ಕಾಪು ಕಡಲತೀರ
ಕಾಪು ಕರಾವಳಿ ಕರ್ನಾಟಕದ ಕಡಲತೀರದ ಗ್ರಾಮ. ಮಂಚಕಲ್ ಮತ್ತು ಶಿರ್ವ ಗ್ರಾಮಗಳು ಕಾಪು ಸಮೀಪದಲ್ಲಿವೆ. ಇದು ಉಡುಪಿಯಿಂದ ದಕ್ಷಿಣಕ್ಕೆ ೧೩ಕಿಮೀ ಮತ್ತು ಮಂಗಳೂರಿನಿಂದ ಉತ್ತರಕ್ಕೆ ೪೦ಕಿಮೀ ದೂರದಲ್ಲಿದೆ. ಉದ್ದವಾದ ಮರಳಿನ ಕಡಲತೀರಗಳು ಅರೇಬಿಯನ್ ಸಮುದ್ರದ ವಿಹಂಗಮ ನೋಟವನ್ನು ನೀಡುತ್ತದೆ. ಕಾಪು ಪ್ರಧಾನವಾಗಿ ಕಡಲತೀರದ ಸುತ್ತಲು ಇರುವ ಹಸಿರಿಗೆ ಹೆಸರುವಾಸಿಯಾಗಿದೆ. ಇದು ದೀಪಸ್ತಂಭ, ಮೂರು ಮಾರಿಯಮ್ಮನ ದೇವಾಲಯಗಳು ಮತ್ತು ಟಿಪ್ಪು ಸುಲ್ತಾನ್ ನೀರ್ಮಿಸಿದ ಕಾಪು ಕೋಟೆಗೆ ಹೆಸರುವಾಸಿಯಾಗಿದೆ.
ಕಾಪು ಲೈಟ್ ಹೌಸ್
ಬದಲಾಯಿಸಿಕಾಪು ಲೈಟ್ ಹೌಸ್ ಅನ್ನು ೧೯೦೧ರಂದು ಈಸ್ಟ್ ಇಂಡಿಯಾ ಕಂಪೆನಿಯು ನೀರ್ಮಿಸಿತು.[೧] ಕಾಪು ಲೈಟ್ ಹೌಸ್ ೨೭ ಮೀಟರ್ ಎತ್ತರವಾಗಿದೆ. ಇದನ್ನು ಬಂಡೆಯ ಮೇಲೆ ನೀರ್ಮಿಸಲಾದ ಲೈಟ್ ಹೌಸ್ ಅಪಾಯದ ಸಮಯದಲ್ಲಿ ಹಡಗುಗಳಿಗೇ ಎಚ್ಚರಿಕೆಯನ್ನು ನೀಡುತ್ತದೆ. ಲೈಟ್ ಹೌಸ್ ಎನ್ನುವುದು ದೀಪಗಳು ಮತ್ತು ಮಸೂರಗಳ ವ್ಯವಸ್ಥೆಯಿಂದ ಬೆಳಕನ್ನು ಹೊರಸೂಸಲು ವಿನ್ಯಾಸಗೊಳಿಸಲಾದ ಗೋಪುರವಾಗಿದ್ದು, ಸಮುದ್ರದಲ್ಲಿ ಕಡಲ ನಾವಿಕರಿಗೆ ಬಂಡೆಗಳ ವಿರುದ್ದ ಎಚ್ಚರಿಕೆ ನೀಡಲು ಮತ್ತು ಬಂದವರಿಗೆ ಸುರಕ್ಷಿತ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ನ್ಯಾವೀಗೆಷನಲ್ ಮಾರ್ಗದರ್ಶಿಯಾಗಿ ಬಳಸಲಾಗುತ್ತದೆ.[೨] ಮಲ್ಪೆ ಅಥಾವ ಸುರತ್ಕಲ್ ಕಡಲತೀರಗಳಿಗಿಂತ ಕಾಪು ಕಡಲತೀರದಲ್ಲಿ ಕಡಿಮೆ ಜನಸಂದಣಿ ಇರುತ್ತದೆ.
ಕಾಪು ಬಳಿ ಇರುವ ಭೇಟಿ ನೀಡಬಹುದಾದ ಕೆಲವು ಸ್ಥಳಗಳು
ಬದಲಾಯಿಸಿಕಾಪು ಕಡಲತೀರದ ಬಳಿ ಇರುವ ಧಾರ್ಮಿಕ ಸ್ಥಳಗಳು
ಬದಲಾಯಿಸಿ- ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ
- ಕೋಟಿ ಚೆನ್ನಯ್ಯ ದೇವಸ್ಥಾನ
- ಹೊಸ ಮಾರಿಗುಡಿ
- ಶ್ರೀ ಲಕ್ಷ್ಮೀ ಜನರ್ದಾನ ದೇವಸ್ಥಾನ
- ಕಾಪು ಕೊಂಕಣಿ ಮಠ
- ಶ್ರೀ ವಾಸುದೇವ ದೇವಸ್ಥಾನ
- ಇಸ್ಲಾಮಿಕ್ ದಾವಾ ಸೆಂಟರ್ ಕಾಪು
- ಶ್ರೀ ಬ್ರಹ್ಮ ಬೈದರ್ಕಳ ಗರಡಿ-ಪಣಿಯೂರು
- ಜುಮಾ ಮಸೀದಿ-ಪೊಲಿಪು