ಕಾಳಿ ಸಿಂಧು ನದಿಯು ಮಧ್ಯ ಪ್ರದೇಶದ ಮಾಲ್ವಾ ಎಂಬ ಪ್ರದೇಶದಲ್ಲಿ ಇದೆ.ಕಾಳಿ ಸಿಂಧು ನದಿಯು ಬಾಗ್ಲಿ(ದಿವಸ್ ಜಿಲ್ಲೆ)ಮಧ್ಯ ಪ್ರದೇಶದಿಂದ ಹುಟ್ಟಿದೆ.ಈ ಕಾಳಿ ಸಿಂಧು ನದಿಯು ಇಂಡೋರ್ ಮತ್ತು ರಾಜ್ಯ ರಾಜಧಾನಿ ಭೋಪಾಲ್ ಅನ್ನು ಸೋಂಕಾಚ್ ಸಮೀಪ ಸಂಪರ್ಕಿಸುವ ರಾಜ್ಯ ಹೆದ್ದಾರಿ ೧೮ ಕಿ.ಮೀ ಅನ್ನು ದಾಟಿದೆ ಮತ್ತು ಪ್ರವಾಹ ಸಂದರ್ಭದಲ್ಲಿ ಗಂಟೆಗಳವರೆಗೆ ರಸ್ತೆ ಸಂಚಾರವನ್ನು ನಿರ್ಬಂಧಿಸುತ್ತದೆ. ಕಾಳಿ ಸಿಂಧುವಿನ ಮುಖ್ಯ ಪ್ರಮುಖ ನದಿಗಳು ಪರ್ವನ್,ನಿವಾಜ್,ಅಹು,ಕುವಾರಿ ಹಾಗೂ ಬೆತ್ವಾ ನದಿಗಳು.

ಕಾಳಿ ನದಿಯು ಮಧ್ಯ ಪ್ರದೆಶದ ಮಾಲ್ವಾ ಎ೦ಬ ಪ್ರದೇಶದ ದಲ್ಲಿ ಹುಟ್ಟಿದೆ.

ಕಾಳಿ ಸಿ೦ಧು ನದಿಯು ಇಂಡೋರ್ ಮತ್ತು ರಾಜ್ಯ ರಾಜಧಾನಿ ಭೋಪಾಲ್ ಅನ್ನು ಸೋಂಕಾಚ್ ಬಳಿ (ಮಧ್ಯಪ್ರದೇಶದ ದಿವಸ್ ಜಿಲ್ಲೆಯ) ಸಂಪರ್ಕಿಸುವ ರಾಜ್ಯ ಹೆದ್ದಾರಿ ೧೮ ಯನ್ನು ದಾಟುತ್ತದೆ ಮತ್ತು ಪ್ರವಾಹದಲ್ಲಿ ಗಂಟೆಗಳವರೆಗೆ ರಸ್ತೆ ಸಂಚಾರವನ್ನು ನಿರ್ಬಂಧಿಸುತ್ತದೆ. ಇದು ಶಜಾಪುರ ಜಿಲ್ಲೆಯನ್ನು ದಾಟಿ ಹೋಗುತ್ತದೆ. ನಂತರ ಇದು ಶಜಾಪುರ ಮತ್ತು ರಾಜ್ಗಡ್ ಜಿಲ್ಲೆಗಳ ಗಡಿರೇಖೆಯನ್ನು ತಲುಪಿ ಹಗೂ ರಾಜಸ್ಥಾನದ ಝಾಲಾವರ್ ಮತ್ತು ಕೋಟಾ ಜಿಲ್ಲೆಗಳಲ್ಲಿ ಪ್ರವೇಶಿಸುತ್ತದೆ.

ಮಧ್ಯ ಪ್ರದೇಶವು ಭಾರತದ ಪ್ರಮುಖ ರಾಜ್ಯವಾಗಿದ್ದು, ಅಲ್ಲಿನ ನದಿ ಮಾಲ್ವಾ ಪ್ರದೇಶದ ಗರಿಷ್ಠ ಭಾಗವನ್ನು ಒಳಗೊಂಡಿದೆ. ಈ ನದಿಯು ರಾಜಸ್ಥಾನದ ಬರಾನ್ ಜಿಲ್ಲೆಯ ಕೆಳಭಾಗದಲ್ಲಿ ಚ೦ಬಲ್ ನದಿಯನ್ನು ಸೇರುತ್ತದೆ.ಈ ನದಿಯು ಯಮುನಾ ಜಲಾನಯನ ಪ್ರದೇಶಕ್ಕೆ ಸೇರಿದ್ದು, ಇದು ರಾಜ್ಯದ ನಿರಂತರ ಹರಿವಾಣಗಳಲ್ಲಿ ಒಂದಾಗಿದೆ, ಇದು ಅಹು, ನಿವಾಜ್ ಮತ್ತು ಪರ್ವಾನ್ ನದಿಗಳಿಂದ ಹರಿದು ಹೋಗುತ್ತದೆ. ಈ ಕಾಳಿ ಸಿ೦ಧು ನದಿಯ ಮೂಲ ವಿಂಧ್ಯಾ ಶ್ರೇಣಿ, ಬರಾನ್ ಮತ್ತು ಝಾಲಾವರ್ ಜಿಲ್ಲೆಯ ಮೂಲಕ ಉತ್ತರ ದಿಕ್ಕಿನಲ್ಲಿ ಹರಿಯುತ್ತದೆ. ಈ ನದಿಯು ಬರಾನ್ ಜಿಲ್ಲೆಯ ನೋನೆರಾ ಗ್ರಾಮದಲ್ಲಿ ಚಂಬಲ್ ನದಿಯನ್ನು ಸೆರುತ್ತದೆ.ಈ ಕಾಳಿ ಸಿ೦ಧು ನದಿಯು ೧೪೫ ಕೀ.ಮಿ ರಾಜಸ್ಥನದಲ್ಲಿ ಹರಿಯುತ್ತದೆ.

ಪ್ರಮುಖ ಉಪನದಿಗಳು

ಬದಲಾಯಿಸಿ

ಕಾಳಿ ಸಿಂಧು ನದಿಯ ಪ್ರಮುಖ ಉಪನದಿಗಳು

  • ಅಹು ನದಿ - ಗಾಗ್ರಾನ್, ಝಾಲಾವರ್, ಕೋಟಾ ರಾಜಸ್ಥಾನದ ಮೂಲಕ ಹರಿಯುತ್ತದೆ.
  • ನಿವಾಜ್ ನದಿ - ಝಾಲಾವರ್, ಕೋಟಾ ರಾಜಸ್ಥಾನ.
  • ಪಾರ್ಬತಿ ನದಿ- ಮಧ್ಯಪ್ರದೇಶದ ವಿಂಧ್ಯಾ ಶ್ರೇಣಿಯ ಉತ್ತರದಲ್ಲಿ ಆರಂಭಗೊಂಡು ಕಾಳಿ ಸಿ೦ಧು ನದಿಯು ರಾಜಸ್ಥಾನದ ರಾಜ್ಯದ ಬರಾನ್ ಜಿಲ್ಲೆಯಲ್ಲಿ ಹರಿಯುತ್ತದೆ ಹಗೂ ಝಾಲಾವರ್ ಜಿಲ್ಲೆಯ ಮೂಲಕ ಮತ್ತು ಕೋಟಾ ಜಿಲ್ಲೆಯ ಮೂಲಕ ಹರಿಯುತ್ತದೆ. ಪಾರ್ಬತಿ ನದಿ ಸಂಗ್ರಹಣೆಯು ಸುಮಾರು ೩೧೮೦ ಚದರ ಮೈಲಿಗಳು ಇದೆ. ರಾಜಸ್ಥಾನದ ಈ ಜಿಲ್ಲೆಗಳಿಂದ ನದಿ ಅಂತಿಮವಾಗಿ ಚಂಬಲ್ ನದಿಯ ದಂಡೆಯಲ್ಲಿದೆ.
  • ಪರ್ಬಾನ್ ನದಿ- ಮಧ್ಯಪ್ರದೇಶದಲ್ಲಿ ಹುಟ್ಟಿ ರಾಜಸ್ಥಾನದ ಮೂಲಕ ಹರಿಯುತ್ತದೆ. ಇದು ಕಾಳಿ ಸಿಂಧು ನದಿಯ ಉಪನದಿಯಾಗಿದೆ. ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯಲ್ಲಿ ಪರ್ಬಾನ್ / ಪರ್ವನ್ ಹುಟ್ಟಿಕೊಂಡಿದೆ. ಮಧ್ಯ ಪ್ರದೇಶದ ಸೆಹೋರ್, ಶಜಾಪುರ ಮತ್ತು ರಾಜ್ಗಡ್ ಜಿಲ್ಲೆಗಳ ಮೂಲಕ ಪರ್ಬಾನ್ ನದಿಯು ಹರಿಯುತ್ತದೆ ಹಗೂ ರಾಜಸ್ಥಾನದ ಝಾಲಾವರ್, ಕೋಟಾ, ಬರಾನ್ ಜಿಲ್ಲೆಗಳನ್ನು ಒಳಗೊಂಡಿದೆ. ರಾಜಸ್ಥಾನದ ಬರಾನ್ ಜಿಲ್ಲೆಯಲ್ಲಿ ಇದು ಕಾಳಿ ಸಿಂಧು ನದಿ ಅನ್ನು ಭೇಟಿ ಮಾಡುತ್ತದೆ.

ಐತಿಹಾಸಿಕ ಸ್ಥಳಗಳು

ಬದಲಾಯಿಸಿ
  • ಸನ್ಕಾಚ್ (ಮಧ್ಯಪ್ರದೇಶದ ದೆವಾಸ್ ಜಿಲ್ಲೆ)
  • ಝಾಲಾ ಪತನ್ (ಝಾಲಾವರ್)


ಉಲ್ಲೇಖಗಳು

ಬದಲಾಯಿಸಿ


https://www.india9.com/i9show/Kali-Sindh-River-51829.htm []

  1. http://weekly.hatnote.com/archive/kn/20180720/weeklypedia_20180720.html