ಕಿಂಜಾಲ ದವೆ, ಇವರು ಭಾರತದ ಜಾನಪದ ಗಾಯಕಿ ಮತ್ತು ಗುಜರಾತ್ ಮೂಲದ ನಟಿ. ಇವರು ೨೦೧೫ ರಲ್ಲಿ ತಮ್ಮ ಚಾರ್ ಚಾರ್ ಬಂಗಡಿವಾಲಿ ಗಾಡೀ ಹಾಡಿನ ಮೂಲಕ ದೇಶದಲ್ಲಿ ಪ್ರಸಿದ್ದರಾದರು.

ಕಿಂಜಾಲ ದವೆ
ಜನನ೨೪ ನವಂಬರ್ ೧೯೯೯
ಜೆಸಂಗಪುರ, ಪಾಟ್ನಾ, ಗುಜರಾತ್
ಸಂಗೀತ ಶೈಲಿಜಾನಪದ ಸಂಗೀತ, ಭಕ್ತಿ ಗೀತೆಗಳು, ಸಮಕಾಲೀನ,
ವೃತ್ತಿಗಾಯಕಿ, ನಟಿ
ಸಕ್ರಿಯ ವರ್ಷಗಳು೨೦೧೫ ಇಂದ
ಅಧೀಕೃತ ಜಾಲತಾಣthekinjaldave.com

ಜೀವನಚರಿತ್ರೆ

ಬದಲಾಯಿಸಿ

ಇವರು ೨೪ ನವೆಂಬರ್,೧೯೯೯ ಗುಜರಾತ್ ರಾಜ್ಯದ ಪಾಟ್ನ ನಗರಕ್ಕೆ ಹತ್ತಿರ ಇರುವ ಜೆಸಂಗಪಾರ ಹಳ್ಳಿಯಲ್ಲಿ ಅದ್ವೈತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಗುಜರಾತಿ ಭಾಷೆಯ "ಜೊನಡಿಯೊ" ಎಂಬ ಹಾಡನ್ನು ಹಾಡುವದರ ಮೂಲಕ ಯಶಸ್ವಿಯಾಗಿ ಇವರು ಸಂಗೀತದ ಸಾಮ್ರಾಜ್ಯದಲ್ಲಿ ತಮ್ಮ ಗಾಯಕ ವೃತ್ತಿಯನ್ನು ಆರಂಭಿಸಿದರು. ದವೆ ಅವರು ೨೦೧೬ ರಲ್ಲಿ ಹಾಡಿದ ಚಾರ್ ಚಾರ್ ಬಂಗಡಿವಾಲಿ ಗಾಡಿ ಹಾಡಿನ ಮೂಲಕ ಭಾರತದ ಜಾನಪದ ಗಾಯಕರಲ್ಲಿ ವಿಶೇಷವಾದ ಸ್ಥಾನವನ್ನು ಪಡೆದರು.ಇವರ ಎಲ್ಲ ಹಾಡುಗಳನ್ನು ಬಿಡುಗಡೆ ಮಾಡುತ್ತಿದ್ದ ಆರ್.ಡಿ.ಸಿ. ಮೀಡಿಯಾ ಮತ್ತು ಸರಸ್ವತಿ ಸ್ಟುಡಿಯೊ ವಿರುದ್ದ ರೆಡ್ ರಿಬ್ಬನ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಮತ್ತು ಕಾರ್ತಿಕ್ ಪಟೇಲ್ (ಇವರನ್ನು ಕಾಥಿಯವಾಡಿ ಕಿಂಗ್ ಎಂದೂ ಕರೆಯುತ್ತಾರೆ), ಆಸ್ಟ್ರೇಲಿಯಾದ ಗುಜರಾತಿ ಗಾಯಕ, ಹಾಡಿನ ಹಕ್ಕುಸ್ವಾಮ್ಯ ಉಲ್ಲಂಘನೆಗಾಗಿ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಹೂಡಿದ್ದರು. ಈ ಹಾಡಿನ ಮೂಲ ಗಾಯಕ ತಾನಾಗಿದ್ದು, ಇವರು ಸಣ್ಣ ಬದಲಾವಣೆಗಳೊಂದಿಗೆ ನನ್ನ ಹಾಡನ್ನು ಅಕ್ರಮವಾಗಿ ಬಳಸಿಕೊಂಡಿದ್ದಾರೆ. ಅಲ್ಲದೇ, ನಾನು ಈ ಹಾಡನ್ನು ಇವರ ಹಾಡು ಬಿಡುಗಡೆಯಾಗುವ ಮೂರು ತಿಂಗಳು ಮುಂಚೆ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದೇನೆ ಎಂದು ನ್ಯಾಯಲಯಕ್ಕೆ ಕಾರ್ತಿಕ್ ಪಟೇಲ್ ತಿಳಿಸಿದರು. ಆದರೆ ಕಿಂಜಾಲ್ ದವೆ ಅವರು ಈ ಹಾಡು ೨೦೧೪ ರಲ್ಲಿ ಮನುಭಾಯ್ ರಾಬರಿ ಬರೆದ ಮೂಲ ಹಾಡು ಎಂದು ನ್ಯಾಯಲಯದಲ್ಲಿ ಪ್ರತಿಪಾದಿಸಿದರು. ಅಹಮದಾಬಾದ್ ವಾಣಿಜ್ಯ ನ್ಯಾಯಾಲಯವು ಜನವರಿ ೨೦೧೯ ರಲ್ಲಿ, ಪ್ರಕರಣವು ಇತ್ಯರ್ಥವಾಗುವವರೆಗೆ ಹಾಡನ್ನು ಬಳಸದಂತೆ ದವೆ ಅವರನ್ನು ನಿರ್ಬಂಧಿಸಿತು.

ದವೆ ಅವರ ಸತತ ಹೋರಾಟದ ಫಲವಾಗಿ ಒಂದು ತಿಂಗಳ ನಂತರ ಗುಜರಾತ್ ಹೈಕೋರ್ಟ್ ಈ ಆದೇಶವನ್ನು ರದ್ದುಮಾಡಿತು. ಅಹಮದಾಬಾದ್ ವಾಣಿಜ್ಯ ನ್ಯಾಯಾಲಯವು ಎಪ್ರಿಲ್ ೨೦೧೯ ರಲ್ಲಿ ಈ ಮೊಕದ್ದಮೆಯನ್ನು ಕೂಲಂಕೂಶವಾಗಿ ಪರೀಶಿಲಿಸಿ ಪ್ರಕರಣವನ್ನು ವಜಾಗೊಳಿಸಿತು. ಆದರೆ ರೆಡ್ ರಿಬ್ಬನ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಮತ್ತು ಕಾರ್ತಿಕ್ ಪಟೇಲ್ ಅವರು ಪಟ್ಟು ಬಿಡದೆ ಅಹಮದಾಬಾದ್ ಸಿವಿಲ್ ಕೋರ್ಟ್‌‍ಗೆ ಮೊಕದ್ದಮೆಯನ್ನು ಕೊಂಡೊಯ್ದಾಗ, ಸೆಪ್ಟೆಂಬರ್ ೨೦೧೯ ರಲ್ಲಿ ಕೋರ್ಟ್ ಹೊಸ ಹಕ್ಕುಸ್ವಾಮ್ಯ ಉಲ್ಲಂಘನೆಯ ನೋಟಿಸ್ಅನ್ನು ನೀಡಿತು. ದವೆ ಅವರ ಪ್ರಕಾಶಕರಾದ ಆರ್.ಡಿ.ಸಿ ಮೀಡಿಯಾ ಮತ್ತು ಸರಸ್ವತಿ ಸ್ಟುಡಿಯೋ ಹಕ್ಕುಸ್ವಾಮ್ಯ ಉಲ್ಲಂಘನೆಯನ್ನು ಒಪ್ಪಿಕೊಂಡು ಹಾಡನ್ನು ತಮ್ಮ ವೆಬ್‍ಸೈಟ್‍ಗಳಿಂದ ತೆಗೆದುಹಾಕಿತು. ಆದರೆ ದವೆ ಅವರು ಹಕ್ಕುಸ್ವಾಮ್ಯ ಉಲ್ಲಂಘನೆ ಆಗಿಲ್ಲ ಎಂದು ಬಲವಾಗಿ ತಮ್ಮನ್ನು ಸಮರ್ಥಿಸಿಕೊಂಡರು. ಇವರ ಇತರ ಗುಜರಾತಿ ಹಾಡುಗಳು 'ಚಾರ್ ಚಾರ್ ಬಂಗಡಿ ವಾಲಿ ಗಾಡಿ, ಅಮೆ ಗುಜರಾತಿ ಲೇರಿ ಲಾಲಾ, ಚೋಟೆ ರಾಜಾ, ಘಟೆ ತೋ ಘಾಟೆ ಜಿಂದಗಿ, ಜಯ್ ಆದ್ಯಶಕ್ತಿ ಆರತಿ, ಧನ್ ಚೆ ಗುಜರಾತ್ ಮತ್ತು ಮಖಾನ್ ಚೋರ್.  ಅವರು ೨೦೧೮ ರ ಗುಜರಾತಿ ಚಲನಚಿತ್ರ ದಾದಾ ಹೋ ದಿಕ್ರಿ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು. ಮತ್ತು ೨೦೧೯ ರಲ್ಲಿ ಇವರು ಭಾರತೀಯ ಜನತಾ ಪಕ್ಷದ ಸದಸ್ಯರಾದರು.

ಪ್ರಶಸ್ತಿಗಳು

ಬದಲಾಯಿಸಿ

ಇವರು ೨೦೧೯ ರಲ್ಲಿ ೧೨ನೇ ಗೌರವಾಂತ ಗುಜರಾತಿ ಪ್ರಶಸ್ತಿಯಾದ ಗೌರವಶಾಲಿ ಗುಜರಾತಿ ಪ್ರಶಸ್ತಿಯನ್ನು ಪಡೆದರು. ೨೦೨೦ ರಲ್ಲಿ ಇವರು ಸಂಗೀತ ವಿಭಾಗದಲ್ಲಿ ಫೀಲಿಂಗ್ಸ್ ಪ್ರೈಡ್ ಆಫ್ ಇಂಡಿಯಾ ಪ್ರಶಸ್ತಿಯನ್ನು ಪಡೆದರು.

ವೈಯಕ್ತಿಕ ಜೀವನ

ಬದಲಾಯಿಸಿ

ಕಿಂಜಾಲ ದವೆ ಅವರು ೨೦೧೮ ರಲ್ಲಿ ಉದ್ಯಮಿ ಪವನ್ ಜೋಶಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಇವರು ವಿವಿದ ರೀತಿಯ ಜಾನಪದ ಹಾಡುಗಳಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ.

ಧ್ವನಿಮುದ್ರಿಕೆ

ಬದಲಾಯಿಸಿ

ಹಾಡುಗಳು

ಬದಲಾಯಿಸಿ
  • ಜೊನಾಡಿಯೊ (೨೦೧೬) 
  • ಕನಯ್ಯ (೨೦೧೭) []
  • ಗಣೇಶ (೨೦೧೭) []
  • ಛೋಟೆ ರಾಜಾ (೨೦೧೭) []
  • ಲೆರಿ ಲಾಲಾ (೨೦೧೭) []
  • ಮೌಜ್ ಮಾ (೨೦೧೮) []
  • ಕಿಂಜಾಲ್ ಕನೆಕ್ಷನ್ (೨೦೧೮) []
  • ನವರತ್ (೨೦೧೯) []
  • ಜಯ್ ಆದ್ಯಶಕ್ತಿ ಆರತಿ (೨೦೧೯) []
  • ಧನ್ ಛೆ ಗುಜರಾತ್ (೨೦೧೯) []
  • ಶಂಭು ಧುನ್ ಲಾಗಿ (೨೦೧೯) []
  • ಪೈಸಾ ಛೆ ತೊ ಪ್ರೇಮ್ ಛೆ (೨೦೧೯) []
  • ರೂಟ್ ಬವಾರಿ (೨೦೧೯) []
  • ಮಾಂಖನ್ ಚೋರ್ (೨೦೧೯)
  • ಭೈಲು ಹಲ್ಯಾ ಜಾನ್ ಮಾ (2020) []
  • ಕಿಲೋಲ್ (೨೦೨೦) [೧೦]
  • ಶಿವ ಭೋಲಾ (೨೦೨೦) [೧೦]
  • ಮೊನೊ ತೊ ಮಾತಾ ಸೆ (೨೦೨೦) [೧೦]
  • ವ್ರಜ್ ಮಾ ವೆಲೋ ಆಯ್ (೨೦೨೦) [೧೧]
  • ಭಾಯಿ ನೋ ಮೆಲ್ ಪಾಡಿ ಗಯೋ (೨೦೨೦) [೧೨]
  • ವಾಗ್ಯೋ ರೆ ಧೋಲ್ (೨೦೨೦) [೧೩]
  • ಮಹಾಕಲ್ (೨೦೨೦) []
  • ರಾಣಾಜಿ (೨೦೨೦) [೧೪]
  • ಖಮ್ಮ ಖೋಡಲ್ (2021) [೧೫]
  • ಪರ್ನೆ ಮಾರೊ ವಿರೋ (೨೦೨೧) 
  • ಏ ಮಾ (೨೦೨೧) [೧೬]
  • ಕಿಂಜಾಲ್ ಕನೆಕ್ಷನ್ - 2 (೨೦೨೧)
  • ಜೀವಿ ಲೆ (೨೦೨೧) [೧೭]

ಉಲ್ಲೇಖಗಳು

ಬದಲಾಯಿಸಿ
  1. "Krishna Janmashtami Special Gujarati Song 'Kanaiya' Sung By Kinjal Dave". The Times of India. 2019-08-23. Retrieved 2021-08-01.
  2. "Gujarati Song Ganesha Sung By Kinjal Dave". Times of India. 2018-09-12. Retrieved 2021-08-01.
  3. ೩.೦ ೩.೧ Jambhekar, Shruti (2018-11-04). "Kinjal Dave all set for a silver-screen debut". The Times of India. Retrieved 2021-07-27.
  4. ೪.೦ ೪.೧ ೪.೨ ೪.೩ Jambhekar, Shruti (2018-10-10). "I'm glad my songs are promoting Gujarati culture: Kinjal Dave". The Times of India. Retrieved 2021-07-27.
  5. "Kinjal Dave gets fans grooving to her new Garba song 'Navrat'". The Times of India. 2019-09-26. Retrieved 2021-08-01.
  6. ೬.೦ ೬.೧ "From Kinjal Dave to Geeta Rabari; Here the latest songs from Dhollywood singers on Shravan month". The Times of India. 2019-08-11. Retrieved 2021-08-01.
  7. "Kinjal Dave's new single 'Paisa Che Toh Prem Che' released". The Times of India. 2019-07-15. Retrieved 2021-08-01.
  8. "Kinjal Dave to release her new single soon". The Times of India. 2019-02-11. Retrieved 2021-08-01.
  9. "Gujarati Song 'Bhailu Halya Jaan Ma' Sung By Kinjal Dave". Times of India. 2020-05-26. Retrieved 2021-08-01.
  10. ೧೦.೦ ೧೦.೧ ೧೦.೨ "Kinjal Dave and brother Akash to collaborate for an untitled wedding song, details here!". The Times of India. 2021-01-06. Retrieved 2021-08-01.
  11. "Lalit Dave and Kinjal Dave drops Janmashtami song teaser 'Vraj Ma Velo Aay'". The Times of India. 2020-08-05. Retrieved 2021-08-01.
  12. "'Bhai No Med Padi Gayo' first poster featuring Kinjal Dave and Vishal Parekh unveiled". The Times of India. 2020-03-13. Retrieved 2021-08-01.
  13. "'Hellaro's' new song 'Vaagyo Re Dhol' is a foot-tapping number". The Times of India. 2019-10-29. Retrieved 2021-08-01.
  14. Pereira, Karen (2020-04-09). "Kinjal Dave releases a new song starring Sanjay Maurya". The Times of India. Retrieved 2021-08-01.
  15. Rathod, Vaishali (2021-03-10). "Kinjal Dave on Savitribai Phule death anniversary, says she is an epitome of a valiant woman". The Times of India. Retrieved 2021-08-01.
  16. Rathod, Vaishali (2021-07-09). "'Maar to Mele' to 'Ae Maa' - Top 5 trendiest Gujarati songs that rule the heart of the audiences". The Times of India. Retrieved 2021-08-01.
  17. "Kinjal Dave is back with a bang with her new release 'Jivi Le'". The Times of India. 2021-07-12. Retrieved 2021-08-01.

ಬಾಹ್ಯ ಕೊಂಡಿಗಳು

ಬದಲಾಯಿಸಿ