ಕಾಫಿಯ ಮಹತ್ವ
ಸಾಮಾನ್ಯವಾಗಿ ಎರಡು ರೀತಿಯ ಜನರಿರುತ್ತಾರೆ. ಕೆಲವರು ಕಾಫಿ ಕುಡಿದರೆ, ಇನ್ನು ಕೆಲವರು ಟೀ ಕುಡಿಯುತ್ತಾರೆ. ಈ ಎರಡು ಪಾನೀಯಗಳನ್ನು ಜನರು ತಮ್ಮತಮ್ಮ ರುಚಿ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಕುಡಿಯುತ್ತಾರೆ. ಆದರೆ ಕಾಫಿ ಕುಡಿಯುವುದರಿಂದ ಆರೋಗ್ಯದ ಮೇಲಾಗುವ ಉಪಯೋಗದ ವಿವರ ಇಲ್ಲಿದೆ.
- ಕಾಫಿಯಲ್ಲಿ ಹಲವಾರು ಆ್ಯಂಟಿಆಕ್ಸಿಡೆಂಟ್ ಇದೆ. ಇದು ದೇಹವನ್ನು ಶುದ್ಧೀಕರಣ ಮಾಡುವುದರ ಜತೆಗೆ ಫ್ರೆಶ್ ಆಗಿಸುತ್ತದೆ.
- ಯಕೃತ್‌ಗೆ ಒಳ್ಳೆಯದು. ವಿಶೇಷವಾಗಿ ಮದ್ಯ ಸೇವಿಸುವವರಿಗೆ ಯಕೃತ್‌ಗೆ ಒಳ್ಳೆಯದು.
- ಒತ್ತಡವನ್ನು ಕಡಿಮೆ ಮಾಡುತ್ತದೆ. ಪ್ರತಿನಿತ್ಯ ಕಾಫಿ ಕುಡಿಯುವವರು ಅದರ ಸುವಾಸನೆ ಬಂದರೂ ತಮ್ಮ ಒತ್ತಡ ಕಡಿಮೆಯಾಗುತ್ತದೆ ಎನ್ನುತ್ತಾರೆ.
- ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ ಇದು ಸಾಬೀತಾಗಿಲ್ಲ. ಆದರೂ ಪ್ರತಿನಿತ್ಯ ಒಂದು ಕಪ್ ಕಾಫಿ ಕುಡಿದರೆ ಯಾವುದೇ ಅಪಾಯವಿಲ್ಲ.
- ಮಧುಮೇಹ ಮತ್ತು ಪಾರ್ಕಿನ್‌ಸನ್ ಕಾಯಿಲೆಯಿಂದ ಬಳಲುತ್ತಿರುವವರು ಕಾಫಿ ಕುಡಿದರೆ ಈ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
- ಕಾಫಿ ಬಳಕೆಯು ಸುಮಾರು 40% ಜಠರ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.
- ಕಾಫಿ ಬಳಕೆ ಸಿರೋಸಿಸ್ ವ್ಯಾಪ್ತಿಯು ಕಡಿಮೆ ಮಾಡಬಹುದು.