ಕಾಕುತ್ಸ್ಥವರ್ಮ
ಕಾಕುತ್ಸ್ಥವರ್ಮ ಕದಂಬ ರಾಜಮನೆತನದ ಪ್ರಖ್ಯಾತ ದೊರೆಗಳಲ್ಲೊಬ್ಬ. ಭಗೀರಥನ (365-385) ಮಗ ಮತ್ತು ರಘುವಿನ (385-405) ಸೋದರ. 405 ರಿಂದ 430ರ ವರೆಗೆ ಆಳಿದ. ಇವನ ಕಾಲದಲ್ಲಿ ಕದಂಬರಾಜ್ಯ ವಿಸ್ತಾರಗೊಂಡಿತು. ಈತ ದಕ್ಷಿಣದಲ್ಲಿ ಪಲ್ಲವರೊಂದಿಗೆ ಹೋರಾಡಿದ. , ಗಂಗ ಮತ್ತು ವಾಕಾಟಕ ರಾಜವಂಶಗಳವರಿಗೆ ತನ್ನ ಹೆಣ್ಣುಮಕ್ಕಳನ್ನು ಕೊಟ್ಟು ವಿವಾಹ ಮಾಡಿ ರಾಜ್ಯದ ಸುಭದ್ರತೆ ಖ್ಯಾತಿಗಳನ್ನು ಬೆಳೆಸಿದ. ಈತನ ಕಾಲದಲ್ಲಿ ರಾಜ್ಯ ಸುರಕ್ಷಿತವಾಗಿತ್ತು. ರಾಜ್ಯವನ್ನು ತನ್ನ ಮಕ್ಕಳಾದ ಶಾಂತಿವರ್ಮ ಮತ್ತು ಮೊದಲನೆಯ ಕೃಷ್ಣವರ್ಮನಿಗೆ ವಿಭಾಗ ಮಾಡಿ ಕೊಟ್ಟಿದ್ದನೆಂದೂ ಶಾಂತಿವರ್ಮ ಬನವಾಸಿಯಿಂದಲೂ ಕೃಷ್ಣವರ್ಮ ತ್ರಿಪರ್ವತದಿಂದಲೂ ಸ್ವತಂತ್ರರಾಗಿ ಆಳಿದರೆಂದೂ ತಿಳಿದುಬರುತ್ತದೆ.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: