ಕಾತ್ಯಾಯಿನಿ ಕುಂಜಿಬೆಟ್ಟು

ಡಾ. ಕಾತ್ಯಾಯಿನಿ ಕುಂಜಿಬೆಟ್ಟು ( ನವೆಂಬರ್ ೧೭, ೧೯೭೬) ಇವರು ಕನ್ನಡ ಲೇಖಕಿ, ಉಪನ್ಯಾಸಕಿ. ಇವರು ಉಡುಪಿ ಜಿಲ್ಲೆಯ ಕಾಪು ಬಳಿಯ ಕರಂದಾಡಿಯಲ್ಲಿ ಜನಿಸಿದರು. ಇವರ ತಂದೆ ವೈ. ಚಂದ್ರಶೇಖರ ಆರ್ ಹಾಗೂ ತಾಯಿ ಗಿರಿಜಾ ದೇವಿ. ಇವರು ಪ್ರಸ್ತುತ (೨೦೨೩) ಉಡುಪಿಯ ಎಂ.ಜಿ.ಎಂ (ಮಹಾತ್ಮ ಗಾಂಧಿ) ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಕಾತ್ಯಾಯಿನಿ ಕುಂಜಿಬೆಟ್ಟು
ಜನನನವೆಂಬರ್ ೧೭, ೧೯೭೬
ಉಡುಪಿ ಜಿಲ್ಲೆಯ ಕಾಪು ಬಳಿಯ ಕರಂದಾಡಿ
ವೃತ್ತಿಲೇಖಕಿ, ಉಪನ್ಯಾಸಕಿ
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಕವಿತೆ[೧], ಕಾದಂಬರಿ, ನಾಟಕ[೨], ವಿಮರ್ಶೆ, ಜೀವನ ಚರಿತ್ರೆ, ಕತೆ[೩], ಅಂಕಣ ಬರಹ

ಶಿಕ್ಷಣ ಬದಲಾಯಿಸಿ

ಕಾತ್ಯಾಯಿನಿ ಕುಂಜಿಬೆಟ್ಟು ಇವರು ೨೦೦೨ರಲ್ಲಿ ಕರ್ನಾಟಕದ ಮೈಸೂರು ಮುಕ್ತ ವಿಶ್ವವಿದ್ಯಾಲಯದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದರು. ೨೦೦೪ ರಲ್ಲಿ ಮುಂಬೈಯ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ ಹಿಂದುಸ್ತಾನಿ ಸಂಗೀತದಲ್ಲಿ 'ವಿಶಾರದ ' ಪದವಿಯನ್ನು , ೨೦೦೮ ರಲ್ಲಿ ನವದೆಹಲಿಯ ಯುಜಿಸಿ - ಎನ್.ಇ.ಟಿ (ಜೆ ಆರ್ ಎಫ್) ಹಾಗೂ ೨೦೧೪ ರಲ್ಲಿ ಮಣಿಪಾಲ ಅಕಾಡಮಿ ಆಫ್ ಹೈಯರ್ ಎಜುಕೇಶನ್ ಸಂಸ್ಥೆಯಿಂದ ಪಿಎಚ್.ಡಿ ಪದವಿಯನ್ನು ಗಳಿಸಿದರು.

ಕೃತಿಗಳು ಬದಲಾಯಿಸಿ

ಪ್ರಕಟಿತ ಕೃತಿಗಳು[೪] ಬದಲಾಯಿಸಿ

ಕವನ ಸಂಕಲನ ಬದಲಾಯಿಸಿ

  1. ಏಕತಾರಿ ಸಂಚಾರಿ (ಕವನ ಸಂಕಲನ) -ವಿಹಾ ಪ್ರಕಾಶನ ಬೆಂಗಳೂರು-೨೦೨೧ ಐಎಸ್ ಬಿ ಎನ್ : 978-81-951977-9-8
  2. ನೀನು (ಕವನ ಸಂಕಲನ) - ಶ್ರೀನಿವಾಸ ಪುಸ್ತಕ ಪ್ರಕಾಶನ ಬೆಂಗಳೂರು-೨೦೧೨
  3. ಅವನು ಹೆಣ್ಣಾಗಬೇಕು ( ಕವನ ಸಂಕಲನ) - ನಿವೇದಿತ ಪ್ರಕಾಶನ, ಬೆಂಗಳೂರು. ಐಎಸ್ ಬಿ ಎನ್ : 978-93-889563-7-6
  4. ಕಾಯಕಾವ್ಯ (ಕವನ ಸಂಕಲನ )-ಎಸ್.ಎಲ್.ಎನ್.ಪಬ್ಲಿಕೇಶನ್ ಬೆಂಗಳೂರು-೨೦೧೮ ಐಎಸ್ ಬಿ ಎನ್ : 978-93-85368-97 - 4
  5. ನಕ್ಷತ್ರ ನಕ್ಕ ರಾತ್ರಿ - ೨೦೨೩

ಕಾದಂಬರಿ ಬದಲಾಯಿಸಿ

  1. ತೊಗಲು ಗೊಂಬೆ - ಪ್ರಥಮ ಮುದ್ರಣ- ಶ್ರೀನಿವಾಸ ಪ್ರಕಾಶನ ಬೆಂಗಳೂರು-೨೦೦೯, ಎರಡನೇ ಮುದ್ರಣ:- ಎಸ್.ಎಲ್.ಎನ್ ಪಬ್ಲಿಕೇಶನ್ ಬೆಂಗಳೂರು-20 I9 ಐಎಸ್ ಬಿ ಎನ್ : 978-81-943186-2-0
  2. ಕಬರ್ಗತ್ತಲೆ (ತುಳು)- ಸುಮಂತ ಪ್ರಕಾಶನ ಉಪ್ಪಿನ ಕೋಟೆ ಬ್ರಹ್ಮಾವರ, ಉಡುಪಿ-೨೦೦೬

ನಾಟಕ ಬದಲಾಯಿಸಿ

  1. ಕೊಕ್ಕೊ ಕೋಕೋ - ಎಸ್.ಎಲ್.ಎನ್.ಪಬ್ಲಿಕೇಶನ್ ಬೆಂಗಳೂರು-೨೦೨೨ ಐಎಸ್ ಬಿ ಎನ್ : 978-93-92424-21-2
  2. ಮಕ್ಕಳ 5 ನಾಟಕಗಳು - ಎಸ್.ಎಲ್.ಎನ್.ಪಬ್ಲಿಕೇಶನ್ ಬೆಂಗಳೂರು-೨೦೧೯ ಐಎಸ್ ಬಿ ಎನ್ : 978-81-943186-3-7
  3. ಜೋಡಿ ಕಾಯಿ - ಎಸ್.ಎಲ್.ಎನ್.ಪಬ್ಲಿಕೇಶನ್ ಬೆಂಗಳೂರು-೨೦೧೯ ಐಎಸ್ ಬಿ ಎನ್ : 978-81-943186-1-3
  4. ಗುಳಿಯಪ್ಪ ಮತ್ತು ಕೋರೆ ಹಲ್ಲು - ನಿವೇದಿತ ಪ್ರಕಾಶನ ಬೆಂಗಳೂರು-೨೦೧೮
  5. ಪಗಡೆ ಹಾಸು - ಕಾಮಧೇನು ಪ್ರಕಾಶನ ಬೆಂಗಳೂರು-೨೦೧೮
  6. ಮಕ್ಕಳ ಮೂರು ನಾಟಕಗಳು - ಶ್ರೀನಿವಾಸ ಪುಸ್ತಕ ಪ್ರಕಾಶನ ಬೆಂಗಳೂರು-೨೦೧೦

ವಿಮರ್ಶೆ ಬದಲಾಯಿಸಿ

  1. ತೀರದ ಹೆಜ್ಜೆ - ಎಸ್.ಎಲ್.ಎನ್.ಪಬ್ಲಿಕೇಶನ್ ಬೆಂಗಳೂರು-೨೦೧೮ ಐಎಸ್ ಬಿ ಎನ್ : 978-93-85368-96-7
  2. ಒಳದನಿಯ ಪಲುಕುಗಳು - ಶ್ರೀನಿವಾಸ ಪುಸ್ತಕ ಪ್ರಕಾಶನ ಬೆಂಗಳೂರು-೨೦೧೩
  3. ಇರವಿನ ಅರಿವು - ೨೦೨೩

ಅಂಕಣ ಬರಹ ಬದಲಾಯಿಸಿ

  1. ಅಕ್ಕ ಕೇಳವ್ವ - ಗುಲ್ಬರ್ಗಾ ವಿಶ್ವವಿದ್ಯಾಲಯ ಪ್ರಸಾರಾಂಗ -೨೦೧೮ ಐಎಸ್ ಬಿ ಎನ್ : 978-81-321O36-5-5[೫][೬][೭][೮]

ಜೀವನ ಚರಿತ್ರೆ ಬದಲಾಯಿಸಿ

  1. ಸಮಗ್ರ ಸಾಧಕ ರಾಮದಾಸ್ - ಕಾಂತಾವರ ಕನ್ನಡ ಸಂಘ ಪ್ರಕಾಶನ ಮೂಡುಬಿದರೆ -೨೦೧೫ ಐಎಸ್ ಬಿ ಎನ್ :
  2. ಪಳಕಳ ಸೀತಾರಾಮ ಭಟ್ಟರ ಬದುಕು -ಬರಹ - ಸಿವಿಜಿ ಪಬ್ಲಿಕೇಶನ್ ಬೆಂಗಳೂರು-೨೦೧೮

ತುಳು ಅನುವಾದ ಬದಲಾಯಿಸಿ

  1. ರಾಮಧಾನ್ಯ ಚರಿತೆ - ಎಸ್.ಎಲ್.ಎನ್.ಪಬ್ಲಿಕೇಶನ್ ಬೆಂಗಳೂರು-೨೦೨೨ ಐಎಸ್ ಬಿ ಎನ್ : 978-93-92424-22-9
  2. ಮಹಾಮ್ಮಾಯಿ (ಕನ್ನಡ ಮೂಲ: ಡಾ. ಚಂದ್ರಶೇಖರ ಕಂಬಾರ ) - ಮಣಿಪಾಲ ಯುನಿವರ್ಸಿಟಿ ಪ್ರೆಸ್ -೨೦೧೭ ಐಎಸ್ ಬಿ ಎನ್ : 978-93-82460-65-7[೯]
  3. ನಾಗಮಂಡಲ (ಕನ್ನಡ ಮೂಲ: ಡಾ.ಗಿರೀಶ ಕಾರ್ನಾಡ)- ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಉಡುಪಿ- ೨೦೧೩
  4. ಅಂತರ (ಮರಾಠಿ ಮೂಲ: ಅಶೋಕ ಪಾಟೋಳೆ) -ರಜತ ಸಾಹಿತ್ಯ ಪ್ರಕಾಶನ ಶಿವಮೊಗ್ಗ - ೨೦೧೧

ಸಂಶೋಧನಾ ಪ್ರಬಂಧ ಬದಲಾಯಿಸಿ

  1. ಮೊಗ್ಗಿನ ಮಾತು - ಮಣಿಪಾಲ ಯುನಿವರ್ಸಲ್ ಪ್ರೆಸ್, ಮಣಿಪಾಲ - ೨೦೧೫ ಐಎಸ್ ಬಿ ಎನ್ : 978-93-82460-30-5

ಕಥಾ ಸಂಕಲನ ಬದಲಾಯಿಸಿ

  1. ಜೀವ ವಿಹಂಗಮ - ಸಿವಿಜಿ ಪಬ್ಲಿಕೇಶನ್ ಬೆಂಗಳೂರು-೨೦೧೮

ಸಂಪಾದಿತ ಕೃತಿಗಳು ಬದಲಾಯಿಸಿ

  1. ಮೊಗೇರಿ ಗೋಪಾಲಕೃಷ್ಣ ಅಡಿಗರ ವಾಚಿಕೆ - ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕರ್ನಾಟಕ ಸರಕಾರ -೨೦೨೨ ಐಎಸ್ ಬಿ ಎನ್:789395 553346[೧೦]
  2. ಶಿವರಾಮ ಕಾರಂತರ ಕನ್ನಡ ಪ್ರಜ್ಞೆ - ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರಕಾರ -೨೦೨೨
  3. ಪಂಜೆ ಮಂಗೇಶರಾಯರ ವಾಚಿಕೆ - ಕುವೆಂಪು ಭಾಷಾ ಪ್ರಾಧಿಕಾರ, ಕರ್ನಾಟಕ ಸರಕಾರ - ೨೦೧೮ ಐಎಸ್ ಬಿ ಎನ್ : 978-93-8759-268-1
  4. ಎಳೆಯರ ಪಳಕಳ - ಶ್ರೀನಿವಾಸ ಪ್ರಕಾಶನ ಬೆಂಗಳೂರು-೨೦೧೧

ಅಪ್ರಕಟಿತ ಕೃತಿಗಳು ಬದಲಾಯಿಸಿ

  1. ಕಾಯತಂಬೂರಿ - ನಾಟಕ
  2. ಭಾಸನ 'ಮಧ್ಯಮ ವ್ಯಾಯೋಗ- ತುಳು ಅನುವಾದ
  3. ಪೋಲಿಸ್ - ( ಮೂಲ: ರಾಜೇಂದ್ರ ಕಾರಂತ) - ತುಳು ಅನುವಾದ
  4. ಕನಕನ ಕಿಂಡಿ - ಮಕ್ಕಳ ನಾಟಕ.

ಪ್ರಶಸ್ತಿಗಳು ಬದಲಾಯಿಸಿ

೧. ಕನಕ ಯುವ ಪುರಸ್ಕಾರ- ೨೦೧೯ - ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಕರ್ನಾಟಕ ಸರಕಾರ.[೧೧]

೨. ಕರ್ನಾಟಕ ನಾಟಕ ಅಕಾಡಮಿ ಬಹುಮಾನ (ನಾಟಕ: ಪಗಡೆ ಹಾಸು) - ೨೦೧೮

೩. ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ (ನಾಟಕ: ಗುಳಿಯಪ್ಪ ) - ೨೦೧೬

೪.ಲೀಲಾವತಿ ಗುರುಸಿದ್ಧಪ್ಪ ಸಿಂಧೂರ ದತ್ತಿ ಪ್ರಶಸ್ತಿ (ವಿಮರ್ಶೆ; ಒಳದನಿಯ ಪಲುಕುಗಳು) - ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು- ೨೦೧೪

೫.ಅರಳು ಪ್ರಶಸ್ತಿ ( ಮಕ್ಕಳ ಮೂರು ನಾಟಕಗಳು)- ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಮತ್ತು ಕರ್ನಾಟಕ ಸರಕಾರ ಸಾರಿಗೆ ಸಂಸ್ಥೆ - 2011[೧೨]

೬. ಮಲ್ಲಿಕಾ ದತ್ತಿ ಪ್ರಶಸ್ತಿ (ಕಾದಂಬರಿ 'ತೊಗಲು ಗೊಂಬೆ)-ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು[೧೩]

ಬಾಹ್ಯ ಸಂಪರ್ಕ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. https://www.youtube.com/watch?v=W9mh7ux8Eiw
  2. https://www.google.com/imgres?imgurl=https://i.ytimg.com/vi/5f_Wf-zYi6k/hqdefault.jpg&imgrefurl=https://www.youtube.com/watch?v%3D5f_Wf-zYi6k&docid=KGL-1hNRQ0yHqM&tbnid=ZoC1AYpSSBsQyM&vet=1&w=480&h=360&itg=1&hl=en-US&source=sh/x/im
  3. https://www.youtube.com/watch?si=nWrp-_wot7lqvv5o&v=91QcFZIrtok&feature=youtu.be
  4. https://www.bookbrahma.com/author/kathyayini-kunjibettu
  5. https://www.youtube.com/watch?v=FczQ1popTwU
  6. https://www.youtube.com/watch?v=byg2n3BXeSs
  7. https://www.youtube.com/watch?v=FQRnAkRcJb0
  8. https://www.youtube.com/watch?v=6uBiI8hMDjI
  9. https://www.99bookscart.com/book/9789382460657/mahammayi---paperback-tulu
  10. https://www.exoticindiaart.com/book-author/katyayini+kunjibettu/
  11. https://news13.in/archives/172499
  12. https://avadhimag.in/%e0%b2%a8%e0%b3%83%e0%b2%aa%e0%b2%a4%e0%b3%81%e0%b2%82%e0%b2%97-%e0%b2%85%e0%b2%b0%e0%b2%b3%e0%b3%81-%e0%b2%b8%e0%b2%be%e0%b2%b9%e0%b2%bf%e0%b2%a4%e0%b3%8d%e0%b2%af-%e0%b2%aa%e0%b3%8d%e0%b2%b0/
  13. https://vijayatimes.com/jatyateeta-parikalpane-namma/?amp_markup=1