ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ (ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ) (Kidwai Memorial Institute of Oncology) ಬೆಂಗಳೂರು, ಕರ್ನಾಟಕ ಸರ್ಕಾರದ ಸ್ವಾಯತ್ತತ ಸಂಸ್ಥೆ ಮತ್ತು ಭಾರತದ ಸರಕಾರದ ಪ್ರಾದೇಶಿಕ ಅರ್ಬುದ ಸಂಶೋಧನ ಮತ್ತು ಚಿಕಿತ್ಸಾ ಕೇಂದ್ರ ಆಗಿದೆ.[೨][೩][೪][೫]ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆನ್ಕಾಲಜಿ ಆಸ್ಪತ್ರೆಯಲ್ಲಿ ಬಡ ಕ್ಯಾನ್ಸರ್ ರೋಗಿಗಳಿಗೆ ಉಚಿತ ಸೇವೆಗಳನ್ನು ಒದಗಿಸುತ್ತದೆ . ಬಡ ರೋಗಿಗಳಿಗೆ ಆರ್ಥಿಕವಾಗಿ ಸಹಾಯ ಮಾಡಲು ಇನ್ಸ್ಟಿಟ್ಯೂಟ್, ಕರ್ನಾಟಕದ ಮುಖ್ಯಮಂತ್ರಿ ವೈದ್ಯಕೀಯ ಪರಿಹಾರ ನಿಧಿ, ಬಡ ರೋಗಿಗಳ ಕಲ್ಯಾಣ ನಿಧಿ, ಮಕ್ಕಳ ಕಲ್ಯಾಣ ನಿಧಿ, ಕಿದ್ವಾಯಿ ಕ್ಯಾನ್ಸರ್ ಡ್ರಗ್ ಫೌಂಡೇಶನ್ ವಿವಿಧ ಯೋಜನೆಗಳಿಂದ ಸಹಾಯ ಮಾಡಲಾಗುತ್ತದೆ.
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ | |
---|---|
Geography | |
ಸ್ಥಳ | ಬೆಂಗಳೂರು, ಕರ್ನಾಟಕ, ಭಾರತ |
ಕಕ್ಷೆಗಳು | 12°56′15″N 77°35′53″E / 12.9375°N 77.5981°E |
Organisation | |
Funding | ಕರ್ನಾಟಕ ಸರ್ಕಾರದ ಸ್ವಾಯತ್ತತ ಸಂಸ್ಥೆ |
ಅಂಗಸಂಸ್ಥೆ | ಸಂಶೋಧನ ಮತ್ತು ಚಿಕಿತ್ಸಾ ಕೇಂದ್ರ |
History | |
ಸ್ಥಾಪನೆ | 26 ಜೂನ್ 1973[೧] |
Links | |
ಜಾಲತಾಣ | kmio.karnataka.gov.in |
ಇತಿಹಾಸ
ಬದಲಾಯಿಸಿಈ ಸಂಸ್ಥೆಯ 26 ಜೂನ್ 1973 ರಂದು 50 ಹಾಸಿಗೆ ಸೌಲಭ್ಯದೊಂದಿಗೆ ಆರಂಭವಾಯಿತು.ಜನವರಿ 1980 ರಲ್ಲಿ ಸಂಸ್ಥೆಯು ಸ್ವಾಯತ್ತತಾ ಸಂಸ್ಥೆಯಾಗಿ ಬದಲಾಯಿತು,ನವೆಂಬರ್ ೧ ೧೯೮೦ ರಂದು ಭಾರತ ಸರ್ಕಾರ ಇದನ್ನು ಪ್ರಾದೇಶಿಕ ಕ್ಯಾನ್ಸರ್ ಸೆಂಟರ್ ನ ಸ್ಥಾನಮಾನ ನೀಡಿತು . ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಈ ಸಂಸ್ಥೆಗೆ ರಿಸರ್ಚ್ ಅಸೋಸಿಯೇಷನ್ ಮಾನ್ಯತೆ ನೀಡಿದೆ. ಇದು ಅತ್ಯಾಧುನಿಕ ಡೈಜಿನೊಸ್ಟಿಕ್ ಮತ್ತು ಚಿಕಿತ್ಸೆಯನ್ನು ಕರ್ನಾಟಕ ,ಆಂಧ್ರಪ್ರದೇಶ ,ತಮಿಳುನಾಡು ಮತ್ತು ಮಹಾರಾಷ್ಟ್ರ ಜನಗಳಿಗೆ ಸೇವೆಯನ್ನು ನೀಡುತ್ತಿದೆ.[೬],[೭],[೮]
ವಿಭಾಗಗಳು
ಬದಲಾಯಿಸಿ- ಸರ್ಜರಿ
- ರೇಡಿಯೋಥೆರಪಿ
- ಪೀಡಿಯಾಟ್ರಿಕ್ ಆನ್ಕಾಲಜಿ
- ವೈದ್ಯಕೀಯ ಆನ್ಕಾಲಜಿ
- ಹೆಡ್ & ನೆಕ್ ಸರ್ಜರಿ
- ಒರಲ್ ಸರ್ಜರಿ
- Gynaecologic ಆನ್ಕಾಲಜಿ
- Anaesthetic & ನೋವು ಪರಿಹಾರ
- ರೇಡಿಯೋ ರೋಗನಿರ್ಣಯ
- ಪೆಥಾಲಜಿ
- ಮೈಕ್ರೋಬಯಾಲಜಿ.
ಪರೀಕ್ಷೆ ಸೌಲಭ್ಯ
ಬದಲಾಯಿಸಿಅಸ್ಥಿಮಜ್ಜೆ ಚಿಕಿತ್ಸಾ ಕೇಂದ್ರ ಮತ್ತು ಮ್ಯಾಮೋಗ್ರಾಂ ಪರೀಕ್ಷೆ ಉಚಿತ ಪರೀಕ್ಷೆ ಪ್ರಸ್ತುತ ಮೂರರಿಂದ ಏಳು ಲಕ್ಷ ರೂ. ವೆಚ್ಚ ತಗಲುವ ಅಸ್ಥಿಮಜ್ಜೆ ಶಸ್ತ್ರಚಿಕಿತ್ಸೆಯನ್ನು ಕಿದ್ವಾಯಿಯಿಂದ ಉಚಿತವಾಗಿ ಮಾಡಲಾಗುತ್ತಿದೆ. ಸ್ತನ ಕ್ಯಾನ್ಸರ್ ಪತ್ತೆ ಹಚ್ಚುವ ಮ್ಯಾಮೋಗಾಂ ಪರೀಕ್ಷೆಯನ್ನು ಮಾಡಲಾಗುತ್ತದೆ.[೯]
ಕಿದ್ವಾಯಿ ಕಲಬುರಗಿ ಘಟಕ
ಬದಲಾಯಿಸಿಕಿದ್ವಾಯಿ ಕ್ಯಾನ್ಸರ್ ಕಲಬುರಗಿ ಘಟಕ (ಪೆರಿಫೆರಲ್) ಆಸ್ಪತ್ರೆ ಇದೆ. 1990ರಿಂದ ವಿಕಿರಣ ಚಿಕಿತ್ಸೆ ಆಸ್ಪತ್ರೆಯಲ್ಲಿ ಲಭ್ಯವಾಗುತ್ತಿತ್ತು. ಇದೀಗ ಹೊಸ ಲೀನಿಯರ್ ಆಕ್ಸಲರೇಟರ್, ಸಿಮ್ಯುಲೇಟರ್, ಹಾಗೂ ಸುಸಜ್ಜಿತ ಶಸ್ತ್ರ ಚಿಕಿತ್ಸಾ ಘಟಕ ಆರಂಭಿಸಲಾಗಿದೆ. ಇದರ ಜತೆಗೆ, ರಾಜ್ಯ ಸರಕಾರದ ವಿವಿಧ ಆರೋಗ್ಯ ವಿಮಾ ಯೋಜನೆಗಳನ್ನು ಬಳಸಿಕೊಂಡು ಇಲ್ಲಿನ ಕ್ಯಾನ್ಸರ್ ಪೀಡಿತರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವದು.[೧೦]
ಆನ್ಕಾಲಜಿ ಕಾಲೇಜ್
ಬದಲಾಯಿಸಿಈ ಇನ್ಸ್ಟಿಟ್ಯೂಟ್ ಪದವಿ ವಿದ್ಯಾರ್ಥಿಗಳು, ಪದವಿಪೂರ್ವ ವಿದ್ಯಾರ್ಥಿಗಳು,ಇಂಟರ್ನೀಗಳು (ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ), ರಾಜ್ಯ ,ದೇಶ ಮತ್ತು ಅಂತರ್ರಾಷ್ಟ್ರೀಯ ಅಲೈಡ್ ಸೈನ್ಸಸ್ನ ಮತ್ತು ವೈದ್ಯಕೀಯ ಸಂಸ್ಥೆಗಳ ದಾದಿಯರು ಮತ್ತು ವಿಜ್ಞಾನಿಗಳಿಗೆ ಆನ್ಕಾಲಜಿಯ ವಿವಿಧ ವಿಷಯದ ಬಗ್ಗೆ ತರಬೇತಿ ನೀಡುತ್ತದೆ.[೧೧].
ಇದನ್ನು ನೋಡಿ
ಬದಲಾಯಿಸಿ- ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ Archived 2017-03-01 ವೇಬ್ಯಾಕ್ ಮೆಷಿನ್ ನಲ್ಲಿ.
- ಹಣಕಾಸು ನೆರವು ಮತ್ತು ಸಂಪನ್ಮೂಲಗಳು ಕೇಂದ್ರ ,ಸರ್ಕಾರದ ಅನುದಾನ ಸಂಸ್ಥೆಗಳು Archived 2017-02-21 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖಗಳು
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2016-12-06. Retrieved 2017-02-17.
- ↑ "ಕಿದ್ವಾಯಿ ಆಸ್ಪತ್ರೆ ಇನ್ನು'ರಾಜ್ಯ ಕ್ಯಾನ್ಸರ್ ಸಂಸ್ಥೆ'". Archived from the original on 2017-07-01. Retrieved 2017-02-17.
- ↑ Addresses of Regional Cancer Centres
- ↑ Cancer_hospitals
- ↑ ಕಿದ್ವಾಯಿಯಲ್ಲಿ ರೋಬೊಟಿಕ್ ಯಂತ್ರ
- ↑ "ಕಿದ್ವಾಯಿ ಸ್ಮಾರಕ ಆಂಕೊಲಾಜಿ ಸಂಸ್ಥೆ, ಬೆಂಗಳೂರು". ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿ (https://kmio.karnataka.gov.in). Archived from the original on 18 ಆಗಸ್ಟ್ 2023. Retrieved 18 August 2023.
- ↑ ಕ್ಯಾನ್ಸರ್ ಜೀವಕೋಶಗಳನ್ನು ನಿಖರವಾಗಿ ನಾಶಪಡಿಸುವ ಆಧುನಿಕ ಯಂತ್ರ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಅಳವಡಿಕೆ
- ↑ 120 ಕೋಟಿ ರೂ. ವೆಚ್ಚದಲ್ಲಿ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ಉನ್ನತೀಕರಣ
- ↑ 3.7 ಲಕ್ಷ ಕ್ಯಾನ್ಸರ್ ರೋಗಿಗಳಿಗೆ ಕಿದ್ವಾಯಿಯಲ್ಲಿ ಇ-ಸೌಲಭ್ಯ
- ↑ ಕಿದ್ವಾಯಿ ಕಲಬುರಗಿ ಘಟಕ 27ರಂದು ಲೋಕಾರ್ಪಣೆ
- ↑ "College admission". Archived from the original on 2017-03-27. Retrieved 2017-02-18.