ಕರ್ನಾಟಕ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

2014ನೇ ಸಾಲಿನ ಕರ್ನಾಟಕ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಬದಲಾಯಿಸಿ
1 ಕೋಟಿ ರೂ. ಠೇವಣಿ
ರಾಜ್ಯ ಸರಕಾರ ಮಂಗಳೂರು ವಿವಿಯಲ್ಲಿ ಸ್ಥಾಪಿಸಲಿರುವ ಕೊಂಕಣಿ ಅಧ್ಯಯನ ಪೀಠದ ಮೂಲಕ ಭಾಷೆಯ ಅಭಿವೃದ್ಧಿ ಮತ್ತು ಸಂಶೋಧನಾ ಚಟುವಟಿಕೆಗಳಿಗಾಗಿ ಒಂದು ಕೋಟಿ ರೂ. ದೇಣಿಗೆ ಸಂಗ್ರಹಿಸಿ ಠೇವಣಿ ಇಡಲಾಗುವುದು. ಅದರಿಂದ ಬರುವ ಬಡ್ಡಿ ಹಣವನ್ನು ಅಧ್ಯಯನ ಮತ್ತಿತರ ಉದ್ದೇಶಗಳಿಗೆ ಬಳಸುವ ಯೋಜನೆ ಹಾಕಲಾಗಿದೆ. (ಉದ್ಯಮಿ ದಯಾನಂದ ಪೈ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ,)
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ನಗರದ ಸಂಸ ಬಯಲು ರಂಗಮಂದಿರದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ 2014ನೇ ಸಾಲಿನ ಗೌರವ ಪ್ರಶಸ್ತಿ, ಪುಸ್ತಕ ಬಹುಮಾನ ಹಾಗೂ ಯುವ ಪ್ರಶಸ್ತಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಿದರು.
ಪ್ರಶಸ್ತಿ ಪುರಸ್ಕೃತರು
  1. ಮಂಗಳೂರಿನ ಪದ್ಮಾ ಶೆಣೈ (ಸಾಹಿತ್ಯ),
  2. ಕೋಣಿ ಶೇಷಗಿರಿ ನಾಯಕ್ (ಕಲೆ),
  3. ಧಾರವಾಡದ ಗಜಾನನ ಮಹಾಲೆ (ಜಾನಪದ) ಅವರಿಗೆ 2014ನೇ ಸಾಲಿನ ಗೌರವ ಪ್ರಶಸ್ತಿ,
  4. ಕಿನ್ನಿಗೋಳಿಯ ನವೀನ್ ಕುಂಬಿರ್ಲ್ (ಕಥಾ ಸಂಗ್ರಹ),
  5. ಮಣಿಪಾಲದ ಡಾ. ನಾಗೇಶ್‌ಕುಮಾರ್ ಜಿ. ರಾವ್ (ಕವಿತೆಗಳು),
  6. ಹಾಸನದ ಜೆ.ವಿ. ಕಾರ್ಲೊ (ಅನುವಾದಿತ) ಅವರಿಗೆ ಪುಸ್ತಕ ಬಹುಮಾನ.
  7. ಮೈಸೂರಿನ ಅಶ್ವಿನ್ ಎಂ. ಪ್ರಭು (ಸಂಗೀತ),
  8. ಬೆಂಗಳೂರಿನ ಪ್ರಜ್ವಲ್ ಎಂ. ನಾಯಕ್ (ಯೋಗ),
  9. ಆಕಾಶವಾಣಿ ಕಲಾವಿದ ಅರುಣ ನಾಯಕ್ ಅವರಿಗೆ ಯುವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪುರಸ್ಕೃತರಿಗೆ ಅನುಕ್ರಮವಾಗಿ ತಲಾ 10 ಹಾಗೂ 5 ಸಾವಿರ ರೂ. ನಗದು ಬಹುಮಾನ ನೀಡಲಾಯಿತು.
  • ವಿಜಯ ಕರ್ನಾಟಕ- 19 ಜನವರಿ 2015,