ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ
ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಆಫ್ರಿಕಾ ಖಂಡದ ಮಧ್ಯಭಾಗದಲ್ಲಿ ವಿಷುವದ್ರೇಖೆಯ ಮೇಲಿನ ಒಂದು ಸಾರ್ವಭೌಮ ರಾಷ್ಟ್ರ. ಹಿಂದೆ ಇದು ಬೆಲ್ಜಿಯಂ ನ ಒಂದು ವಸಾಹತಾಗಿದ್ದಿತು. ಈ ದೇಶವು ಡಿ.ಆರ್. ಕಾಂಗೋ, ಕಾಂಗೋ ಕಿನ್ಶಾಸಾ, ಜಾಯಿರ್ ಎಂಬ ಇತರ ಹೆಸರುಗಳಿಂದಲೂ ಸಹ ಗುರುತಿಸಲ್ಪಡುತ್ತದೆ. ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯವು ಆಫ್ರಿಕಾದ ಮೂರನೆಯ ಅತಿ ದೊಡ್ಡ ರಾಷ್ಟ್ರವಾಗಿದೆ. ಇದರ ಉತ್ತರಕ್ಕೆ ಮಧ್ಯ ಆಫ್ರಿಕಾದ ಗಣರಾಜ್ಯ ಮತ್ತು ಸುಡಾನ್ ಗಳು; ದಕ್ಷಿಣದಲ್ಲಿ ಉಗಾಂಡಾ, ರುವಾಂಡಾ, ಬುರುಂಡಿ, ಜಾಂಬಿಯಾ ಮತ್ತು ಅಂಗೋಲಾ ಗಳು; ಪ್ಪಶ್ಚಿಮಕ್ಕೆ ಕಾಂಗೋ ಗಣರಾಜ್ಯಗಳಿವೆ. ಪೂರ್ವದಲ್ಲಿ ಈ ದೇಶ ಮತ್ತು ಟಾಂಜಾನಿಯಾಗಳ ನಡುವೆ ಟಾಂಗನ್ಯೀಕಾ ಸರೋವರವಿರುವುದು. ಪಶ್ಚಿಮದಲ್ಲಿ ಸುಮಾರು ೪೦ ಕಿ.ಮೀ. ಗಳಷ್ಟು ಅಟ್ಲಾಂಟಿಕ್ ಮಹಾಸಾಗರದ ಕಿನಾರೆ ಪ್ರದೇಶವಿರುವುದು. ಕಾಂಗೋ ನದಿಯ ಕೊಳ್ಳವು ಸಂಪೂರ್ಣವಾಗಿ ಈ ರಾಷ್ಟ್ರದಲ್ಲಿಯೇ ಇದೆ. ಅಲ್ಲದೇ ನಾಡಿನ ಗಣನೀಯ ಭಾಗವು ಗೊಂಡಾರಣ್ಯವಾಗಿದೆ.
ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ République Démocratique du Congo | |
---|---|
Motto: Justice – Paix – Travail(ಫ್ರೆಂಚ್) "ನ್ಯಾಯ-ಶಾಂತಿ-ದುಡಿಮೆ" | |
Anthem: ದಿಬೌತ್ ಕಾಂಗೊಲೈಸ್ | |
Capital | ಕಿನ್ಶಾಸಾ |
Largest city | ರಾಜಧಾನಿ |
Official languages | ಫ್ರೆಂಚ್ |
Recognised regional languages | ಲಿಂಗಾಲಾ, ಕಾಂಗೋ/ಕಿಟೂಬಾ, ಸ್ವಾಹಿಲಿ, ಟ್ಶಿಲೂಬಾ |
Demonym(s) | Congolese |
Government | ಅರೆ ಅಧ್ಯಕ್ಷೀಯ ಗಣರಾಜ್ಯ |
ಜೋಸೆಫ್ ಕಬೀಲ | |
• ಪ್ರಧಾನಿ | ಆಂಟೋಯ್ನ್ ಗಿಝೆಂಗಾ |
ಸ್ವಾತಂತ್ರ್ಯ | |
• ಬೆಲ್ಜಿಯಂನಿಂದ | ಜೂನ್ 30 1960 |
• Water (%) | 3.3 |
Population | |
• 2007 estimate | 63,655,000 (20ನೆಯದು) |
• 1984 census | 29,916,800 |
GDP (PPP) | 2005 estimate |
• Total | $46.491 ಬಿಲಿಯನ್ (78ನೆಯದು) |
• Per capita | $774 (174ನೆಯದು) |
GDP (nominal) | 2005 estimate |
• Total | $7.094 ಬಿಲಿಯನ್ (116ನೆಯದು) |
• Per capita | $119 (181ನೆಯದು) |
HDI (2004) | 0.391 Error: Invalid HDI value · 167ನೆಯದು |
Currency | ಕಾಂಗೊಲೀಸ್ ಫ್ರಾಂಕ್ (CDF) |
Time zone | UTC+1 to +2 (WAT, CAT) |
• Summer (DST) | UTC+1 to +2 (ಪರಿಗಣನೆಯಲ್ಲಿಲ್ಲ) |
Calling code | 243 |
Internet TLD | .cd |