ಮಾನವನ ಕಿವಿಹಾಲೆಯು (ಲೊಬ್ಯುಲಸ್ ಆರಿಕ್ಯುಲೇ) ಬಿರುಸಾದ ಸರಂಧ್ರ ಹಾಗೂ ಕೊಬ್ಬುಳ್ಳ ಸಂಯೋಜಕ ಅಂಗಾಂಶಗಳಿಂದ ರಚಿಸಲ್ಪಟ್ಟಿದೆ. ಇದು ಉಳಿದ ಹೊರಗಿವಿಯಂತೆ (ಕಿವಿಯ ಬಾಹ್ಯ ರಚನೆ) ದೃಢ ಹಾಗೂ ಸ್ಥಿತಿಸ್ಥಾಪಕವಾಗಿರುವುದಿಲ್ಲ. ಕೆಲವು ಸಂದರ್ಭದಲ್ಲಿ ಕೆಳಗಿನ ಹಾಲೆಯು ಮುಖದ ಬದಿಗೆ ಜೋಡಣೆಗೊಂಡಿರುತ್ತದೆ. ಕಿವಿಹಾಲೆಯು ಮೃದ್ವಸ್ಥಿಯನ್ನು ಹೊಂದಿರುವುದಿಲ್ಲವಾದ್ದರಿಂದ[], ಇದಕ್ಕೆ ಹೇರಳವಾಗಿ ರಕ್ತದ ಪೂರೈಕೆಯಾಗುತ್ತದೆ ಮತ್ತು ಕಿವಿಗಳನ್ನು ಬೆಚ್ಚಗಿಡಲು ಹಾಗೂ ಸಮತೋಲನವನ್ನು ಕಾಪಾಡಲು ನೆರವಾಗಬಹುದು. ಆದರೆ, ಸಾಮಾನ್ಯವಾಗಿ ಕಿವಿಹಾಲೆಗಳು ಯಾವುದೇ ಪ್ರಮುಖ ಜೈವಿಕ ಕ್ರಿಯೆಯನ್ನು ಹೊಂದಿವೆ ಎಂದು ಪರಿಗಣಿಸಲಾಗಿಲ್ಲ.[] ಕಿವಿಯ ಹಾಲೆಯು ಅನೇಕ ನರತುದಿಗಳನ್ನು ಹೊಂದಿರುತ್ತದೆ, ಮತ್ತು ಕೆಲವು ಜನರಿಗೆ ಇದು ಕಾಮಪ್ರಚೋದಕ ಪ್ರದೇಶವಾಗಿರುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. Steinberg, Avraham (2003). Encyclopedia of Jewish Medical Ethics: a Compilation of Jewish Medical Law on All Topics of Medical Interest. Jerusalem: Feldheim Publishers. p. 350.
  2. Popelka (31 August 1999). "Re:Why do we have earlobes, what are they for, since when?". MadSci Network. Retrieved 16 July 2015.