ಕೀಟೊ ಆಮ್ಲಗಳು
ಕೀಟೊ (-ಅಔ) ಮತ್ತು ಆಮ್ಲೀಯ (-ಅಔಔಊ) ಗ್ರೂಪುಗಳನ್ನು ಹೊಂದಿರುವ ಸಂಯುಕ್ತಗಳು, ಪರಿಣಾಮವಾಗಿ ಈ ಎರಡು ವರ್ಗದ ಸಾವಯವ ವಸ್ತುಗಳ ಲಕ್ಷಣಗಳನ್ನೂ ಪಡೆದಿವೆ. ಆಮ್ಲೀಯ ಗ್ರೂಪಿನ ಪಕ್ಕದಲ್ಲೇ ಕೀಟೊ ಗ್ರೂಪೂ ಇದ್ದರೆ ಆಲ್ಫಾ ಕೀಟಾನಿಕ್ ಆಮ್ಲವಾಗುತ್ತದೆ. ಆಮ್ಲೀಯ ಗ್ರೂಪಿನಿಂದ ಎರಡನೆಯ ಸ್ಥಾನದಲ್ಲಿ ಕೀಟೊ ಗ್ರೂಪಿದ್ದರೆ ಬೀಟಾಕೀಟಾನಿಕ್ ಆಮ್ಲವೆಂದೂ ಮೂರನೆಯ ಸ್ಥಾನದಲ್ಲಿದರೆ ಗ್ಯಾಮಾ ಕೀಟಾನಿಕ್ ಆಮ್ಲವೆಂದೂ ಕರೆಯಲಾಗುವುದು. ಇವುಗಳಿಗೆ ಉದಾಹರಣೆಯಾಗಿ ಪೈರೂವಿಕ್ ಅಸಿಟೊ ಅಸಿಟಿಕ್ ಮತ್ತು ಲೆವುಲೀನಿಕ್ ಆಮ್ಲಗಳನ್ನು ಹೆಸರಿಸಬಹುದು. ಈ ಆಮ್ಲಗಳ ರಚನಾಸೂತ್ರಗಳು ಹೀಗಿವೆ.
ಪೈರೂವಿಕ್ ಆಮ್ಲ
ಬದಲಾಯಿಸಿಅತಿ ಸರಳ ಕೀಟೊ ಆಮ್ಲವಿದು. ಶರ್ಕರ ಪಿಷ್ಟಾದಿಗಳು ಮತ್ತು ಪ್ರೋಟೀನುಗಳು ಅಂತಿಮವಾಗಿ ಜೀವದ್ರವ್ಯವಾಗುವಾಗ ಪೈರೂವಿಕ್ ಆಮ್ಲ ಮಧ್ಯಾಂತರ ವಸ್ತುವಾಗಿ ಉತ್ಪತ್ತಿಯಾಗುವುದೆಂದು ನಂಬಲಾಗಿದೆ. ಹಣ್ಣುಗಳಿಂದ ತಯಾರಿಸಬಹುದು. ಇದನ್ನು ಏಕಾಂಗಿಯಾಗಿಯೋ ಪೊಟ್ಯಾಸಿಯಂ ಬೈ ಸಲ್ಫೇಟಿನೊಂದಿಗೋ 2100-2200 ಸೆಂ. ಉಷ್ಣತಾಮಿತಿಯಲ್ಲಿ ಕಾಯಿಸಿದಾಗ ಪೈರೂವಿಕ್ ಆಮ್ಲ ಕೆಳಕಂಡಂತೆ ಉಂಟಾಗುತ್ತದೆ.ಇದಕ್ಕೆ ಪೈರೂವಿಕ್ ಆಮ್ಲವೆಂದು ಹೆಸರಾಗಲು ಮೇಲ್ಕಂಡ ತಯಾರಿಕೆಯ ವಿಧಾನವೇ ಕಾರಣ (ಗ್ರೀಕ್‍ನಲ್ಲಿ ಠಿಥಿಡಿ ಎಂದರೆ ಬೆಂಕಿ, ಐ. uvಚಿ ಎಂದರೆ ದ್ರಾಕ್ಷಿ),ಡೈಬ್ರೋಮೊ ಪ್ರೋಪಿಯೋನಿಕ್ ಆಮ್ಲವನ್ನು ಜಲವಿಶ್ಲೇಷಣೆ ಮಾಡಿದಾಗಲೂ ಪೈರೂವಿಕ್ ಆಮ್ಲ ಬರುತ್ತದೆ. ಪೈರೂವಿಕ್ ಆಮ್ಲ ಬಣ್ಣವಿಲ್ಲದ ದ್ರವವಸ್ತು. 1650 ಸೆಂ. ಉಷ್ಣತೆಯಲ್ಲಿ ಕುದಿಯುತ್ತದೆ. ನೀರು, ಆಲ್ಕೊಹಾಲ್ ಮತ್ತು ಈಥರುಗಳಲ್ಲಿ ಸರಾಗವಾಗಿ ಬೆರೆಯುವುದು. ಕೀಟೊ ಗ್ರೂಪಿರುವ ಪ್ರಯುಕ್ತ ಆಕ್ಸೀಮ್ ಫೀನೈಲ್ ಹೈಡ್ರಜೊóೀನುಗಳನ್ನು ಕೊಡುವುದು. ಹೈಡ್ರೊಸಯನಿಕ್ ಆಮ್ಲವನ್ನು ಕೂಡಿಸಿಕೊಳ್ಳುವುದು. ಜಲ ಮಾಧ್ಯಮದಲ್ಲಿ ಸೋಡಿಯಂ ಆಮಾಲ್ಗಂನಿಂದ ಅಪಕರ್ಷಿಸಿದಾಗ ಲ್ಯಾಕ್ಟಿಕ್ ಆಮ್ಲವಾಗುತ್ತದೆ.
ಆಮ್ಲೀಯ ಗ್ರೂಪಿನ ದೆಸೆ
ಬದಲಾಯಿಸಿಆಮ್ಲೀಯ ಗ್ರೂಪಿನ ದೆಸೆಯಿಂದ ಲವಣಗಳು, ಎಸ್ಟರುಗಳು ಮತ್ತು ಇತರ ಆಮ್ಲೀಯ ವ್ಯುತ್ಪನ್ನಗಳು ಉಂಟಾಗುವುವು. 10% ಸಲ್ಫ್ಯೂರಿಕ್ ಆಮ್ಲದೊಡನೆ ಮೊಹರಾದ ನಳಿಗೆಯಲ್ಲಿ ಕಾಯಿಸಿದಾಗ ಅಸಿಟಾಲ್ಡಿಹೈಡ್ ಮತ್ತು ಇಂಗಾಲದ ಡೈ ಆಕ್ಸೈಡುಗಳು ದೊರೆಯುವುವು. ಅಊ3 -ಅಔ. ಅಔಔಊ ಅಊ3. ಅಊಔ + ಅಔ2 ಬೀಟಾ ಕೀಟಾನಿಕ್ ಆಮ್ಲಗಳನ್ನು ಕಾಯಿಸಿದಾಗ ಕೀಟೋನುಗಳು ಉಂಟಾಗುವುವು. ಆದ್ದರಿಂದ ಆಲ್ಫಾ ಮತ್ತು ಬೀಟಾ ಕೀಟಾನಿಕ್ ಆಮ್ಲಗಳನ್ನು ಈ ಕ್ರಿಯೆಯ ಸಹಾಯದಿಂದ ಗುರುತಿಸಬಹುದು. ಆದರೆ ಪ್ರಬಲ ಸಲ್ಫ್ಯೂರಿಕ್ ಆಮ್ಲದೊಡನೆ ಸ್ವಲ್ಪ ಕಾಯಿಸಿದಾಗ ಅಸಿಟಿಕ್ ಆಮ್ಲ ಮತ್ತು ಇಂಗಾಲದ ಮಾನಾಕ್ಸೈಡ್ ಬರುತ್ತವೆ.[೧] ಅಊ3 -ಅಔ. ಅಔಔಊ ಅಊ3. ಅಔಔಊ + ಅಔ ಈ ವಿಧಾನವನ್ನು ಅನುಸರಿಸಿ ಸಾವಯವ ಆಮ್ಲದ ಅಣುವಿನಲ್ಲಿರುವ ಇಂಗಾಲದ ಪರಮಾಣುಗಳನ್ನು ಒಂದೊಂದಾಗಿ ಹಂತ ಹಂತವಾಗಿ ಕಡಿಮೆ ಮಾಡಬಹುದು. ಉದಾಹರಣೆಗೆ
ಅಸಿಟೊ ಅಸಿಟಿಕ್ ಆಮ್ಲ
ಬದಲಾಯಿಸಿಅತಿ ಸರಳಾ ಬೀಟಾ ಕೀಟಾನಿಕ್ ಆಮ್ಲವಿದು. ಆರ್ಯೋಗವಂತನಾದವನ ಮೂತ್ರದಲ್ಲಿ ಅಲ್ಪ ಪ್ರಮಾಣದ ಅಸಿಟೊ ಅಸಿಟಿಕ್ ಆಮ್ಲ ಇರುತ್ತದೆ. ಇದು ಅಸ್ಥಿರ ವಸ್ತು. ಬೀಟಾ ಹೈಡ್ರಾಕ್ಸಿ ಬ್ಯುಟಿರಿಕ್ ಆಮ್ಲವನ್ನು ಉತ್ಕರ್ಷಿಸಿ ಅಥವಾ ಅಸಿಟೊ ಅಸಿಟಿಕ್ ಎಸ್ಟರನ್ನು ತಣ್ಣಗಿರುವ ದುರ್ಬಲ ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣದೊಡನೆ ವರ್ತಿಸುವಂತೆ ಮಾಡಿ ಇದನ್ನು ಪಡೆಯಬಹುದು. ಕ್ರಿಯಾಶೀಲ ಮೆಥಿಲೀನ್ ಗ್ರೂಪಿರುವುರಿಂದ (-ಅಊ2-) ಈ ಆಮ್ಲದ ಎಸ್ಟರು ಸಂಯೋಜನ ರಸಾಯನವಿಜ್ಞಾನದಲ್ಲಿ ಪ್ರಸಿದ್ಧವಾಗಿದೆ. ಪಾಕದಂತಿರುವ ದ್ರವವಸ್ತುವಿನ ರೂಪದಲ್ಲಿ ಈ ಆಮ್ಲ ಪರಿಚಿತವಾಗಿದೆ. ಅದರ ಹರಳುಗಳು 360 ಸೆಂ. ಉಷúತೆಯಲ್ಲಿ ದ್ರವೀಕರಿಸುತ್ತವೆ. ನೀರಿನೊಡನೆ ಸರಾಗವಾಗಿ ಬೆರೆಯಬಲ್ಲದು. ಫೆರಿಕ್ ಕ್ಲೋರೈಡ್ ದ್ರಾವಣದ ಸಂಪರ್ಕದಲ್ಲಿ ದಟ್ಟ ಕೆಂಪು ನೇರಿಳೆ ಬಣ್ಣ ಕೊಡುವುದು. ಅಯೊಡೊಫಾರಂ ಪರೀಕ್ಷೆಯನ್ನು ಉತ್ತರಿಸುತ್ತದೆ. ಕಾಯಿಸಿದಾಗ ಸುಲಭವಾಗಿ ವಿಭಜಿಸುವುದು. ಉಷ್ಣ ಅಊ3. ಅಔ. ಅಊ2 .ಅಔಔಊಅಊ3. ಅಔ. ಅಊ3 + ಅಔ2
ಅಸಿಟೋನ್
ಬದಲಾಯಿಸಿಮಧುಮೇಹ ರೋಗಿಗಳಲ್ಲಿ ತಲೆದೋರುವ ಅಸಿಟೋನೂರಿಯ ಸ್ಥಿತಿಯಲ್ಲಿ ಅಸಿಟೋನು ಉತ್ಪತ್ತಿಯಾಗುವುದು ಹೀಗೆಯೇ, ಅಸಿಟೊ ಅಸಿಟಿಕ್ ಆಮ್ಲ ಬೀಟಾಹೈಡ್ರಾಕ್ಸಿ ಬ್ಯುಟರಿಕ್ ಆಮ್ಲ ಮತ್ತು ಅವುಗಳ ಎಸ್ಟರುಗಳನ್ನು ಅಸಿಟೋನ್ ಕಾಯಗಳೆಂದು ಕರೆಯುತ್ತಾರೆ. ಪ್ರಾಣಿದೇಹದಲ್ಲಿ ಕೊಬ್ಬು ಜಲವಿಶ್ಲೇಷಿತವಾಗಿ ಆಮ್ಲಗಳು ಹುಟ್ಟುತ್ತವೆ. ಇವು ದಹಿಸಿದಾಗ ಪ್ರತಿ ಹಂತದಲ್ಲೂ ಇಂಗಾಲದ ಎರಡು ಪರಮಾಣುಗಳನ್ನು ಕಳೆದುಕೊಂಡು ಬೀಟಾ ಹೈಡ್ರಾಕ್ಸಿ ಮತ್ತು ಬೀಟಾ ಕೀಟಾನಿಕ್ ಆಮ್ಲಗಳನ್ನು ಕೊಡುವುವು. ಅಂತ್ಯಪೂರ್ವಹಂತದಲ್ಲಿ ಅಸಿಟೊ ಅಸಿಟಿಕ್ ಆಮ್ಲ ಅಸಿಟಿಕ್ ಆಮ್ಲವಾಗುವುದು. ಹೀಗಾಗಲು ಏಕಕಾಲದಲ್ಲಿ ಶರ್ಕರ ಪಿಷ್ಟಾದಿಗಳ ದಹನವಾಗಬೇಕು. ಇದಕ್ಕೆ ಇನ್ಸುಲಿನ್ ಎಂಬ ಹಾರ್ಮೋನ್ ಅಗತ್ಯ. ಮಧುಮೇಹ ರೋಗಿಯಲ್ಲಿ ಇನ್ಸುಲಿನ್ ಕೊರತೆಯಿರುವುದರಿಂದ ಶರ್ಕರ ಪಿಷ್ಟಾದಿಗಳು ಗ್ಲೂಕೋಸ್ ರೂಪದಲ್ಲಿ ಮೂತ್ರದಲ್ಲಿ ವಿಸರ್ಜಿತವಾಗುತ್ತವೆ. ರಕ್ತದಲ್ಲಿ ಅಸಿಟೊ ಅಸಿಟಿಕ್ ಆಮ್ಲದ ಪ್ರಮಾಣ ಹೆಚ್ಚಿ ಅಸಿಟೋನಿನ ಉತ್ಪನ್ನ ಅನಿವಾರ್ಯವಾಗುತ್ತದೆ.[೨]
ಲೆವುಲೀನಿಕ್ ಆಮ್ಲ
ಬದಲಾಯಿಸಿಲೆವುಲೋಸ್ (ಫ್ರಕ್ಟೋಸ್) ಅಥವಾ ಸುಕ್ರೋಸ್ (ಕಬ್ಬಿನ ಸಕ್ಕರೆ) ಸಕ್ಕರೆಯನ್ನು ಪ್ರಬಲ ಹೈಡ್ರೋಕ್ಲೋರಿಕ್ ಆಮ್ಲದೊಡನೆ ಕಾಯಿಸಿ ಈ ಗ್ಯಾಮಾ ಕೀಟಾನಿಕ್ ಆಮ್ಲವನ್ನು ತಯಾರಿಸಬಹುದು.ಅಸಿಟೊ ಅಸಿಟಿಕ್ ಎಸ್ಟರಿನಿಂದಲೂ ಈ ಆಮ್ಲವನ್ನು ಪಡೆಯಬಹುದು.ಇದೊಂದು ಹರಳುರೂಪದ ಘನವಸ್ತು. 340 ಸೆಂ. ಉಷ್ಣತೆಯಲ್ಲಿ ದ್ರವಿಸುತ್ರದೆ. ನೀರು ಆಲ್ಕೋಹಾಲ್ ಮತ್ತು ಈಥರಿನಲ್ಲಿ ದ್ರಾವ್ಯ. ಇದರ ಎಸ್ಟರಿನಲ್ಲಿ ಕ್ರಿಯಾಶೀಲ ಮೆಥಿಲೀನ್ ಗ್ರೂಪಿಲ್ಲ. ಆದ್ದರಿಂದ ರಾಸಾಯನಿಕ ಸಂಯೋಜನೆಯಲ್ಲಿ ಅಸಿಟೊ ಅಸಿಟಿಕ್ ಎಸ್ಟರಿನಂತೆ ಪ್ರಮುಖಪಾತ್ರ ವಹಿಸಲಾರದು. ಸಾಮಾನ್ಯ ಉಷúತೆಯಲ್ಲಿ ವಿಭಜಿಸದಿರುವುದು ಇದರ ವೈಶಿಷ್ಟ್ಯ.
ಉಲ್ಲೇಖಗಳು
ಬದಲಾಯಿಸಿ- ↑ https://janabandi.wordpress.com/category/%E0%B2%B0%E0%B3%87%E0%B2%96%E0%B3%86%E0%B2%97%E0%B2%B3%E0%B2%B2%E0%B3%8D%E0%B2%B2%E0%B2%BF-%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8%E0%B2%BF/page/3/
- ↑ http://m.dailyhunt.in/news/india/kannada/kannada+dunia-epaper-kannadad/madhumehigalige+sakkare+rahita+sihitindi-newsid-46248822