ಕಾಯ್ ಗ್ರೀನ್‌ ದೇಹದಾರ್ಡ್ಯ ಪಟು

ದೇಹದಾರ್ಡ್ಯ ಪಟುಸಂಪಾದಿಸಿ

 
Kai Greeneಕಾಯ್ ಎಲ್. ಗ್ರೀನ್ ಅಮೇರಕದ ದೇಹದಾರ್ಡ್ಯ ಪಟು

ಲೆಸ್ಲಿ ಕೈ ಗ್ರೀನ್ (ಜನನ ಜುಲೈ 12, 1975), ಕಾಯ್/ ಕೈ ಗ್ರೀನ್ ಅಥವಾ ಕಾಯ್ ಎಲ್. ಗ್ರೀನ್ ಎಂದು ವೃತ್ತಿಪರವಾಗಿ ಪರಿಚಿತರಾಗಿದ್ದು, ಅಮೆರಿಕಾದ ಐಎಫ್ಬಿಬಿ(IFBB) ವೃತ್ತಿಪರ ಬಾಡಿಬಿಲ್ಡರ್, ವೈಯಕ್ತಿಕ ತರಬೇತುದಾರ, ಕಲಾವಿದ ಮತ್ತು ನಟ. ಅವರ ಅತ್ಯಂತ ಇತ್ತೀಚಿನ ಗೆಲುವು 2016 ಆರ್ನಾಲ್ಡ್ ಕ್ಲಾಸಿಕ್. ಅವರು 2012, 2013, ಮತ್ತು 2014 ರ ಮಿ. ಒಲಂಪಿಯಾ ಸ್ಪರ್ಧೆಗಳಲ್ಲಿ 2 ನೇ ಸ್ಥಾನ ಪಡೆದರು.[೧]

ಬೆಂಗಳೂರು ಬಿ3 ಜಿಮ್‌ ಉದ್ಘಾಟನೆಸಂಪಾದಿಸಿ

  • ವಿಶ್ವವಿಖ್ಯಾತ ದೇಹದಾರ್ಡ್ಯ ಪಟು, ಅಮೆರಿಕದ ಕಾಯ್ ಗ್ರೀನ್‌ ಅವರು ಕೆ.ಆರ್.ಪುರದ 3ಬಿ ವೆಲ್‌ನೆಸ್‌ ಕೇಂದ್ರಕ್ಕೆ, ಬಿ3 ಜಿಮ್‌ ಉದ್ಘಾಟನೆಗಾಗಿ ಬಂದಿದ್ದರು. ಉದ್ಘಾಟನೆ ನಂತರ ಅಲ್ಲಿನ ಪರಿಕರ, ಯಂತ್ರೋಪಕರಣಗಳನ್ನು ಪರೀಕ್ಷಿಸಿದರು. ದೈತ್ಯದೇಹಿ ಗ್ರೀನ್‌. ಭಾರ ಎತ್ತುವ ರೀತಿ ಮತ್ತು ಎತ್ತುವಾಗ ಆಗುತ್ತಿದ್ದ ನೋವನ್ನು ಅವರು ಸುಖಿಸುತ್ತಿದ್ದರು. ಅದು, ಅಲ್ಲಿ ನೆರೆದಿದ್ದ ಯುವ ಬಾಡಿ ಬಬಿಲ್ಡರ್‌ಗಳಿಗೆ ಪ್ರಾಯೋಗಿಕ ಪಾಠವೇ ಆಯಿತು. ಭಾರ ಎತ್ತುವಾಗಲಂತೂ ಅವರ ಮಾಂಸ ಖಂಡಗಳು ಉಡುಪು ಕಿತ್ತುಕೊಂಡು ಹೊರಬರುತ್ತವೇನೋ ಎನ್ನುವಷ್ಟು ಉಬ್ಬಿಕೊಳ್ಳುತ್ತಿದ್ದವು. ಜಿಮ್‌ನ ಬಹುತೇಕ ಉಪಕರಣಗಳನ್ನು ಬಳಸಿ ವ್ಯಾಯಾಮ ಮಾಡಿದ ಗ್ರೀನ್‌ ಕೊನೆಗೆ ಹೇಳಿದ್ದು ‘ಬೆವರು ಹರಿಸುವುದು ನನ್ನ ಮೆಚ್ಚಿನ ಹವ್ಯಾಸ’ ಎಂದು.

ಅದ್ಭುತ ಭಾಷಣಕಾರಸಂಪಾದಿಸಿ

  • ‘ನೀವು ಕನ್ನಡಿಯ ಮುಂದೆ ನಿಂತಾಗ ಒಬ್ಬ ವ್ಯಕ್ತಿ ಕಾಣುತ್ತಾನಲ್ಲ, ಅವನು ಯಾವಾಗಲೂ ನಗುತ್ತಿರುವಂತೆ ನೋಡಿಕೊಳ್ಳಿ, ಅವನ ಸಂತೋಷಕ್ಕಾಗಿ ದುಡಿಯಿರಿ, ಬೇರೆಯವರ ಸಂತೋಷದಲ್ಲಿ ಅವನ ಸಂತೋಷ ಹುಡುಕಿರಿ’ ಎಂದು, ವೇದಾಂತಿಯಂತೆ ಮಾತನಾಡಿದರು. ಸ್ವತಃ ಚಿತ್ರಕಾರರೂ ಆಗಿರುವ ಗ್ರೀನ್‌, ದೇಹದಾರ್ಡ್ಯದ ಬಗೆಗಿಂತಲೂ ವ್ಯಕ್ತಿತ್ವ ವಿಕಸನದ ಬಗೆಗೆ ಸಾಮಾಜಿಕ ಕಳಕಳಿಯ ಬಗ್ಗೆಯೇ ಹೆಚ್ಚು ಆಸಕ್ತಿ ಉಳ್ಳವರು.

ಜೀವನಸಂಪಾದಿಸಿ

  • 1975 ರಲ್ಲಿ [[ಅಮೇರಿಕ ಸಂಯುಕ್ತ ಸಂಸ್ಥಾನ |ಅಮೆರಿಕದ}} ನ್ಯೂಯಾರ್ಕ್‌ನಲ್ಲಿ ಹುಟ್ಟಿದ ಗ್ರೀನ್‌, 16ರ ವಯಸ್ಸಿನಿಂದಲೇ ದೇಹದಾರ್ಡ್ಯ ಪ್ರಾರಂಭಿಸಿದರು. 2011ರಲ್ಲಿ ಮಿಸ್ಟರ್ ನ್ಯೂಯಾರ್ಕ್‌ ಎನಿಸಿಕೊಂಡರು. ನಂತರ 2011ರಲ್ಲಿ ನ್ಯೂಯಾರ್ಕ್‌ ಪ್ರೋ ಚಾಂಪಿಯನ್ ಶಿಪ್ ಗೆದ್ದುಕೊಂಡರು ನಂತರ 2012 ಇಂಟರ್‌ನ್ಯಾಷನಲ್ ಫೆಡರೇಷನ್ ಆಫ್ ಬಾಡಿ ಬಿಲ್ಡಿಂಗ್ ಆ್ಯಂಡ್ ಫಿಟ್‌ನೆಸ್ (ಐಎಫ್‌ಬಿಎಫ್) ನಡೆಸುವ ಅಂತರರಾಷ್ಟ್ರೀಯ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ 2ನೇ ಸ್ಥಾನ ಪಡೆದುಕೊಂಡರು. ನಂತರ 2013 ಮತ್ತು 2014ರಲ್ಲಿ ಮಿಸ್ಟರ್ ಒಲಂಪಿಯಾದಲ್ಲಿ ಪ್ರಥಮ ಸ್ಥಾನಗಳಿಸಿ ವಿಖ್ಯಾತಿಗಳಿಸಿದರು.
  • ಪ್ರೇರಣಾದಯಕ ಭಾಷಣಕಾರರಾಗಿಯೂ ಹೆಸರವಾಸಿಯಾಗಿರುವ ಗ್ರೀನ್‌ ದೇಶ–ವಿದೇಶಗಳಲ್ಲಿ ಭಾಷಣಗಳನ್ನು ಮಾಡುತ್ತಾ ಯುವಕರನ್ನು ಉತ್ತೇಜಿಸುವ ಕೆಲಸದಲ್ಲಿಯೂ ನಿರತರಾಗಿದ್ದಾರೆ. ಇದೀಗ ಕೆಲವು ಹಾಲಿವುಡ್ ಸಿನಿಮಾಗಳಲ್ಲಿಯೂ ನಟಿಸುತ್ತಿರುವ ಗ್ರೀನ್‌ ಅತ್ಯುತ್ತಮ ಚಿತ್ರಕಲಾವಿದರೂ ಹೌದು.[೨]
  • ಫೋಟೊ:-:[೧]
  • ೨.[೨]

ನೋಡಿಸಂಪಾದಿಸಿ

ಉಲ್ಲೇಖಸಂಪಾದಿಸಿ

  1. I AM MORE than a MASTERPIECE; Humble Beginnings
  2. ದೈತ್ಯ ದೇಹಿಯ ವೇದಾಂತವು...;ಮಂಜುನಾಥ ಸಿ.;22 Jul, 2017