ಪ್ರಕಾಶ

(ಕಾಂತಿ ಇಂದ ಪುನರ್ನಿರ್ದೇಶಿತ)

ರೇಡಿಯೊಮಾಪನದಲ್ಲಿ, ಪ್ರಕಾಶವು ಒಂದು ನಿರ್ದಿಷ್ಟ ಮೇಲ್ಮೈಯು ಪ್ರತಿ ಏಕಮಾನ ಘನ ಕೋನ ಮತ್ತು ಪ್ರತಿ ಏಕಮಾನ ಪ್ರಕ್ಷೇಪಿತ ಚದರಳತೆಯಲ್ಲಿ ಹೊರಸೂಸಿದ, ಪ್ರತಿಬಿಂಬಿಸಿದ, ಪ್ರಸರಿಸಿದ ಅಥವಾ ಪಡೆದ ವಿಕಿರಣ ಪ್ರಸರ. ರೋಹಿತದ ಕಾಂತಿಯು ಪ್ರತಿ ಏಕಮಾನ ಆವರ್ತನ ಅಥವಾ ತರಂಗಾಂತರದಲ್ಲಿ ಒಂದು ಮೇಲ್ಮೈಯ ಕಾಂತಿ. ಇದು ವರ್ಣಪಟಲವನ್ನು ಆವರ್ತನದ ಅಥವಾ ತರಂಗಾಂತರದ ಫಲನವಾಗಿ ತೆಗೆದುಕೊಳ್ಳಲಾಗಿದೆಯೇ ಎಂಬುದನ್ನು ಆಧರಿಸಿದೆ. ಇವು ದಿಕ್ಕಿಗೆ ಸಂಬಂಧಿಸಿದ ಪರಿಮಾಣಗಳು. ಪ್ರತಿ ಸ್ಟರೇಡಿಯನ್ ಮತ್ತು ಪ್ರತಿ ಚದರ ಮೀಟರ್‍ಗೆ ವಾಟ್ ಇದು ಪ್ರಕಾಶದ ಎಸ್‍ಐ ಏಕಮಾನವಾಗಿದೆ. ಕೆಲವು ಕ್ಷೇತ್ರಗಳಲ್ಲಿ ರೋಹಿತದ ಕಾಂತಿಯನ್ನು ಅಳೆಯಲು ಫ಼್ಲಿಕ್ ಅನ್ನೂ ಬಳಸಲಾಗುತ್ತದೆ.[] ಪ್ರಕಾಶವನ್ನು ವಿದ್ಯುತ್ಕಾಂತೀಯ ಪ್ರಸರಣದ ಪ್ರಸಾರಿತ ಹೊರಸೂಸುವಿಕೆ ಮತ್ತು ಪ್ರತಿಫಲನವನ್ನು ವಿವರಿಸಲು, ಅಥವಾ ನ್ಯೂಟ್ರೀನೊಗಳು ಮತ್ತು ಇತರ ಕಣಗಳ ಹೊರಸೂಸುವಿಕೆಯನ್ನು ಪ್ರಮಾಣೀಕರಿಸಲು ಬಳಸಲಾಗುತ್ತದೆ. ಐತಿಹಾಸಿಕವಾಗಿ, ಪ್ರಕಾಶವನ್ನು "ತೀವ್ರತೆ" ಎಂದು ಕರೆಯಲಾಗುತ್ತದೆ ಮತ್ತು ರೋಹಿತ ಕಾಂತಿಯನ್ನು "ನಿರ್ದಿಷ್ಟ ತೀವ್ರತೆ" ಎಂದು ಕರೆಯಲಾಗುತ್ತದೆ. ಅನೇಕ ಕ್ಷೇತ್ರಗಳು ಈಗಲೂ ಈ ನಾಮಕರಣವನ್ನು ಬಳಸುತ್ತವೆ. ಇದು ವಿಶೇಷವಾಗಿ ಶಾಖ ವರ್ಗಾವಣೆ, ಖಭೌತ ವಿಜ್ಞಾನ ಮತ್ತು ಖಗೋಳವಿಜ್ಞಾನದಲ್ಲಿ ಪ್ರಬಲವಾಗಿದೆ.

ಪ್ರಕಾಶವು ಉಪಯುಕ್ತವಾಗಿದೆ ಏಕೆಂದರೆ ಅದು ಒಂದು ಮೇಲ್ಮೈಯು ಹೊರಸೂಸಿದ, ಪ್ರತಿಫಲಿಸಿದ, ಪ್ರಸರಿಸಿದ ಅಥವಾ ಪಡೆದ ಶಕ್ತಿಯ ಎಷ್ಟು ಭಾಗವನ್ನು ಆ ಮೇಲ್ಮೈಯನ್ನು ಒಂದು ನಿರ್ದಿಷ್ಟ ನೋಟ ಕೋನದಿಂದ ನೋಡುತ್ತಿರುವ ದೃಗ್ವೈಜ್ಞಾನಿಕ ವ್ಯವಸ್ಥೆಯು ಪಡೆಯಲಿದೆ ಎಂಬುದನ್ನು ಸೂಚಿಸುತ್ತದೆ. ಈ ಸಂದರ್ಭದಲ್ಲಿ, ಆಸಕ್ತಿಯ ಘನ ಕೋನವು ದೃಗ್ವೈಜ್ಞಾನಿಕ ವ್ಯವಸ್ಥೆಯ ಪ್ರವೇಶ ಪಾಪೆಯು ಮೂಡಿಸಿದ ಘನ ಕೋನವಾಗಿದೆ. ಕಣ್ಣು ಒಂದು ದೃಗ್ವೈಜ್ಞಾನಿಕ ವ್ಯವಸ್ಥೆಯಾದುದರಿಂದ, ಪ್ರಕಾಶ ಮತ್ತು ಅದರ ಸಂಬಂಧಿ ದೀಪ್ತತೆ ಎರಡೂ ಒಂದು ವಸ್ತುವು ಎಷ್ಟು ಪ್ರಕಾಶಮಾನವಾಗಿ ಕಾಣುವವು ಎಂಬುದರ ಉತ್ತಮ ಸೂಚಕಗಳಾಗಿವೆ. ಈ ಕಾರಣಕ್ಕಾಗಿ, ಪ್ರಕಾಶ ಮತ್ತು ದೀಪ್ತತೆ ಎರಡನ್ನೂ ಕೆಲವೊಮ್ಮೆ "ಹೊಳಪು" ಎಂದು ಕರೆಯಲಾಗುತ್ತದೆ. ಈ ಬಳಕೆಯನ್ನು ಈಗ ವಿರೋಧಿಸಲಾಗಿದೆ. "ಹೊಳಪು" ಶಬ್ದದ ಪ್ರಮಾಣಕವಲ್ಲದ ಬಳಕೆಯು ಕೆಲವು ಕ್ಷೇತ್ರಗಳಲ್ಲಿ, ಗಮನಾರ್ಹವಾಗಿ ಲೇಸರ್ ಭೌಸ್ತಶಾಸ್ತ್ರದಲ್ಲಿ ಮುಂದುವರೆದಿದೆ.

ಉಲ್ಲೇಖಗಳು

ಬದಲಾಯಿಸಿ
  1. Palmer, James M. "The SI system and SI units for Radiometry and photometry" (PDF). Archived from the original (PDF) on August 2, 2012.


"https://kn.wikipedia.org/w/index.php?title=ಪ್ರಕಾಶ&oldid=801890" ಇಂದ ಪಡೆಯಲ್ಪಟ್ಟಿದೆ