ಕರ್ನಾಟಕದ ಪ್ರಸಿದ್ಧ ಸಾಂಸ್ಕೃತಿಕ ಚಟುವಟಿಕೆಗಳು
ಕರ್ನಾಟಕ ರಾಜ್ಯವು ತನ್ನದೇ ಆದ ವಿಶಿಷ್ಟ ಕಲೆ ಮತ್ತು ಸಂಸ್ಕೃತಿಯನ್ನು ಹೊಂದಿದೆ. ಸುದೀರ್ಘ ಇತಿಹಾಸದೊಂದಿಗೆ ಸೇರಿ ಕರ್ನಾಟಕ ಸ್ಥಳೀಯ ವೈವಿಧ್ಯಮಯ ಭಾಷಾ ಮತ್ತು ಧಾರ್ಮಿಕ ಜನಾಂಗಗಳು,ರಾಜ್ಯದ ವಿವಿಧ ಸಾಂಸ್ಕೃತಿಕ ಪರಂಪರೆಗೆ ಅಪಾರವಾದ ಕೊಡುಗೆಯನ್ನು ನೀಡಿದೆ. ಕರ್ನಾಟಕ ಸಂಸ್ಕೃತಿಗೆ ಅತ್ಯುತ್ತಮ ಸ್ಥಳ. ಕರ್ನಾಟಕದಲ್ಲಿ ವಿವಿಧ ಪ್ರಕಾರದ ಜನರಿದ್ದಾರೆ. ಅವರಲ್ಲಿ ಮುಖ್ಯವಾಗಿ ಕೊಡವರು, ತುಳುವರು, ಒಕ್ಕಲಿಗರು ಮತ್ತು ಲಿಂಗಾಯಿತರು ತಮ್ಮ ಮದುವೆ,ಜಾತ್ರೆಗಳನ್ನು ಅವರದೇ ಸಾಂಪ್ರದಾಯಕ ಶೈಲಿಯಲ್ಲಿ ಆಚರಿಸುತ್ತಾರೆ. ಕನ್ನಡ ಸಾಹಿತ್ಯ 9 ನೇ ಶತಮಾನದಲ್ಲಿ ತನ್ನ ಮೊದಲ ಪ್ರದರ್ಶನ ಕಂಡಿತು ಮತ್ತು ಆಧುನಿಕ ಕಾಲದಲ್ಲಿ ತಮ್ಮ ಸಾಹಿತ್ಯ ಪ್ರತಿಭೆಗೆ ಜ್ಞಾನಪೀಠ ಪ್ರಶಸ್ತಿ ನೀಡಿದೆ ಮತ್ತು ಎಂಟು ವಿಜೇತರನ್ನು ಸೃಷ್ಟಿಸಿದೆ. ಯಕ್ಷಗಾನ ದಕ್ಷಿಣ ಕನ್ನಡಜಿಲ್ಲೆ ಮತ್ತು ಉಡುಪಿ ಜಿಲ್ಲೆಯ ಮುಖ್ಯವಾದ ನೃತ್ಯ. ಡೋಲು ಕುಣಿತ, ಸುಗ್ಗಿ ಕುಣಿತ ದಕ್ಷಿಣ ಕರ್ನಾಟಕದ ಮುಖ್ಯ ನೃತ್ಯಗಳು.
ಜಾಲತಾಣ | file:/I:/marconahally-dam.html |
---|
ಕರ್ನಾಟಕದ ಸಾಂಪ್ರದಾಯಕ ನೃತ್ಯಗಳ ಪಟ್ಟಿ
* ಭರತನಾಟ್ಯ * ಡೋಲು ಕುಣಿತ * ಕಂಸಾಳೆ ನೃತ್ಯ * ಸೋಮನ ಕುಣಿತ * ಸುಗ್ಗಿ ಕುಣಿತ * ಜಗ್ಗಹಲಿಗೆ ಕುಣಿತ * ಕರಡಿ ಮಜಲು * ಗೊಂದಲಿಗರ ಆಟ * ಭೂತ ಆರಾಧನೆ * ಯಕ್ಷಗಾನ * ಹಗಲು ವೇಷಗಾರರು * ಗೊರವರ ಕುಣಿತ * ನಾಗಮಂಡಲ * ಕರಗ * ಗಾರುಡಿ ಗೊಂಬೆ * ಜೋಡು ಹಳಿಗಿ * ವೀರಗಾಸೆ ನೃತ್ಯ