ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)
ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ ಅಥವಾ ಕೆ-ಸಿಇಟಿ ) ಕರ್ನಾಟಕ ರಾಜ್ಯದ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ವಾರ್ಷಿಕವಾಗಿ ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆಯಾಗಿದೆ. ಸಿಇಟಿ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುತ್ತದೆ, ಇದು ಕರ್ನಾಟಕದ ಉನ್ನತ ಶಿಕ್ಷಣ ಸಚಿವಾಲಯದ ವ್ಯಾಪ್ತಿಗೆ ಬರುತ್ತದೆ. ಇದು ಕರ್ನಾಟಕ ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಪೂರ್ಣ ಸಮಯದ ಎಂಜಿನಿಯರಿಂಗ್, ತಂತ್ರಜ್ಞಾನ, ಬಿ-ಫಾರ್ಮಾ, ಡಿ-ಫಾರ್ಮಾ, ಕೃಷಿ ಶಿಕ್ಷಣ (ಕೃಷಿ ವಿಜ್ಞಾನ) ಮತ್ತು ಪಶುವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾದ ಆಫ್‌ಲೈನ್ ಪರೀಕ್ಷೆಯಾಗಿದೆ. ಪ್ರವೇಶ ಪರೀಕ್ಷೆಯನ್ನು ನಡೆಸಲು ಮತ್ತು ಅರ್ಹತೆಯನ್ನು ನಿರ್ಧರಿಸಲು, ವಿವಿಧ ವೃತ್ತಿಪರ ಕೋರ್ಸ್‌ಗಳಲ್ಲಿ ಸೀಟುಗಳ ಸರ್ಕಾರಿ ಪಾಲುಗಾಗಿ ಮೊದಲ ವರ್ಷದ ಅಥವಾ ಪೂರ್ಣ ಸಮಯದ ವೃತ್ತಿಪರ ಕೋರ್ಸ್‌ಗಳ ಮೊದಲ ಸೆಮಿಸ್ಟರ್ ಪ್ರವೇಶಕ್ಕಾಗಿ ಕರ್ನಾಟಕ ಸರ್ಕಾರ 1994 ರಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷಾ ಘಟಕವನ್ನು ಸ್ಥಾಪಿಸಿತು. ಸಿಇಟಿ ಪರೀಕ್ಷೆಯನ್ನು ಕರ್ನಾಟಕದಾದ್ಯಂತ ಬಹುತೇಕ ಎಲ್ಲಾ ಜಿಲ್ಲೆ - ನಗರಗಳಲ್ಲಿ ಏಪ್ರಿಲ್ - ಮೇ ತಿಂಗಳಲ್ಲಿ ನಡೆಸಲಾಗುತ್ತದೆ (ಸಾಮಾನ್ಯವಾಗಿ ಏಪ್ರಿಲ್ ಕೊನೆಯ ವಾರದಲ್ಲಿ). [೧]
ಪರೀಕ್ಷೆಯ ಬಗ್ಗೆ
ಬದಲಾಯಿಸಿಸಿಇಟಿ ಪರೀಕ್ಷೆಯನ್ನು ಆಫ್‌ಲೈನ್‌ನಲ್ಲಿ ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ಎಂಬ 4 ವಿಷಯಗಳು ಸೇರಿವೆ. ಸಿಇಟಿ ಪರೀಕ್ಷಾ ಮಾದರಿಯ ಪ್ರಕಾರ, ಎಲ್ಲ ವಿಷಯಗಳ ಸೇರಿಸಿ ಪ್ರಶ್ನೆ ಪತ್ರಿಕೆಯಲ್ಲಿ ಒಟ್ಟು 180 ಬಹು ಆಯ್ಕೆ ಪ್ರಶ್ನೆಗಳಿರುತ್ತವೆ. ಪ್ರತಿ ವಿಷಯವನ್ನು 80 ನಿಮಿಷಗಳ ಅವಧಿಯೊಂದಿಗೆ ತಲಾ 60 ಅಂಕಗಳಿಗೆ ನಡೆಸಲಾಗುತ್ತದೆ. ಎಲ್ಲ ವಿಷಯಗಳ ಪರೀಕ್ಷೆಗಳು ಒಂದೇ ದಿನ ಇರುವುದಿಲ್ಲ. ಸಾಮಾನ್ಯವಾಗಿ ಸಿಇಟಿ ವೇಳಾಪಟ್ಟಿಯ ಪ್ರಕಾರ ಒಂದು ದಿನದಲ್ಲಿ ಎರಡು ಪರೀಕ್ಷೆಗಳಿರುತ್ತವೆ. ಸಿಇಟಿ ಪರೀಕ್ಷೆಯ ಒಟ್ಟು ಅಂಕಗಳು 180. ಸಿಇಟಿ ಪಠ್ಯಕ್ರಮವು ಕರ್ನಾಟಕ ರಾಜ್ಯದ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಸೂಚಿಸಲಾದ 1 ಮತ್ತು 2 ನೇ ವರ್ಷದ ಪಿಯುಸಿ ಪಠ್ಯಕ್ರಮವನ್ನು ಆಧರಿಸಿದೆ. ಪರೀಕ್ಷೆಯಲ್ಲಿ ಯಾವುದೇ ಋಣಾತ್ಮಕ ಅಂಕ ಇರುವುದಿಲ್ಲ. ಪರೀಕ್ಷೆಯನ್ನು ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ನಡೆಸಲಾಗುತ್ತದೆ.[೨]
ಕರ್ನಾಟಕವನ್ನು ಹೊರತುಪಡಿಸಿ ಇತರ ರಾಜ್ಯಗಳ ವಿದ್ಯಾರ್ಥಿಗಳಿಗೆ ಮತ್ತು ರಾಜ್ಯದ ಹೊರಗೆ ವಾಸಿಸುವ ಕನ್ನಡಿಗ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ನಡೆಸಲಾಗುತ್ತದೆ. [೩]
ಸಿಇಟಿ ಮೂಲಕ ನೀಡಲಾಗುವ ಕೋರ್ಸ್‌ಗಳು
ಬದಲಾಯಿಸಿಸಿಇಟಿ ಮೂಲಕ ವಿವಿಧ ವೃತ್ತಿಪರ ಕೋರ್ಸ್‌ಗಳನ್ನು ನೀಡಲಾಗುತ್ತದೆ. ವೈದ್ಯಕೀಯ ( ಎಂಬಿಬಿಎಸ್, ಬಿಡಿಎಸ್, ಬಿಎಎಂಎಸ್, ಇತ್ಯಾದಿ) ಪ್ರವೇಶ ಪರೀಕ್ಷೆಗೆ ಭಾರತದಲ್ಲಿ ನೀಟ್ ಪರೀಕ್ಷೆಯನ್ನು ರಾಷ್ಟ್ರೀಕರಣಗೊಳಿಸುವ ಮೊದಲು, ಸಿಇಟಿ ಪರೀಕ್ಷೆಯ ಮುಖಾಂತರ ಕರ್ನಾಟಕದಲ್ಲಿ ವೈದ್ಯಕೀಯ ಸೀಟುಗಳನ್ನು ನೀಡಲಾಗುತ್ತಿತ್ತು. [೪]
ಸಿಇಟಿ ಮೂಲಕ ನೀಡಲಾಗುವ ಕೋರ್ಸ್‌ಗಳು | |
---|---|
ಆರೋಗ್ಯ ವಿಜ್ಞಾನ | ಎಂಜಿನಿಯರಿಂಗ್ |
ಬಿವಿಎಸ್ಸಿ (ಪಶು ವೈದ್ಯಕೀಯ) | ಬಿ.ಟೆಕ್ (ಕೃಷಿ ಎಂಜಿನಿಯರಿಂಗ್) |
ಬಿಎಸ್ಸಿ (ಕೃಷಿ) | ಬಿ.ಟೆಕ್ (ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ) |
ಬಿಎಸ್ಸಿ (ರೇಷ್ಮೆ ಕೃಷಿ) | ಬಿ.ಟೆಕ್ (ಆಹಾರ ತಂತ್ರಜ್ಞಾನ) |
ಬಿಎಸ್ಸಿ (ತೋಟಗಾರಿಕೆ) | ಬಿ.ಟೆಕ್ (ಹೈನುಗಾರಿಕೆ) |
ಬಿಎಸ್ಸಿ (ಅರಣ್ಯ) | 2 ನೇ ವರ್ಷದ ಬಿಫಾರ್ಮಾ ಲ್ಯಾಟರಲ್ ಎಂಟ್ರಿ ಕೋರ್ಸ್ |
ಬಿಎಸ್ಸಿ ಅಗ್ರಿ ಬಯೋಟೆಕ್ | ಬಿ ಫಾರ್ಮಾ |
ಬಿಎಚ್‌ಎಸ್‌ಸಿ (ಗೃಹ ವಿಜ್ಞಾನ) | ಫಾರ್ಮಾ-ಡಿ |
ಬಿಎಫ್‌ಎಸ್‌ಸಿ (ಮೀನುಗಾರಿಕೆ) | |
ಬಿಎಸ್ಸಿ (ಕೃಷಿ ವ್ಯಾಪಾರೋದ್ಯಮ ಮತ್ತು ಸಹಕಾರ) |
ಉಲ್ಲೇಖಗಳು
ಬದಲಾಯಿಸಿ- ↑ "KEA | Home". cetonline.karnataka.gov.in. Retrieved 23 May 2020.
- ↑ https://www.careers360.com/exams/kcet
- ↑ "Karnataka Common Entrance Test – KCET". Collegedunia (in ಇಂಗ್ಲಿಷ್). Retrieved 23 May 2020.
- ↑ "KCET 2020 Exam Date (Out), Application Correction, Admit Card, Eligibility, Syllabus". www.shiksha.com. Retrieved 23 May 2020.