ಕಾರಂಜಿ ಕೆರೆ ಮೈಸೂರು ನಗರದಲ್ಲಿದೆ. ಶ್ರೀ ಚಾಮರಾಜೇಂದ್ರ ಮೃಗಾಲಯ ನಿರ್ವಹಿಸುತ್ತಿರುವ ಈ ಕೆರೆಯ ದಂಡೆಯಲ್ಲಿ ರೀಜನಲ್ ಮ್ಯೂಜಿಯ್ಂ ಆಫ್ ನ್ಯಾಚುರಲ್ ಹಿಸ್ಟರಿ ಇದೆ. ಈ ಕೆರೆಯ ಪೂರ್ಣ ಪ್ರದೇಶ ೯೦ ಎಕರೆಯಷ್ಟು ಇದ್ದು ೫೫ ಎಕರೆ ನೀರಿನಿಂದ ತುಂಬಿದೆ. ಈ ಕೆರೆಯ ಸುತ್ತಮುತ್ತ ಪರಿಸರ ಉದ್ಯಾನವನ ನಿರ್ಮಿಸಲಾಗಿದೆ. ಚಿಟ್ಟೆ ಮತ್ತು ಹಲವು ಪಕ್ಷಿಗಳ ಉದ್ಯಾನವನವಿದೆ. ಈ ಕೆರೆಯ ವೀಕ್ಷಣೆಗೆ ರಶೀದಿ ಪಡೆಯಬೇಕಾಗಿದ್ದು , ಇದರಿಂದ ಸುಮಾರು ೫೦೦೦೦ ರೂಪಾಯಿಗಳ ದಿನದ ಆದಾಯವನ್ನು ಮೈಸೂರು ಮೃಗಾಲಯ ಪಡೆಯುತ್ತಿದೆ.

ಕಾರಂಜಿ ಕೆರೆ
Karanji Lake
ಸ್ಥಳಮೈಸೂರು, ಕರ್ನಾಟಕ
ನಿರ್ದೇಶಾಂಕಗಳು12°18′10″N 76°40′25″E / 12.30278°N 76.67361°E / 12.30278; 76.67361
Basin countriesಭಾರತ
ಕಾರಂಜಿ ಕೆರೆಯಲ್ಲಿ ನವಿಲು
ಕಾರಂಜಿ ಕೆರೆಯಲ್ಲಿ ಬಾತುಕೋಳಿಗಳು

ಉಲ್ಲೇಖಗಳು

ಬದಲಾಯಿಸಿ