ಕಾಯರುಬಳ್ಳಿ
ಕಾಯರುಬಳ್ಳಿ ಎಂದರೆ ಒಂದು ವಿಧದ ಬಳ್ಳಿ ಸಸ್ಯ. ಇದರ ಸಸ್ಯಶಾಸ್ತ್ರೀಯ ಹೆಸರು ಸ್ಟ್ರೀಕ್‍ನೋಸ್ ಏನಿಯ ಎಂದು. ಇದು ಪೂರ್ವ ಏಷಿಯಾ, ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಸಸ್ಯಶಾಸ್ತ್ರೀಯ ವರ್ಗೀಕರಣ
ಬದಲಾಯಿಸಿಇದು ಲೊಗಾನಿಯೇಸಿ [೧]ಕುಟುಂಬದ ಒಂದು ಪ್ರಭೇದ.ಈ ಕುಟುಂಬದಲ್ಲಿ ನೂರಕ್ಕಿಂತಲೂ ಹೆಚ್ಚು ಸಸ್ಯಗಳಿವೆ.ಈ ಕುಟುಂಬದ ಸಸ್ಯಗಳು ಪ್ರಪಂಚದೆಲ್ಲೆಡೆ ಹರಡಿಕೊಂಡಿದ್ದು, ಬೇರು, ಎಲೆ, ಕಾಂಡದಲ್ಲಿ ವಿಷಯುಕ್ತ ಇಂಡೋಲ್ ಅಲ್ಕಲಾಯ್ಡ್ಸ್ ಗಳನ್ನು ಹೊಂದಿರುವುದರಿಂದ ವಿಶಿಷ್ಟವಾಗಿವೆ.
ಹರಡುವಿಕೆ
ಬದಲಾಯಿಸಿಇದು ಭಾರತದಲ್ಲಿ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಸುಮಾರು ೧೨೦೦ ಮೀಟರ್ ಎತ್ತರದ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು ಬಳ್ಳಿಯಾಗಿ ಇತರ ಮರಗಳ ಮೇಲೆ ಹಬ್ಬುತ್ತದೆ.ಇದರ ಪುನರುತ್ಪತ್ತಿ ಹೆಚ್ಚಾಗಿ ಬೀಜಗಳಿಂದಾಗುತ್ತದೆ.
ಉಪಯೋಗಗಳು
ಬದಲಾಯಿಸಿಈ ಸಸ್ಯವನ್ನು ಇದರಲ್ಲಿರುವ ಅಲ್ಕಲಾಯ್ಡ್ಸ್ ನಿಂದಾಗಿ ಔಷಧಗಳಲ್ಲಿ ಉಪಯೋಗದಲ್ಲಿದೆ. ಜಾನಪದ ಔಷಧ ಪದ್ಧತಿಯಲ್ಲಿ ಹೆಚ್ಚಾಗಿ ಇದನ್ನು ಉಪಯೋಗಿಸುತ್ತಾರೆ.
ಉಲ್ಲೇಖಗಳು
ಬದಲಾಯಿಸಿ- ↑ [[en:Loganiaceae]
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |