಮಾಡಿಕೊಡುತ್ತದೆ. ಇಂತಹ ಸಂದರ್ಭಗಳಲ್ಲಿ ಪ್ರತೀ ಹೊಸ ಭಾಷೆಯು ಹೆಚ್ಚುವರಿ ಹೆಸರುಪಟ್ಟಿ ಅಥವಾ ಗುರುತುಳ್ಳ ಕೀಲಿಗಳನ್ನು ಹೊಂದಿರುವ ಅಗತ್ಯವಿದೆ ಯಾಕೆಂದರೆ, ಮಾದರಿ ಕೀಬೋರ್ಡ್‌ನ ವಿನ್ಯಾಸಗಳು ಇತರ ಭಾಷೆಗಳ ಒಂದೇ ರೀತಿಯ ಚಿಹ್ನೆಗಳನ್ನೂ ಸಹ ಪರಸ್ಪರ ಹಂಚಿಕೊಂಡು ಕಾರ್ಯನಿರ್ವಹಿಸುವುದಿಲ್ಲ. (ಮೇಲೆ ನೀಡಿರುವ ಚಿತ್ರದ ಉದಾಹರಣೆಯನ್ನು ನೋಡಿ)
ಕೀ ವಿಧಗಳು (ಕಂಪ್ಯೂಟರ್ ಕೀ ಪಟ್ಟಿ ವಿಧಗಳು)
ಬದಲಾಯಿಸಿಅಕ್ಷರ ಸಂಖ್ಯಾಯುಕ್ತ (ಆಲ್ಫಾನ್ಯುಮರಿಕ್)
ಬದಲಾಯಿಸಿವರ್ಣಮಾಲೆಯ, ಸಂಖ್ಯಾತ್ಮಕ ಮತ್ತು ವಿರಾಮಚಿಹ್ನೆಗಳ ಪದ್ಧತಿಯ ಕೀ (ಅಕ್ಷರಗಳು)ಗಳನ್ನು ಟೈಪ್ ರೈಟರ್ ನ ಕೀಬೋರ್ಡ್ ರೀತಿಯಲ್ಲೇ ಇಲ್ಲೂ ಸಹ ಬಳಸಬಹುದಾಗಿದೆ. ಇದನ್ನು ವರ್ಡ್ ಸಾಫ್ಟ್ ವೇರ್ ಪ್ರೋಗ್ರಾಮ್, ಟೆಕ್ಸ್ಟ್ ಎಡಿಟರ್, ಡಾಟಾ ಸ್ಪ್ರೆಡ್ ಶೀಟ್ ಅಥವಾ ಇನ್ನಿತರೆ ಕಾರ್ಯಗಳಲ್ಲಿ ಬಳಸಬಹುದಾಗಿದೆ. ಇದರಲ್ಲಿರುವ ಹಲವಾರು ಅಕ್ಷರಗಳು ವಿವಿಧ ಚಿಹ್ನೆಗಳನ್ನು ಹೊಂದಿದ್ದು, ಇದನ್ನು ಬಳಸಲು ಶಿಫ್ಟ್ ಕೀ ಅಥವಾ ಮಾಡಿಫೈಯರ್ ಕೀ ಅನ್ನು ಬಳಸಬೇಕು. ವರ್ಣಮಾಲೆಯ ಅಕ್ಷರಗಳು ಮೇಲ್ ಸ್ಥರದಲ್ಲಿದ್ದು, ಇವುಗಳನ್ನು ಬಳಸಲು ಶಿಫ್ ಕೀ ಅಥವಾ ಕ್ಯಾಪ್ಸ್ ಲಾಕ್ ಕೀ ಅನ್ನು ಒತ್ತಬೇಕು. ಶಿಫ್ಟ್ ಕೀಯನ್ನು ಒತ್ತಿದಾಗ ಸಂಖ್ಯಾ ಚಿಹ್ನೆಗಳು, ಸಂಜ್ಞೆಗಳಾಗುತ್ತವೆ ಅಥವಾ ವಿರಾಮ ಚಿಹ್ನೆಗಳಾಗಿ ಬದಲಾಗುತ್ತವೆ. ಸಂಖ್ಯಾಶಾಸ್ತ್ರದ ಅಕ್ಷರಗಳು ಚಿಹ್ನೆಗಳು ಅಥವಾ ವಿರಾಮ ಚಿಹ್ನೆಗಳನ್ನು ಒಂದೇ ಸಮಯದಲ್ಲಿ ಶಿಫ್ಟ್ ಅಥವಾ ಮಾಡಿಫೈಯರ್ ಕೀಲಿಗಳನ್ನು ಬಳಸಿದಾಗ ಬೇರೆ ಪದವನ್ನೂ ಸಹ ತೋರಿಸುತ್ತದೆ.
ಇದರಲ್ಲಿ ಸ್ಪೇಸ್ ಬಾರ್ ಅಡ್ಡಪಟ್ಟಿವಾಗಿದ್ದು, ಅತಿ ಕೆಳಭಾಗದಲ್ಲಿದೆ (ಕೆಳ ಸಾಲಿನಲ್ಲಿದೆ). ಇದು ಉಳಿದೆಲ್ಲಾ ಕೀಪಟ್ಟಿಗಳಿಗಿಂತಲೂ ಅಗಲವಾಗಿದೆ. ಅಕ್ಷರಸಂಖ್ಯಾಯುಕ್ತ ಪದಗಳು ಸಹ ಯಾಂತ್ರಿಕ ಟೈಪ್ ರೈಟರ್ ನಿಂದ ಹುಟ್ಟಿದಂತದು (ಎರವಲಾಗಿ ಪಡೆದವು). ಇದರ ಮುಖ್ಯ ಉದ್ದೇಶವೇನೆಂದರೆ ಶಬ್ಧಗಳ ಬರವಣಿಗೆ (ಟೈಪಿಂಗ್) ಮಾಡಬೇಕಾದರೆ ಅವುಗಳ ನಡುವೆ ಸ್ಥಳಾವಕಾಶ (ಸ್ಪೇಸ್) ಕಲ್ಪಿಸುವುದಾಗಿದೆ. ಇದು ಸಾಕಾಗುವಷ್ಟು ವಿಶಾಲವಾಗಿದ್ದರಿಂದ ಎರಡು ಕೈಯಲ್ಲಿ ಯಾವುದಾದರೂ ಒಂದು ಹೆಬ್ಬರಳಿನಿಂದ ಸುಲಭವಾಗಿ ಇದನ್ನು ಒತ್ತಬಹುದು. ಇದು ಬಳಕೆ ಮಾಡುವವರ ಕಾರ್ಯದ ಪದ್ಧತಿ ಮೇಲೆ ಹೋಗುತ್ತದೆ.ಯಾವಾಗ ಸ್ಪೇಸ್ ಬಾರ್ ಅನ್ನು ಮಾಡಿಫೈಯರ್ ಕೀ ಪಟ್ಟಿಯಾದ ಕಂಟ್ರೋಲ್ ಕೀ ಜತೆ ಬಳಸಿದಾಗ, ಕಂಟ್ರೋಲ್ ಕೀ ಯು ರೀ ಸೈಜಿಂಗ್ (ದೊಡ್ಡ, ಸಣ್ಣ ಮಾಡುವುದು) ಅಥವಾ ಕಂಟ್ರೋಲ್ ವಿಂಡೋವನ್ನು ಮುಕ್ತಾಯಗೊಳಿಸುವುದು. ಅರ್ಧ ಸ್ಪೇಸ್ ಅಥವಾ ಬ್ಯಾಕ್ ಸ್ಪೇಸ್ ನೀಡುವ ಕಾರ್ಯವನ್ನು ನಿರ್ವಹಿಸುತ್ತದೆ. ಕಂಪ್ಯೂಟರ್ ಗೇಮ್ ಮತ್ತು ಇತರೆ ಪ್ರೋಗ್ರಾಮ್ ಗಳಲ್ಲಿ ಈ ಕೀ ಯನ್ನು ಸಾಮಾನ್ಯವಾಗಿ ಟೈಪಿಂಗ್ ನಲ್ಲಿ ಬಳಸುವುದಕ್ಕಿಂತ ಅಸಂಖ್ಯಾತ ರೀತಿಯಲ್ಲಿ ಬಳಕೆ ಮಾಡಲಾಗುತ್ತದೆ. ಅವುಗಳಾದ ಜಂಪಿಂಗ್ ಮತ್ತು ಚೆಕ್ ಬಾಕ್ಸ್ ಗಳಲ್ಲಿ ಅಂಕಗಳನ್ನು ಸೇರಿಸುವಾಗ ಬಳಸಲ್ಪಡುತ್ತದೆ. ಕೆಲ ನಿಶ್ಚಿತ ಪ್ರೋಗ್ರಾಮ್ ಗಳಾದ ಡಿಜಿಟಲ್ ವೀಡಿಯೋಗಳನ್ನು ಚಾಲನೆಯಲ್ಲಿಟ್ಟಾಗ ಅದನ್ನು ಪಾಸ್ (ನಿಲ್ಲಿಸಲು) ಮಾಡಲು ಮತ್ತು ಪುನಃ ಚಾಲನೆ ನೀಡಲು ಸ್ಪೇಸ್ ಬಾರ್ ಪಟ್ಟಿಯನ್ನು ಉಪಯೋಗಿಸಲಾಗುತ್ತದೆ.
ಪರಿವರ್ತಕಗಳು
ಬದಲಾಯಿಸಿಮಾಡಿಫೈಯರ್ ಕೀ ಪಟ್ಟಿಗಳು ವಿಶೇಷ ಕೀ ಪಟ್ಟಿಗಳಾಗಿದ್ದು, ಇವು ಇನ್ನೊಂದು ಕೀ ಪಟ್ಟಿಯ ಸಾಮಾನ್ಯ ಕ್ರಿಯೆಯನ್ನು ಮಾಡುತ್ತದೆ. ಅಂದರೆ ಒಂದೇ ಬಾರಿ ಎರಡು ಕೀ ಪಟ್ಟಿಗಳನ್ನು ಒತ್ತಿ ಇನ್ನೊಂದು ಪ್ರಕ್ರಿಯೆ ನಡೆಸಲು ಇದು ಸಹಾಯಕವಾಗಿದೆ. ಉದಾಹರಣೆಗೆ <Alt> + <F4> ಅನ್ನು ಒತ್ತಿದಾಗ ಮೈಕ್ರೋಸಾಫ್ಟ್ ವಿಂಡೋದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಂಡೋ ಪ್ರೋಗ್ರಾಮ್ ನಿರ್ಗಮನವಾಗುತ್ತದೆ. ಇದಕ್ಕೆ ಹೋಲಿಸಿದಲ್ಲಿ ಕೇವಲ <F4> ಅನ್ನು ಒತ್ತಿದಾಗ ಯಾವುದೇ ರೀತಿಯ ಕಾರ್ಯವಾಗುವುದಿಲ್ಲ. ನಿರ್ದಿಷ್ಟ ಪ್ರೋಗ್ರಾಮ್ ನಲ್ಲಿ ನಿಖರವಾದ ಕಾರ್ಯಗಳನ್ನು ಮಾಡುತ್ತಿದ್ದರ ಹೊರತಾಗಿ ಇದನ್ನೊಂದನ್ನೇ ಬಳಸಿದಾಗ ಕಾರ್ಯನಿರ್ವಹಿಸುವುದಿಲ್ಲ. ಮಾಡಿಫೈಯರ್ ಕೀ ಪಟ್ಟಿಗಳು ಕೇವಲ ಅವಕಷ್ಟಕವೇ ಯಾವುದೇ ಕಾರ್ಯಗಳನ್ನು ಮಾಡಲಾಗುವುದಿಲ್ಲ. ಇದಕ್ಕೆ ಇನ್ನೊಂದರ ಸಹಾಯಗಳು ಬೇಕಿವೆ.
ಹೆಚ್ಚಾಗಿ ಬಳಸಲ್ಪಡುವ ಮಾಡಿಫೈಯರ್ ಕೀ ಪಟ್ಟಿಗಳಾಗಿ ಕಂಟ್ರೋಲ್ ಕೀ, ಶಿಫ್ಟ್ ಕೀ ಮತ್ತು ಆಲ್ಟ್ ಕೀಲಿಗಳು ಬಳಸಲ್ಪಡುತ್ತವೆ. AltGr ಕೀ ಪಟ್ಟಿಯನ್ನು ಹೆಚ್ಚುವರಿ ಚಿಹ್ನೆಗಳನ್ನು ಪಡೆಯಲು ಉಪಯೋಗಿಸಲಾಗುತ್ತದೆ. ಇದರಿಂದ ೩ ಚಿಹ್ನೆಗಳು ಮೂಡಿಬರುತ್ತವೆ. ಮ್ಯಾಕಿಂಟೋಷ್ ಮತ್ತು ಆಪಲ್ ಕೀ ಬೋರ್ಡ್ ಗಳಲ್ಲಿ ಈ ಮಾಡಿಫೈಯರ್ ಕೀ ಗಳು ಆಪ್ಷನ್ ಕೀ (ಬದಲೀ ವ್ಯವಸ್ಥೆ) ಮತ್ತು ಕಮಾಂಡ್ ಕೀಲಿಗಳಾಗಿರುತ್ತವೆ. ಎಂಐಟಿ ಕಂಪ್ಯೂಟರ್ ಕೀಬೋರ್ಡ್ ಗಳಲ್ಲಿ ಮೇಟಾ ಕೀಯನ್ನು ಮಾಡಿಫೈಯರ್ ಕೀ ಆಗಿ ಬಳಸಲಾಗುತ್ತದೆ. ಮತ್ತು ವಿಂಡೋಸ್ ಕೀ ಬೋರ್ಡ್‌ಗಳಲ್ಲಿ ವಿಂಡೋ ಕೀ ಇರುತ್ತದೆ. ಕಾಂಪ್ಯಾಕ್ಟ್ ಕೀ ಬೋರ್ಡ್‌ಗಳಲ್ಲಿ Fn ಕೀ ಅನ್ನು ಬಳಸುವಂತೆ ನಿರ್ಮಾಣ ಮಾಡಲಾಗಿದೆ. ಡೆಡ್ ಕೀಲಿಗಳು ಡಯಾಕ್ರಿಟಿಕ್ ಸಂಜ್ಞೆಗಳನ್ನು ಸರಿ ಸ್ಥಾನದಲ್ಲಿರಿಸಲು ಸಹಾಯಕವಾಗುತ್ತವೆ. ಉಚ್ಛಾರಣೆಗೆ ತಕ್ಕುದಾಗಿ ಅಕ್ಷರಗಳನ್ನು ಮೂಡಿಸಲು ಸಹಾಯಕವಾಗುತ್ತದೆ. (ಉದಾಹರಣೆಗೆ, ಕಂಪೋಸ್ ಕೀ)
ಎಂಟರ್/ರಿಟರ್ನ್ ಕೀಲಿಗಳು ಕಮಾಂಡ್ ಲೈನ್ ಅನ್ನು ಪ್ರತಿನಿಧಿಸುತ್ತದೆ. ವಿಂಡೋ ರೂಪ ಅಥವಾ ಡೈಲಾಗ್ ಬಾಕ್ಸ್ ಗಳು ಅವುಗಳ ಕಾರ್ಯನಿರ್ವಹಿಸದ ಕೆಲಸವನ್ನು ನೆರವೇರಿಸುತ್ತದೆ. ಇದು ಆಗಮನದ ಮೂಲಕ ಮುಕ್ತಾಯವನ್ನು ಪ್ರತಿನಿಧಿಸುತ್ತದೆ. ಮತ್ತು ಹೊಸತಾಗಿ ಪ್ರಾರಂಭಿಸಲು ಅಪೇಕ್ಷಿಸುತ್ತದೆ. ವರ್ಡ್ ಪ್ರೊಸೆಸಿಂಗ್ ಅಪ್ಲಿಕೇಶನ್‌ಗಳಲ್ಲಿ ಎಂಟರ್ ಕೀ ಅನ್ನು ಒತ್ತಿದಾಗ ಅದು ಆ ಪ್ಯಾರಾವನ್ನು ಕೊನೆಗೊಳಿಸುತ್ತದೆ ಮತ್ತು ಹೊಸ ಪ್ಯಾರಾವನ್ನು ಪ್ರಾರಂಭಿಸುತ್ತದೆ.
ನ್ಯಾವಿಗೇಶನ್ ಮತ್ತು ಟೈಪಿಂಗ್ ಕ್ರಮ
ಬದಲಾಯಿಸಿನ್ಯಾವಿಗೇಶನ್ ಕೀಲಿಗಳು ವಿವಿಧ ರೀತಿಯ ಕೀಲಿಗಳನ್ನು ಹೊಂದಿದ್ದು, ಇವು ಸ್ಕೀನ್‌ಗಳ ಮೇಲೆ ವಿವಿಧ ಭಂಗಿಗಳಿಗೆ ಕರ್ಸರ್ ಅನ್ನು ಓಡಿಸಲು ಸಹಾಯ ಮಾಡುತ್ತದೆ. ಆರೋ ಕೀಲಿಗಳನ್ನು (Arrow) ಕರ್ಸರ್ ಅನ್ನು ನಿರ್ದಿಷ್ಟ ದಿಕ್ಕಿನೆಡೆ ಚಲಿಸುವಂತೆ ರಚಿಸಲಾಗಿದೆ. ಪೇಜ್ ಸ್ಕ್ರೋಲ್ ಕೀಲಿಗಳಾದ ಪೇಜ್ ಅಪ್ ಮತ್ತು ಪೇಜ್ ಡೌನ್ ಕೀಲಿಗಳು ಪುಟವನ್ನು ಮೇಲೆ ಮತ್ತು ಕೆಳಗೆ ಚಲಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಹೋಮ್ ಕೀಯು ಮೊದಲು ಕರ್ಸರ್ ನಿಂದ ಕಾರ್ಯ ಆರಂಭಿಸಿದ ಸ್ಥಳಕ್ಕೆ ಬಂದು ನಿಲ್ಲುವಂತೆ ಮಾಡುವ ಕಾರ್ಯವನ್ನು ನಿರ್ವಹಿಸುತ್ತದೆ. ಎಂಡ್ ಕೀಯು ಬರೆದಿರುವ ಸಾಲಿನ ಕೊನೆಗೆ ಕರ್ಸರ್ ನಿಲ್ಲುವ ಕಾರ್ಯವನ್ನು ಮಾಡುತ್ತದೆ. ಟ್ಯಾಬ್ ಕೀಯು ಮುಂದಿನ ಟ್ಯಾಬ್ ಜಾಗದಲ್ಲಿ ನಿಲ್ಲಲು ಸಹಾಯ ಮಾಡುತ್ತದೆ.
ಇಲ್ಲಿ ಇನ್‌ಸರ್ಟ್ ಕೀಯನ್ನು ಮುಖ್ಯವಾಗಿ ಅಕ್ಷರಗಳನ್ನು ಅಳಿಸುತ್ತಾ ಅವುಗಳ ಮೇಲೆ ಬರೆಯುತ್ತಾ ಹೋಗುವ (overtype) ಕಾರ್ಯವನ್ನು ನಿರ್ವಹಿಸುತ್ತದೆ. ಇಲ್ಲಿ ಕರ್ಸರ್ ಮುಂದಿನ ಸಾಲಿನಲ್ಲಿ ಬರೆಯಾಗಿರುವ ಅಕ್ಷರಗಳನ್ನು (ದತ್ತಾಂಶಗಳನ್ನು) ಹಿಂದಿನಿಂದ ಬರೆಯುತ್ತಾ ಸಾಗಿದಾಗ ಮುಂದಿನ ದತ್ತಾಂಶಗಳು ಅಳಿಸುತ್ತಾ ಹೋಗುತ್ತದೆ. ಮತ್ತು ಈ ಮೊದಲಿನ ಸ್ಥಳದಿಂದ ಕರ್ಸರ್ ಅನ್ನು ಇಟ್ಟು ಬರವಣಿಗೆ ಆರಂಭಿಸಿದಾಗ ಮುಂದಿರುವ ಎಲ್ಲ ಪದಗಳು ಅಳಿಸುತ್ತಾ ಹೋಗುತ್ತದೆ. ಡಿಲೀಟ್ ಕೀಯನ್ನು ಕರ್ಸರ್ ಇರುವ ಪ್ರದೇಶದಿಂದ ಮುಂದಿನ ಸಾಲಿನಲ್ಲಿರುವುದನ್ನು ಹಿಂದಿನಿಂದ ಅಳಿಸಿ ಹಾಕಲು ಉಪಯೋಗಿಸಲಾಗುತ್ತದೆ. ಹೆಚ್ಚಿನ ಕಂಪ್ಯೂಟರ್ ಕೀ ಬೋರ್ಡ್ ಗಳಲ್ಲಿ ಡಿಲೀಟ್ ಕೀ ಪಟ್ಟಿಯು (ಕೆಲವೊಮ್ಮೆ ಡಿಲೀಟ್ ಮತ್ತು ಬ್ಯಾಕ್ ಸ್ಪೇಸ್ ಕೀ ಒಂದೇ ಪಟ್ಟಿಯಲ್ಲಿ ನಮೂದಿತವಾಗಿರುತ್ತದೆ) ಬ್ಯಾಕ್ ಸ್ಪೇಸ್ ಕೀ ಯ ಕೆಲಸವನ್ನು ನಿರ್ವಹಿಸುತ್ತದೆ. ಬ್ಯಾಕ್ ಸ್ಪೇಸ್ ಕೀ ಮುಂದಿನಿಂದ ಇರುವ ಸಾಲನ್ನು ಹಿಂದಕ್ಕೆ ಅಳಿಸುತ್ತಾ ಹೋಗುತ್ತದೆ.
ಲಾಕ್ ಕೀಯು ಕೀ ಬೋರ್ಡ್ ನ ಲಾಕ್ ಭಾಗವಾಗಿದೆ. ಇದು ಯಾವ ಮಾದರಿಯನ್ನು ಆಯ್ಕೆ ಮಾಡಿಕೊಳ್ಳುತ್ತದೆ ಎಂಬುದರ ಮೇಲೆ ಅವಲಂಭಿತವಾಗಿವೆ. ಲಾಕ್ ಕೀ ಗಳು ಕೀ ಬೋರ್ಡ್ ನ ಸುತ್ತಮುತ್ತ ದೂರ ದೂರವಾಗಿ ಹರಡಿಕೊಂಡಿದೆ. ಹಲವಾರು ವಿನ್ಯಾಸಗಳ ಕೀ ಬೋರ್ಡ್ ಗಳು ೩ ಎಲ್ ಇ ಡಿ ಗಳನ್ನು ತೋರಿಸುತ್ತದೆ. ಇವು ಲಾಕ್‌ಗಳನ್ನು ತೋರಿಸುತ್ತವೆ. ತುದಿಯಲ್ಲಿ ಬಲಬದಿಯ ನಮ್ ಪ್ಯಾಡ್ ಮೇಲೆ ಇವುಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ಲಾಕ್ ಕೀಲಿಗಳು ಸ್ಕ್ರೋಲ್ ಲಾಕ್, ನಮ್ ಲಾಕ್ (ಇದು ನ್ಯುಮೆರಿಕ್ ಕೀ ಪ್ಯಾಡ್ ಅನ್ನು ಬಳಸುವಾಗ ಸಹಾಯವಾಗುತ್ತದೆ) ಮತ್ತು ಕ್ಯಾಪ್ಸ್ ಲಾಕ್‌ಗಳನ್ನು ಒಳಗೊಂಡಿದೆ.
ಸಿಸ್ಟಮ್ ಕಮಾಂಡ್‌ಗಳು
ಬದಲಾಯಿಸಿಎಸ್ವೈಎಸ್ಆರ್ಕ್ಯೂ/ಪ್ರಿಂಟ್ ಸ್ಕೀನ್ (SysRq / Print screen) ಕಮಾಂಡ್‌ಗಳು ಒಂದೇ ಕೀ ಪಟ್ಟಿಯನ್ನು ಹಂಚಿಕೊಂಡಿವೆ. ಎಸ್‌ವೈಎಸ್‌ಆರ್‌ಕ್ಯೂ ಅನ್ನು ಮೊದಲಿನ ಕಂಪ್ಯೂಟರ್‌ಗಳಲ್ಲಿ ಸಂಭವಿಸುತ್ತಿದ್ದ ಘರ್ಷಣೆಗಳನ್ನು ಸರಿಪಡಿಸಲು ಬಳಸುತ್ತಿದ್ದ ಗಾಬರಿ ಗುಂಡಿಯಾಗಿದೆ. ಇದರಲ್ಲಿ ಪ್ರಿಂಟ್ ಸ್ಕ್ರೀನ್ ಕಮಾಂಡ್ ಅನ್ನು ಕಂಪ್ಯೂಟರ್ ನ ಇಡೀ ಸ್ಕ್ರೀನ್ ಅನ್ನು ಸೆರೆ ಹಿಡಿದು ಅದನ್ನು ಮುದ್ರಣ ವಿಭಾಗಕ್ಕೆ ಕಳುಹಿಸುವ ವ್ಯವಸ್ಥೆಯನ್ನು ಮಾಡುತ್ತದೆ. ಆದರೆ ಪ್ರಸ್ತುತದಲ್ಲಿ ಇದು ಕ್ಲಿಪ್‌ಬೋರ್ಡ್‌ನಲ್ಲಿ ಸ್ಕ್ರೀನ್ ಶಾಟ್ ಆಗಿ ಉಪಯೋಗಿಸಲ್ಪಡುತ್ತಿದೆ. ಬ್ರೇಕ್ ಕೀ/ಪಾಸ್ ಕೀ ಅನ್ನು ಹೆಚ್ಚಿನ ದೂರವಿಲ್ಲದೆ ತನ್ನ ವ್ಯಾಪ್ತಿಯನ್ನು ನಿರ್ಧರಿಸುವ ಉದ್ದೇಶದಿಂದ ಬಳಸಲಾಗುತ್ತದೆ. ಇದು ಟೆಲಿಟೈಪ್ ಬಳಕೆದಾರರಿಂದ ಹುಟ್ಟಿಕೊಂಡಿದ್ದಾಗಿದೆ. ಸಂವಹನ ಸಾಲನನ್ನು ತಾತ್ಕಾಲಿಕವಾಗಿ ಅಡ್ಡಿಪಡಿಸಲು ಅವರು ಈ ಕೀ ಅನ್ನು ಬಳಸುತ್ತಿದ್ದರು. ಬ್ರೇಕ್ ಕೀ ಅನ್ನು ಸಾಫ್ಟ್‌ವೇರ್‌ನಲ್ಲಿ ಹಲವಾರು ವಿವಿಧ ಮಾರ್ಗಗಳಿಂದ ಬಳಸಲಾಗುತ್ತಿದ್ದು, ಅವುಗಳಾದ ಒಂದಕ್ಕಿಂತ ಹೆಚ್ಚು ಲಾಗಿನ್‌ಗಳನ್ನು ಬಳಸುವಾಗ, ಒಂದು ಪ್ರೋಗ್ರಾಮ್ ನಿಂದ ನಿರ್ಗಮಿಸುವಾಗ ಅಥವಾ ಮೋಡಮ್ ಸಂಪರ್ಕವನ್ನು ಅಡ್ಡಿಪಡಿಸಲು ಇದನ್ನು ಬಳಸಲಾಗುತ್ತದೆ.
ಪ್ರೋಗ್ರಾಮ್ ಗಳನ್ನು ಮಾಡುವಲ್ಲಿ, ಮುಖ್ಯವಾಗಿ ಹಳೆಯ ಡಾಸ್ ಪದ್ಧತಿ(ಡಿಓಎಸ್ ಸ್ಟೈಲ್ ಬೇಸಿಕ್)ಯ ಬೇಸಿಕ್, ಪಾಸ್ಕಲ್ ಮತ್ತು ಸಿ ಗಳಲ್ಲಿ ಬಳಸಲಾಗುತ್ತದೆ. ಇಲ್ಲಿ ಬ್ರೇಕ್ ಅನ್ನು (Ctrl ಬಟನ್‌ನ ಸಂಯೋಗದೊಂದಿಗೆ) ಪ್ರೋಗ್ರಾಮ್ ನಿಲ್ಲಿಸಲು ಉಪಯೋಗಿಸಲಾಗುತ್ತದೆ. ಇದಕ್ಕೆ ಸೇರಿಕೊಂಡಂತೆ ಲಿನಕ್ಸ್ ಮತ್ತು ವಾರಿಯಂಟ್ಸ್‌ಗಳಂತೆ ಹಲವಾರು ಡಾಸ್ ಪ್ರೋಗ್ರಾಮ್ ಗಳು, ಕಂಟ್ರೋಲ್ + ಸಿ (Ctrl+C) ಜತೆಗೆ ಗುರುತಿಸಿಕೊಳ್ಳುತ್ತದೆ. ಆಧುನಿಕ ಕೀ ಬೋರ್ಡ್‌ಗಳಲ್ಲಿ ಪಾಸ್/ಬ್ರೇಕ್ ಎಂಬುದಾಗಿ ಬ್ರೇಕ್ ಕೀ ಬಳಸಲ್ಪಡುತ್ತದೆ. ಹೆಚ್ಚಿನ ವಿಂಡೋಸ್ ಪದ್ಧತಿಯಲ್ಲಿ ಕೀ ವ್ಯವಸ್ಥೆಯು ವಿಂಡೋಸ್ ಕೀ + ಪಾಸ್ ಅನ್ನು ಸಿಸ್ಟಮ್ ಪ್ರಾಪರ್ಟಿಯಲ್ಲಿ ಬಳಕೆಯಾಗುತ್ತದೆ.
ಇದರಲ್ಲಿ ಇರುವ ಎಸ್ಕೇಪ್ ಕೀ (ಇಎಸ್ ಸಿ ಎಂದು ನಮೂದಿತವಾಗಿರುತ್ತದೆ) ಅನ್ನು ನಿರ್ಗಮನದ ಸಂದರ್ಭದಲ್ಲಿ ಬಳಸಲಾಗುತ್ತದೆ. ಹೆಚ್ಚಿನ ಕಂಪ್ಯೂಟರ್ ಬಳಕೆದಾರರು ಕಂಪ್ಯೂಟರ್ ಹೊರಗಿನ ಬಾಹ್ಯೋಪಕರಣಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಹೊಂದಿರುವುದಿಲ್ಲ. ಎಸ್ಕೇಪ್ ಅನುಕ್ರಮವಾಗಿ ಸ್ವಂತವಾಗಿ ವಿನ್ಯಾಸಗೊಂಡಿದ್ದಾಗಿದೆ. ಎಸ್ಕೇಪ್ ಕೀ ಯು ಅಪ್ಲಿಕೇಶನ್ ಪ್ರೋಗ್ರಾಮರ್‌ಗಳಿಂದ ಸ್ವಾಧೀನಕ್ಕೊಳಪಡುತ್ತದೆ. ಹೆಚ್ಚಿನ ಸಂದರ್ಭದಲ್ಲಿ ಸಂಭವಿಸಿದ ತಪ್ಪು ಕಮಾಂಡ್ ಗಳಿಂದ ಹೊರಬರಲು ಎಸ್ಕೇಪ್ ಅನ್ನು ಬಳಸಲಾಗುತ್ತದೆ. ಈ ಬಳಕೆಯನ್ನು ಇಂದಿಗೂ ಮೈಕ್ರೋಸಾಫ್ಟ್ ವಿಂಡೋಸ್ ಗಳಲ್ಲಿ ಬಳಕೆಯಾಗುತ್ತಿದ್ದು, ಎಸ್ಕೇಪ್ ಡೈಲಾಗ್ ಬಾಕ್ಸ್ ಗಳ ಸುಲಭ ಉಪಯೋಗ ಕೀ ಆಗಿ ನೋ (ಇಲ್ಲ), ಕೊಯ್ಟ್ (ತಡೆ), ಎಕ್ಸಿಸ್ಟ್ (ನಿರ್ಗಮಿಸು), ಕ್ಯಾನ್ಸಲ್ (ನಾಶಪಡಿಸು), ಅಥವಾ ಅಬಾರ್ಟ್ (ರದ್ಧತಿ) ಗೊಳಿಸಲು ಬಳಕೆ ಮಾಡಲಾಗುತ್ತದೆ.
ಇಂದು ಎಸ್ಕೇಪ್ ಕೀ ಅನ್ನು ಸಾಮಾನ್ಯ ಬಳಕೆಯಾಗಿ ಸ್ಟಾಪ್ ಬಟನ್‌ನ ಶಾರ್ಟ್ ಕಟ್ ಕೀ ಆಗಿ ಹಲವಾರು ವೆಬ್ ಬಳಕೆದಾರರು ಬಳಕೆ ಮಾಡುತ್ತಿದ್ದಾರೆ. ಮೈಕ್ರೋಸಾಫ್ಟ್ ವಿಂಡೋಸ್ ಯಂತ್ರ ಚಾಲ್ತಿಯಲ್ಲಿದ್ದಾಗ, ಕಾರ್ಯಗತಗೊಂಡ ಹಿಂದಿನ ಯೋಜನೆಯಾದ ವಿಂಡೋಸ್ ಕೀ ಅನ್ನು ಕೀ ಬೋರ್ಡ್‌ಗಳಲ್ಲಿ ಬಳಕೆ ಮಾಡಲಾಗುತ್ತದೆ. ಪ್ರಾತಿನಿಧಿಕ ಅಭ್ಯಾಸದಿಂದ ಸ್ಟಾರ್ಟ್ ಬಟನ್ ಅನ್ನು ಮಾಡುವ ಕಾರ್ಯವನ್ನು ನಿಲ್ಲಿಸಿ ಇಟ್ಟುಕೊಳ್ಳುವಂತೆ ಕಂಟ್ರೋಲ್ ಕೀ ಅನ್ನು ಬಳಸಿ ಮತ್ತು ಎಸ್ಕೇಪ್ ಬಟನ್ ಅನ್ನು ಒತ್ತಬಹುದಾಗಿದೆ. ಈ ಪ್ರಕ್ರಿಯೆಯು ವಿಂಡೋಸ್ ೨೦೦೦, ವಿಂಡೋಸ್ ವಿಸ್ಟಾ ಮತ್ತು ವಿಂಡೋಸ್ ೭ ಸಾಫ್ಟ್ ವೇರ್ ಗಳಿಂದಲೂ ಕಾರ್ಯ ನಿರ್ವಹಣೆಯಾಗುತ್ತಿದೆ.
ಮೆನು ಕೀ ಅಥವಾ ಅಪ್ಲಿಕೇಶನ್ ಕೀ ಅನ್ನು ವಿಂಡೋಸ್ ಆಧಾರಿತ ಕಂಪ್ಯೂಟರ್ ಕೀ ಬೋರ್ಡ್ ಗಳಲ್ಲಿ ರಚಿಸಲಾಗಿದೆ. ಇದನ್ನು ಕೀ ಬೋರ್ಡ್ ಜತೆ ಕಂಟೆಕ್ಸ್ಟ್ ಮೆನು ವನ್ನಾಗಿ ರೂಪಿಸಲಾಯಿತು. ಮೌಸ್ ನ ಬಲಬದಿಯ ಗುಂಡಿ (ಬಟನ್)ಗಿಂದ ಹೆಚ್ಚಾಗಿ ಇದನ್ನು ಬಳಸಲಾಗುತ್ತದೆ. ಇದರ ಕೀ ಚಿಹ್ನೆಯನ್ನು ಸಣ್ಣ ಚಿತ್ರದಿಂದ ಚಿತ್ರಿಸಲಾಗಿದೆ. ಈ ಕೀ ಅನ್ನು ವಿಂಡೋಸ್ ಕೀ ಅನ್ನು ರಚಿಸಿದ ಸಮಯದಲ್ಲೇ ರಚಿಸಲಾಗಿದೆ. ಈ ಕೀಯನ್ನು ಮೌಸ್‌ನ ಬಲ ಬಟನ್ (ಗುಂಡಿಯು) ಕಾರ್ಯನಿರ್ವಹಿಸದಿದ್ದಾಗ ಸಾಮಾನ್ಯವಾಗಿ ಬಳಸಲಾಗುತ್ತದೆ. ಕೆಲ ವಿಂಡೋಗಳ ಪಬ್ಲಿಕ್ ಟರ್ಮಿನಲ್‌ಗಳು ಕೀ ಬೋರ್ಡ್ ಗಳಲ್ಲಿ ಮೆನು ಕೀ ಅನ್ನು ಹೊಂದಿರುವುದಿಲ್ಲ. ಇದಕ್ಕಾಗಿ ಮೌಸ್‌ನ ಬಲ ಭಾಗದ ಗುಂಡಿಯನ್ನು ಒತ್ತಬೇಕು. (ಆದಾಗ್ಯೂ ಹಲವಾರು ವಿಂಡೋಸ್ ಅಪ್ಲಿಕೇಶನ್‌ಗಳಲ್ಲಿ ಇದಕ್ಕೆ ಸಾಮಿಪ್ಯವಿರುವ ಕಾರ್ಯಗಳನ್ನು ಶಿಫ್ಟ್ + ಎಫ್ ೧೦ ಬಟನ್ ಶಾರ್ಟ್‌ಕಟ್ ಬಳಕೆಯಾಗಿ ಉಪಯೋಗಿಸಲ್ಪಡುತ್ತದೆ.
ಇತರೆ ವಿಷಯಗಳು
ಬದಲಾಯಿಸಿಹಲವಾರು, ಆದರೆ ಎಲ್ಲವೂ ಅಲ್ಲದ ಕಂಪ್ಯೂಟರ್ ಕೀ ಬೋರ್ಡ್‌ಗಳು ನ್ಯುಮೆರಿಕ್ ಕೀ ಪ್ಯಾಡ್‌ಗಳನ್ನು ಹೊಂದಿದ್ದು, ಅದು ಬಲಬದಿಯಲ್ಲಿ ವರ್ಣಮಾಲೆಯ ಕೀ ಬೋರ್ಡ್ ಗಳಲ್ಲಿ ಸಂಖ್ಯೆಗಳನ್ನು ಹೊಂದಿರುತ್ತದೆ. ಗಣಿತಶಾಸ್ತ್ರದ ಮೂಲ ಚಿಹ್ನೆಗಳು (ಉದಾಹರಣೆಗೆ ಸಂಕಲನ, ವ್ಯವಕಲನ, ಇತ್ಯಾದಿ) ಮತ್ತು ಇನ್ನಿತರ ಕಾರ್ಯನಿರ್ವಾಹಕ ಕೀಲಿಗಳು ಇದರಲ್ಲಿರುತ್ತದೆ. ಜಪಾನಿನ/ಕೋರಿಯಾದ ಕೀಬೋರ್ಡ್‌ಗಳಲ್ಲಿ ಭಾಷೆಯನ್ನು ಸಹ ಕೀಲಿಗಳು ಒಳಗೊಂಡಿರುತ್ತದೆ. ಕೆಲ ಕೀ ಬೋರ್ಡ್‌ಗಳು ಪವರ್ ಮ್ಯಾನೇಜ್ ಮೆಂಟ್ ಕೀಲಿಗಳನ್ನು ಹೊಂದಿರುತ್ತದೆ (ಉದಾಹರಣೆಗೆ ಪವರ್ ಕೀ, ಸ್ಲೀಪ್ ಕೀ ಮತ್ತು ವೇಕ್ ಕೀ), ಇಂಟರ್ ನೆಟ್ ಕೀ ಗಳು ವೆಬ್ ಬ್ರೌಸರ್ ಅಥವಾ ಇ-ಮೇಲ್‌ಗಳನ್ನು ಪಡೆಯಲು ಅನುಕೂಲ ಮಾಡುತ್ತದೆ. ಮತ್ತು ಮಲ್ಟಿಮೀಡಿಯಾ ಕೀಲಿಗಳು ವೋಲ್ಯೂಮ್ ಕಂಟ್ರೋಲ್ (ಧ್ವನಿ ನಿಯಂತ್ರಕಗಳು) ಮಾಡುತ್ತದೆ.
ಬಹುಘಟಕಗಳುಳ್ಳ ವಿನ್ಯಾಸಗಳು
ಬದಲಾಯಿಸಿಬಹುಘಟಕಗಳುಳ್ಳ ವಿನ್ಯಾಸವನ್ನು ಹೊಂದಿರುವ ಕೀ ಬೋರ್ಡ್ ಗಳನ್ನು ರಚಿಸಲು ಅವಕಾಶವಿದೆ ಮತ್ತು ಇವುಗಳಿಂದ ಕಂಪ್ಯೂಟರ್ ನಲ್ಲಿ ಹಲವಾರು ಕಾರ್ಯನಿರ್ವಾಹಕ ಪದ್ಧತಿಯಲ್ಲಿ ಅಥವಾ ಅಪ್ಲಿಕೇಶನ್ ಪ್ರೋಗ್ರಾಮ್ ಗಳನ್ನು ಮಾಡುವಾಗ ಯಾವುದಾದರು ಒಂದನ್ನು ಮಾಡಲು ಸಹಾಯ ಮಾಡುತ್ತದೆ. ಮೈಕ್ರೋಸಾಫ್ಟ್ ವಿಂಡೋಸ್, ಉಬುಂಟು, ಲಿನಕ್ಸ್, ಮ್ಯಾಕ್ ಗಳು ಕೀ ಬೋರ್ಡ್ ವಿನ್ಯಾಸಗಳನ್ನು ಹೆಚ್ಚಿಸಿದ್ದು, ಮತ್ತು ಅವುಗಳಲ್ಲಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಮೈಕ್ರೊಸಾಫ್ಟ್ ವಿಂಡೋಸ್[೮],[೯] ಉಬುಂಟು, ಲಿನಕ್ಸ್[೧೦], ಮ್ಯಾಕ್[೧೧] ಇವು ಕೀಬೋರ್ಡ್ ವಿನ್ಯಾಸಕ್ಕೆ ಬೆಂಬಲ ನೀಡುತ್ತಿವೆ ಮತ್ತು ಅವುಗಳಿಂದ ಅಗತ್ಯವಾದುದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ವಿನ್ಯಾಸ ಬದಲಾಯಿಸುವ ಸಾಫ್ಟ್‌ವೇರ್
ಬದಲಾಯಿಸಿಕಾರ್ಯನಿರ್ವಾಹಕ ಪದ್ಧತಿಗನುಗುಣವಾಗಿ ಹಲವಾರು ಅಪ್ಲಿಕೇಶನ್ ಪ್ರೋಗ್ರಾಮ್ ಗಳು ರಚನೆಗೆ, ಸೇರಿಕೆಗೆ ಅವಕಾಶಗಳಿವೆ ಮತ್ತು ಇವುಗಳಿಂದ ಕೀ ಬೋರ್ಡ್ ವಿನ್ಯಾಸಗಳನ್ನು ರಚಿಸಬಹುದಾಗಿದೆ. ಉದಾಹರಣೆಗೆ ಮ್ಯಾಕ್ ನ ಯುಕೆಲೆಲೆ, ದಿ ಮೈಕ್ರೋಸಾಫ್ಟ್ ಕೀ ಬೋರ್ಡ್ ಲೇಔಟ್ ಕ್ರೀಯೇಟರ್ [೧೨] ಮತ್ತು ಅವ್ರೋ ಕೀ ಬೋರ್ಡ್. ಇನ್ನು ಹಲವಾರು ಸಾಮಿಪ್ಯವಿರುವ ಸಾಫ್ಟ್‌ವೇರ್‌ಗಳು[೧೩] ಲಭ್ಯವಿದ್ದು, ಕೆಲವು ನಿಖರವಾದ ಭಾಷೆಗಳನ್ನು ಹೊಂದಿವೆ.
ಪ್ರಕಾಶಗೊಳಿಸುವಿಕೆ
ಬದಲಾಯಿಸಿಕೀ ಬೋರ್ಡ್‌ಗಳು ಮತ್ತು ಕೀ ಪ್ಯಾಡ್‌ಗಳು ಒಳಗಿನಿಂದ ಪ್ರಕಾಶಿಸುತ್ತವೆ. ಮುಖ್ಯವಾಗಿ ಮೊಬೈಲ್ ಸಾಮಗ್ರಿಗಳಲ್ಲಿ ಬಳಸಲಾಗುತ್ತದೆ. ಕಪ್ಪು ಪಟ್ಟಿಯಲ್ಲಿ ಕೀ ಬೋರ್ಡ್ ಅಥವಾ ಕೀ ಪ್ಯಾಡ್ ಗಳಲ್ಲಿ ಪ್ರಕಾಶಿಸುವ ಸೌಲಭ್ಯವನ್ನು ರೂಪಿಸಲಾಗುತ್ತದೆ. ಕೆಲ ಆಟಗಳ ಕೀ ಬೋರ್ಡ್‌ಗಳನ್ನು ಪ್ರಕಾಶಿಸುವಂತೆ ರಚಿಸಲಾಗಿರುತ್ತದೆ. ಇದು ಆಟ ಆಡುವವರಿಗೆ ಸುಲಭವಾಗುವ ದೃಷ್ಟಿಯಿಂದ ಕತ್ತಲ ಕೊಠಡಿಯಲ್ಲೂ ಅವರಿಗೆ ಕೀಲಿಗಳು ಸರಿಯಾಗಿ ಕಾಣುವ ಸಲುವಾಗಿ ಈ ರೀತಿ ವಿನ್ಯಾಸವನ್ನು ರಚಿಸಲಾಗಿರುತ್ತದೆ. ಕೆಲ ಕಂಪ್ಯೂಟರ್‌ಗಳು ಚಿಕ್ಕ ಎಲ್ಇಡಿ ಲೈಟ್(ದೀಪ)ಗಳನ್ನು ಕೆಲ ಮುಖ್ಯವಾದ ಕೀ ಪಟ್ಟಿಯಲ್ಲಿ ಹೊಂದಿರುತ್ತದೆ. ಇದರಿಂದ ಆ ಕೀಲಿಗಳು ಚಾಲನೆಯಲ್ಲಿದೆ ಎಂಬುದನ್ನು ಬಳಕೆದಾರರಿಗೆ ಮನವರಿಗೆ ಮಾಡಿಕೊಡುತ್ತದೆ. (ಫೋಟೋಗಳನ್ನು ನೋಡಿ).
ತಂತ್ರಜ್ಞಾನ
ಬದಲಾಯಿಸಿಒತ್ತುಗುಂಡಿಯ ಸ್ವಿಚ್‌ಗಳು
ಬದಲಾಯಿಸಿ೧೯೭೦ರ ದಶಕದ ಪ್ರಾರಂಭದಲ್ಲಿನ ವಿದ್ಯುನ್ಮಾನ ಕೀಬೋರ್ಡ್‌ಗಳಲ್ಲಿ ಸ್ವಿಚ್‌ಗಳನ್ನು ಲೋಹದ ಪಟ್ಟಿಗಳ ರಂಧ್ರಗಳಲ್ಲಿ ಅಳವಡಿಸಲಾಗಿರುತ್ತಿತ್ತು. ಈ ಕೀಬೋರ್ಡ್‌ಗಳ ದರಗಳು ೮೦ ರಿಂದ ೧೨೦ ಅಮೇರಿಕಾದ ಡಾಲರ್‌ಗಳಷ್ಟಿರುತ್ತಿತ್ತು ಮತ್ತು ಇವುಗಳನ್ನು ಅಂಕಿ ಅಂಶಗಳನ್ನು ಸಂಸ್ಕರಣಾ ವಿಭಾಗಗಳಲ್ಲಿ ಉಪಯೋಗಿಸಲಾಗುತ್ತಿತ್ತು. ಅತ್ಯಂತ ಜನಪ್ರೀಯ ಸ್ವೀಚ್‌ಗಳೆಂದರೆ 'ರೀಡ್ ಸ್ವಿಚ್'ಗಳು(ಇದರಲ್ಲಿ ಪೋಸ್ಟ್ ಫಾಲ್ಸ್ ಇಡಾಹೊದವರ ಕಾಂತೀಯತೆಯಿಂದ ಸ್ವಿಚ್‌ನ ಕೊಳವೆಯ ತುದಿಯಲ್ಲಿ ಏರುವ ಗಾಜಿನ ಗುಳಿಗೆಗಳ ನಿರ್ವಾತದಲ್ಲಿ ಸಂದೇಶ ರವಾನೆಯಾಗುತ್ತದೆ. ಇದು ಕ್ಲೇರ್-ಪೆಂಡರ್ ಮೂಲಕ ಪೋಸ್ಟ್ ಫಾಲ್ಸ್ ಇಡಾಹೊ, ಇದು ಸಾಮಾನ್ಯ ಸಾಧನದ ಒಂದು ಭಾಗವಾಯಿತು. ಇದು ಬಳಸುವ ರೀಡ್ವಿಚ್ ಗುಳಿಗೆಗಳು ಇಲ್ಲಿನಾಯ್ಸ್‌ನಲ್ಲಿರುವ ಸಿ.ಪಿ.ಕ್ಲೇರ್ ಕಂಪನಿ ಮತ್ತು ವಾಷಿಂಗ್ಟನ್‌ನಲ್ಲಿರುವ ಸ್ಪೊಕೇನ್‌ನ 'ಕೀ ಟ್ರಾನಿಕ್ ಕಾರ್ಪೋರೇಶನ್‌ನಿಂದ ತಯಾರಿಸಲ್ಪಟ್ಟದ್ದಾಗಿದೆ.) ಹಾಲ್ ಇಫೆಕ್ಟ್ ಸ್ವಿಚ್‌ಗಳು (ಈಗ ಹನಿವೆಲ್‌ನ ಭಾಗವಾಗಿರುವ ಇಲ್ಲಿನಾಯ್ಸ್ನ ಹಾಲ್ ಪರಿಣಾಮ ಬೀರುವ ಸಣ್ಣ ಸಂವಾಹಕ Archived 2011-07-12 ವೇಬ್ಯಾಕ್ ಮೆಷಿನ್ ನಲ್ಲಿ. ಗಳನ್ನು ಬಳಸಿ ಸಂವಾಹಕಗಳನ್ನು ಬಳಸಿ ಕಾಂತಿಯತೆಯನ್ನು ಹಾಯಿಸುವುದರಿಂದ ವಿದ್ಯುತ್ ಉತ್ಪಾದಿಸಲಾಗುತ್ತಿತ್ತು.) ಮತ್ತು ಇಂಡೆಕ್ಟಿವ್ ಕೋರ್(ಮಧ್ಯಭಾಗವನ್ನು ಸಂಧಿಸುವ) ಸ್ವಿಚ್‌ಗಳು(ಐ.ಟಿ.ಡಬ್ಲೂ/ ಇಲ್ಲಿಯಾನ್ಸ್ ಟೂಲ್ ವರ್ಕರ್ಸ್ ಇದರ ಒಂದು ಭಾಗವಾಗಿರುವ ಕೊಟ್ರೋನ್‌ನಿಂದ ತಯಾರಿಸಲ್ಪಟ್ಟ, ಇದೂ ಸಹ ಕಾಂತಿಯತೆಯಿಂದ ಕಾರ್ಯನಿರ್ವಹಿಸುತ್ತದೆ.) ಈ ಸ್ವಿಚ್‌ಗಳು ಇಂದಿನ ಸ್ವಿಚ್‌ಗಳ ಗಾತ್ರ ೦.೧೧೦ ಅಂಗುಲ(೨.೭೯ಮಿ.ಮಿ.)ಗೆ ಹೋಲಿಸಿದರೆ ಅವುಗಳ ಗಾತ್ರ ೦.೧೮೭ ಅಂಗುಲ(೪.೭೫ಮಿ.ಮಿ.) ಇದ್ದು ನೂರು ದಶಲಕ್ಷ ಸುತ್ತು ದರಗಳನ್ನು ಹೊಂದಿದ್ದವು.
೧೯೭೦ರ ಮಧ್ಯ ದಶಕದಲ್ಲಿ ಕಡಿಮೆ ದರದ ನೇರ ಸಂಪರ್ಕದ ಸ್ವಿಚ್‌ಗಳನ್ನು ಕಂಡುಹಿಡಿದರು, ಆದರೆ ಅವುಗಳ ಬಾಳ್ವಿಕೆಯು ಅತ್ಯಂತ ಕಡಿಮೆ ಸಮಯದ್ದಾಗಿತ್ತು(ಹತ್ತು ದಶಲಕ್ಷ ಆವೃತ್ತಿಗಳು) ಏಕೆಂದರೆ ಅವು ಹೊರಗಿನ ವಾತಾವರಣಕ್ಕೆ ತೆರೆದುಕೊಂಡಿರುತ್ತಿದ್ದವು. ಇವು ಹೆಚ್ಚು ಸ್ವೀಕಾರಾರ್ಹವಾಗಿದ್ದವು ಏಕೆಂದರೆ ಗಣಕಯಂತ್ರದಲ್ಲಿ ಕ್ಷೀಪ್ರಗತಿಯ ಬದಲಾವಣೆಗಳು ಆಗುತ್ತಿದ್ದುದರಿಂದ ವಿವರಣ ಘಟಕದಲ್ಲಿ ಬಳಸಬಹುದಾಗಿತ್ತು.
೧೯೭೮ರಲ್ಲಿ ಕೀ ಟ್ರಾನಿಕ್ ಕಾರ್ಪೋರೇಶನ್ ಇವರು ಸಾಮರ್ಥ್ಯ ಆಧಾರಿತ ಸ್ವಿಚ್‌ಗಳನ್ನು ಆವಿಶ್ಕರಿಸಿದರು. ಇದು ಸ್ವಯಂ ಸ್ವಿಚ್‌ಗಳನ್ನು ಹೊಂದಿರದ ಪ್ರಥಮ ಕೀಬೋರ್ಡ್‌ನ ತಂತ್ರಜ್ಞಾನವಾಗಿತ್ತು. ಅದರಲ್ಲಿ ಸ್ಥಿತಿಸ್ಥಾಪಕ ಮೆತ್ತೆಯು ಮೈಲಾರ ಪ್ಲಾಸ್ಟಿಕ್ ಪದರಗಳ ಸಂಪರ್ಕ ಹೊದಿಕೆಯನ್ನು ಸ್ವಿಚ್‌ನ ಕೊಳವೆಯ ತುದಿಯಲ್ಲಿ ಹೊಂದಿರುತ್ತಿತ್ತು ಮತ್ತು ಎರಡು ಅರ್ಧ ಚಂದ್ರಾಕಾರದ ಗುರಿತಿನ ಚಿನ್ಹೆಯನ್ನು ಚಾಪಿಸಲಾದ ವಿದ್ಯುತ್ ಪಥದ ಮಣೆಯನ್ನು ಕೆಳಗಡೆ ಹೊಂದಿರುತ್ತಿತ್ತು. ಕೀಲಿಯು ಕುಗ್ಗಲ್ಪಟ್ಟಾಗ, ಕೊಳವೆಯ ತುದಿಯ ಮೆತ್ತೆ ಮತ್ತು ಪಿ.ಸಿಬಿಯಕೆಳ ಮಾದರಿಯು ಬದಲಾಗುತ್ತದೆ, ಇದು ಐ.ಸಿ.(ಏಕೀಕೃತ ವಿದ್ಯುತ್ಪಥ)ಯಿಂದ ಪತ್ತೆಮಾಡಲ್ಪಡುತ್ತದೆ. ಈ ಕೀಬೋರ್ಡ್‌ಗಳು ಕೂಡ ಉತ್ತಮ ಗುಣಮಟ್ಟದ ಸ್ವಿಚ್ ಹೊಂದಿರುವ ಕೀಬೋರ್ಡ್‌ಗಳಾಗಿದ್ದು ಅವುಗಳಂತೆಯೇ ಒಳಸೇರಿರುವ ಮತ್ತು ಹಾಲ್ ಪರಿಣಾಮವನ್ನು ಹೊಂದಿದ್ದು, ಆದರೆ ನೇರ ಸಂಪರ್ಕ ಹೊಂದಿರುವ ಕೀಬೋರ್ಡ್‌ಗಳಿಗೆ ಸ್ಪರ್ಧಿಸುತ್ತಿದ್ದವು. $೬೦ರಂತೆ ಪ್ರತಿ ಕೀಲೆಮಣೆಗೆ ಮೌಲ್ಯವಿದ್ದು ಕಿ ಟ್ರಾನಿಕ್ ಕ್ಷಿಪ್ರಗತಿಯಲ್ಲಿ ಅತ್ಯಂತ ದೊಡ್ಡ ಸ್ವಾವಲಂಬಿ ಕೀಬೋರ್ಡ್‌ಗಳ ಉತ್ಪಾದಕ ಸಂಸ್ಥೆಯಾಗಿ ಹೊರಹೊಮ್ಮಿತು.
ಇದೇ ಸಂಧರ್ಬದಲ್ಲಿ ಐ.ಬಿ.ಎಂನವರು ಅವರ ಸ್ವಂತ ತಂತ್ರಜ್ಞಾನದ ಮೂಲಕ ಕೀಬೋರ್ಡ್‌ಗಳನ್ನು ಉತ್ಪಾದಿಸಿತು. ಹಳೆಯ ಐ.ಬಿ.ಎಂ. ಕೀಬೋರ್ಡ್‌ಗಳನ್ನು 'ಬಗ್ಗಿ ಪುಟಿಸು'ವಿಕೆಯ ತಂತ್ರಜ್ಞಾನವನ್ನು ಬಳಸುತ್ತಿದ್ದರು. ಈ ಕೀಬೋರ್ಡ್‌ನಲ್ಲಿ ಬಳಕೆದಾರರ ಕೈಬೆರಳ ಒತ್ತಡದಿಂದ ಒಳಗಿರುವ ಸಂವಾಹಕ ಗ್ರಾಪೈಟ್‌ನಿಂದಾವೃತ್ತವಾದ ರಬ್ಬರ ಉಬ್ಬಿನ ಮೇಲೆ ಒತ್ತಡ ಬೀಳುತ್ತದೆ. ಇವು ಎರಡು ಕೆಳಗಿರುವ ಭಾಗಗಳನ್ನು ಸಂಧಿಸಿ ವಿದ್ಯುತ್ಪತವನ್ನು ಪೂರ್ಣಗೊಳಿಸುತ್ತದೆ. ಇದರಿಂದ ಒಂದು ಸಣ್ಣ ಶಬ್ದವೂ ಸಹ ಹೊರಡುತ್ತದೆ, ಇದರಿಂದ್ದಾಗಿ ಕೀಬೋರ್ಡ್ ಬಳಕೆದಾರನಿಗೆ ಕೀಲಿಯು ಕೆಳಗೆ ಹೋಗಿದ್ದರ ಬಗ್ಗೆ ಸೂಚನೆಯನ್ನು ನೀಡುತ್ತದೆ.[೧೪][೧೫]
ಪ್ರಥಮ ವಿದ್ಯುನ್ಮಾನ ಕೀಬೋರ್ಡ್ ಬೆರಳಚ್ಚು ಯಂತ್ರದಂತೆ ೦.೧೮೭ ಅಂಗುಲ(೪.೭೫.ಮಿಮಿ)ಅಂತರವನ್ನು ಹೊಂದಿದ್ದವು, ಕೀಲಿಯ ತುದಿ ಅರ್ಧ ಅಂಗುಲ(೧೨.೭ಮಿಮಿ)ಎತ್ತರ ಮತ್ತು ಮತ್ತು ಕೀಬೋರ್ಡ್‌ಗಳು ೨ಅಂಗುಲ(೫ಸೆ.ಮಿ.)ಗಿಂತಲೂ ದಪ್ಪವಾಗಿದ್ದವು. ನಂತರದ ದಿನಗಳಲ್ಲಿ ಕಡಿಮೆ ಪ್ರಯಾಣದ ಕೀಬೋರ್ಡ್‌ಗಳು ಮಾರುಕಟ್ಟೆಯಲ್ಲಿ ಬೇಡಿಕೆಯನ್ನುಗಳಿಸಿಕೊಂಡವು, ಅಂತಿಮ ಹಂತದಲ್ಲಿ ೦.೧೧೦ಅಂಗುಲ(೨.೭೯ಮಿಮಿ) ವ್ಯಾಸಕ್ಕೆ ಬಂದು ನಿಂತಿತು. ಇದೇ ಸಂದರ್ಭದಲ್ಲಿ ಕೀ ಟ್ರಾನಿಕ್ ಕೇವಲ ಒಂದು ಅಂಗುಲ ದಪ್ಪದ ಕೀಬೋರ್ಡ್‌ನನ್ನು ತಯಾರಿಸಿದ ಪ್ರಥಮ ಸಂಸ್ಥೆಯಾಯಿತು. ಈಗಿನ ಕೀಬೋರ್ಡ್‌ಗಳು ಕೇವಲ ಅರ್ಧ ಅಂಗುಲ ದಪ್ಪವಿರುತ್ತವೆ.
ಕೀಲಿಯ ಮೇಲ್ಪದರವು ಕೀಬೋರ್ಡ್‌ನಲ್ಲಿ ಪ್ರಮುಖ ಅಂಗವಾಗಿದೆ. ಮೊದಲು ಕೀಬೋರ್ಡ್‌ನ ಕೀಲಿಯ ತುದಿಗಳು ಅದಕ್ಕೂ ಹಿಂದಿನ ಬೆರಳಚ್ಚು ಯಂತ್ರದ ತುದಿಯಿದ್ದಂತೆ ಗಾಜಿನ ತಟ್ಟೆಯ ಆಕಾರದಲ್ಲಿ ಇರುತ್ತಿದ್ದವು. ಕೀಬೋರ್ಡ್‌ನ ಮೇಲೆ ಮುದ್ರಿಸುವ ಮುದ್ರಣವು ಹತ್ತಾರು ದಶಲಕ್ಷ ಬಾರಿ ಕೆಳಕ್ಕೆ ಹೋಗುವ ತಾಳ್ವಿಕೆಯನ್ನು ಹೊಂದಿರಬೇಕಾಗುತ್ತದೆ, ಇವುಗಳು ಬಳಕೆದಾರನ ಬೆರಳು ಮತ್ತು ಬೆರಳಿನ ಉಗುರುಗಳಿಗೂ ಸಂಬಂದಿಸಿದ್ದು ಕೈಗೆ ಇರುವ ಎಣ್ಣೆ ಅಂಶ ಮತ್ತು ವಿವಿಧ ಬಗೆಯ ಲೇಪನಗಳಿಗೂ ಸಂಬಂದಿಸಿರುವುದರಿಂದ ಪ್ರತಿಯೊಂದು ಸ್ವಿಚ್‌ಗಳಿಗೂ ಮೊದಲೇ ಬಣ್ಣಗಳಿಂದ ತುಂಬುವುದು ಅಥವಾ ಬಳಿಯುವುದು ಸ್ವಿಕಾರಾರ್ಹವಲ್ಲ. ಆದ್ದರಿಂದ ಮೊದಲ ವಿದ್ಯುನ್ಮಾನ ಕೀಬೋರ್ಡ್‌ಗಳಲ್ಲಿ ಕೀಲಿಯ ಹೆಸರುಗಳನ್ನು/ಬಣ್ಣಗಳನ್ನು ಎರಡು ಬಣ್ಣಗಳ ಲೋಹದ ಪದರಗಳನ್ನು ಬಳಸಿ ಚಿತ್ರಿಸಲಾಗುತ್ತಿತ್ತು. ಮೊದನೇ ಬಣ್ಣವನ್ನು ಕೀಲಿಯ ಮೇಲ್ಪದರದ ಮೇಲೆ ಅಥವಾ ಒಳಗಡೆ ಮೊದಲ ಬಣ್ಣದ ಲೋಹದ ಪದರದಲ್ಲಿ ಬರೆಯಲಾಗುತ್ತಿತ್ತು ಮತ್ತು ಎರಡನೆ ಬಣ್ಣದ ಲೋಹದ ಪದರವನ್ನು ತುಂಬಲಾಗುತ್ತಿತ್ತು. ಆದರೆ ವೆಚ್ಚವನ್ನು ಕಡಿಮೆ ಮಾಡುವ ಸಲುವಾಗಿ, ಪುಡಿಮಣ್ಣಿನಂತಹ ವಸ್ತುಗಳಿಂದ ಮುದ್ರಿಸುವುದು ಮತ್ತು ಲೇಸರ್‌ನಿಂದ ಅಚ್ಚಾಗಿ ಮುದ್ರಿಸುವುದು. ಇಂತಹ ಇತರ ವಿಧಾನಗಳನ್ನು ಆವಿಶ್ಕರಿಸಲಾಯಿತು. ಈ ಎರಡೂ ವಿಧಾನಗಳನ್ನು ಏಕಕಾಲದಲ್ಲಿ ಒಂದೇ ಕೀಬೋರ್ಡ್‌ನಲ್ಲಿ ಬಳಸಬಹುದಾಗಿದೆ. ಮೂಲಭೂತವಾಗಿ ಉಷ್ಣ ಮುದ್ರಣ(sublimation printing) ಎಂದರೆ ವಿಷೇಶವಾದ ಬಣ್ಣದಿಂದ ಕೀಬೋರ್ಡ್‌ನ ಮೇಲ್ಪದರದಲ್ಲಿ ಮುದ್ರಿಸಲಾಗುತ್ತದೆ. ಮತ್ತು ಶಾಖದಿಂದ ಮುದ್ರಿಸಲ್ಪಟ್ಟ ಬಣ್ಣವು ಪ್ಲಾಸ್ಟಿಕ್‌ನಲ್ಲಿ ಕೊರೆದ ಭಾಗದಲ್ಲಿ ಸೇರಿಕೊಂಡು ಹೊಂದಿಕೊಳ್ಳುವಂತೆ ಮಾಡಲಾಗುತ್ತದೆ. ಆದರೆ ಉಪಯೋಗಿಸುವವನ ಬೆರಳಿಗೆ ಇರುವ ಎಣ್ಣೆಯ ಅಂಶವು ಮುದ್ರಣಕ್ಕೆ ಬಳಸಿದ ಬಣ್ಣದ ರಾಸಾಯನಿಕತ್ವವನ್ನು ಕಳೆಯುವ ಸಾಧ್ಯತೆ ಇರುವುದರಿಂದ ದಪ್ಪನೆಯ ಮತ್ತು ಗಟ್ಟಿಯಾದ ಮೇಲ್ಪದರವನ್ನು ಬಳಸಲಾಯಿತು. ಐ.ಬಿ.ಎಂ.ನವರು ಮೊದಲು ದೊಡ್ಡ ಪ್ರಮಾಣದಲ್ಲಿ ಅವರ ಕೀಬೋರ್ಡ್‌ಗಳಿಗೆ ಉಪಯೋಗಿಸಿದ ಉಷ್ಣ ಮುದ್ರಣದ ಜೊತೆಯಲ್ಲಿ ಗಾಜಿನ ತಟ್ಟೆಯ ಬದಲಾಗಿ ಮೇಲಿಂದ ಮೇಲೆ ತಿರುವು ಇರುವ ಹೊರಮೈಗೆ ಅನುಕೂಲ ಒದಗಿಸುವ ಸಲುವಾಗಿ ಐ.ಬಿ.ಎಂ.ನವರು ಒಂದು ತಿರುವು ಇರುವ ಗಾಜಿನ ಕೀಲಿಗಳನ್ನು ಶೋಧಿಸಿದರು. ಆದರೆ ಉಷ್ಣ ಮುದ್ರಣ ಮತ್ತು ಲೇಸರ್ ಮುದ್ರಗಳಲ್ಲಿ ಒಂದು ತೊಂದರೆ ಇತ್ತು ಅದೆಂದರೆ, ಕಾರ್ಯವಿಧಾನವು ತುಂಬ ಉದ್ದವಾಗಿದ್ದವು ಮತ್ತು ಅಚ್ಚಾದ ಬರಹಗಳನ್ನು ಲಘುವಾದ ಬಣ್ಣದ ಕೀಲಿಗಳ ಮೇಲೆ ಬರೆಯಬೇಕಾಗಿತ್ತು. ಇನ್ನೊಂದು ವಿಷಯವೆಂದರೆ ಐ.ಬಿ.ಎಂ.ಕೀಲಿಗಳ ಮೇಲೆ ಬೇರೆ ಬೇರೆ ಕವಚಗಳನ್ನು ಬಳಸಿದ ಸಾರ್ವಭೌಮ ಸಂಸ್ಥೆಯಾಯಿತು. ಇದರಿಂದಾಗಿ ಅವರಿಗೆ ಹೆಚ್ಚು ಹೊಂದಿಕೊಳ್ಳುವ ಕೀಬೋರ್ಡ್‌ಗಳ ವಿನ್ಯಾಸವನ್ನು ರಚಿಸಲು ಸಾಧ್ಯವಾಯಿತು. ಆದರೆ ಇದನ್ನು ಮಾಡಿದ ಕಾರಣವೆಂದರೆ ಉಷ್ಣಮುದ್ರಣಕ್ಕೆ ಬಳಸುವ ಪ್ಲಾಸ್ಟಿಕ್ ಉಳಿದ ಎ.ಬಿ.ಎಸ್ಕೀಲಿ ಮೇಲ್ಮೈ ಪ್ಲಾಸ್ಟಿಕ್ ಭಿನ್ನವಾಗಿದೆ.
$೧೦ಕ್ಕಿಂತ ಕಡಿಮೆ ದರದಲ್ಲಿ ಕೀಬೋರ್ಡ್‌ಗಳನ್ನು ನೀಡುತ್ತಿರುವ, ಈಗ ಅಸ್ಥಿತ್ವದಲ್ಲಿರುವ ಕೀಬೋರ್ಡ್‌ಗಳಲ್ಲಿ ಬಳಸುತ್ತಿರುವ ಮೂರು ತಂತ್ರಜ್ಞಾನಗಳು:
- ’ಮೊನೋಬ್ಲಾಕ್’ ಕೀಬೋರ್ಡ್‌ನ ವಿನ್ಯಾಸವು ಎಲ್ಲಿ ಸಂಪರ್ಕಗುಂಡಿಯು ಒಂಟಿಯಾಗಿ ಉಪಯೋಗಿಸಲ್ಪಡುತ್ತದೆಯೋ ಅದನ್ನು ತೆರವುಗೊಳಿಸಿ ಒಂದು ತುಣುಕು ’ಮೊನೊಬ್ಲಾಕ್’ಗಳನ್ನು ಬಳಸಿದ್ದಾಗಿತ್ತು. ಇದು ಹೇಗೆ ಸಾಧ್ಯವಾಯಿತೆಂದರೆ ಲೋಹದ ಹಾಳೆಯನ್ನು ಬಗ್ಗಿಸುವ ತಂತ್ರಜ್ಞಾನವು ಸಂಪರ್ಕ ಗುಂಡಿಯ ಕೊಳವೆಯ ತುದಿ ಬಿಗಿತವನ್ನು ಕಾಪಾಡಲು ಸಹಾಯಕವಾಗುತ್ತದೆ. ಮತ್ತು ಎಲ್ಲ ಅಗಲದ ಸಮತೋಲನವನ್ನು ಕಾಯ್ದುಕೊಳ್ಳಲು ಸಹಾಯಕವಾಗುತ್ತದೆ. ಇದರಿಂದಾಗಿ ಕೀಲಿಯ ಕೊಳವೆಯ ತುದಿಯು ಹೆಚ್ಚು ಅಥವಾ ಕಡಿಮೆ ಬಿಗಿತವಾಗದಂತೆ ಕುಳಿತುಕೊಳ್ಳಲು ಹಾಗೂ ಬಿಡಿಯಾಗಿ ಕುಳಿತುಕೊಳ್ಳಲು ಸಹಾಯಕವಾಗುತ್ತದೆ.
- ಮೊನೊಬ್ಲಾಕ್‌ನ ಅಡಿಯಲ್ಲಿ ಸಂಪರ್ಕ ಗುಂಡಿಯ ತೆಳುವಾದ ಪೊರೆಯನ್ನು ಬಳಸುವ ಉಪಯೋಗ. ಈ ತಂತ್ರಜ್ಞಾನವು ಸಮನಾದ ಮೆಲ್ಮೈ ಸಂಪರ್ಕಗುಂಡಿಯ ಒಳಪದರಗಳಿಂದ ಬಂದಿದೆ. ಇಲ್ಲಿ ಒಂದು ತೆಳುವಾದ ಪದರದೊಂದಿಗೆ ಸಂಪರ್ಕ ಗುಂಡಿಯ ಒಳಮೈಯ ಮೇಲೆ ಮತ್ತು ಕೆಳಗಡೆ ಎರಡೂ ಕಡೆಗಳಲ್ಲಿ ಸಂಪರ್ಕಕ್ಕಾಗಿ ಸಂದೇಶಗಳು ಮುದ್ರಿತವಾಗಿರುತ್ತವೆ. ಇದರಿಂದಾಗಿ ಮೆಲಿಂದ ಒತ್ತಡ ಬಿದ್ದಾಗ ನೇರ ವಿದ್ಯುತ್ ಸಂಪರ್ಕವಾಗಲು ಸಹಾಯವಾಗುತ್ತದೆ. ತೆಳುವಾದ ಪೊರೆಯನ್ನು ಅತೀ ಹೆಚ್ಚು ಪ್ರಮಾಣದಲ್ಲಿ ಮುದ್ರಿಸಬಹುದು ಮತ್ತು ಅದಕ್ಕೆ ತಗಲುವ ವೆಚ್ಚವೂ ಕಡಿಮೆಯಾಗಿದೆ. ಉದ್ದನೆಯ ಪೊರೆಯನ್ನು ಮುದ್ರಿಸಿಕೊಂಡು ಬೇರೆ ಬೇರೆ ಕೀಬೋರ್ಡ್‌ಗಳಿಗಾಗಿ ಕತ್ತರಿಸಿಕೊಳ್ಳಲಾಗುತ್ತದೆ.
- ಕೀಬೋರ್ಡ್‌ಗಳ ಕೀಲಿಯ ಮೇಲಿನ ಒತ್ತಿಗೆ ಮುದ್ರಣದ ಉಪಯೋಗ(’ಟೆಂಪೋ’ ಇವರು ಪ್ರಸಿದ್ಧ ಸಲಕರಣೆಗಳ ಉತ್ಪಾದಕರಾಗಿದ್ದ ಕಾಲದ ’ಟೆಂಪೋ ಮುದ್ರಿತ’ ಎಂದೂ ಕರೆಯುತ್ತಾರೆ. ಮೂಲಭೂತವಾಗಿ ಉಷ್ಣ ಮುದ್ರಣವಾಗಿದೆ(ಮೇಲೆ ನೋಡಿ), ಆದರೆ ಈಗ ಅತ್ಯಂತ ಬಾಳ್ವಿಕೆ ಹೊಂದಿರುವ ಮೆಲ್ಹೊದಿಕೆಯನ್ನು ಅದರ ರಾಸಾಯನಿಕತ್ವವು ಹಾಳಾಗದಿರಲು ಬಳಸಲಾಗುತ್ತದೆ. ಮತ್ತು ಇವುಗಳನ್ನು ತೀಕ್ಷ್ಣತೆಯನ್ನು ತಡೆಯುವ ಸಲುವಾಗಿಯೂ ಬಳಸಲಾಗುತ್ತದೆ. ಮತ್ತು ಇನ್ನು ಅನೇಕ ಸಂದರ್ಭಗಳಲ್ಲಿ ಬಳಕೆದಾರರಿಗೆ ಸೂಕ್ಷ್ಮಾಣುಗಳಿಂದಾಗಬಹುದಾದ ತೊಂದರೆಗಳ ನಿವಾರಣೆಗಾಗಿಯೂ ಬಳಸಲಾಗುತ್ತದೆ.[೧೬]
ವಿದ್ಯುನ್ಮಾನ ಕೀಬೋರ್ಡ್‌ನ ಬೆಳವಣಿಗೆಯಲ್ಲಿ ಪ್ಲಾಸ್ಟಿಕ್ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ’ಮೊನೊಬ್ಲಾಕ್’ಗಳು ಜೊತೆಯಾಗಿಯೇ ಬಂದವು ಜಿ.ಇಯ ’ ಸ್ವಯಂ ಘರ್ಷಣೆಯನ್ನು ಮಾಡುವ’ ಡೆರ್ಲಿನ್ ಮಾತ್ರ ಕೀಬೋರ್ಡ್‌ನ ಸಂಪರ್ಕಗುಂಡಿಯ ಕೊಳವೆಯ ತುದಿಯಲ್ಲಿ ಬಳಸುವ ಏಕೈಕ ಸಾಧನವಾಗಿತ್ತು ಮತ್ತು ಇದು ಕೀಬೋರ್ಡ್‌ನಲ್ಲಿ ಹತ್ತಾರು ದಶಲಕ್ಷ ಆವೃತ್ತಿಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಕೀಬೋರ್ಡ್‌ಗಳಿಗೆ ಗ್ರೀಸ್‌ಗಳನ್ನು ಹಚ್ಚುವುದು ಮತ್ತು ಕೀಲೆಣ್ಣೆಗಳನ್ನು ಬಳಸುವುದು ಸೂಕ್ತವಲ್ಲ ಏಕೆಂದರೆ ಅವು ಬಳಸುವ ಸಂದರ್ಭದಲ್ಲಿ ಕಿರಿಕಿರಿ ಉಂಟುಮಾಡುತ್ತದೆ ಮತ್ತು ಗುಂಡಿಗಳು ಒಂದಕ್ಕೊಂದು ಸಿಕ್ಕಿಬೀಳುವಂತೆ ಮಾಡುತ್ತದೆ. (ಆದಾಗ್ಯೂ ಕೆಲವು ಕೀಬೋರ್ಡ್ ತಯಾರಕರು ಇವುಗಳನ್ನು ಬಳಸಬಹುದು ಏಕೆಂದರೆ ಒಂದುವೇಳೆ ಕೀಲಿಯು ಕೆಳಹೊಗುವ ವೇಗ ಅಥವಾ ಕೀಲಿಯು ಸರಾಗವಾಗಿ ಕೆಲಸಮಾಡದೇ ಇದ್ದಲ್ಲಿ ಕೀಲಿಗಳು ಒಂದಕ್ಕೊಂದು ತಾಗುವ ತೊಂದರೆಯನ್ನು ನಿವಾರಿಸುವ ಸಲುವಾಗಿ ಬಳಸುತ್ತಾರೆ.) ಆದರೆ ಡೆರ್ಲಿನ್ ಮಾತ್ರ ಈಗ ಕಪ್ಪು ಮತ್ತು ಬಿಳುಪು ಮಾದರಿಯಲ್ಲಿ ಸಿಗುತ್ತಿರುವ ವಸ್ತುವಾಗಿದೆ. ಮತ್ತು ಇದು ಇದು ಕೀಲಿಮೇಲ್ಮೈಗೆ ಪ್ರಸಕ್ತವಾಗಿದೆ(ತುಂಬ ಮೃದುವಾಗಿದೆ), ಆದ್ದರಿಂದ ಕೀಲಿಯ ಮೇಲ್ಮೈಯಲ್ಲಿ ಎ.ಬಿ.ಎಸ್.ಪ್ಲಾಸ್ಟಿಕ್‌ಗಳನ್ನು ಉಪಯೋಗಿಸುತ್ತಾರೆ. ಏಕೆಂದರೆ ಇದು ಪ್ಲಾಸ್ಟಿಕ್ ಮಡಚುವಿಕೆಯಂತೆಯೇ ಭದ್ರತೆಯನ್ನು ನೀಡುತ್ತದೆ. ಮತ್ತು ಕೀಲಿಯ ಹರಿಯುವಿಕೆಯ ದೂರವನ್ನು ೦.೧೮೭ ಅಂಗುಲದಿಂದ ೦.೧೧೦ಅಂಗುಲ(೪.೭೫ಮಿಮಿ ರಿಂದ ೨.೭೯ಮಿಮಿ), ಕಡಿಮೆ ಮಾಡುತ್ತದೆ. ಒಂಟಿ ಭಾಗದ ಕೀಲಿಮೇಲ್ಮೈ/ಕೊಳವೆಯನ್ನು ಎ.ಬಿ.ಎಸ್.ನಿಂದ ಮಾಡಬಹುದಾಗಿದೆ. ಮತ್ತು ಇದರಿಂದ ಮೊನೊಲಾಕ್ಸ್ ಕೂಡ ಮಾಡಬಹುದಾಗಿದೆ.
ನಿಯಂತ್ರಕ ಸಂಸ್ಕಾರಕ (ಕಂಟ್ರೋಲರ್ ಪ್ರೊಸೆಸ್ಸರ್)
ಬದಲಾಯಿಸಿಗಣಕಯಂತ್ರದ ಕೀಬೋರ್ಡ್‌ಗಳು ನಿಯಂತ್ರಿತ ಸಣ್ಣ ಧಾತುಗಳನ್ನು ಕೀಲಿಯ ಮೇಲೆ ಬಿದ್ದ ಒತ್ತಡವನ್ನು ಗಣಕಯಂತ್ರವು ಅರ್ಥೈಸಿಕೊಳ್ಳಬಹುದಾದ ಕೀಲಿಯ ಸಂಜ್ಞೆಗಳಾಗಿ ಪರಿವರ್ತನೆ ಮಾಡುವ ಸಲುವಾಗಿ ಬಳಸಲಾಗುತ್ತದೆ. ಕೀಲಿಯ ಸಂಪರ್ಕ ಗುಂಡಿಗಳು ಎಕ್ಸ್-ವಾಯ್ ಮಾತೃಕೆಯಲ್ಲಿ ಸಂಪರ್ಕವನ್ನು ಸಾಧಿಸುತ್ತದೆ. ಕೀಲಿಯು ಒತ್ತಲ್ಪಟ್ಟಾಗ ವಾಯ್ ತಂತಿಗಳಲ್ಲಿ ವಿದ್ಯುತ್ ಹರಿಯುತ್ತದೆ, ಮತ್ತು ಸಂಜ್ಞೆಯು ಎಕ್ಸ್ ತಂತಿಯ ಮೂಲಕ ಪರೀಕ್ಷಿಸಲ್ಪಡುತ್ತದೆ.
ಮೊದಲು ಕೀಬೋರ್ಡ್‌ಗಳನ್ನು ಗಣಕಯಂತ್ರದ ಪ್ರಧಾನ ಸಂಸ್ಕರಣ ಘಟಕದಲ್ಲಿ ಸಂದೇಶರವಾನೆಗಾಗಿ ಮತ್ತು ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಸಾಧನವಾಗಿ ಬಳಸಲಾಗುತ್ತಿತ್ತು. ಮೊದಲ ಕೀಬೋರ್ಡ್‌ನ ಸೂಕ್ಷ್ಮ ಸಂಸ್ಕರಣಾ ಸಾಧನವು ೧೯೭೨ರಲ್ಲಿ ಸಾಮಾನ್ಯ ಸಾಧನವಾಗಿ ಕಂಡುಹಿಡಿಯಲ್ಪಟ್ಟಿತು. ಆದರೆ ಕೀಬೋರ್ಡ್‌ಗಳು ೧೯೭೮ರಲ್ಲಿ ಸಿಗುವ ಪೂರ್ವದಲ್ಲಿ ಬದಲಾಗುತ್ತಿದ್ದ ೮೦೪೮ ಸೂಕ್ಷ್ಮ ನಿಯಂತ್ರಕ ಒಂಟಿ ಬಿಲ್ಲೆಗಳನ್ನು ಹೊಂದಿತ್ತು. ಕೀಬೋರ್ಡ್‌ನ ಸಂಪರ್ಕ ಗುಂಡಿಯ ಮಾತೃಕೆಯು ಅದರ ಒಳಹರಿಯುವಿಕೆಗೆ ಸುತ್ತಲ್ಪಟ್ಟಿರುತ್ತದೆ. ಇದು ಕೀಲಿಯ ಮೇಲೆ ಬೀಳುವ ಒತ್ತಡವನ್ನು ಸಂಜ್ಞೆಗಳಾಗಿ ಮಾರ್ಪಡಿಸುತ್ತದೆ. ಮತ್ತು ಇದರಿಂದ ಬೇರ್ಪಟ್ಟ ಕೀಬೋರ್ಡ್‌ಗಳಲ್ಲಿ ಸಂಜ್ಞೆಗಳನ್ನು ಅದಕ್ಕೆ ಹೊಂದಿಕೊಂಡಿತುವ ತಂತಿಗಳ ಮೂಲಕ ಮದರ್‌ಬೋರ್ಡ್‌ನ ಮೇಲಿರುವ ಮುಖ್ಯ ಸಂಸ್ಕರಣಾ ಘಟಕಕ್ಕೆ ತಲುಪಿಸುತ್ತದೆ. ಈ ಅನುಕ್ರಮವಾದ ಕೀಬೋರ್ಡ್‌ನ ತಂತಿಗಳು ಕೇವಲ ’ಕ್ಯಾಪ್ಸ್ ಲಾಕ್’ ’ನಮ್ ಲಾಕ್’ ಮತ್ತು ’ಸ್ಕ್ರಾಲ್ ಲಾಕ್’ ಕೀಲಿಗೆ ಹೋಗುವ ವಿದ್ಯುತ್‌ನ್ನು ನಿಯಂತ್ರಿಸುವ ಸಲುವಾಗಿ ಇರುತ್ತದೆ.
ಒಂದು ವೇಳೆ ’ಕ್ಯಾಪ್ಸ್ ಲಾಕ್’ ಕೀಲಿಯು ಒತ್ತಿಕೊಂಡು ಇದೆಯೋ ಎಂದು ಪರೀಕ್ಷಿಸಲು ಒಂದು ಪರೀಕ್ಷೆ. ಕೀಬೋರ್ಡ್ ಚಾಲನೆಯಲ್ಲಿರುವ ಮುಖ್ಯ ಗಣಕಯಂತ್ರಕ್ಕೆ ಸಂಜ್ಞೆಯನ್ನು ರವಾನಿಸುತ್ತದೆ. ಒಂದು ವೇಳೆ ಮುಖ್ಯ ಗಣಕಯಂತ್ರವು ಚಾಲನೆಯಲ್ಲಿದ್ದರೆ ಇದು ಸಂಬಂಧಿಸಿದ ಬೆಳಕು ಬೆಳಗಲು ಕಾರಣವಾಗುತ್ತದೆ. ಉಳಿದ ಸೂಚಿ ಕೀಲಿಗಳು ಕೂಡ ಇದರಂತೆಯೆ ಕೆಲಸಮಾಡುತ್ತದೆ. ಕೀಬೋರ್ಡ್‌ನ ಚಾಲಕವು ’ಶಿಪ್ಟ್’ ’ಆಲ್ಟ್’ ಮತ್ತು ’ಕಂಟ್ರೋಲ್’ ಕೀಲಿಗಳನ್ನೂ ಕೂಡ ನಿಗ್ರಹಿಸುತ್ತದೆ.
ಕೆಲವು ಕಳಪೆ ಗುಣಮಟ್ಟದ ಕೀಬೋರ್ಡ್‌ಗಳಲ್ಲಿ ಬಗೆಬಗೆಯ ಅಥವಾ ತಪ್ಪು ದಾಖಲಾತಿಗಳು ಆಗುತ್ತವೆ ಇವುಗಳು ಕೀಬೋರ್ಡ್‌ಗಳಲ್ಲಿನ ತಪ್ಪಾದ ವಿದ್ಯುನ್ಮಾನ ವಿನ್ಯಾಸಗಳಿಂದಾಗಿರುತ್ತದೆ. ಇವುಗಳು ಕೀಲಿಯಲ್ಲಿನ ಸಂಪರ್ಕ ಗುಂಡಿಗಳ ತಪ್ಪು ಪುಟಿತದಿಂದ ಅಥವಾ ಅಸಮರ್ಪಕ ಕೀಲಿಗುಂಡಿಗಳ ಮಾತೃಕೆ ಜೋಡಣೆಯಿಂದಾಗಿ ಎರಡು ಕೀಲಿಗಳನ್ನು ಒಮ್ಮೆಗೆ ಕೆಳಗಡೆ ಒತ್ತಲು ಅವಕಾಶ ನೀಡುವುದಿಲ್ಲ, ಈ ಎರಡೂ ಸಂದರ್ಭಗಳನ್ನು ಈ ಕೆಳಗೆ ವಿವರಿಸಲಾಗಿದೆ:
ಕೀಬೋರ್ಡ್‌ನ ಕೀಲಿಯನ್ನು ಒತ್ತಿದಾಗ ಬೇರೆ ಬೇರೆ ಕೀಲಿಗಳನ್ನು ಒತ್ತುವ ಸಂದರ್ಭಗಳಲ್ಲಿ ಕೆಲವು ಕ್ಷಣಗಳನ್ನು ತೆಗೆದುಕೊಂಡು ಕೀಲಿಯ ಸಂಪರ್ಕವು ಪುರಟಿಯುತ್ತದೆ. (ಆದಾಗ್ಯೂ ಇದು ಅನುಗಮನದ, ಮತ್ತು ಸಾಮರ್ಥ್ಯವನ್ನು ಹೊಂದಿರುವ ಕೀಲಿಗುಂಡಿಯ ತಂತ್ರಜ್ಞಾನದಲ್ಲಿ ಹಾಲ್ ಪರಿಣಾಮದಿಂದ ನಡೆಯುವ, ಅಥವಾ ’ಸಾಲಿಡ್ ಸ್ಟೇಟ್’(ಗಟ್ಟಿ ಸ್ಥಿತಿ)ಗಳಲ್ಲಿ ಸತ್ಯವಲ್ಲ. ಈ ಸಂಪರ್ಕವನ್ನು ಬಿಡುಗಡೆಗೊಳಿಸಿದಾಗ ಸ್ಥಗಿತ ಸಂಪರ್ಕಾವಸ್ಥಗೆ ಬರುವ ಪೂರ್ವದಲ್ಲಿ ಪುಟಿಯುತ್ತದೆ. ಒಂದು ವೇಳೆ ಗಣಕಯಂತ್ರಗಳು ಪ್ರತಿಯೊಂದು ಬಡಿತವನ್ನೂ ಗಮನಿಸುತ್ತಿರುವಾಗ ಹಲವು ಕೀಲಿಬಡಿತಗಳವರೆಗೆ ಬಳಕೆದಾರರು ಯಾವ ಸಂಜ್ಞೆಯನ್ನು ನೀಡಲು ಯೋಜಿಸುತ್ತಿದ್ದಾರೆ ಎಂದು ವಿಚಾರಿಸುತ್ತದೆ. ಈ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಕೀಬೋರ್ಡ್‌ನಲ್ಲಿನ ಸಂಸ್ಕಾರಕ(ಅಥವಾ ಗಣಕಯಂತ್ರದಲ್ಲಿ)ವು ಕೀಲಿ ಹೊಡೆತಗಳನ್ನು ಪುಟಿಯಲು ಬಿಡುವುದಿಲ್ಲ. ಮತ್ತು ಒಂದು ಸಂದರ್ಭದಲ್ಲಿ ಆದ ಸರಿಯಾದ ಸಂಪರ್ಕವನ್ನು ಗಮನಿಸಿ ಪ್ರತಿಕ್ರಿಯಿಸುತ್ತದೆ.
ಕೆಲವು ಕೆಳದರ್ಜೆಯ ಕೀಬೋರ್ಡ್‌ಗಳು ರೊಲೊವರ್ (ಒಂದೇ ಬಾರಿಗೆ ಎರಡು ಕೀಲಿಗಳು ಒತ್ತಲ್ಪಟ್ಟರೆ ಅಥವಾ ಮಿಲಿ ಕ್ಷಣಗಳಲ್ಲಿ ಮತ್ತೊಂದು ಕೀಲಿಯು ಒತ್ತಲ್ಪಟ್ಟರೆ ಗುರುತಿಸಲಾಗದ ಸ್ಥಿತಿ)ಸಮಸ್ಯೆಯಿಂದ ಬಳಲುತ್ತವೆ. ಮೊದಲ ಗಟ್ಟಿ ಸ್ಥಿತಿಯ ಸಂಪರ್ಕ ಗುಂಡಿಗಳನ್ನು ಹೊಂದಿರುವ ಕೀಬೋರ್ಡ್‌ಗಳು ಇಂತಹ ಸಮಸ್ಯೆಗಳನ್ನು ಹೊಂದಿರಲಿಲ್ಲ ಏಕೆಂದರೆ ಕೀಲಿ ಸಂಪರ್ಕಗುಂಡಿಗಳು ವಿದ್ಯುನ್ಮಾನವಾಗಿ ಒಂದರಿಂದ ಒಂದು ಪ್ರತ್ಯೇಕಿಸಲ್ಪಟ್ಟಿದ್ದವು. ಮತ್ತು ಮೊದಲ ನೇರ ಸಂಪರ್ಕ ಕೀಲಿ ಸಂಪರ್ಕಗುಂಡಿಗಳ ಕೀಬೋರ್ಡ್‌ಗಳು ಅಯಾನಿಕ ಕವಾಟಗಳಿಂದ ಬೇರ್ಪುಡಿಸ್ಪಟ್ಟು ಈ ತೊಂದರೆಯನ್ನು ನಿವಾರಿಸಿಕೊಂಡಿದ್ದವು. ಆದ್ದರಿಂದ ಮೊದಲ ಕೀಬೋರ್ಡ್‌ಗಳಲ್ಲಿ ’ಎನ್-ಕೀ’ ರೋಲೊವರ್‌ಗಳನ್ನು ಹೊಂದಿರುತ್ತಿತ್ತು. ಇದರ ಅರ್ಥವೆನೆಂದರೆ ಎಷ್ಟು ಕೀಲಿಗಳನ್ನು ಒಂದೇ ಬಾರಿಗೆ ಒತ್ತಲ್ಪಟ್ಟರೂ ಪ್ರತೀಕ್ಷಣದ ವ್ಯತ್ಯಾಸವನ್ನು ಗುರುತಿಸಿ ಮುಂದಿನ ಕೀಲಿಯ ಸಂದೇಶವನ್ನು ರವಾನಿಸುವುದು. ಆದರೆ ಒಂದು ವೇಳೆ ನೇರ ಸಂಪರ್ಕ ಕೀಬೋರ್ಡ್‌ಗಳಲ್ಲಿ ಮೂರು ಕೀಲಿಗಳು ಒತ್ತಲ್ಪಟ್ಟರೆ (ವಿದ್ಯುನ್ಮಾನವಾಗಿ ಮುಚ್ಚಲ್ಪಟ್ಟರೆ) ಕೀಲಿಸಂಪರ್ಕ ಗುಂಡಿಗಳಲ್ಲಿ ಅಯಾನಿಕ ಕವಾಟಗಳು ಕೆಲಸ ನಿರ್ವಹಿಸುವುದಿಲ್ಲ( ಆಯಾನಿಯ ಕವಾಟಗಳು ವಿದ್ಯುತ್ ತೆಳುಪದರದ ತಳಹದಿಯ ಮೇಲೆ ಮಾಡಲಾದ ಕೀಬೋರ್ಡ್‌ಗಳು), ಕೀಬೋರ್ಡ್‌ನಲ್ಲಿ ಮೂರು ಕೀಲಿಗಳನ್ನು ಒಟ್ಟಿಗೆ ಒತ್ತಿದಾಗ ಎಕ್ಸ್ ಮತ್ತು ವಾಯ್ ತಂತಿಗಳ ಸಂದಿಸುವಿಕೆಯಲ್ಲಿ ಇರುಸು ಮುರುಸಾಗಿ ನಾಲ್ಕನೇ ಕೀಲಿಯನ್ನು ಒತ್ತಿದಂತೆ ಭ್ರಮಿಸುತ್ತದೆ, ಕೆಲವು ಕೀಬೋರ್ಡ್‌ಗಳು ಒಂದು ಕಾಲಕ್ಕೆ ಕೇವಲ ಮೂರು ಕಿಲಿಗಳನ್ನು ಮಾತ್ರ ಗುರುತಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದನ್ನು ’ಕೀಲಿಯ ಭೃಮೆ ಕಟ್ಟುವಿವಿಕೆ’ ಎಂತಲೂ ಕರೆಯುತ್ತಾರೆ. ಅಥವಾ ’ಪೇಂಥೋಮ್ ಕೀ ಲಾಕ್‌ಔಟ್’ ಎಂತಲೂ ಕರೆಯುತ್ತಾರೆ. ಅಂದರೆ ಇದು ಒಂದು ಸಮಯಕ್ಕೆ ಮೂರು ಕೀಲಿಗಳನ್ನು ಮಾತ್ರ ಹಿಡಿದಿಟ್ಟುಕೊಳ್ಳುತ್ತದೆ ಮತ್ತು ಉಳಿದ ಒತ್ತಲ್ಪಟ್ಟ ಕೀಲಿಗಳನ್ನು ಮೂರರಲ್ಲಿ ಯಾವುದಾದರೂ ಒಂದು ಕೀಲಿಯನ್ನು ಸಡಿಲಿಸುವ ವರೆಗೆ ನಿರ್ಲಕ್ಷಿಸುತ್ತದೆ. ಜೋರಾಗಿ ಮುದ್ರಿಸುವ ಕೆಲಸಗಳಿಗೆ ಇದು ಸೂಕ್ತವಲ್ಲ (ಒಂದು ಕೀಲಿಯನ್ನು ಬಿಡುವ ಮೊದಲೇ ಮತ್ತೊಂದು ಕೀಲಿಯನ್ನು ಒತ್ತುವುದರಿಂದ ಮತ್ತು ಆಟಗಳಲ್ಲಿ(ಬೇರೆ ಬೇರೆ ಕೀಲಿಗಳನ್ನು ಒಂದೇ ಕೆಲಸಕ್ಕಾಗಿ ಒಂದೇ ಬಾರಿ ಒತ್ತುವಂತೆ ವಿನ್ಯಾಸಗೊಳಿಸಿರುವುದರಿಂದ).
ನೇರ ಸಂಪರ್ಕದ ತೆಳುವಾದ ಪೊರೆಯನ್ನು ಹೊಂದಿರುವ ಕೀಬೋರ್ಡ್‌ಗಳು ಹೆಚ್ಚು ಪ್ರಸಿದ್ಧವಾದವು. ಏಕೆಂದರೆ ಸಾಮಾನ್ಯವಾಗಿ ಹೆಚ್ಚು ಬಳಕೆಯಲ್ಲಿರುವ ಕೀಲಿಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸಿರುವುದರಿಂದ ಮಾತೃಕೆ( ಉದಾಹರಣೆಗೆ ಮೂರು ಅಥವಾ ನಾಲ್ಕು ಒಂದಾದ ಮೇಲೊಂದರಂತೆ ಎಕ್ಸ್ ಮತ್ತು ವಾಯ್ ತಂತಿಗಳಲ್ಲಿ ಬಳಸಬಹುದಾದ ಕೀಲಿಗಳನ್ನು ಅನುಕ್ರಮದಲ್ಲಿ ಜೋಡಿಸಿರುವುದರಿಂದ ಎರಡು ತಂತಿಗಳಲ್ಲಿ ಉಂಟಾಗುವ ಘರ್ಷಣೆಯನ್ನು ತಡೆಯಬಹುದು)ಭೃಮಾ ಕೀಲಿಯನ್ನು ತೋರ್ಪಡಿಸುವುದಿಲ್ಲ. ಇದರಿಂದಾಗಿ ಮೂರನೇ ಕೀಲಿಯನ್ನು ತಡೆಗಟ್ಟುವಿಕೆಯು ಒಂದು ಸಮಸ್ಯೆಯಾಗಿ ನಿಲ್ಲಲಿಲ್ಲ. ಆದರೆ ಕಳಪೆ ದರ್ಜೆಯ ಕೀಬೋರ್ಡ್‌ಗಳನ್ನು ತಯಾರಿಸುವ ಜ್ಞಾನವನ್ನು ಕಡಿಮೆ ಹೊಂದಿರುವ ತಂತ್ರಜ್ಞರು ಈ ಚಾಕಚಕ್ಯತೆಯನ್ನು ಹೊಂದಿರುವುದಿಲ್ಲ, ಮತ್ತು ಕೆಲವು ಆಟಗಳ ವಿವಿಧ ರೀತಿಯ ಕೀಲಿಹೊಂದಾಣಿಕೆಗಳಿಂದಾಗಿ ಅದೊಂದು ಸಮಸ್ಯೆಯಾಗಿ ಕಾಡುತ್ತದೆ.
ಸಂಪರ್ಕದ ವಿಧಗಳು
ಬದಲಾಯಿಸಿಕೀಬೋರ್ಡ್ನಿಂದ ಗಣಕಯಂತ್ರಕ್ಕೆ ಸಂಪರ್ಕನೀಡಲು ಹಲವಾರು ವಿಧಾನಗಳಿವೆ (ಹೆಚ್ಚಾಗಿ ಕೀಬೋರ್ಡ್‌ನ ನಿಯಂತ್ರಣಕ್ಕೆ) ತಂತಿಗಳ ಬಳಕೆ, ಹೆಚ್ಚಾಗಿ ಮದರ್ ಬೋರ್ಡ್‌ನಲ್ಲಿರುವ ಎ.ಟಿ.ಸಂಪರ್ಕಸಾಧನದ ಮೂಲಕ, ಇದನ್ನು ಪಿ.ಎಸ್/೨ ಅಥವಾ ಯು.ಎಸ್.ಬಿ.ಗಳ ಸ್ಥಳಗಳಲ್ಲಿ ಜೋಡಿಸಲಾಗುತ್ತದೆ. ಇದನ್ನು ಐಮ್ಯಾಜಿಕ್ ಪಥದಲ್ಲಿರುವ ಗಣಕಯಂತ್ರಗಳಲ್ಲಿ ಬಳಸಲಾಗುತ್ತದೆ. ’ಆಪಲ್’ ಸಂಸ್ಥೆಯವರು ತಮ್ಮ ಸಂಸ್ಥೆಯೇ ತಯಾರಿಸಿದ ’ಬಸ್’ಗಳನ್ನು ಕೀಬೋರ್ಡ್‌ನೊಂದಿಗೆ ಸಂಪರ್ಕ ಸಾಧಿಸಲು ಬಳಸಿದ್ದಾರೆ.
ತಂತಿರಹಿತ ಕೀಬೋರ್ಡ್‌ಗಳು ಅದರ ಔಪಯೋಗಿಕ ಸಾಮರ್ಥ್ಯದ ಮೇಲೆ ಹೆಚ್ಚು ಜನಪ್ರೀಯವಾಗಿದೆ. ಇದು ಸಂದೇಶಗಳನ್ನು ವರ್ಗಾಯಿಸುವ(ಟ್ರಾನ್ಸ್ ಮೀಟರ್) ಮತ್ತು ಸಂದೇಶಗಳನ್ನು ಪಡೆಯುವ ಸಾಧನಗಳನ್ನು ಗಣಕಯಂತ್ರದ ಕೀಬೋರ್ಡ್‌ಗೆ ಜೋಡಿಸಲಾಗುತ್ತದೆ(ಮೇಲಿನ ಸಂಪರ್ಕ ವಿಧ ಗಳನ್ನು ನೋಡಿ). ತಂತಿ ರಹಿತ ಸಂಪರ್ಕ ವ್ಯವಸ್ಥೆಯನ್ನು ಒಂದೋ ರೆಡಿಯೋ ಸಂದೇಶಗಳ ಮೂಲಕ ಪಡೆಯಲಾಗುತ್ತದೆ ಅಥವಾ ಇನ್ಪ್ರಾರೆಡ್ ಕಿರಣಗಳ ಮೂಲಕ ಸಂಪರ್ಕವನ್ನು ಸಾಧಿಸಲಾಗುತ್ತದೆ. ಇದರಲ್ಲಿ ಸಂದೇಶ ಕಳುಹಿಸುವ ಮತ್ತು ಸಂದೇಶ ಸ್ವೀಕರಿಸುವ ಎರಡೂ ಸಾಧನಗಳನ್ನು ಗಣಕಯಂತ್ರಕ್ಕೆ ಅಳವಡಿಸಲಾಗುತ್ತದೆ. ತಂತಿರಹಿತ ಕೀಬೋರ್ಡ್‌ಗಳು ಕೈಗಾರಿಕಾ ಮಟ್ಟದ ರೇಡಿಯೋ ಅಲೆಗಳನ್ನು ಬಳಸಬಹುದು ಇದನ್ನು ’ಬ್ಲೂ ಟೂತ್’ ಎಂದು ಕರೆಯುತ್ತಾರೆ. ಬ್ಲೂ ಟೂತ್‌ನೊಂದಿಗೆ ಸಂದೇಶ ರವಾನಿಸುವ ಮತ್ತು ಸ್ವೀಕರಿಸುವ ಎರಡೂ ಸಾಧನಗಳನ್ನು ಗಣಕಯಂತ್ರಕ್ಕೆ ಅಳವಡಿಸಬಹುದಾಗಿದೆ. ಏಕೆಂದರೆ ತಂತಿರಹಿತ ಕೀಬೋರ್ಡ್‌ಗಳು ವಿದ್ಯುತ್‌ನ ಅವಶ್ಯಕತೆಯನ್ನು ಹೊಂದಿರುತ್ತವೆ ಮತ್ತು ಕೀಬೋರ್ಡ್‌ನಿಂದ ಹೊರಬೀಳುವ ಸಂದೇಶಗಳನ್ನು ಯಾರಾದರೂ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಒಲಿವೆಟ್ಟಿಯವರ ಕಲ್ಪನೆಯು ಇದು ಪ್ರಥಮ ತಂತಿರಹಿತ ಕೀಬೋರ್ಡ್‌ಗೆ ಉದಾಹರಣೆಯಾಗಿದೆ.
ಪರ್ಯಾಯ ಅಕ್ಷರ ದಾಖಲಿಸುವ ವಿಧಾನಗಳು
ಬದಲಾಯಿಸಿದೃಶ್ಯ ಸಂಕೇತಗಳನ್ನು ಗುರುತಿಸುವ ವಿಧಾನವು, ಈಗಾಗಲೇ ಬರೆದಿರುವ, ಯಂತ್ರವು ಓದಬಹುದಾದ ಮಾದರಿಯಲ್ಲಿರದ ಅಕ್ಷರಗಳನ್ನು ಯಂತ್ರಗಳು ಗುರುತಿಸಲು ಯೋಗ್ಯವಾದ ಸಂಕೇತಗಳಾಗಿ ಪರಿವರ್ತಿಸಲು ಯೋಗ್ಯವಾಗಿರುತ್ತದೆ.(ಉದಾಹರಣೆಗೆ,೧೯೪೦ ರಿಂದ ಸಾಲಚ್ಚು ಮುದ್ರಣ ಯಂತ್ರದಿಂದ ಮುದ್ರಿಸುತ್ತಿರುವ ಪುಸ್ತಕ). ಮತ್ತೊಂದು ಅರ್ಥದಲ್ಲಿ ಇದೊಂದು ದೃಶ್ಯ ಸಂಕೇತಗಳನ್ನು ಮುದ್ರಣ ಯೋಗ್ಯ ಸಂಕೇತಗಳಾಗಿ ಪರಿವರ್ತಿಸುವ ವಿಧಾನವಾಗಿದೆ.(ಅಂದರೆ ಇದೊಂದು ಅಕ್ಷರ ಛಾಪಿಸುವ ತಂತಿಯಾಗಿದೆ). ಇದರಲ್ಲಿ ಯಾರೊಬ್ಬರೂ ಬೆರಳಚ್ಚಿನ ಮೂಲಕ ದಾಖಲಿಸಬಹುದಾಗಿದೆ ಮತ್ತು ಗಣಕ ಯಂತ್ರವು ಸಂಜ್ಙೆಯನ್ನು ಗುರುತಿಸಿ ಯಾವ ಅಕ್ಷರವೆಂದು ನಿರ್ಧರಿಸಬಹುದಾಗಿದೆ. ಈ (OCR) ತಂತ್ರಜ್ಞಾನವು ಮಾರುಕಟ್ಟೆಯಲ್ಲಿ ಪರಿಣಾಮಕಾರಿ ಹಂತಕ್ಕೆ ತಲುಪಿ ಮುಂದಿನ ದಿನಮಾನಗಳಲ್ಲಿ ಹೆಚ್ಚಿನ ಸುಧಾರಣೆಯ ಆಶಯವನ್ನು ಖಾತರಿಪಡಿಸಿತು.(ಉದಾ- ಗೂಗಲ್ ಬುಕ್ ಸರ್ಚ್)
ಧ್ವನಿ ಗ್ರಾಹಕ ಸಾಧನವು ಧ್ವನಿಯನ್ನು ಯಂತ್ರಗ್ರಾಹಿ ಮಾದರಿಗೆ ವರ್ಗಾಯಿಸುವ ಸಾಧನವಾಗಿದೆ. ಈ ತಂತ್ರಜ್ಞಾನವು ಈಗಾಗಲೇ ಸಾಕಷ್ಟು ಜನಪ್ರಿಯತೆ ಹೊಂದಿ ವಿವಿಧ ಕಂಪ್ಯೂಟರ್ ತಂತ್ರಾಂಶಗಳಲ್ಲಿ ಬಳಸಲ್ಪಡುತ್ತಿದೆ. ವೈಧ್ಯಕೀಯ ಬರಹ,ಕಾನೂನು ಟಿಪ್ಪಣೆ,ಪತ್ರಿಕೋಧ್ಯಮ,ನಿಬಂಧ ಮತ್ತು ನಿಘಂಟುಗಳ ಬರಹಗಳಂತ ನಿರ್ಧಿಷ್ಟ ಬಳಕೆಗೆ ಕೀಬೋರ್ಡ್‌ನನ್ನು ಬದಲಾಯಿಸಲು ಪ್ರಾರಂಭವಾಯಿತು. ಆದಾಗಿಯೂ ಮುಂದಿನ ದಿನಗಳಲ್ಲಿ ಪುರ್ತಿ ಕೀಬೋರ್ಡ್‌ನನ್ನೇ ಬದಲಾಯಿಸುವ ಆತಂಕಕ್ಕೆ ತಂದೊಡ್ಡಲಿಲ್ಲ.ಆದರೆ ಇದು ಅಕ್ಷರಗಳ ಜೊತೆಗೆ "close window" ಅಥವಾ "undo that" ನಂತಹ ಕಂಪ್ಯೂಟರ್ ಕಮಾಂಡ್ ಗಳ ಮೇಲೆ ಪರ್ಯಾಯ ವಿಧಾನವಾಗಿ ಅಳವಡಿಸಲ್ಪಡಬಹುದು. ಆದ್ದರಿಂದ ಮುಂದೊಂದು ದಿನ ಕೀಬೋರ್ಡ್‌ಗಳ ಉಪಯೋಗವು ಪೂರ್ತಿಯಾಗಿ ಇಲ್ಲವಾಗುವ ಸಾಧ್ಯತೆಯಿದೆಯೆಂದು ಸೈದ್ದಾಂತಿಕವಾಗಿ ಹೇಳಬಹುದು.(ಆದರೆ OCR ತಂತ್ರಜ್ಞಾನವು ಕೆಲವು ನಿರ್ಧಿಷ್ಟ ಕೆಲಸದಲ್ಲಿ ಮಾತ್ರ ಕೀಬೋರ್ಡ್‌ಗೆ ಪರ್ಯಾಯವಾಗಬಲ್ಲದು).
ಅಕ್ಷರ ಮತ್ತು ಸಂಕೇತಗಳನ್ನು ದಾಖಲಿಸಲು ಎಲ್ಲಿ ಭೌತಿಕ ಕೀಬೋರ್ಡ್‌ನನ್ನು ಬಳಸಲು ಸಾಧ್ಯವಿಲ್ಲವೋ ಅಥವಾ ಅಸಮಂಜಸವೋ ಅಲ್ಲಿ ಸೂಚಕ ಸಾಧನವನ್ನು ಬಳಸಬಹುದಾಗಿದೆ. ಈ ಉಪಕರಣಗಳು ಅಕ್ಷರಗಳನ್ನು ಪರದೆಯ ಮೂಲಕ ಪ್ರದರ್ಶಿಸುತ್ತದೆ ಮತ್ತು ಈ ಮಾದರಿಯು ಪದೇ ಪದೇ ಬಳಕೆಯಲ್ಲಿರುವ ಮತ್ತು ಅಕ್ಷರಗಳನ್ನು ಶೀಘ್ರವಾಗಿ ಗ್ರಹಿಸುವ ವಿನ್ಯಾಸವನ್ನು ಹೊಂದಿರುತ್ತದೆ. ಪರದೆಯ ಮೇಲೇ ಇರುವ ವರ್ಚುವಲ್ ಕೀಬೋರ್ಡ್,ಗ್ರಾಫಿಟಿ ಹಾಗೂ ಡ್ಯಾಶರ್ ಗಳು ಈ ರೀತಿಯ ಇನ್ಪುಟ್ ಗಳಿಗೆ ಪ್ರಮುಖ ಉದಾಹರಣೆಯಾಗಿದೆ.
ಇತರ ಮಾದರಿಗಳು
ಬದಲಾಯಿಸಿಕೀಲಿ ಮಾದರಿಯ ನಕಲು ಮಾಡುವಿಕೆ.
ಬದಲಾಯಿಸಿಕೀಲಿಯ ಪ್ರವೇಶ ಮಾದರಿಯು ಕೀಲಿಯನ್ನು ಬಳಸುವವರನ್ನು ಪತ್ತೆಹಚ್ಚುವ ಮತ್ತು ದಾಖಲಿಸುವ ಒಂದು ವಿಧಾನವಾಗಿದೆ. ಲೆಕ್ಕಪತ್ರಗಳ ಕೆಲಸ ನಿರ್ವಹಿಸುವ ನೌಕರರ ಉತ್ಪಾದಕತೆಯನ್ನು ಅಳೆಯಲು ಇದನ್ನು ಶಾಸನಬದ್ದವಾಗಿ ಬಳಸಬಹುದು.ಕಾನೂನಿನಿಂದ ನಿಯುಕ್ತಿಗೊಳಿಸಿದ ಪ್ರತಿನಿಧಿಗಳು ಅನೈತಿಕ ಚಟುವಟಿಕೆಗಳನ್ನು ಪತ್ತೆಹಚ್ಚುವ ಸಲುವಾಗಿ ಮತ್ತು ದುರುದ್ದೇಶಪೂರ್ವಕವಾಗಿ ತಂತ್ರಾಂಶವನ್ನು ನಕಲು ಮಾಡುವವರನ್ನು ಕಂಡುಹಿಡಿಯಲು ಬಳಸಬಹುದು. ನಕಲು ಮಾಡುವವರು ಕೀಲಿ ಮಾದರಿಯನ್ನು ಗುಪ್ತ ಸಂಖ್ಯೆಗಳು (passwords) ಮತ್ತು ಇತರ ಪ್ರಮುಖ ಮಾಹಿತಿಗಳನ್ನು ಪಡೆದುಕೊಳ್ಳಲು ಒಂದು ಮಾಧ್ಯಮವನ್ನಾಗಿ ಮಾಡಿಕೊಂಡಿದ್ದಾರೆ ಮತ್ತು ತದನಂತರ ಇತರ ಭದ್ರತಾ ವಿಧಾನಗಳ ರಹಸ್ಯವನ್ನು ಭೇದಿಸುತ್ತಾರೆ.
ಕೀಲಿ ಮಾದರಿ ಭೇದನವನ್ನು ಯಂತ್ರಾಂಶ ಮತ್ತು ತಂತ್ರಾಂಶ ಎರಡೂ ಮಾಧ್ಯಮಗಳ ಮೂಲಕ ಸಾಧಿಸಬಹುದು. ಯಂತ್ರಾಂಶ ಕೀಲಿ ಭೇದಕರು ತಮ್ಮ ಭೇದಕ ಸಾಧನವನ್ನು ಕೀಬೋರ್ಡ್ ಕೇಬಲ್ ಅಥವಾ ಕೀಬೋರ್ಡ್‌ನೊಳಗೇ ಲಗತ್ತಿಸಿರುತ್ತಾರೆ. ತಂತ್ರಾಂಶ ಕೀಲಿ ಭೇದಕರು ಕಂಪ್ಯೂಟರ್ ಚಾಲನಾ ವ್ಯವಸ್ಥೆಯ ಮೇಲೆ ಗುರಿಯಿರಿಸಿ ತಮ್ಮ ಸಾಧನವನ್ನು ಕಂಪ್ಯೂಟರ್ ಚಾಲನಾ ಕೀಬೋರ್ಡ್‌ಗೆ ಸಿಕ್ಕಿಸಿ ಅನಧಿಕೃತವಾಗಿ ನಕಲು ಮಾಡುತ್ತಾರೆ. ಅಥವಾ ದೂರದಿಂದಲೇ ಗ್ರಹಿಸುವ ತಂತ್ರಾಂಶವನ್ನು ಬಳಸಿ ಒಂದು ಕಂಪ್ಯೂಟರ್ ವ್ಯವಸ್ಥೆಯಿಂದ ತಮಗೆ ಬೇಕಾದ ಕಡೆಗೆ ದಾಖಲೆಗಳನ್ನು ವರ್ಗಾಯಿಸಿಕೊಳ್ಳುತ್ತಾರೆ. ಇನ್ನು ಕೆಲವು ಭೇದಕರು ನಿಸ್ತಂತು ಕೀಬೋರ್ಡ್ ಮತ್ತು ಅದರ ಗ್ರಾಹಕ ಸಾಧನದ ನಡುವೆ ದಾಖಲೆ ಗುಚ್ಛಗಳ ವಿನಿಮಯ ನಡೆಯುವಾಗ ಮಧ್ಯಂತರದಲ್ಲಿ ನಿಸ್ತಂತು ಕೀಲಿ ಭೇದನ ಉಪಕರಣವನ್ನು ಬಳಸಿ ಎರಡು ಸಾಧನಗಳ ನಡುವೆ ಇರುವ ನಿಸ್ತಂತು ಸಂಪರ್ಕದ ರಹಸ್ಯ ಕೀಲಿಯನ್ನು ಕಂಡುಕೊಂಡು ಮಾಹಿತಿಗಳನ್ನು ಅಪಹರಿಸುತ್ತಾರೆ.
ಮಾಹಿತಿ ಕಳ್ಳತನ ವಿರೋಧಿ ತಂತ್ರಜ್ಞಾನವು ಸಾಕಷ್ಟು ಕೀಲಿಭೇದಕರನ್ನು ಪತ್ತೆಹಚ್ಚುವಲ್ಲಿ ಮತ್ತು ಅವರನ್ನು ನಿರೋಧಿಸುವಲ್ಲಿ ಸಮರ್ಥವಾಗಿದೆ. ತಂತ್ರಾಂಶವನ್ನು ಕದ್ದು ದುರುಪಯೋಗಪಡಿಸುವದನ್ನು ತಡೆಯಲು ಮತ್ತು ಅವರನ್ನು ಪತ್ತೆಹಚ್ಚಲು ನೆರವಾಗುವ ಆಯ್೦ಟಿ-ಸ್ಪೈವೇರ್ ತಂತ್ರಾದೇಶವನ್ನು ಪ್ರತಿಯೊಬ್ಬ ಜವಾಬ್ದರಿಯುತ ತಂತ್ರಾಂಶ ನಿರ್ಮಾಣಗಾರರು ಮತ್ತು ವ್ಯಾಪಾರಿಗಳು ಅಳವಡಿಸಬೇಕು. ’ಫೈಯರ್‍ವಾಲ್’ ತಂತ್ರ ಅಳವಡಿಕೆಯು ವಾಸ್ತವದಲ್ಲಿ ಕೀಲಿಭೇದಕರನ್ನು ನಿಯಂತ್ರಿಸಲು ವಿಫಲವಾಗಿದೆ. ಆದರೆ ಸರಿಯಾದ ವಿನ್ಯಾಸದಲ್ಲಿ ಅಳವಡಿಸಿದಲ್ಲಿ ಅಪಹರಿಸಿದ ಮಾಹಿತಿ ಗುಚ್ಛವನ್ನು ತಮ್ಮ ಉಪಯೋಗಕ್ಕೆ ಬಳಸದಂತೆ ನಿಯಂತ್ರಿಸಬಹುದು. ಸಂಪರ್ಕ ಜಾಲ ನಿಯಂತ್ರಕ ಅಂದರೆ ’ರಿವರ್ಸ್ ಪೈಯರ್‍ವಾಲ್’ ವನ್ನು ಕೂಡಾ ಬಳಕೆದಾರರನ್ನು ಮಾಹಿತಿ ಅಪಹರಣ ನಡೆಯುವ ಸಮಯದಲ್ಲಿ ಜಾಗ್ರತಗೊಳಿಸಲು ಉಪಯೋಗಿಸಬಹುದು. ಇದು ಸಂಪರ್ಕ ಕೀಲಿ ಬಳಕೆದಾರರಿಗೆ ತಮ್ಮ ದಾಖಲೆಗಳನ್ನು ಕೀಲಿ ಭೇದಕರಿಂದ ರಕ್ಷಿಸಿಕೊಳ್ಳಲು ಅವಕಶ ನೀಡುತ್ತದೆ. ಅಟೋಮ್ಯಾಟಿಕ್ ಫಾರಂ ಫಿಲ್ಲಿಂಗ್ ತಂತ್ರದ ಮೂಲಕವೂ ಕೀಬೋರ್ಡ್ ಚಾಲ್ತಿಯಲ್ಲಿಲ್ಲದಿದ್ದರೂ ಪೂರ್ತಿಯಾಗಿ ನಿಯಂತ್ರಿಸಬಹುದು. ಈ ವ್ಯವಸ್ಥೆಯಲ್ಲಿ ಕೀಲಿ ಭೇದಕರು ಪ್ರವೇಶ ಕೀಲಿಗಳು ಮತ್ತು ಬೆರಳಚ್ಚು ಕೀಲಿಗಳ ನಡುವೆ ಆಯ್ಕೆಯ ಗೊಂದಲವುಂಟಾಗಿ ಪರದೆಯ ಮೇಲೆ ಇನ್ಯಾವುದೋ ಕೀಲಿಯನ್ನು ಆಯ್ಕೆ ಮಾಡಿ ಮೋಸಹೋಗುತ್ತಾರೆ.[೧೭]
ನಿಸ್ತಂತು ಕೀಲಿ ಮಾದರಿಯ ನಕಲು ಮಾಡುವಿಕೆ
ಬದಲಾಯಿಸಿಇದನ್ನು ದೂರದಿಂದ ಕೀಲಿ ನಿಯಂತ್ರಣ ಅಥವಾ ನಿಸ್ತಂತು ಕೀಲಿ ನಿಯಂತ್ರಣ ಎಂತಲೂ ಕರೆಯಬಹುದು.
ಸಂಶೋಧನೆಯ ಪ್ರಕಾರ ವಿದ್ಯುತ್ಕಾಂತೀಯ ತರಂಗಗಳನ್ನು ಹೊರಹೊಮ್ಮಿಸುವುದರ ಮೂಲಕ ನಿಯಂತ್ರಿಸುವ ಕೀಬೋರ್ಡ್‌ಗಳು ವಿಕಿರಣವನ್ನು ಸೂಸುತ್ತವೆಯೆಂದು ವಾಗ್ನುಕ್ಸ್ ಮತ್ತು ಪಾಸಿನಿ ಎಂಬುವವರು ಸಾಕ್ಷೀಕರಿಸಿದರು.[೧೮] ಈ ವಿಜ್ಞಾನಿಗಳು ನಾಲ್ಕು ವಿಧಾನಗಳ ಮೂಲಕ ಮೂಲ ಸಲಕರಣೆಗಳು ವಿದ್ಯುತ್ಕಾಂತೀಯ ವಿಕಿರಣಗಳಿಂದ ಸಾಕಷ್ಟು ರಕ್ಷಣೆ ಹೊಂದಿಲ್ಲವೆಂದು ಸಾಬೀತುಪಡಿಸಿದರು. ಹೆಚ್ಚುವರಿಯಾಗಿ ಈ ತರಂಗಗಳ ಹೊರಹೊಮ್ಮುವಿಕೆಯನ್ನು ವೆಚ್ಚದಾಯಕವಲ್ಲದ ಉಪಕರಣದಿಂದ ಸೆರೆಹಿಡಿಯಬಹುದು ಮತ್ತು ಕೀಲಿಮಾದರಿಗಳು ಅರೆ-ಪ್ರತಿಧ್ವನಿರಹಿತ ಛೇಂಬರ್ ನ ಹೊರತಾಗಿ ಪ್ರಾಯೋಗಿಕ ವಾತಾವರಣದಲ್ಲಿ ಕೂಡಾ ಹತೋಟಿಗೆ ತೆಗೆದುಕೊಳ್ಳಬಹುದೊಂದು ತೋರಿಸಿಕೊಟ್ಟರು(ಉದಾ-ಕಛೇರಿ).[೧೯] ಈ ರೀತಿ ಆಕ್ರಮಣದ ಪರಿಣಾಮವೇನೆಂದರೆ, ಕೀಬೋರ್ಡ್‌ಗಳ ವಿದ್ಯುತ್ಕಾಂತೀಯ ತರಂಗಗಳ ಹೊಮ್ಮಿಸುವಿಕೆಯು ಪ್ರಸ್ತುತ ದಿನದಲ್ಲಿ ಕೂಡಾ ಭದ್ರತಾ ಕೊರತೆಯನ್ನು ಎತ್ತಿ ತೋರಿಸುತ್ತದೆ. ಪಿಎಸ್/೨, ಯು ಎಸ್ ಬಿ, ಲ್ಯಾಪ್ ಟಾಪ್,ಮತ್ತು ವೈರ್ ಲೆಸ್ ಕೀಬೋರ್ಡ್‌ಗಳು ಈ ರೀತಿ ಭೇದನೀಯವಾಗಿದೆ. ಅದಕ್ಕಿಂತ ಹೆಚ್ಚಾಗಿ ಇಂತ ಭೇದನೆಗಳನ್ನು ಸರಿಪಡಿಸಲು ಯಾವುದೇ ತಂತ್ರಾಂಶ ಹೊಂದಿಕೆಯಿರುವದಿಲ್ಲ. ಈ ರೀತಿಯಾದಾಗ ಸುರಕ್ಷತೆಯ ಸಲುವಾಗಿ ಪೂರ್ತಿ ಹಾರ್ಡವೆರ್ ಸಲಕರಣೆಗಳನ್ನೇ ಬದಲಾಯಿಸಬೇಕಾಗುತ್ತದೆ. ಆರ್ಥಿಕ ಹೆಚ್ಚು ವೆಚ್ಚ ಬರುವುದರಿಂದ ಮತ್ತು ವಿನ್ಯಾಸ ರಚನೆಯ ಜ್ಙಾನದ ಕೊರತೆಯಿಂದ ಉತ್ಪಾದಕರಿಗೆ ಕೀಬೋರ್ಡ್‌ನನ್ನು ವ್ಯವಸ್ಥಿತವಾಗಿ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ. ಹಲವು ಕೀಬೋರ್ಡ್‌ಗಳನ್ನು ಹೊಂದಿರುವ ಕಛೇರಿಗಳಲ್ಲಿ ವಾಗ್ನುಕ್ಸ್ ಮತ್ತು ಪಾಸಿನಿ ಎಂಬುವವರು ಪ್ರತಿ ಕೀಬೋರ್ಡ್‌ಗೆ ಬೆರಳಚ್ಚು ಅಳವಡಿಸುವುದರ ಮೂಲಕ ಇಂತಹ ಚಟುವಟಿಕೆಗಳನ್ನು ಪತ್ತೆ ಹಚ್ಚಿದರು. ಹಲವು ಕೀಬೋರ್ಡ್‌ಗಳು ಒಂದೇ ಸಮಯಕ್ಕೆ ವಿಕಿರಣ ಸೂಸುವಾಗ ಪ್ರತ್ಯೇಕ ಕೀಬೋರ್ಡ್‌ನನ್ನು ಈ ವಿಜ್ಙಾನಿಗಳು ಗುರುತಿಸಲು ಯಶಸ್ವಿಯಾದರು.
ದೈಹಿಕ ಗಾಯಗಳು
ಬದಲಾಯಿಸಿಕೀಬೋರ್ಡ್ ಬಳಕೆಯಿಂದ (ಅಂದರೆ, ಕಾರ್ಪಲ್ ಟನ್ನೆಲ್ ಸಿಂಡ್ರೋಮ್ ಅಥವಾ ಇತರೆ ಪುನರಾವರ್ತನೆಗೊಳ್ಳಬಲ್ಲ ಎಳೆಯುವಿಕೆಯ ಗಾಯ) ಕೈಗಳಿಗೆ, ಮಣಿಕಟ್ಟಿಗೆ, ತೋಳುಗಳಿಗೆ, ಕುತ್ತಿಗೆ ಅಥವಾ ಬೆನ್ನಿಗೆ ಗಂಭೀರ ಗಾಯಗಳಾಗಬಹುದು. ಗಂಟೆಗೆ ಹಲವು ಬಾರಿ ಆಗಾಗ ಚಿಕ್ಕ ವಿರಾಮ ತೆಗೆದುಕೊಳ್ಳುವ ಮೂಲಕ ಇಂತಹ ಗಾಯವಾಗುವಿಕೆಯ ತೊಂದರೆಯನ್ನು ನೀಗಿಸಬಹುದಾಗಿದೆ. ಅಲ್ಲದೇ ಬಳಕೆದಾರರು ತಾವು ಭಿನ್ನ ಕಾರ್ಯಗಳನ್ನು ಮಾಡುವ ಮೂಲಕ ಕೈಗಳು ಮತ್ತು ಮಣಿಕಟ್ಟುಗಳಿಗೆ ಆಗುವ ಗಾಯದ ಸಾಧ್ಯತೆಯನ್ನು ತಪ್ಪಿಸಬಹುದಾಗಿದೆ. ಕೀಬೋರ್ಡಿನಲ್ಲಿ ಬರೆಯುವಾಗ ವ್ಯಕ್ತಿ ತನ್ನ ತೋಳುಗಳನ್ನು ವಿಶ್ರಾಮಿತ ಸ್ಥಿತಿಯಲ್ಲಿಡಬೇಕು ಮತ್ತು ಕೀಬೋರ್ಡ್ ಮತ್ತು ಮೌಸ್ ಹತ್ತಿರದಲ್ಲಿಟ್ಟುಕೊಳ್ಳಬೇಕು. ಕುರ್ಚಿಯ ಎತ್ತರ ಮತ್ತು ಕೀಬೋರ್ಡ್ ಟ್ರೇ ಸರಿಯಾಗಿರುವಂತೆ ಹೊಂದಿಸಿಕೊಳ್ಳಬೇಕು ಹಾಗೂ ಮಣಿಕಟ್ಟುಗಳನ್ನು ಟೇಬಲ್ಲಿನ ಚೂಪಾದ ತುದಿಗಳಿಗೆ ತಾಕುವಂತೆ ಇಟ್ಟುಕೊಳ್ಳಬಾರದು. ಮಣಿಕಟ್ಟು ಅಥವಾ ಹಸ್ತ ರಕ್ಷಕಗಳನ್ನು ಬರೆಯುವಾಗ ಉಪಯೋಗಿಸಬಾರದು.
ಕೆಲವು ವಿಶೇಷ ಕೀಬೋರ್ಡ್, ಮೌಸ್ ಬದಲಿ ಮತ್ತು ಪೆನ್ ಟ್ಯಾಬ್ಲೆಟ್ ಇಂಟರ್‌ಫೇಸ್‌ಗಳಿಂದ ಹಿಡಿದು ದ್ವನಿ ಗ್ರಹಣ ತಂತ್ರಾಂಶಗಳಂತಹ ಹೊಂದಿಕೆ ತಂತ್ರಜ್ಞಾನಗಳು ಇಂತಹ ಗಾಯದ ಸಾಧ್ಯತೆಗಳನ್ನು ಕಡಿಮೆ ಮಾಡುತ್ತವೆ. ತಡೆಹಿಡಿಯುವ ತಂತ್ರಾಂಶವು ಬಳಕೆದಾರರಿಗೆ ಆಗಾಗ ತಡೆಹಿಡಿಯುವುದನ್ನು ನೆನಪಿಸುತ್ತದೆ. ಹೆಚ್ಚು ದಕ್ಷವಾದ, ಅಂದರೆ ವರ್ಟಿಕಲ್ ಮೌಸ್ ಅಥವಾ ಜಾಯ್‌ಸ್ಟಿಕ್ ಹೆಚ್ಚು ಬಾರಿ ಉತ್ತಮವಾಗಿರುತ್ತದೆ. ಗ್ರಾಫಿಕ್ ಟ್ಯಾಬ್ಲೆಟ್ ಅಥವಾ ಒಂದು ಟ್ರಾಕ್ ಪ್ಯಾಡ್ ಜೊತೆಗೆ ಮೌಸ್ ಬಳಕೆಯ ಬದಲಾಗಿ ಸ್ಟೈಲಸ್ ಪೆನ್ ಬಳಸುವುದು ಕೈಗಳಿಗೆ ಮತ್ತು ತೋಳುಗಳಿಗೆ ಉಂಟಾಗಬಹುದಾದ ತೊಂದರೆಗಳನ್ನು ಕಡಿಮೆ ಮಾಡುತ್ತದೆ.
ಇವನ್ನೂ ಗಮನಿಸಿ
ಬದಲಾಯಿಸಿ- ಡಿಜಿಟಲ್ ಪೆನ್
- ವೃದ್ಧಿಗೊಂಡ ಕೀಬೋರ್ಡ್
- ದಕ್ಷತಾ ಶಾಸ್ತ್ರದ ಕೀಬೋರ್ಡ್
- ಕಿಬೋರ್ಡ್ ವಿನ್ಯಾಸ
- ಕಿಬೋರ್ಡ್ ತಂತ್ರಜ್ಞಾನ
- ಕೀ ಪಂಚ್
- ಲೋಹದ ಕೀಬೋರ್ಡ್
- ಒವರ್‌ಲೆ ಕೀಬೋರ್ಡ್
- ಪುನರಾವರ್ತನಾ ಕಷ್ಟದ ಗಾಯ
- ಸೀಸರ್-ಸ್ವಿಚ್
- ಸ್ಟೆನೋ ಟೈಪ್
- ಕೀಬೋರ್ಡ್ ಶಾರ್ಟ್‌ಕಟ್‌ನ ಪಟ್ಟಿ
ಟಿಪ್ಪಣಿಗಳು ಮತ್ತು ಆಕರಗಳು
ಬದಲಾಯಿಸಿ- ↑ "Standard Keyboard Layouts".
- ↑ http://www.fentek-ind.com/usb.htm
- ↑ "ಆರ್ಕೈವ್ ನಕಲು". Archived from the original on 2016-03-05. Retrieved 2021-08-09.
- ↑ ರಿಮೋಟ್ ಡೆಸ್ಕ್‌ಟಾಪ್ ಸಂಪರ್ಕವನ್ನು ಉಪಯೋಗಿಸಿದಾಗ ಡಿಫಾಲ್ಟ್ ಕೀಬೋರ್ಡ್ ಲೇಔಟ್, ವಿಂಡೋಸ್ ಎಕ್ಸ್‌ಪಿ ಆಧಾರಿತ ಕಂಪ್ಯೂಟರ್‌ಗೆ (ಮೈಕ್ರೊಸಾಫ್ಟ್) ಸಂಪರ್ಕಗೊಳ್ಳಲು ಬದಲಾವಣೆಗೊಳ್ಳುತ್ತದೆ.
- ↑ ಮ್ಯಾಕ್ ಒಎಸ್ X: ಒಂದು ಖಾತೆಯ ಪಾಸ್‌ವರ್ಡ್ ಅನ್ನು ಬದಲಾಯಿಸುವ ಅಥವಾ ಮರುಹೊಂದಿಕೆ ಮಾಡುವುದು(ಆಪಲ್)
- ↑ MEPIS 8.5 ಬಳಕೆದಾರರ ಕೈಪಿಡಿ Archived 2010-12-07 ವೇಬ್ಯಾಕ್ ಮೆಷಿನ್ ನಲ್ಲಿ. (MEPISlovers.org)
- ↑ ಆನ್ ಇಂಟ್ರಡಕ್ಷನ್ ಟು ಲಿನಕ್ಸ್ ಮಿಂಟ್ 8- ಮೈನ್ ಎಡಿಷನ್ (ಹೆಲೆನಾ) Archived 2010-12-25 ವೇಬ್ಯಾಕ್ ಮೆಷಿನ್ ನಲ್ಲಿ. ಲಿಬೇರಿಯನ್‌ಗೀಕ್
- ↑ "Use a keyboard layout for a specific language". Retrieved 2010-10-07.
- ↑ "How to Change Keyboard Layout in Ubuntu". Retrieved 2010-10-07.
- ↑ "Changing The Language & Keyboard Layout On Various Distributions". Retrieved 2010-10-07.
- ↑ "Change the default keyboard layout". Archived from the original on 2010-09-12. Retrieved 2010-10-07.
- ↑ "The Microsoft Keyboard Layout Creator". Retrieved 2010-10-07.
- ↑ "Change Keyboard Layout". Retrieved 2010-10-07.
- ↑ ಎ ಪ್ಯಾಷನ್ ಫಾರ್ ದಿ ಕೀಸ್: ಪರ್ಟಿಕ್ಯೂಲರ್ ಅಬೌಟ್ ವಾಟ್ ಯು ಟೈಪ್ ಆನ್?ರಿಲ್ಯಾಕ್ಸ್– ಯು ಆರ್ ನಾಟ್ ಅಲೋನ್. ಲೂಸ್ ವೈರ್-ಜೆರೆಮಿ ವಾಗ್‌ಸ್ಟಾಫ್, ವಾಲ್ ಸ್ಟ್ರೀಟ್ ಜರ್ನಲ್, ನವೆಂಬರ್ ೨೩, ೨೦೦೭
- ↑ ಡಾನ್ಸ್ ಡಾಟಾ ರಿವ್ಯೂ: IBM ೪೨H೧೨೯೨ ಮತ್ತು ೧೩೯೧೪೦೧ ಕೀಬೋರ್ಡ್, ರಿವ್ಯೂ ಡೇಟ್: ೧೫ ಆಗಸ್ಟ್ ೧೯೯೯, ಪರಿಷ್ಕೃತ ೧೩-Nov-೨೦೦೭
- ↑ "ಯುವಿ- ಕೀ ಬೋರ್ಡ್ ಲೇಪನ". Archived from the original on 2011-07-15. Retrieved 2011-02-18.
- ↑ http://cups.cs.cmu.edu/soups/೨೦೦೬/posters/herley-poster_abstract.pdf
- ↑ "ಆರ್ಕೈವ್ ನಕಲು". Archived from the original on 2019-09-25. Retrieved 2011-02-18.
- ↑ http://www.newscientist.com/blogs/shortsharpscience/೨೦೦೮/೧೦/a-spy-on-every-desk---keyboard.html
- ↑ ಬರ್ಕಲಿ ಲ್ಯಾಬ್.ಇಂಟೆಗ್ರೇಟೆಡ್ ಸೇಫ್ಟಿ ಮ್ಯಾನೇಜ್‌ಮೆಂಟ್: ಎಗ್ರೊನೊಮಿಕ್ಸ್. ಜಾಲತಾಣ9 ಜುಲೈ 2008ರಂದು ಪಡೆಯಲಾಯಿತು
ಬಾಹ್ಯ ಕೊಂಡಿಗಳು
ಬದಲಾಯಿಸಿ- How Computer Keyboards Work at HowStuffWorks
- ಆರ್ಟ್ ಆಪ್ ಅಸೆಂಬ್ಲಿ ಲಾಂಗ್ವೇಜ್: ಚಾಪ್ಟರ್ ಟ್ವೆಂಟಿ:ದಿ ಪಿಸಿ ಕೀಬೋರ್ಡ್ Archived 2012-12-12 at Archive.is
- ಕೀಬೋರ್ಡ್ ಮ್ಯಾಟ್ರಿಕ್ಸ್ ಸರ್ಕೀಟ್ಗಳು
- ಕೀ ಮ್ಯಾಟ್ರಿಕ್ಸ್ ಹೇಗೆ ಕೆಲಸ ಮಾಡುತ್ತದೆ
- PC ವರ್ಲ್ಡ್. "ದಿ 10 ವರ್ಸ್ಟ್ ಪಿಸಿ ಕೀಬೋರ್ಡ್ಸ್ ಆಫ್ ಆಲ್ ಟೈಮ್ ".
- ಐಬಿಎಮ್'ನ 84-ಕೀ ಪಿಸಿ ಕೀ ಬೋರ್ಡ್
Esc | F1 | F2 | F3 | F4 | F5 | F6 | F7 | F8 | F9 | F10 | F11 | F12 | PrtScn/ SysRq |
ScrLk | Pause/ Break |
|||||||||
Insert | Home | PgUp | Num Lock |
/ | * | - | ||||||||||||||||||
Delete | End | PgDn | 7 | 8 | 9 | + | ||||||||||||||||||
4 | 5 | 6 | ||||||||||||||||||||||
↑ | 1 | 2 | 3 | Enter | ||||||||||||||||||||
← | ↓ | → | 0 Ins |
· Del |