ಕಲ್ಕತ್ತ ರಿವ್ಯೂ
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಕಲ್ಕತ್ತ ರಿವ್ಯೂ : ಕಲ್ಕತ್ತ ವಿಶ್ವವಿದ್ಯಾಲಯದ ಒಂದು ಮಾಸಪತ್ರಿಕೆ. ೧೮೪೪ರಲ್ಲಿ ತ್ರೈಮಾಸಿಕವಾಗಿ ಕಲ್ಕತ್ತ ನಗರದಲ್ಲಿ ಪ್ರಾರಂಭವಾಯಿತು. ಭಾರತೀಯ ವಿಷಯಗಳನ್ನು ಚರ್ಚಿಸುವುದೇ ಇದರ ಮುಖ್ಯ ಗುರಿಯಾಗಿತ್ತು.
ಇತಿಹಾಸ
ಬದಲಾಯಿಸಿಇದರ ಮೊದಲ ಸಂಪಾದಕ ಜಾನ್ ಕೇ. ಇವನ ಅನಂತರ ಅಲೆಕ್ಸಾಂಡರ್ ಡಫ್, ಥಾಮಸ್ ಸ್ಮಿತ್ ಮೊದಲಾದ ವರು ಸಂಪಾದಕರಾಗಿ ಕೆಲಸ ಮಾಡಿದ್ದರು. ೧೯೧೩೪ರಲ್ಲಿ ಈ ಪತ್ರಿಕೆಯ ಹೊಸ ಸರಣಿ ಪ್ರಾರಂಭವಾಗಿ ತ್ರೈಮಾಸಿಕವಾಗಿಯೇ ಮುಂದುವರಿಯಿತು. ಅನಂತರ, ೧೯೨೧ರಲ್ಲಿ ಮಾಸಿಕವಾಗಿ, ಮಾರ್ಪಟ್ಟು, ಕಲ್ಕತ್ತ ವಿಶ್ವವಿದ್ಯಾಲಯದಿಂದ ಪ್ರಕಟವಾಗತೊಡಗಿತು. ಭಾರತದ ಕಾಲೇಜುಗಳು, ವಿಶ್ವವಿದ್ಯಾನಿಲಯಗಳು, ಸಾರ್ವಜನಿಕ ಗ್ರಂಥಾಲಯಗಳು, ಸಾಂಸ್ಕೃತಿಕ, ಸಾಹಿತ್ಯಕ ಮತ್ತು ವೈಜ್ಞಾನಿಕ ಸಂಸ್ಥೆಗಳು, ವಿದ್ವಾಂಸರು ಮುಂತಾದದವರೇ ಅಧಿಕ ಸಂಖ್ಯೆಯಲ್ಲಿ ಚಂದಾದಾರರಿರುವ ಈ ಪತ್ರಿಕೆಯಲ್ಲಿ ಸಂಸ್ಕೃತಿ, ಸಾಹಿತ್ಯ, ಶಿಕ್ಷಣ, ರಾಜಕಾರಣ, ಅರ್ಥಶಾಸ್ತ್ರ, ವಾಣಿಜ್ಯ ಮುಂತಾದ ನಾನಾ ವಿಚಾರಗಳನ್ನು ಕುರಿತ ಲೇಖನಗಳು ಪ್ರಕಟವಾಗಿವೆ. ಭಾರತದ ಅತ್ಯಂತ ಹಳೆಯ ಸಾಂಸ್ಕೃತಿಕ ಪತ್ರಿಕೆಯಾದ ಕಲ್ಕತ್ತರಿವ್ಯೂ ಇತಿಹಾಸ ಸಂಶೋಧಕರಿಗೆ ಉಪಯುಕ್ತ. ಈಗ ಈ ಪತ್ರಿಕೆ ಅರ್ಧವಾರ್ಷಿಕವಾಗಿ ಕಲ್ಕತ್ತ ವಿ.ವಿ. ಪ್ರೆಸ್ನಿಂದ ಪ್ರಕಟವಾಗುತ್ತಿದೆ