ಕಾವಲುಪಡೆಯು ಒಂದು ನಿರ್ದಿಷ್ಟ ಸ್ಥಳದಲ್ಲಿ ನೆಲೆಗೊಂಡಿರುವ ಪಡೆಗಳ ಗುಂಪನ್ನು ಸೂಚಿಸುವ ಸಾಮೂಹಿಕ ಪದವಾಗಿದೆ. ಮೂಲತಃ ಇದರ ಉದ್ದೇಶ ಅದಕ್ಕೆ ರಕ್ಷಣೆ ನೀಡುವುದು ಆಗಿತ್ತು, ಆದರೆ ಈಗ ಹಲವುವೇಳೆ ಕೇವಲ ಅದನ್ನು ಗೃಹ ನೆಲೆಯಾಗಿ ಬಳಸಲಾಗುತ್ತದೆ. ಕಾವಲುಪಡೆಯು ಸಾಮಾನ್ಯವಾಗಿ ನಗರ, ಪಟ್ಟಣ, ಕೋಟೆ, ದುರ್ಗ, ಹಡಗು ಅಥವಾ ಹೋಲಿಕೆಯ ಸ್ಥಳದಲ್ಲಿ ಇರುತ್ತದೆ. "ಕಾವಲುಪಡೆ ಪಟ್ಟಣ" ಎಂದರೆ ಹತ್ತಿರದಲ್ಲಿ ಸೇನಾ ನೆಲೆಯನ್ನು ಹೊಂದಿರುವ ಯಾವುದೇ ಪಟ್ಟಣವನ್ನು ಸೂಚಿಸುವ ಸಾಮಾನ್ಯ ಪದವಿನ್ಯಾಸವಾಗಿದೆ.

ಅರಬ್ ಕಾವಲುಪಡೆಸಂಪಾದಿಸಿ

ಅರಬ್ ಮುಸ್ಲಿಮ್ ಸೇನೆಗಳು ತಮ್ಮ ಪ್ರಾಬಲ್ಯವನ್ನು ಹೆಚ್ಚಿಸಲು "ಕಾವಲುಪಡೆ ಪಟ್ಟಣ"ಗಳನ್ನು ಮಧ್ಯಪ್ರಾಚ್ಯ ಪ್ರದೇಶಗಳ ಅರಬ್ ಇಸ್ಲಾಮೀ ದಾಳಿಗಳ ಅವಧಿಯಲ್ಲಿ ಬಳಸಿದವು.[೧] ಅರಬ್ ಅಲ್ಲದ, ಇಸ್ಲಾಮೇತರ ಪ್ರದೇಶಗಳನ್ನು ಆಕ್ರಮಿಸಲು, ಆಳುವ ಅರಬ್ ಗಣ್ಯರು ಅಲೆಮಾರಿ ಅರಬ್ ಬುಡಕಟ್ಟು ಜನರನ್ನು ಮರುಭೂಮಿಯಿಂದ ತೆಗೆದುಕೊಂಡು ಇಸ್ಲಾಮಿ ಸೇನೆಗಳಲ್ಲಿ ಒತ್ತಾಯದಿಂದ ಸೇರಿಸಿ ಕಾವಲುಪಡೆ ಪಟ್ಟಣಗಳೊಳಗೆ ನೆಲೆಗೊಳಿಸಿ, ಜೊತೆಗೆ ಯುದ್ಧಗಳಲ್ಲಿ ಲೂಟಿಮಾಡಿದ್ದರಲ್ಲಿ ಪಾಲನ್ನೂ ಕೊಟ್ಟರು.

ಉಲ್ಲೇಖಗಳುಸಂಪಾದಿಸಿ

  1. "Internet History Sourcebooks Project". sourcebooks.fordham.edu.