ಆಫ್ಪಾನಿಸ್ತಾನದ ಎರಡನೆಯ ನಗರ: ಅದೇ ಹೆಸರಿನ ಪ್ರಾಂತ್ಯದ ಮುಖ್ಯಸ್ಥಳ, ಸಮುದ್ರಮಟ್ಟಕ್ಕಿಂತ ೩೩೦೦ ಎತ್ತರದಲ್ಲಿ, ಕಾಬೂಲಿನ ನೈಋತ್ಯಕ್ಕೆ ೩೨೦ ಮೈ, ದೂರದಲ್ಲಿದೆ. ಪಾಕಿಸ್ತಾನದ ಕೆಟ್ಟ ಇರುವುದು. ಇಲ್ಲಿಗೆ ೧೩೦ ಮೈ, ದೂರದಲ್ಲಿ-ಆಗ್ನೇಯಕ್ಕೆ. ಕಾಂದಹಾರದ ಜನಸಂಖ್ಯೆ ೧೨೦೦೦೦ (೧೯೬೦ರ ಅಂದಾಜು). ಕಾಂದಹಾರದ ಸುತ್ತಮುತ್ತಣ ಸೀಮೆಯಲ್ಲಿರುವಂತೆ ಇಲ್ಲೂ ಪಠಾಣರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಪಠಾಣರ ಇನ್ನೊಂದು ಪ್ರಬಲ ಕೇಂದ್ರವೆಂದರೆ ಪಾಕಿಸ್ತಾನದಲ್ಲಿರುವ ಪೆಷಾವರ್. ಪೆಷಾವರಿನ ಜನ ಆಡುವ ಭಾಷೆಗಿಂತ (ಪಖ್ತು) ಕಾಂದಹಾರದವರದು (ಪಷ್ಟೂ) ಹೆಚ್ಚು ಮೃದು.[]

ಆಧುನಿಕ ಕಾಂದಹಾರ್ ನಗರದಲ್ಲಿ ಶಾಲೆ, ಕಾಲೇಜು, ಚಿತ್ರಮಂದಿರಗಳೇ ಮುಂತಾದ ಅನೇಕ ನೂತನ ಭವನಗಳಿವೆ. ಜನನಿಬಿಡವಾದ ಹಳೆಯ ನಗರವಿರುವುದು ಇದಕ್ಕೆ ಪೂರ್ವದಲ್ಲಿ. ಅದನ್ನು ನಿರ್ಮಿಸಿದಾತ ಅಹಮದ್ ಷಾ ದುರಾನಿ (೧೭೨೪-೭೩). ಹಳೆಯ ನಗರವನ್ನು ಬಳಸಿದ್ದ ಆಯಾಕಾರದ ಮಣ್ಣಿನ ಕೋಟೆ ಬಹುತೇಕ ಬಿದ್ದು ಹೋಗಿದೆ. ಆದರೂ ಅದರ ಕುರುಹುಗಳನ್ನು ಈಗಲೂ ಕಾಣಬಹುದು. ಅಹಮದ್ ಷಾನ ಸಮಾಧಿಯಿರುವುದು ಈಶಾನ್ಯ ಮೂಲೆಯಲ್ಲಿ. ನಗರದಲ್ಲಿರುವ ಸ್ಮಾರಕಶಿಲ್ಪ ಇದೊಂದೇ. ಪ್ರವಾದಿ ಮಹಮ್ಮದನ ಬಟ್ಟೆಯಿದೆಯೆಂದು ಹೇಳಲಾದ ಮಸೀದಿ ಇರುವುದು ಇದರ ಪಕ್ಕದಲ್ಲಿ.

ಈಗಿನ ನಗರಕ್ಕೆ ಪಶ್ಚಿಮದಲ್ಲಿ ೪ ಮೈ, ಅಂತರದಲ್ಲಿ ಬೆಟ್ಟದ ಪಾಶ್ರ್ವದಲ್ಲಿ ಹಳೆಯ ಕಾಂದಹಾರದ ಅವಶೇಷಗಳಿವೆ. ೧೭೩೮ರಲ್ಲಿ ನಾದಿರ್ ಷಾ ಅದನ್ನು ಕೊಳ್ಳೆಹೊಡೆದು ನಾಶಪಡಿಸಿದ. ಅದರ ನಡುವೆ ಇರುವ ಬಾಬಾವಾಲಿಯ ಉದ್ಯಾನವೂ ಈಗಲೂ ಯಾತ್ರಿಕರ ಆಕರ್ಷಣೆಯಾಗಿರುವ ಒಂದು ದೇವಮಂದರಿವೂ ಇವೆ. ಇಲ್ಲಿಯ ಬೆಟ್ಟದಲ್ಲಿ ಮೊಗಲ್ ಚಕ್ರವರ್ತಿಗಳಾದ ಬಾಬರ್ ಮತ್ತು ಅಕ್ಬರರ ಶಾಸನಗಳಿವೆ. ಅಶೋಕನದೊಂದು ಶಿಲಾಶಾಸನವೂ ಸನಿಯದಲ್ಲೇ ಸಿಕ್ಕಿದೆ. ಇದುವರೆಗೆ ದೊರಕಿರುವ ಅಶೋಕಶಾಸನಗಳಲ್ಲಿ ಇದೇ ಅತ್ಯಂತ ಪಶ್ಚಿಮದ್ದು.

ಉಲ್ಲೇಖನೆಗಳು:

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ