ಕಲ್ಬಾದೇವಿ
'ಕಲ್ಬಾದೇವಿ' ಮುಂಬಯಿ ನ ಬಹಳ ಪುರಾತನ ಪ್ರದೇಶಗಳಲ್ಲೊಂದು. ಹಿಂದೂ ದೇವತೆ, 'ಕಲ್ಬಾದೇವಿಯ ದೇವಸ್ಥಾನ,' ವಿದೆ. ಇಲ್ಲಿಯ ಪೋಸ್ಟಲ್ ಕೋಡ್, ೪೦೦ ೦೦೨. ಅತಿ ಹೆಚ್ಚು ಜನಸಂಖ್ಯೆ ಇರುವ ಸ್ಥಳಗಳಲ್ಲೊಂದು. ಮುಂಬಯಿ ನ ಹಲವಾರು ಪ್ರದೇಶಗಳಲ್ಲಿ ಹಿಂದೂ ದೇವತೆಯರ ಹೆಸರನ್ನು ಕಾಣಬಹುದು. ಉದಾಹರಣೆಗೆ, ಪ್ರಭಾದೇವಿ, ಮುಂಬಾದೇವಿ, ಮಹಾಲಕ್ಷ್ಮಿ, ಸಿತ್ಲಾದೇವಿ, ಇತ್ಯಾದಿ. ದಿನದ ಪೀಕ್ ಸಮಯದಲ್ಲಿ ಜನಸಂದಣಿ ಅತಿಯಾಗಿರುತ್ತದೆ. ಇಲ್ಲಿನ ಹೆಚ್ಚಾಗಿ ಗಡಿಯಾರ, ಬೈಸಿಕಲ್ , ಸ್ಟೀಲ್ ಪಾತ್ರೆಗಳ ವ್ಯಾಪಾರಗಾರರು ಇದ್ದಾರೆ.[೧]
Kalbadevi
ಕಲ್ಬಾದೇವಿ | |
---|---|
Neighbourhood | |
ದೇಶ | ಭಾರತ |
ರಾಜ್ಯ | ಮಹಾರಾಷ್ಟ್ರ |
ಮಹಾನಗರ | ಮುಂಬಯಿ |
Languages | |
• Official | ಮರಾಠಿ |
Time zone | UTC+5:30 (IST) |
'ಸಿ.ಎಸ್.ಟಿ ,'ಯಿಂದ 'ಕಲ್ಬಾದೇವಿ' ಗೆ, 'ಮಸ್ಜಿದ್ ಬಂದರ್', 'ಮರಿನ್ ಲೈನ್ಸ್,' ಹತ್ತಿರ. ನಡೆದೇ ಬರಬಹುದು
ಬದಲಾಯಿಸಿ'ಕಲ್ಬಾದೇವಿ' ಯನ್ನು ತಲುಪಲು, ಜನರು, 'ಮಸ್ಜಿದ್ ಬಂದರ್,' 'ಮರಿನ್ ಲೈನ್ಸ್,' ರಲ್ವೆ ಸ್ಟೇಶನ್ ಮೇಲೆ ಅವಲಂಭಿಸಿರುತ್ತಾರೆ. ಮೆಟ್ರೋ ಸಿನಿಮಾದಿಂದ ಆರಂಭವಾಗಿ, ಭುಲೇಶ್ವರದವರಗೆ, ಮತ್ತು ಮುಂದೆ, ಇಲ್ಲಿ ಹಳೆಯ ಮತ್ತು ಹೊಸ ಪುಸ್ತಕಗಳ ಅಂಗಡಿಗಳಿವೆ. 'ಮೂಲ್ಜಿ ಜೆಥ ಮಾರ್ಕೆಟ್ ,' ಮತ್ತು 'ಮಂಗಳದಾಸ್ ಕಪಡ ಮಾರ್ಕೆಟ್,' ಇಲ್ಲಿಗೆ ಹತ್ತಿರ. 'ಕಲ್ಬಾದೇವಿ' ಯಲ್ಲಿ ಹೋಲ್ಸೇಲ್ ಮಾರ್ಕೆಟ್ ನಿಂದ ಮಾಲ್ ತರಲು ಸಹಾಯ ಇಲ್ಲಿ ದೊರೆಯುತ್ತದೆ. ಕಾಟನ್ ಎಕ್ಸ್ ಚೇಂಜ್ ಇಲ್ಲೆ ಹತ್ತಿರ. ಹತ್ತಿಯ ವ್ಯಾಪಾರಕ್ಕೆ ಇದು ಪ್ರಸಿದ್ಧಿ. ಭುಲೇಶ್ವರ್ ರೋಡ್, ಕುರಿಯರ್ ಸೇವೆಗೆ ಹೆಸರುವಾಸಿ. ಇದಕ್ಕೆ 'ಅಂಗಾಡಿಯ ಸರ್ವಿಸ್,' ಎನ್ನುತ್ತಾರೆ. ಮಧ್ಯೆ ಒಂದು ಹೋಟೆಲ್, 'ಸೂರ್ತಿ,' ಇದೆ. ಕಲ್ಬಾದೇವಿ ಮತ್ತು ಭುಲೆಶ್ವರ ಜಂಕ್ಷನ್ ನಲ್ಲಿ, ಬೇರೆ ರೆಸ್ಟೋರೆಂಟ್ ಗಳು, ಅನಂದ್ ಭವನ್, ಹಾಗೂ ಕ್ರಿಷ್ಣ ಮುರಾರಿ, ಇವೆರಡೂ ಹನುಮಾನ್ ದೇವಾಲಯದ ಬಳಿ ಇವೆ. ಅಂದರೆ, ಕಲ್ಬಾದೇವಿ ರೋಡ್ ನ ಅರ್ಥದಲ್ಲಿ ಎನ್ನಬಹುದು. 'ರಾಜ್ ಮಹಲ್', ಮತ್ತು 'ಪುಷ್ಪ ವಿಹಾರ್ ಹೋಟೆಲ್,' ಗಳು ಮೆಟ್ರೋ ಸಿನೆಮಾಕ್ಕೆ ಹೋಗುವ ಮಾರ್ಗದಲ್ಲಿವೆ. ಮೊದಲು ಇಲ್ಲಿ ವಾಸದ ಮನೆಗಳು ಹೆಚ್ಚಾಗಿದ್ದವು. 'ಅಬ್ದುಲ್ ರೆಹ್ಮಾನ್ ರಸ್ತೆ', 'ಪ್ರಿನ್ಸೆಸ್ ರಸ್ತೆ', ಮತ್ತು 'ಭುಲೇಶ್ವರ್ ರಸ್ತೆ,' ಗಳಲ್ಲಿ ಪರಿವಾರಗಳು ವಾಸ್ತವ್ಯಹೂಡಿದ್ದವು. ಬೆಲೆಗಳು ಏರಿದಂತೆ, ಹೆಚ್ಚು ಹೆಚ್ಚು ಜನ ಈಜಾಗವನ್ನು ಬಿಟ್ಟು, ಉತ್ತರ ಮುಂಬಯಿ ನ ಪ್ರದೇಶಗಳಿಗೆ ಹೋಗಿ ನೆಲೆಸಲು ಶುರುಮಾಡಿದರು. ಆದ್ದರಿಂದ ಹಳೆ ಕಟ್ಟಡಗಳಲ್ಲಿ ವ್ಯಾಪಾರ ವನ್ನು ಮಾತ್ರ ಚಿಕ್ಕರೀತಿಯಲ್ಲಿ ಮಾಡಬಹುದು. ಕಲ್ಬಾದೇವಿ, ಗೆ 'ಪಾರ್ಸಿ ಅಘಿಯಾರ್,' ಹಾಗೂ , 'ಮೆಟ್ರೋ ಸಿನೆಮಾ,' ಹತ್ತಿರ. ಈ ಸ್ಥಳದಲ್ಲಿ ಬಹಳ ಮಂದಿ 'ಪಾರ್ಸಿ,' ಜನರನ್ನು ಕಾಣಬಹುದು. ಕಲ್ಬಾದೇವಿ ರಸ್ತೆಯಲ್ಲಿರುವ ಮುಂಬಯಿ ನ ಸುಪ್ರಸಿದ್ಧ, 'ಪಾರ್ಸಿ ಡೈರಿ', ಅತಿ ಪುರಾತನವಾದದ್ದು. ಈಗ ಇಲ್ಲಿನ ಪ್ರದೇಶಗಳು ಅಧುನಿಕವಾಗಿವೆ. [೨][೩]
ಪುಸ್ತಕ ಭಂಡಾರಗಳು :
ಬದಲಾಯಿಸಿ- 'ಆರ್. ಆರ್. ಶೆಠ್ ಮತ್ತು ಕಂ' ಪುಸ್ತಕ ಪ್ರಕಾಶಕರು,
- 'ನವಭಾರತ್ ಸಾಹಿತ್ಯ ಮಂದಿರ್ ', ಹತ್ತಿರವೇ ಇರುವ, ಪ್ರಿನ್ಸೆಸ್ ಸ್ಟ್ರೀಟ್ ನಲ್ಲಿದೆ.
ಉಲ್ಲೇಖಗಳು
ಬದಲಾಯಿಸಿ- ↑ 400002 pincode & post offices (5 offices)
- ↑ Ranganathan, Murali (ed. & tr.). Govind Narayan's Mumbai: An Urban Biography from 1863. London: Anthem Press. p. 70. ISBN 978-1--84331-305-2.
- ↑ Chaware, Dilip. "'Mumbadevi temple was relocated'". ದಿ ಟೈಮ್ಸ್ ಆಫ್ ಇಂಡಿಯಾ.