ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ೨೦೧೬

ರಾಜ್ಯ ಚಲನಚಿತ್ರ ಪ್ರಶಸ್ತಿ ೨೦೧೬

ಬದಲಾಯಿಸಿ
  • ಕವಿತಾ ಲಂಕೇಶ್‌ ನೇತೃತ್ವದಲ್ಲಿ ಎಂಟು ಜನ ಸದಸ್ಯರ ಆಯ್ಕೆ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯು ಪ್ರಶಸ್ತಿ ಕಣದಲ್ಲಿದ್ದ 126 ಸಿನಿಮಾಗಳನ್ನು ವೀಕ್ಷಿಸಿ 25 ವಿಭಾಗಗಳಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.ಅವರ ಆಯ್ಕೆಯಂತೆ, ಪೌರ ಕಾರ್ಮಿಕರ ತವಕ ತಲ್ಲಣಗಳ ಚಿತ್ರಣದ ‘ಅಮರಾವತಿ’ ವರ್ಷದ ಅತ್ಯುತ್ತಮ ಚಿತ್ರ ಪ್ರಶಸ್ತಿ (ನಿರ್ಮಾಪಕ ಮತ್ತು ನಿರ್ದೆಶಕರಿಬ್ಬರಿಗೂ ತಲಾ ರೂ.1 ಲಕ್ಷ ನಗದು ಹಾಗೂ 50 ಗ್ರಾಂ ಚಿನ್ನದ ಪದಕವನ್ನು ಪಡೆದಿದೆ , ಈ ಚಿತ್ರಕ್ಕೆ ವಿವಿಧ ವಿಭಾಗಗಳಲ್ಲಿ ಮೂರು ಪ್ರಶಸ್ತಿಗಳು ಸಂದಿವೆ.[]

ಪ್ರಶಸ್ತಿ ವಿವರ

ಬದಲಾಯಿಸಿ
  • ಪ್ರಥಮ ಅತ್ಯುತ್ತಮ ಚಿತ್ರ: ಅಮರಾವತಿ:
  • ನಿರ್ಮಾಪಕ (ಕೆ.ಸಿ.ಎನ್‌. ಗೌಡ ಪ್ರಶಸ್ತಿ) - ಮಾಧವ ರೆಡ್ಡಿ - ಒಂದು ಲಕ್ಷ ರೂ.ಗಳ ನಗದು ಹಾಗೂ 50 ಗ್ರಾಂನ ಚಿನ್ನದ ಪದಕ
  • ನಿರ್ದೇಶಕ (ಎಚ್‌.ಎಲ್‌.ಎನ್‌. ಸಿಂಹ ಪ್ರಶಸ್ತಿ) - ಬಿ.ಎಂ. ಗಿರಿರಾಜ್‌ - ಒಂದು ಲಕ್ಷ ರೂ.ಗಳ ನಗದು ಹಾಗೂ 50 ಗ್ರಾಂನ ಚಿನ್ನದ ಪದಕ
  • ದ್ವಿತೀಯ ಅತ್ಯುತ್ತಮ ಚಿತ್ರ: ರೈಲ್ವೆ ಚಿಲ್ಡ್ರನ್‌
  • ನಿರ್ಮಾಪಕ - ಪೃಥ್ವಿ ಕೊಣನೂರ್‌ - ಎಪ್ಪತ್ತೈದು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ
  • ನಿರ್ದೇಶಕ - ಪೃಥ್ವಿ ಕೊಣನೂರ್‌ - ಎಪ್ಪತ್ತೈದು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ
  • ತೃತೀಯ ಅತ್ಯುತ್ತಮ ಚಿತ್ರ: ಅಂತರ್ಜಲ
  • ನಿರ್ಮಾಪಕ - ಬಿ. ನಂದಕುಮಾರ್‌ - ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ
  • ನಿರ್ದೇಶಕ - ಹರೀಶ್‌ ಕುಮಾರ್‌ ಎಲ್‌ - ವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ
  • ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ಮೂಡ್ಲ ಸೀಮೆಯಲಿ
  • ನಿರ್ಮಾಪಕ - ಅನಿಲ್‌ ನಾಯ್ಡು, ಅರುಂಧತಿ ಎಂ, ಅಮರಾವತಿ ಎಂ - ಎಪ್ಪತ್ತೈದು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ
  • ನಿರ್ದೇಶಕ - ಶಿವರುದ್ರಯ್ಯ ಕೆ - ಎಪ್ಪತ್ತೈದು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ
  • ಅತ್ಯುತ್ತಮ ಜನಪ್ರಿಯ ಮನರಂಜನ ಚಿತ್ರ: ಕಿರಿಕ್‌ ಪಾರ್ಟಿ
  • ನಿರ್ಮಾಪಕ (ನರಸಿಂಹರಾಜು ಪ್ರಶಸ್ತಿ) - ರಕ್ಷಿತ್‌ ಶೆಟ್ಟಿ - ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ
  • ನಿರ್ದೇಶಕ - ರಿಷಭ್‌ ಶೆಟ್ಟಿ - ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ
  • ಅತ್ಯುತ್ತಮ ಮಕ್ಕಳ ಚಿತ್ರ: ಜೀರ್‌ ಜಿಂಬೆ
  • ನಿರ್ಮಾಪಕ - ಕಾರ್ತಿಕ್‌ ಸರಗೂರು - ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ
  • ನಿರ್ದೇಶಕ - ಕಾರ್ತಿಕ್‌ ಸರಗೂರು - ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ
  • ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ: ಮದಿಪು (ತುಳು)
  • ನಿರ್ಮಾಪಕ - ಸಂದೀಪ್‌ ಕುಮಾರ್‌ ನಂದಲಿಕೆ - ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ
  • ನಿರ್ದೇಶಕ - ಚೇತನ್‌ ಮುಂಡಾಡಿ - ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ
  • ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ರಾಮ ರಾಮಾ ರೇ
  • ನಿರ್ಮಾಪಕ - ಡಿ. ಸತ್ಯಪ್ರಕಾಶ್‌ - ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ
  • ನಿರ್ದೇಶಕ - ಡಿ. ಸತ್ಯಪ್ರಕಾಶ್‌ -ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ

ಇತರ ಪ್ರಶಸ್ತಿಗಳು

ಬದಲಾಯಿಸಿ
  • * ಅತ್ಯುತ್ತಮ ನಟ (ಸುಬ್ಬಯ್ಯ ನಾಯ್ಡು ಪ್ರಶಸ್ತಿ): ಅಚ್ಯುತ್‌ ಕುಮಾರ್‌ (ಅಮರಾವತಿ) 20 ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
  • * ಅತ್ಯುತ್ತಮ ನಟಿ ಶ್ರುತಿ ಹರಿಹರನ್‌ (ಬ್ಯೂಟಿಫ‌ುಲ್‌ ಮನಸುಗಳು)20 ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
  • * ಅತ್ಯುತ್ತಮ ಪೋಷಕ ನಟ (ಕೆ.ಎಸ್‌.ಅಶ್ವತ್ಥ್ ಪ್ರಶಸ್ತಿ) ನವೀನ್‌ ಡಿ ಪಡೀಲ್‌ (ಕುಡ್ಲ ಕೆಫೆ - ತುಳು ಚಿತ್ರ) 20 ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
  • * ಅತ್ಯುತ್ತಮ ಪೋಷಕ ನಟಿ ಅಕ್ಷತಾ ಪಾಂಡವಪುರ (ಪಲ್ಲಟ) 20 ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
  • * ಅತ್ಯುತ್ತಮ ಕಥೆ ನಂದಿತಾ ಯಾದವ್‌ (ರಾಜು ಎದೆಗೆ ಬಿದ್ದ ಅಕ್ಷರ) 20 ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
  • * ಅತ್ಯುತ್ತಮ ಚಿತ್ರಕಥೆ ಅರವಿಂದ ಶಾಸಿŒ (ಕಹಿ) 20 ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
  • * ಅತ್ಯುತ್ತಮ ಸಂಭಾಷಣೆ ಬಿ.ಎಂ. ಗಿರಿರಾಜ್‌ (ಅಮರಾವತಿ) 20 ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
  • * ಅತ್ಯುತ್ತಮ ಛಾಯಾಗ್ರಹಣ ಶೇಖರ್‌ ಚಂದ್ರ (ಮುಂಗಾರು ಮಳೆ 2) 20 ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
  • * ಅತ್ಯುತ್ತಮ ಸಂಗೀತ ನಿರ್ದೇಶನ ಎಂ.ಆರ್‌. ಚರಣ್‌ ರಾಜ್‌ (ಜೀರ್‌ ಜಿಂಬೆ) 20 ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
  • * ಅತ್ಯುತ್ತಮ ಸಂಕಲನ ಸಿ. ರವಿಚಂದ್ರನ್‌ (ಮಮ್ಮಿ ಸೇವ್‌ ಮೀ) 20 ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
  • * ಅತ್ಯುತ್ತಮ ಬಾಲ ನಟ ಮಾಸ್ಟರ್‌ ಮನೋಹರ್‌ ಕೆ (ರೈಲ್ವೇ ಚಿಲ್ಡ್ರನ್‌) 20 ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
  • * ಅತ್ಯುತ್ತಮ ಬಾಲ ನಟಿ ಬೇಬಿ ಸಿರಿ ವಾನಳ್ಳಿ (ಜೀರ್‌ ಜಿಂಬೆ) ಮತ್ತು ಬೇಬಿ ರೇವತಿ (ಬೇಟಿ) ತಲಾ ಹತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
  • * ಅತ್ಯುತ್ತಮ ಕಲಾ ನಿರ್ದೇಶನ ಶಶಿಧರ ಅಡಪ (ಉಪ್ಪಿನ ಕಾಗದ) 20 ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
  • * ಅತ್ಯುತ್ತಮ ಗೀತ ರಚನೆ ಕಾರ್ತಿಕ್‌ ಸರಗೂರು (ಜೀರ್‌ ಜಿಂಬೆ) 20 ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
  • * ಅತ್ಯುತ್ತಮ ಹಿನ್ನೆಲೆ ಗಾಯಕ ವಿಜಯ್‌ ಪ್ರಕಾಶ್‌ (ಬ್ಯೂಟಿಫ‌ುಲ್‌ ಮನಸುಗಳು) 20 ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
  • * ಅತ್ಯುತ್ತಮ ಹಿನ್ನೆಲೆ ಗಾಯಕಿಸಂಗೀತಾ ರವೀಂದ್ರನಾಥ್‌ (ಜಲ್ಸ) 20 ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ

ತೀರ್ಪುಗಾರರ ವಿಶೇಷ ಪ್ರಶಸ್ತಿ

ಬದಲಾಯಿಸಿ
  • * ವಸ್ತ್ರಾಲಂಕಾರ - ಚಿನ್ಮಯ್‌ (ಸಂತೆಯಲ್ಲಿ ನಿಂತ ಕಬೀರ) 20 ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
  • * ನಿರ್ಮಾಣ ನಿರ್ವಾಹಕ- ಕೆ.ವಿ. ಮಂಜಯ್ಯ (ಮುಂಗಾರು ಮಳೆ 2) 20 ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ

[]

[]

ಉಲ್ಲೇಖ

ಬದಲಾಯಿಸಿ