ಕಾಪಾಲಿಕ
ಕಾಪಾಲಿಕ ಸಂಪ್ರದಾಯವು ಭಾರತದಲ್ಲಿ ಶೈವ ಪಂಥದ ಒಂದು ಪೌರಾಣಿಕವಲ್ಲದ ರೂಪವಾಗಿತ್ತು.[೧] ಕಾಪಾಲಿಕ ಶಬ್ದವು "ತಲೆಬುರುಡೆ" ಎಂಬ ಅರ್ಥಕೊಡುವ ಕಪಾಲ ಶಬ್ದದಿಂದ ಹುಟ್ಟಿಕೊಂಡಿದೆ, ಮತ್ತು ಕಾಪಾಲಿಕರು ಎಂದರೆ "ಕಪಾಲ ಪುರುಷರು" ಎಂದು. ಸಾಂಪ್ರದಾಯಿಕವಾಗಿ ಕಾಪಾಲಿಕರು ಅಗ್ರಭಾಗದಲ್ಲಿ ಕಪಾಲವಿರುತ್ತಿದ್ದ ತ್ರಿಶೂಲ (ಖಟ್ವಾಂಗ) ಮತ್ತು ಭಿಕ್ಷಾಪಾತ್ರೆಯಾಗಿ ಖಾಲಿ ತಲೆಬುರುಡೆಯನ್ನು ಹೊಂದಿರುತ್ತಿದ್ದರು. ಕಾಪಾಲಿಕರೊಂದಿಗೆ ಸಂಬಂಧಿಸಲಾದ ಇತರ ಲಕ್ಷಣಗಳೆಂದರೆ ಅವರು ಸ್ಮಶಾನದ ಬೂದಿಯನ್ನು ತಮ್ಮ ದೇಹದ ಮೇಲೆ ಬಳಿದುಕೊಳ್ಳುತ್ತಿದ್ದರು, ಶಿವನ ಉಗ್ರ ಭೈರವ ರೂಪವನ್ನು ಪೂಜಿಸುತ್ತಿದ್ದರು, ರಕ್ತ, ಮಾಂಸ, ಮದ್ಯ, ಮತ್ತು ಲೈಂಗಿಕ ದ್ರವಗಳೊಂದಿಗೆ ಕ್ರಿಯಾವಿಧಿಗಳಲ್ಲಿ ತೊಡಗಿಕೊಳ್ಳುತ್ತಿದ್ದರು.
ಡೇವಿಡ್ ಲೋರೆಂಜ಼ೆನ್‍ರ ಪ್ರಕಾರ, ಕಾಪಾಲಿಕರ ಮೇಲೆ ಪ್ರಾಥಮಿಕ ಮೂಲಗಳ ಅಭಾವವಿದೆ, ಮತ್ತು ಅವರ ಬಗ್ಗೆ ಐತಿಹಾಸಿಕ ಮಾಹಿತಿಯು ಕಾಲ್ಪನಿಕ ಕೃತಿಗಳು ಹಾಗೂ ಅವರನ್ನು ಜರೆಯುವ ಇತರ ಸಂಪ್ರದಾಯಗಳಿಂದ ಲಭ್ಯವಿದೆ. ಕಾಪಾಲಿಕರು ಮುಕ್ತವಾಗಿ ಮದ್ಯವನ್ನು ಕುಡಿಯುತ್ತಿದ್ದರು, ಕ್ರಿಯಾವಿಧಿಗಳಿಗಾಗಿ ಮತ್ತು ರೂಢಿಯ ವಿಷಯವಾಗಿ ಎರಡಕ್ಕೂ, ಎಂದು ವಿವಿಧ ಭಾರತೀಯ ಪಠ್ಯಗಳು ಸಾಧಿಸುತ್ತವೆ. ೭ನೇ ಶತಮಾನದಲ್ಲಿ ಭಾರತಕ್ಕೆ ಬಂದ ಚೀನಿ ಯಾತ್ರಿಕನಾದ ಹ್ಯುಯೆನ್ ತ್ಸಾಂಗ್‍ನು ಈಗ ವಾಯವ್ಯ ಪಾಕಿಸ್ತಾನ ಎಂದು ಕರೆಸಿಕೊಳ್ಳುವ ಪ್ರದೇಶದ ಮೇಲಿನ ಬಖೈರಿನಲ್ಲಿ, ತಮ್ಮ ದೇಹವನ್ನು ಬೂದಿಯಿಂದ ಆವರಿಸಿಕೊಳ್ಳುತ್ತಿದ್ದ ಮತ್ತು ತಮ್ಮ ತಲೆಗಳ ಮೇಲೆ ಮೂಳೆಯ ಮಾಲೆಗಳನ್ನು ಧರಿಸುತ್ತಿದ್ದ ನಗ್ನ ತಪಸ್ವಿಗಳೊಂದಿಗೆ ಇರುತ್ತಿದ್ದ ಬೌದ್ಧಧರ್ಮೀಯರ ಬಗ್ಗೆ ಬರೆದನು, ಆದರೆ ಹ್ಯುಯೆನ್ ತ್ಸಾಂಗ್‍ನು ಇವರನ್ನು ಕಾಪಾಲಿಕರು ಅಥವಾ ಯಾವುದೇ ನಿರ್ದಿಷ್ಟ ಹೆಸರಿನಿಂದ ಕರೆಯಲಿಲ್ಲ. ವಿದ್ವಾಂಸರು ಈ ತಪಸ್ವಿಗಳನ್ನು ವಿಧವಿಧವಾಗಿ ದಿಗಂಬರ ಜೈನರು, ಪಾಶುಪತರು ಮತ್ತು ಕಾಪಾಲಿಕರು ಎಂದು ಅರ್ಥವಿವರಣೆ ನೀಡಿದ್ದಾರೆ.
ಕಾಪಾಲಿಕರು ಹೆಚ್ಚು ನಿಖರವಾಗಿ ಸಂನ್ಯಾಸಿ ಪಂಥವಾಗಿದ್ದರು ಮತ್ತು ಪಠ್ಯ ಸಿದ್ಧಾಂತವಿರುವ ಪಂಥವಾಗಿರಲಿಲ್ಲ ಎಂದು ಲೋರೆಂಜ಼ೆನ್ ಹೇಳುತ್ತಾರೆ. ಕಾಪಾಲಿಕ ಸಂಪ್ರದಾಯವು ತಂತ್ರಸಂಬಂಧಿ ಶೈವ ಪಂಥದ ಒಂದು ವರ್ಗವಾದ ಕುಲಮಾರ್ಗ ವರ್ಗದ ಉದಯಕ್ಕೆ ಕಾರಣವಾಯಿತು. ಇದು ಕಾಪಾಲಿಕ ಸಂಪ್ರದಾಯದ ಕೆಲವು ವಿಶಿಷ್ಟ ಲಕ್ಷಣಗಳನ್ನು ಸಂರಕ್ಷಿಸುತ್ತದೆ. ಕೆಲವು ಕಾಪಾಲಿಕ ಶೈವ ಆಚರಣೆಗಳು ವಜ್ರಾಯನ ಬೌದ್ಧ ಧರ್ಮದಲ್ಲಿ ಕಂಡುಬರುತ್ತವೆ, ಮತ್ತು ಯಾರು ಯಾರ ಮೇಲೆ ಪ್ರಭಾವ ಬೀರಿದರು ಎಂಬ ಬಗ್ಗೆ ವಿದ್ವಾಂಸರು ಭಿನ್ನಾಭಿಪ್ರಾಯ ಹೊಂದಿದ್ದಾರೆ.
ಉಲ್ಲೇಖಗಳು
ಬದಲಾಯಿಸಿ- ↑ Gavin Flood (2008). The Blackwell Companion to Hinduism. John Wiley & Sons. pp. 212–213. ISBN 978-0-470-99868-7.