ಕಾಡು ಕಣಿಗಿಲೆ
ಕಾಡು ಕಣಿಗಿಲೆ ಹೂವು ಮತ್ತು ಎಲೆಗಳು
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
C. peruviana
Binomial name
Cascabela thevetia
Synonyms[]
List
    • Cascabela peruviana (Pers.) Raf.
    • Cerbera linearifolia Stokes
    • Cerbera peruviana Pers.
    • Cerbera thevetia L.
    • Thevetia linearis Raf.
    • Thevetia linearis A. DC.
    • Thevetia neriifolia Juss. ex A.DC.
    • Thevetia peruviana (Pers.) K.Schum.
    • Thevetia thevetia (L.) H.Karst. nom. inval.
Leaves & flowers
Ripe fruit are black.
Trunk and bark

ಕಾಡು ಕಣಿಗಿಲೆ ಒಂದು ಔಷಧೀಯ ಸಸ್ಯ.

ವೈಜ್ಞಾನಿಕ ವರ್ಗೀಕರಣ

ಬದಲಾಯಿಸಿ

ಅಪೋಸೈನೇಸೀ ಕುಟುಂಬದ ಗಿಡ. ತೆವೀಷಿಯ ನೀರಿಫೋಲಿಯ ವೈಜ್ಞಾನಿಕ ನಾಮ.ಕನ್ನಡದಲ್ಲಿ ಕರವೀರ, ಸಂಸ್ಕೃತದಲ್ಲಿ ಅಶ್ವಘ್ನ, ಅಶ್ವಹ, ಹರಿ ಪ್ರಿಯ, ಕರವೀರ ಮುಂತಾದ ಹೆಸರುಗಳಿವೆ.ಇಂಗ್ಲೀಷಿನಲ್ಲಿ ಇಂಡಿಯನ್ ಒಲೆಂಡರ್ ಎಂಬ ಹೆಸರುಗಳಿವೆ.

ಲಕ್ಷಣಗಳು

ಬದಲಾಯಿಸಿ

೧೦ ರಿಂದ ೨೦ ಆಡಿ ಬೆಳೆಯುವ ಪೊದೆಸಸ್ಯ. ಸಪೂರವಾಗಿ ಉದ್ದವಿರುವ ಎಲೆಗಳು. ಸೌಮ್ಯ ಸುಗಂಧಭರಿತ ಹಳದಿ ಪುಷ್ಪ.ಕಡು ಕೆಂಪು ಅಥವಾ ಕಪ್ಪು ಬಣ್ಣದ ದೊಡ್ಡ ಗಾತ್ರದ ಕಾಯಿಗಳು.ಕಾಂಡದಲ್ಲಿ ಒಸರುವ ಬಿಳಿ ದ್ರವ ಅತ್ಯಂತ ವಿಷಕಾರಿ.ಇದು ನಿತ್ಯ ಹರಿದ್ವರ್ಣದ ದೊಡ್ಡ ಪೊದರುಗಿಡ. ಕೆಲವು ಕಡೆಗಳಲ್ಲಿ ಚಿಕ್ಕ ಮರವಾಗಿಯೂ ಬೆಳೆಯುತ್ತದೆ. ಇದರ ಮೂಲಸ್ಥಾನ ದಕ್ಷಿಣ ಅಮೆರಿಕ. ಭಾರತದ ಆದ್ಯಂತ ಸ್ವಾಭಾವಿಕವಾಗಿ ಬೆಳೆಯುತ್ತದೆ. ಗಿಡದಲ್ಲಿ ಹಾಲು ಬರುತ್ತದೆ. ಎಲೆಗಳು ಉದ್ದ ಮತ್ತು ನೀಳವಾಗಿವೆ. ಹೂಗಳ ಬಣ್ಣ ಹಳದಿ, ಆಕಾರ ಗಂಟೆಯಂತೆ. ದಳಗಳ ಮೇಲೆ ದಳರೋಮಗಳು (ಕೊರೋನಾ) ಬೆಳೆದಿರುತ್ತದೆ. ಕೇಸರಗಳು ದಳಕೊಳವೆಯ ಗಂಟಲಲ್ಲಿ ಒಟ್ಟುಗೂಡಿವೆ. ಶಲಾಕಾಗ್ರ ಲಿಂಗಾಕಾರವಾಗಿದೆ. ಕಾಯಿಯ ಉದ್ದ 3 ಸೆಂಮೀ., ಅಗಲ 3.8 ಸೆಂಮೀ. ಇದರಲ್ಲಿ 4 ಬೀಜಗಳಿವೆ. ಕಾಯಿಗೆ ದುಂದಾಡ ಮೂಲೆಗಳಿವೆ.

ಉಪಯೋಗಗಳು

ಬದಲಾಯಿಸಿ

ಅಲಂಕಾರಿಕ ಸಸ್ಯವಾಗಿ ರಸ್ತೆ ಬದಿಗಳಲ್ಲಿ ಮತ್ತು ಉದ್ಯಾನವನಗಳಲ್ಲಿ ಬೆಳೆಸುತ್ತಾರೆ.ಗಿಡ ಬಹಳ ಕಹಿ. ಇದರ ಹಾಲು ವಿಷ. ಆಗಾಗ ಬಿಟ್ಟು ಬರುವ ಜ್ವರಕ್ಕೆ ಗಿಡದ ತೊಗಟೆಯನ್ನು ಔಷಧಿಯಾಗಿ ಉಪಯೋಗಿಸುತ್ತಾರೆ. ಬೀಜಗಳು ಸಹ ವಿಷಪೂರಿತವಾದವು. ಮುಂಡರು ಹಂದಿ ಮತ್ತು ನರಿಗಳನ್ನು ಸಾಯಿಸಲು ಬೀಜಗಳನ್ನು ವಿಷವಾಗಿ ಉಪಯೋಗಿಸುತ್ತಾರೆ. ಇವುಗಳಿಂದ ತೆಗೆದ ಎಣ್ಣೆಗೆ ಭೇಧಿ ಔಷಧಿಯಾಗಿ ಬಳಕೆ ಉಂಟು. ಕಾಡು ಕಾಸಿಕಣಗಿಲೆ ಗಿಡದಿಂದ ಥೆವಿಟಿನ್, ಥೆವಿಟಾಕ್ಸಿನ್, ನಿರಿಫೋಲಿನ್, ಅಸಿಟೈಲ್ ಮುಂತಾದ ರಾಸಾಯನಿಕ ಔಷಧಿಗಳನ್ನು ಬೇರ್ಪಡಿಸಿದ್ದಾರೆ. ಥೆವಿಟಿನ್ ಮುಂತಾದ ಔಷಧಿ ಹೃದ್ರೋಗಗಳಿಗೆ ಬಹಳ ಪರಿಣಾಮಕಾರಿ ಎಂದು ತಿಳಿದುಬಂದಿದೆ. ಮೂಲರೋಗ, ತೊನ್ನು, ಚರ್ಮರೋಗಗಳಿಗೂ ಈ ಗಿಡದಿಂದ ಔಷಧಿಗಳನ್ನು ತಯಾರಿಸುತ್ತಾರೆ.ಇಲಿನಾಶಕವಾಗಿಯೂ ಉಪಯೋಗದಲ್ಲಿದೆ.[]

ಔಷಧೀಯ ಗುಣಗಳು

ಬದಲಾಯಿಸಿ

ಆಯುರ್ವೇದ ಔಷಧ ಪದ್ಧತಿಯಲ್ಲಿ ವ್ಯಾಪಕವಾಗಿ ಉಪಯೋಗದಲ್ಲಿದೆ. ಹೃದಯ ಸಂಬಂಧಿ ಕಾಯಿಲೆಗಳಿಗೆ ಬೇಕಾದ ಕೆಲವು ಔಷಧಗಳನ್ನು ಇದರ ಕಾಂಡದಲ್ಲಿರುವ ಬಿಳಿ ದ್ರವದಿಂದ ತಯಾರಿಸುತ್ತಾರೆ. ಎಲೆ ಮತ್ತು ಹೂವಿನಿಂದ ವಾತ,ಕಫ ಮತ್ತು ಪಿತ್ತಕ್ಕೆ ಸಂಬಂಧಿ ಸಿದಂತೆ ಹಲವು ಔಷಧ ತಯಾರಿಕೆಯಲ್ಲಿ ಬಳಕೆಯಲ್ಲಿದೆ. ಜೇಡ ಕಚ್ಚಿದ ಗಾಯಕ್ಕೆ ಇದರಿಂದ ಔಷಧ ತಯಾರಿಸುತ್ತಾರೆ.
ಕಾಡು ಕಣಿಗಿಲೆ ಸಸ್ಯದಿಂದ ಜೈವಿಕ ಕೀಟನಾಶಕವನ್ನು ತಯಾರಿಸುತ್ತಾರೆ.ಕೆಲವು ಪ್ರಭೇದಗಳ ಸಸ್ಯಗಳಿಂದ ಗೆದ್ದಲು ನಿರೋಧಕ,ಫಂಗಸ್ ನಿರೋಧಕ ಬಣ್ಣಗಳನ್ನು ತಯಾರಿಸುತ್ತಾರೆ..[]

ಉಲ್ಲೇಖಗಳು

ಬದಲಾಯಿಸಿ
  1. "The Plant List: A Working List of All Plant Species". Archived from the original on ಏಪ್ರಿಲ್ 15, 2021. Retrieved May 17, 2014.
  2. Gupta R, Kachhawa JB, Gupta RS, Sharma AK, Sharma MC, Dobhal MP (March 2011). "Phytochemical evaluation and antispermatogenic activity of Thevetia peruviana methanol extract in male albino rats". Hum Fertil (Camb). 14 (1): 53–59. doi:10.3109/14647273.2010.542230.{{cite journal}}: CS1 maint: multiple names: authors list (link)
  3. Kareru P.G., Keriko J.M., Kenji G.M., Gachanja A.N. (2010). "Anti-termite and antimicrobial properties of paint made from Thevetia peruviana (Pers.) Schum. oil extract". African Journal of Pharmacy and Pharmacology. 4 (2): 87–89.{{cite journal}}: CS1 maint: multiple names: authors list (link)



ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: