ಮೆಕ್ಯಾನಿಕಲ್ ಇಂಜಿನಿಯರಿಂಗ್‍ನಲ್ಲಿ “ಕೀ(ಕೀಲಿ)”ಯನ್ನು ಯಂತ್ರಗಳ ತಿರುಗುವ ಭಾಗಗಳನ್ನು ಮತ್ತು ಶಾಫ್ಱ್ ಜೋಡಿಸಲು ಬಳಸುತ್ತಾರೆ. ‘ಕೀ’ಯನ್ನು ಎರಡು ಭಾಗಗಳ ನಡುವಣ ಸಾಪೇಕ್ಷ ಚಲನೆಯನ್ನು (Relative Motion) ತಡೆಗಟ್ಟಲು ಮತ್ತು ಟಾರ್ಕ್(Torque) ಪ್ರಸರಣದ ಸಕ್ರಿಯಗೊಳಿಸಲು ಬಳಸಲಾಗುತ್ತದೆ. ಕೀ ಕೆಲಸ ನಿರ್ವಹಿಸಲು ಶಾಫ್ಱ್(Shaft) ಮತ್ತು ತಿರುಗುವ ಭಾಗಗಳು ಕೀಲಿದಾರಿ(Key way) (ಕೀಲಿ)ಮತ್ತು ಕೀ ಸೀಟ್(Key seಅt)ಅನ್ನು ಹೊಂದಿರಬೇಕು. ಕೀ ಮಾರ್ಗ(Key way(ಕೀ ವೇ))ಅಥವಾ ಕೀ ಸೀಟ್(Key set) ಎಂದರೆ ಸೀಳುಗಂಡಿ ಅಥವಾ ಹಲ್ಲು ಚಕ್ರದ ಹಲ್ಲು(Sproket). ಈ ಸಂಪೂರ್ಣ ವ್ಯವಸ್ಥೆಯನ್ನು ಕೀಡ್ ಜಾಯಿ೦ಟ್(Keyed Joint)ಎನ್ನುತ್ತಾರೆ.[೧][೨] ಒಂದು ಕೀಡ್ ಜಾಯಿ೦ಟ್(Keyed Joint)ಎರಡು ಭಾಗಗಳ ಸಂಬಂಧಿತ ಅಕ್ಷೀಯವಾಗಿ ಚಲಿಸಲು ಅನುಮತಿಸುತ್ತದೆ.

ಸಾಮಾನ್ಯವಾಗಿ ಇರುವ ಭಾಗಗಳು ಎಂದರೆ- ಗೇರ್‍ಗಳು(gears), ರಾಟೆಗಳು(pulleys), ಕಪ್ಲಿಂಗ್‍ಗಳು(couplings), ಮತ್ತು ವಾಷರ್‍ಗಳು.

ವಿಧಗಳುಸಂಪಾದಿಸಿ

ಕೀ ಗಳಲ್ಲಿ ಮೂರು ವಿಧಗಳಿವೆ.

 1. ಸಂಕ್ ಕೀ
 1. ಸಾಡಲ್ ಕೀ ಮತ್ತು ಟಾಂಜೆಂಟ್ ಕೀ
 1. ರೌಂಡ್ ಕೀ ಮತ್ತು ಸ್ಪ್ಲೈನ್ ಕೀ

ಸಂಕ್ ಕೀಸಂಪಾದಿಸಿ

ಸಂಕ್ ಕೀ(Sunk key)ಯ ವಿಧಗಳು

 1. ಆಯತಾಕಾರ(Rectangular)
 2. ಚೌಕಕಾರ(Square)
 3. ಸಮನಾಂತರ(Parallel sunk)
 4. ಗಿಬ್-ತಲೆ(Gib-head)
 5. ಫೆತೆರ್(Feather)
 6. ವುಡ್‍ರಫ್(Woodruff)

ಪ್ಯಾರಲಲ್ ಕೀ(Parallel keys)ಸಂಪಾದಿಸಿ

ಪ್ಯಾರಲಲ್ ಕೀ ಯು ಅತಿ ಹೆಚ್ಚಾಗಿ ಬಳಕೆಯಲ್ಲಿದೆ. ಇದು ಅಡ್ಡ-ಕೊಯ್ತ ದಲ್ಲಿ ಚೌಕ ಅಥವಾ ಆಯತಾಕಾರ ವನ್ನು ಹೊಂದಿದೆ. ಚಿಕ್ಕ ಶಾಫ್ಟ್ ಗಳಲ್ಲಿ ಮತ್ತು ಆಯತಾಕಾರವಾದ ಕೀ ಯನ್ನು ಸುಮಾರು 6.5 ವರೆಗಿನ ವ್ಯಾಸವನ್ನು ಹೊಂದಿರುವ ಶಾಫ್ಟ್ ಗಳಲ್ಲಿ ಅಥವಾ ಜೋಡಿಸುವ ಹಬ‍್‍ನ ದಪ್ಪವು ಒಂದು ವಿಷಯವಾಗಿದ್ದರೆ ಚೌಕ ಕೀ ಅನ್ನು ಬಳಸುತ್ತಾರೆ. ಜೋಡಿಸುವ ಭಾಗಗಳನ್ನು ಅದರ ಜಾಗದಲ್ಲಿ ಕೂರಿಸಿ, ಬಂಧಿಸಲು ಕೆಲವೊಮ್ಮೆ ಪ್ಯಾರಲಲ್ ಕೀ ಜತೆಗೆ ಸೆಟ್ ಸ್ಕೃಗಳನ್ನು ಬಳಸುತ್ತಾರೆ.[೩] ಕೀಲಿದಾರಿ(keyway)ಯು ಮಿಲನದ ಭಾಗ ಮತ್ತು ಶಾಫ್ಟ್ ಎರಡರಲ್ಲಿಯೂ ಉದ್ದುದ್ದವಾದ ಸೀಳುಗಂಡಿಯಾಗಿದೆ.

ಗಿಬ್-ತಲೆ ಕೀಗಳು(Gib-head keys)ಸಂಪಾದಿಸಿ

ಗಿಬ್ ಕೀಗಳು, ಅಥವಾ ಗಿಬ್ ಹೆಡ್ ಕೀಗಳು, ಮೊನಚಾದ ಯಂತ್ರ ಕೀಲಿಗಳಾಗಿವೆ, ಇವುಗಳನ್ನು ಕೀ ಇರುವ ಶಕ್ತಿ ಸಂವಹನ ಶಾಫ್ಱ್ ಗಳಲ್ಲಿ ,ಪುಲ್ಲಿಗಳು ಮತ್ತು ಗೇರ್‌ಗಳನ್ನು ಶಾಫ್ಟ್‌ನಲ್ಲಿ ಬಿಗಿಯಾಗಿ ಹಿಡಿದಿಡಲು ಬಳಸಲಾಗುತ್ತದೆ.

 

ವುಡ್‍ರಫ್ ಕೀಗಳು(Woodruff keys)ಸಂಪಾದಿಸಿ

ವುಡ್‍ರಫ್ ಕೀಗಳನ್ನು ಸ್ಥಾಪಿಸಿದಾಗ ಗಂಟೆ ಆಕೃತಿಯ ಕೊನೆ ಚಾಚಿಕೊಂಡಿರುವಂತೆ ಅರ್ಥವೃತ್ತಾಕಾರದ ಆಕಾರ ಹೊಂದಿರುತ್ತದೆ. ವುಡ್‍ರಫ್ ಕೀ ಯು ಅರ್ಧವೃತ್ತಾಕಾರವಾದ ಪಾಕೆಟ್(pocket), ಜೋಡಣೆ ಭಾಗ (mating part), ಉದ್ಧನೆಯ ಸೀಳುಗಂಡಿ (longitudinal slot) ಯಾಗಿರುವುದು. ಅವುಗಳನ್ನು ಅತಿ ಶರ ವೇಗದ ಕಾರ್ಯಚರಣೆಯಲ್ಲಿ ನಿರ್ಣಯಕವಾಗುವ ಶಾಫ್ಟ್ (shaft)ನಲ್ಲಿನ ಏಕ ಕೇಂದ್ರತ್ವವನ್ನು ಸುಧಾರಿಸಲು ಬಳಸುತ್ತಾರೆ. ವುಡ್‍ರಫ್ ಕೀ ಯ ಒಂದು ಮುಖ್ಯ ಲಾಭವೆಂದರೆ ಅದು ಕೀ ವೇಯನ್ನು ಶಾಫ್ಟ್ ನ ಭುಗಗಳ ಹತ್ತಿರ ಇಗಾಗಲೇ ಸ್ಟ್ರೆಸ್ ಕನ್ಸ್ ಸ್ಟ್ರಶನ್( stress concentrations)ಅನ್ನು ಹೋಂದಿರುವುದರಿಂದ ಕೀಲಿ ಮಾರ್ಗವನ್ನು ಮಿಲ್ಲಿಂಗ್(milling) ಮಾಡುವುದನ್ನು ತಪ್ಪಿಸುತ್ತದೆ. ಯಂತ್ರೋಪಕರಣಗಳಲ್ಲಿ, ವಾಹನಗಳಲ್ಲಿ, ಸ್ನೋ ಬ್ಲೋಯರ್‍ಗಳಲ್ಲಿ ಮತ್ತು ಸಮುದ್ರದ ಪ್ರೋಪೆಲರ್‍ಗಳ ಬಳಕೆಯಲ್ಲಿ ಸಾಮಾನ್ಯವಾಗಿ ಉಪಯೋಗಿಸುತ್ತಾರೆ.

ಈ ವಿಧದ ಕೀ ಯನ್ನು 1888 ರಲ್ಲಿ ಡಬ್ಲ್ಯು.ಎನ್. ವುಡ್‍ರಫ್‍ನ್ನು ಅಭಿವೃದ್ಧಿಪಡಿಸಿದನು. ಫ್ರಕ್ಲೀನ್ ಇನ್‌ಸ್ಟಿಟ್ಯೂಟ್‍ ಆತನ ಸಂಶೋಧನೆಗೆ ಜಾನ್ ಸ್ಕಾಟ್ ಪದಕಕೊಟ್ಟು ಪುರಸ್ಕರಿಸಿತು.

ಟೇಪರ್ಡ ಕೀಗಳು(Tapered keys)ಸಂಪಾದಿಸಿ

ಟೇಪರ್ಡ ಕೀ ಯು ಒಂದು ಭಾಗದಲ್ಲಿ ಕೂಚಾಗಿರುತ್ತದೆ.ಅದು ಹಭ್ (hub) ನ ಭಾಗವನ್ನು ತೊಡಗಿಸುತ್ತದೆ. hub ನಲ್ಲಿರುವ keyway ಕೂಚಾಗಿರುತ್ತದೆ. ಅದು tapered keyಯನ್ನು ಹೊಲುತ್ತದೆ. ಕೆಲವು taper keys ಗಳು gib, or tab ನ್ನು ಹೊಂದಿರುತ್ತದೆ. ಏಕೆಂದರೆ ಸುಲಭವಾಗಿ ಯಂತ್ರಗಳ ಭಾಗಗಳನ್ನು ವಿಂಗಡಿಸಲು Tapered key ಯ ಅವಶ್ಯಕತೆಯೆಂದರೆ ಕೀ ಯನ್ನು ಕಾಪಾಡಿಕೊಳ್ಳಲು, ಮತ್ತೇನೆಂದರೆshaft hub ನ್ನು ತೊಡಗಿಸುವಿಕೆಯಲ್ಲಿ set screw ನ ಅವಶ್ಯಕತೆ ಇರುವುದಿಲ್ಲ. ಇಲ್ಲದಿದ್ದಾಗ ಅದರ ತೊಡಗಿವುದಕೆಯಲ್ಲಿ ಬಳಸುತ್ತಾರೆ.

ಇತರೆಸಂಪಾದಿಸಿ

"Scotch key" or "Dutch key" ಇದು keyway ಒದಗಿಸುತ್ತದೆ. ಅದನ್ನುmilling ನಲ್ಲಿ ಮಾಡದೆ drilling ನ ಮೂಲಕ shaft ನಲ್ಲಿ ಮಾಡುತ್ತಾರೆ. tapered ಹಾಗಿದ್ದರೆ ಆ ತರಹದ ಕೀಯನ್ನು Scotch key" or "Dutch key ಎಂದು ಕರೆಯುತ್ತಾರೆ.

ಇವನ್ನೂ ನೋಡಿಸಂಪಾದಿಸಿ

ಉಲ್ಲೇಖಗಳುಸಂಪಾದಿಸಿ

 1. Bhandari, V. B. (2007), Design of machine elements (2nd ed.), Tata McGraw-Hill, p. 340, ISBN 978-0-07-061141-2.
 2. Leonard 1908, p. 394.
 3. Keys and Keyways (PDF), archived from the original (PDF) on 2010-03-19, retrieved 2010-03-19.

ಗ್ರಂಥಋಣಸಂಪಾದಿಸಿ

ಬಾಹ್ಯ ಕೊಂಡಿಗಳುಸಂಪಾದಿಸಿ

"https://kn.wikipedia.org/w/index.php?title=ಕೀ&oldid=1054382" ಇಂದ ಪಡೆಯಲ್ಪಟ್ಟಿದೆ