ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ, 1983

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ, 1983 – ಕರ್ನಾಟಕದ ಏಳನೆಯ ವಿಧಾನಸಭೆಗೆ ಚುನಾವಣೆಗಳು. ಈ ಚುನಾವಣೆಯಲ್ಲಿ ಜನತಾ ಪಕ್ಷವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು ಮತ್ತು ಇತರ ಪಕ್ಷಗಳ ಬೆಂಬಲದೊಂದಿಗೆ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾದರು. ಹಿಂದಿನ 1978ರ ವಿಧಾನಸಭೆಯಲ್ಲಿನ ಸ್ಥಾನಗಳಿಗಿಂತ ಜನತಾ ಪಕ್ಷವು 36 ಹೆಚ್ಚು ಸ್ಥಾನಗಳನ್ನು ಪಡೆದರೆ ಕಾಂಗ್ರೆಸ್ 67 ಕಡಿಮೆ ಸ್ಥಾನಗಳನ್ನು ಪಡೆಯಿತು. ಕರ್ನಾಟಕದಲ್ಲಿ ಮೊದಲ ಬಾರಿಗೆ ಕಾಂಗ್ರೇಸೇತರ ಪಕ್ಷವು ಅಧಿಕಾರಕ್ಕೆ ಬಂತು. ಏಳನೆಯ ವಿಧಾನಸಭೆಯು 24 ಜೂಲೈ 1983 ರಿಂದ 2 ಜನವರಿ 1985ರ ವರೆಗೆ ಆಸ್ತಿತ್ವದಲ್ಲಿತ್ತು ಮತ್ತು ಜನತಾ ಪಕ್ಷವು ಲೋಕಸಭೆ ಚುನಾವಣೆಯಲ್ಲಿ ತೀರಾ ಕಡಿಮೆ ಸ್ಥಾನಗಳನ್ನು ಪಡೆದ ಕಾರಣಕ್ಕೆ ರಾಮಕೃಷ್ಣ ಹೆಗಡೆಯವರು ವಿಧಾನಸಭೆ ವಿಸರ್ಜಿಸಿ ಮತ್ತೆ ಜನಾಧೇಶ ಕೋರಿದರು. ಹೀಗಾಗಿ ಏಳನೆಯ ವಿಧಾನಸಭೆ ಅವಧಿಗೆ ಮುನ್ನವೇ ವಿಸರ್ಜನೆಗೊಂಡಿತು. ಈ ವಿಧಾನಸಭೆಯ ಅವಧಿಯಲ್ಲಿ ಜನತಾ ಪಕ್ಷದ ಡಿ. ಬಿ. ಚಂದ್ರೇಗೌಡ ವಿಧಾನಸಭೆಯ ಸ್ಪೀಕರ್ ಆಗಿದ್ದರು.

ಕರ್ನಾಟಕ ರಾಜ್ಯ ವಿಧಾನ ಸಭೆ ಚುನಾವಣೆ
1983
ಭಾರತ
1978 1985
ಎಲ್ಲಾ 224 ವಿಧಾನಸಭಾ ಸ್ಥಾನಗಳಿಗೂ ಚುನಾವಣೆ
ಬಹುಮತಕ್ಕೆ 113 ಸ್ಥಾನಗಳು ಗೆಲ್ಲಬೇಕು
ಬಹುಮತ ಪಡೆದ ಪಕ್ಷ ಪ್ರಮುಖ ವಿರೋಧ ಪಕ್ಷ
ನಾಯಕ ರಾಮಕೃಷ್ಣ ಹೆಗಡೆ ಆರ್. ಗುಂಡೂರಾವ್
ಪಕ್ಷ ಜನತಾ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಈಗ ಗೆದ್ದ ಸ್ಥಾನಗಳು 95 82
ಹಿಂದಿನ ಮುಖ್ಯಮಂತ್ರಿ ಚುನಾಯಿತ ಮುಖ್ಯಮಂತ್ರಿ
ಆರ್. ಗುಂಡೂರಾವ್ ಕಾಂಗ್ರೆಸ್ ರಾಮಕೃಷ್ಣ ಹೆಗಡೆ ಜನತಾ ಪಕ್ಷ

ಪಲಿತಾಂಶ

ಬದಲಾಯಿಸಿ
ಕರ್ನಾಟಕ ವಿಧಾನಸಭೆ ಚುನಾವಣೆ, 1983[]
ಚುನಾವಣೆಯಲ್ಲಿ ಜಯಗಳಿಸಿದ ಪಕ್ಷಗಳ ವಿವರ
ಪಕ್ಷಗಳು ಸ್ಪರ್ದಿಸಿದ
ಸ್ಥಾನಗಳು
ಗೆಲುವು ಠೇವಣಿ ನಷ್ಟ ಒಟ್ಟಾರೆ ಮತಗಳು ಶೇಕಡವಾರು
ಮತಗಳು
ಸ್ಥಾನಗಳ ಬದಲಾವಣೆ
ಜನತಾ ಪಕ್ಷ 193 95 43 42,72,318 33.07  36
ಕಾಂಗ್ರೆಸ್ 221 82 1 52,21,419 40.42  67
ಭಾರತೀಯ ಜನತಾ ಪಕ್ಷ 110 18 71 10,24,892 7.93  18
ಭಾರತೀಯ ಕಮ್ಯುನಿಷ್ಟ್ ಪಕ್ಷ 7 3 1 1,61,192 1.25 -
ಭಾರತೀಯ ಕಮ್ಯುನಿಷ್ಟ್ ಪಕ್ಷ (ಮಾರ್ಕ್‌ವಾದಿ) 4 3 84 1,15,320 0.89  3
ಅಣ್ಣಾ ಡಿಎಂಕೆ 1 1 0 16,234 0.13  1
ಇತರ ಪಕ್ಷಗಳು 78 0 78 1,09,828 0.84 -
ಪಕ್ಷೇತರರು 751 22 686 19,98,256 15.47  12
ಮೊತ್ತ 1365 224 880 1,29,19,459 100.00
ಕನಿಷ್ಠ ಒಂದು ಸ್ಥಾನ ಪಡೆದ ಅಥವಾ ಶೇ 1ರಷ್ಟು ಒಟ್ಟು ಮತ ಪಡೆದ ಪಕ್ಷಗಳನ್ನು ತೋರಿಸಲಾಗಿದೆ.

ಆಧಾರಗಳು

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ
  1. STATISTICAL REPORT ON GENERAL ELECTION, 1983 TO THE LEGISLATIVE ASSEMBLY OF KARNATAKA Archived 2010-10-07 ವೇಬ್ಯಾಕ್ ಮೆಷಿನ್ ನಲ್ಲಿ. Election Commission of India, New Delhi, Page 7, Retrieved on 2016-12-02