ಕರ್ನಾಟಕದಲ್ಲಿ ಶಿಕ್ಷಣ ಮತ್ತು ವಿದ್ಯಾರ್ಥಿಗಳು

ಭಾರತದ ಕರ್ನಾಟಕ ರಾಜ್ಯವು ಭಾರತೀಯ ವಿಜ್ಞಾನ ಸಂಸ್ಥೆ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕರ್ನಾಟಕ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ, ಧಾರವಾಡ ಮತ್ತು ಭಾರತ ವಿಶ್ವವಿದ್ಯಾಲಯದ ನ್ಯಾಷನಲ್ ಲಾ ಸ್ಕೂಲ್ ಸಂಸ್ಥೆಗಳನ್ನು ಹೊಂದಿದೆ. ಜೊತೆಗೆ, ವಿಶ್ವೇಶ್ವರಯ್ಯ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಟೆಕ್ನಾಲಜಿ (VIAT), ಮುದ್ದೇನಹಳ್ಳಿ ಯಲ್ಲಿ ಕಟ್ಟಲಾಗುತ್ತಿದೆ.

ಪದವಿಪೂರ್ವ ಕಾಲೇಜು ಶಿಕ್ಷಣ

ಬದಲಾಯಿಸಿ
ದ್ವಿತೀಯ ಪಿಯುಸಿ ಪರೀಕ್ಷೆ ಇದೇ2015-ಮಾರ್ಚಿ 12 ರಿಂದ 27ರ ವರೆಗೆ ನಡೆಯಲಿದೆ. ರಾಜ್ಯದ 4526 ಪಿಯು ಕಾಲೇಜು­ಗಳ 6,10,939 ವಿದ್ಯಾರ್ಥಿ­ಗಳು ಪರೀಕ್ಷೆ ಬರೆ­ಯುತ್ತಿ­ದ್ದಾರೆ. ಇವರಲ್ಲಿ 3,00,274 ವಿದ್ಯಾರ್ಥಿನಿ­ಯರು.
ಒಟ್ಟು 1017 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 5546 ಸಿಬ್ಬಂದಿ ನಿಯೋಜಿಸಲಾಗಿದೆ. ಇವರಲ್ಲಿ 1017 ಅಧೀಕ್ಷ­ಕರು, 1017 ಸಹ ಮುಖ್ಯ ಅಧೀಕ್ಷಕರು, 2657 ಜಾಗೃತ­ದಳದ ಸದಸ್ಯರು, 855 ತಾಲ್ಲೂಕು ಮತ್ತು ಜಿಲ್ಲಾ ವಿಶೇಷ ಜಾಗೃತದಳದ ಸದಸ್ಯರು ಸೇರಿದ್ದಾರೆ.

[]

ಪದವಿಪೂರ್ವ ಕಾಲೇಜುಗಳ ಸಂಖ್ಯೆ 2016

ಬದಲಾಯಿಸಿ
ಒಟ್ಟು ಪಿ.ಯು. ಕಾಲೇಜುಗಳು 4,999
ಸರ್ಕಾರಿ ಕಾಲೇಜುಗಳು 1204
ಅನುದಾನಿತ ಕಾಲೇಜುಗಳು 797
ಖಾಸಗಿ ಕಾಲೇಜುಗಳು 2823
ಇತರೆ ವಿಭಜಿತ ಮತ್ತು ಬಿಬಿಎಂಪಿ 175

ಶಿಕ್ಷಣ ಸಂಸ್ಥೆಗಳು

ಬದಲಾಯಿಸಿ
  • 2016 ಪ್ರಾಥಮಿಕ ಮಯ್ಯು ಪ್ರೌಢ ಶಾಲೆಗಳು
ಪ್ರಾಥಮಿಕ ಶಾಲೆಗಳು ಸಂಖ್ಯೆ ಪ್ರೌಢ ಶಾಲೆಗಳು ಸಂಖ್ಯೆ
ಒಟ್ಟು ಪ್ರಾಥಮಿಕ ಶಾಲೆಗಳು :ಕಿರಿಯ ಮತ್ತು ಹಿರಿಯ) 60,913 ಒಟ್ಟು ಪ್ರೌಢ ಶಾಲೆಗಳು 15,140
ಸರ್ಕಾರಿ ಶಾಲೆಗಳು 44913 ಸರ್ಕಾರಿ ಶಾಲೆಗಳು 5309
ಅನುದಾನಿತ ಶಾಲೆಗಳು 3,099 ಅನುದಾನಿತ ಶಾಲೆಗಳು 3,818
ಅನುದಾನ ರಹಿತ ಶಾಲೆಗಳು 12,991 ಅನುದಾನ ರಹಿತ ಶಾಲೆಗಳು 6,013

ಶಿಕ್ಷಕರ ಸಂಖ್ಯೆ

ಬದಲಾಯಿಸಿ
ಶಿಕ್ಷಕರು ಕಾರ್ಯ ನಿರತ ಸಂಖ್ಯೆ ಮಂಜೂರಾದ ಹುದ್ದೆಗಳು
ಕಿರಿಯ ಪ್ರಾತಮಿಕ ಶಾಲೆ 1,66,083 2,03,658
ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು 38,623 44,630
ಪ್ರೌಢ ಶಾಲೆ ಶಿಕ್ಷಕರ ಸಂಖ್ಯೆ 8604 10,080

ವಿದ್ಯಾರ್ಥಿಗಳು

ಬದಲಾಯಿಸಿ
ವಿದ್ಯಾರ್ಥಿಗಳು -ಪ್ರಾಥಮಿಕ ಶಾಲೆ 83.40 ಲಕ್ಷ (1ರಿಂದ 8ನೇ ತರಗತಿ)
ವಿದ್ಯಾರ್ಥಿಗಳು ಪ್ರೌಢಶಾಲೆ 17.74 ಲಕ್ಷ (9 ಮತ್ತು 10ನೇ ತರಗತಿ)

ಬಜೆಟ್ ಅನುದಾನ

ಬದಲಾಯಿಸಿ
  • ಬಜೆಟ್ನಲ್ಲಿ ಧನ ಮಂಜೂರು
ಸಾಲು ಧನ - ಕೋಟಿ ರೂ.ಗಳಲ್ಲಿ
2013-14 15689 ಕೋಟಿರೂ
2014-15 17,475
2015-16 16,204
2016-17 17,373

[೨]

ಶಿಕ್ಷಣ ಕ್ಷೇತ್ರದ ಗುರಿಗಳು

ಬದಲಾಯಿಸಿ
  • ಉತ್ತಮ ಕರ್ನಾಟಕಕ್ಕೆ ಹಸನಾದ ಶಿಕ್ಷಣ ಹೇತುವಾಗಬೇಕೆಂದರೆ ನಾವು ಪರಿಭಾವಿಸುವ ಶಿಕ್ಷಣ ಗುರಿಗಳು ನಾವು ಉತ್ತಮ ಅಥವಾ ಒಳಿತು ಎಂದು ಭಾವಿಸುವ ಸಂಗತಿಗಳನ್ನು ಅನುರಣಿಸಬೇಕು. ಇದನ್ನು ನಮ್ಮ ಸಂವಿಧಾನದ ಆಶಯವೇ ಹೇಳುತ್ತಿದೆ.
  • ಎಲ್ಲರನ್ನೂ ಒಳಗೊಳ್ಳುವ ಮಾನವೀಯವೂ ಸುಸ್ಥಿರವೂ ಆದ ಸಮಾಜವೊಂದನ್ನು ಸ್ಥಾಪಿಸುವ ಉದ್ದೇಶವುಳ್ಳ ಸ್ಪಂದನಾಶೀಲ ಪ್ರಜಾಪ್ರಭುತ್ವಕ್ಕೆ ಅಡಿಗಲ್ಲಾಗಬೇಕಿರುವುದು ಶಿಕ್ಷಣ. ಅರ್ಥಾತ್ ಸಮಾಜದ ಮೂಲ ನೆಲೆಗಟ್ಟಾಗಿರುವ ವ್ಯಕ್ತಿ ತನ್ನ ತೊಡಗಿಸಿಕೊಳ್ಳುವ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಪೌರನಾಗಿ ಬೆಳೆಯಬೇಕು.
  • ಇದು ಸಾಧ್ಯವಾಗಬೇಕೆಂದರೆ ವ್ಯಕ್ತಿಯನ್ನು ಸ್ವತಂತ್ರನಾದ, ಸೃಜನಶೀಲ ಚಿಂತನೆಯುಳ್ಳ, ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡ ಮನುಷ್ಯನನ್ನಾಗಿಸುವ ಶಿಕ್ಷಣ ಬೇಕು. ಶೈಕ್ಷಣಿಕ ಸಂಸ್ಕೃತಿ ಮತ್ತು ಪ್ರಯೋಗಗಳೆರಡೂ ಮೇಲಿನ ಗುರಿಗಳನ್ನು ಇಟ್ಟುಕೊಂಡಿರುವಂತೆ ವ್ಯಾಖ್ಯಾನಿಸಿಕೊಳ್ಳುವುದು ಅಗತ್ಯ.
  • ಕಳೆದ ಕೆಲವು ದಶಕಗಳಲ್ಲಿ ಕರ್ನಾಟಕದ ಶಿಕ್ಷಣ ಕ್ಷೇತ್ರ ಹಲವು ಮುಖ್ಯ ಸಾಧನೆಗಳನ್ನು ಮಾಡಿದೆ. ಶಾಲೆಗೆ ಸೇರುವ ಮಕ್ಕಳ ಸಂಖ್ಯೆ ಹೆಚ್ಚಾಗಿರುವುದು, ಲಿಂಗ ಸಮಾನತೆ ಮತ್ತು ಪಠ್ಯ ಕ್ರಮದ ಸುಧಾರಣೆಗಳೆಲ್ಲಾ ಈ ಸಾಧನೆಗಳಲ್ಲಿ ಸೇರುತ್ತವೆ. ಶಿಕ್ಷಣದ ಗುರಿಗಳನ್ನು ಸಾಧಿಸುವುದಕ್ಕೆ ಅತ್ಯಂತ ಅಗತ್ಯವಿರುವ ವಿಚಾರಗಳು.
  • ೧. ಮೊದಲನೆಯದಾಗಿ ನಮ್ಮ ಶೈಕ್ಷಣಿಕ ಯೋಜನೆ ಗಳನ್ನು ಕನಿಷ್ಠ ಹತ್ತು ವರ್ಷದ ಅವಧಿಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಬೇಕು. ಇದಕ್ಕೆ ಅಗತ್ಯವಿರುವ ಹಣಕಾಸು ಅಗತ್ಯದ ಬಗ್ಗೆಯೂ ಸ್ಪಷ್ಟ ಕಲ್ಪನೆ ಇರಬೇಕು.
  • ೨.ಎರಡನೆಯದಾಗಿ, ಒಳ್ಳೆಯ ಉದ್ದೇಶಗಳು ಮತ್ತು ಅತ್ಯುತ್ತಮ ಆಡಳಿತ ನೀತಿಗಳು ನಿಜಕ್ಕೂ ಫಲ ನೀಡುವುದು ಅವುಗಳ ಅನುಷ್ಠಾನದಲ್ಲಿ ಎಂಬುದನ್ನು ನಾವು ಅರಿಯಬೇಕು. ಇದಕ್ಕೆ ನಮ್ಮ ವ್ಯವಸ್ಥೆಯೊಳಗೊಂದು ಬದಲಾವಣೆಯ ಅಗತ್ಯವಿದೆ. ಕೇಂದ್ರೀಕೃತ ನಿಯಂತ್ರಣದ ಮಾದರಿಯ ಅನುಷ್ಠಾನ ತಂತ್ರವನ್ನು ಬದಿಗಿರಿಸಿ ಋಜುತ್ವ, ಸಬಲೀಕರಣ ಮತ್ತು ಸಾಮರ್ಥ್ಯ ವೃದ್ಧಿಯ ಮಾದರಿಯನ್ನು ಅನುಸರಿಸಬೇಕು.
  • ೩.ಮೂರನೆಯದಾಗಿ ಸಾರ್ವಜನಿಕ ಶಿಕ್ಷಣ ಅಥವಾ ಸರ್ಕಾರಿ ಶಾಲೆಗಳ ಮೂಲಕ ನೀಡುವ ಶಿಕ್ಷಣಕ್ಕೆ ಒತ್ತು ನೀಡುವ ಅಗತ್ಯವಿದೆ. ಅಲ್ಲದೆ ಸಾರ್ವಜನಿಕ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಅಗತ್ಯವಿರುವ ಸಶಕ್ತ ಯೋಜನೆಯೊಂದಿಗೆ ಸಾಕಾರಗೊಳ್ಳಬೇಕು.

ಅನುಷ್ಠಾನ

ಬದಲಾಯಿಸಿ
  • ೧.ಬೋಧಕರ ಶಿಕ್ಷಣ ವ್ಯವಸ್ಥೆಯನ್ನು ತಳ ಮಟ್ಟದಿಂದ ಕಟ್ಟುವ ಅಗತ್ಯವಿದೆ. ನಮ್ಮಲ್ಲಿ ಬಿಎಡ್ ಮತ್ತು ಡಿಎಡ್ ಕೋರ್ಸ್‌ಗಳ ಮೂಲಕ ಶಿಕ್ಷಕರಾಗಬಯಸುವವರಿಗೆ ತರಬೇತಿ ನೀಡಲಾಗುತ್ತದೆ. ನಮ್ಮಲ್ಲಿ ಮಾತ್ರ ಇದರ ಅವಧಿ ಎರಡೇ ವರ್ಷ. ಈ ಕ್ಷೇತ್ರದ ಸುಧಾರಣೆಯ ಹಾದಿಯಲ್ಲಿ ನಾವಿನ್ನೂ ಬಹುದೂರ ಸಾಗಬೇಕಾಗಿದೆ. ಪಠ್ಯಕ್ರಮ, ಸಾಂಸ್ಥಿಕ ವ್ಯವಸ್ಥೆ ಮತ್ತು ನಿಯಂತ್ರಣ ಪ್ರಾಧಿಕಾರ ಹೀಗೆ ಎಲ್ಲೆಡೆಯೂ ಬದಲಾವಣೆಯ ಅಗತ್ಯವಿದೆ.
  • ೨.ಎರಡನೆಯ ಹಂತದ ಕ್ರಮಗಳ ಅಗತ್ಯವಿರುವುದು ಈಗಾಗಲೇ ಬೋಧನಾ ಕ್ರಿಯೆಯಲ್ಲಿ ತೊಡಗಿಕೊಂಡಿ ರುವ ಶಿಕ್ಷಕರ ಸಾಮರ್ಥ್ಯ ವರ್ಧನೆಯ ಕ್ಷೇತ್ರದಲ್ಲಿ. ನಮ್ಮಲ್ಲಿ ನಾಲ್ಕು ಲಕ್ಷ ಮಂದಿ ಶಿಕ್ಷಕರಿದ್ದಾರೆ ಅವರೆಲ್ಲರೂ ಅತ್ಯಂತ ದುರ್ಬಲವಾದ ಬೋಧಕ ತರಬೇತಿ ವ್ಯವಸ್ಥೆಯ ಉತ್ಪನ್ನಗಳು. ಇವರನ್ನು ಗುರಿಯಾಗಿಟ್ಟು ಕೊಂಡು ತೀವ್ರ ಸ್ವರೂಪದ ಸಾಮರ್ಥ್ಯ ವೃದ್ಧಿಯ ತರಬೇತಿಗಳನ್ನು ರೂಪಿಸಿ ಸುಸ್ಥಿರ ಮಾದರಿಯಲ್ಲಿ ಕಾರ್ಯರೂಪಕ್ಕೆ ತರಬೇಕು. ಸಾಮಾನ್ಯ ಮಟ್ಟದ ಬೋಧಕ ಅಥವಾ ಬೋಧಕಿಗೆ ಸರಿಯಾದ ಬೌದ್ಧಿಕ ಬೆಂಬಲ ದೊರೆತರೆ ಆತ ಅಥವಾ ಆಕೆ ತನ್ನ ವೃತ್ತಿಗೆ ನ್ಯಾಯ ದೊರಕಿಸುವುದರಲ್ಲಿ ಸಂಶಯವಿಲ್ಲ. ಈ ಬೋಧಕರನ್ನು ನಾವು ಬದಲಾವಣೆಯ ಬೆಂಬಲಿಗರನ್ನಾಗಿಸುವ ಜೊತೆಗೆ ಅವರನ್ನೇ ಅದರ ಚಾಲಕ ಶಕ್ತಿಯಾಗಿ ಮಾರ್ಪಡಿಸಬೇಕಾಗಿದೆ.
  • ೩.ದೊಡ್ಡ ಪ್ರಮಾಣದಲ್ಲಿ ಶಿಕ್ಷಣ ತಜ್ಞರನ್ನು ಸೃಷ್ಟಿಸುವುದು. ಅಂದರೆ ಬೋಧಕರ ಶಿಕ್ಷಣ, ಪಠ್ಯಕ್ರಮಗಳನ್ನು ರೂಪಿಸುವುದು, ಮೌಲ್ಯಮಾಪನ ವ್ಯವಸ್ಥೆಯನ್ನು ರೂಪಿಸುವುದು ಮುಂತಾದ ಕೆಲಸಗಳನ್ನು ಮಾಡುವವರ ಸಂಖ್ಯೆಯನ್ನು ಹೆಚ್ಚಿಸಬೇಕು.ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣದ ವಿಷಯದಲ್ಲೇ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಅಧ್ಯಯನಕ್ಕೆ ಅವಕಾಶವಿರುವ ‘ಶಿಕ್ಷಣ ವಿಭಾಗ’ಗಳನ್ನು ಆರಂಭಿಸಬೇಕು.
  • ೪.ಈಗಾಗಲೇ ಎಂಟನೆಯ ತರಗತಿವರೆಗಿನ ವಿದ್ಯಾರ್ಥಿಗಳಿಗೆ ನಿರಂತರ ಮತ್ತು ಸಮಗ್ರ ಮೌಲ್ಯ ಮಾಪನ ಪದ್ಧತಿಯನ್ನು ಅಳವಡಿಸಿಕೊಂಡಿದ್ದೇವೆ. ಇದೊಂದು ಒಳ್ಳೆಯ ಬೆಳವಣಿಗೆ. ಶಾಲಾ ಮಟ್ಟದ ಅಂತಿಮ ಹಂತದ ಪರೀಕ್ಷೆಗಳನ್ನು ಸುಧಾರಿಸುವ ಕೆಲಸಕ್ಕೆ ಮುಂದಾಗಬೇಕಿದೆ.ಉರುಹಚ್ಚಿ ನೆನಪಿಟ್ಟುಕೊಂಡ ಜ್ಞಾನದ ಮಟ್ಟವನ್ನು ಪರೀಕ್ಷಿಸುವ ಮಾದರಿಯಿಂದ ವಿದ್ಯಾರ್ಥಿಗಳು ವಿಷಯಗಳನ್ನು ಎಷ್ಟರ ಮಟ್ಟಿಗೆ ಪರಿಕಲ್ಪನಾತ್ಮಕವಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂಬುದನ್ನು ಅರಿಯುವ, ಅವರ ಚಿಂತನೆಯ ಮಟ್ಟವನ್ನು ಅಳೆಯುವ ಮಾದರಿಯನ್ನು ಅಳವಡಿಸಿಕೊಳ್ಳಬೇಕು.
  • ೫.ನಾವು ನಮ್ಮ ಪೂರ್ವ ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಪ್ರಮಾಣದ ಹೂಡಿಕೆ ಮಾಡುವ ಅಗತ್ಯವಿದೆ. ಮೂರರಿಂದ ಐದು ವರ್ಷಗಳ ಮಕ್ಕಳನ್ನು ನೋಡಿಕೊಳ್ಳುವ ಅಂಗನವಾಡಿ ವ್ಯವಸ್ಥೆಯೊಂದನ್ನು ಕಟ್ಟಿದ್ದೇವೆ. ಆದರೆ ಅದರ ಸ್ಥಿತಿ ಅಷ್ಟೇನೂ ಚೆನ್ನಾಗಿಲ್ಲ. ಇಲ್ಲಿ ಮೂಲಸೌಕರ್ಯದಿಂದ ಆರಂಭಿಸಿ ಅನೇಕ ಸುಧಾರಣೆಗಳಿಗಾಗಿ ಹೂಡಿಕೆಯ ಅಗತ್ಯವಿದೆ.
  • ೬.ಶೈಕ್ಷಣಿಕ ನಾಯಕತ್ವದ ಅಭಿವೃದ್ಧಿಯತ್ತ ತೀವ್ರವಾಗಿ ಗಮನಹರಿಸಬೇಕಿದೆ. ಈ ಪ್ರಕ್ರಿಯೆಯಲ್ಲಿ ಶಾಲೆಗಳ ಮುಖ್ಯೋಪಾಧ್ಯಾಯರಿಂದ ಆರಂಭಿಸಿ ಬ್ಲಾಕ್ ಮತ್ತು ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುವವರು ಹಾಗೆಯೇ ರಾಜ್ಯ ಮಟ್ಟದಲ್ಲಿರುವ ಅಧಿಕಾರಿಗಳ ಸಾಮರ್ಥ್ಯ ವರ್ಧನೆವರೆಗಿನ ಕೆಲಸಗಳಿವೆ.
  • ೭.ಶಾಲೆ ಎಲ್ಲಿದ್ದರೆ ಹೆಚ್ಚು ಅನುಕೂಲ ಎಂಬುದನ್ನು ನಿರ್ಧರಿಸಬೇಕು. ಹೀಗೆ ಮಾಡುವುದರಿಂದ ಒಂದಷ್ಟು ಹೊಸ ಮಾಧ್ಯಮಿಕ ಮತ್ತು ಪ್ರೌಢಶಾಲೆಗಳನ್ನು ಹೊಸತಾಗಿ ಆರಂಭಿಸ ಬೇಕಾಗಬಹುದು.
  • ೮.ಭಾಷೆಯ ವಿಚಾರ. ಬೋಧನಾ ಮಾಧ್ಯಮವನ್ನು ನಿರ್ಧರಿಸುವುದಕ್ಕೆ ಸರಳ ಸೂತ್ರವಿದೆ. ಕಲಿಕೆಗೆ ಅನುಕೂಲವಾಗುವ ಭಾಷೆ ಯಾವುದೋ ಅದು ಬೋಧನೆಯ ಮಾಧ್ಯಮವಾಗಿರಬೇಕು. ಪುಟ್ಟ ಮಕ್ಕಳು ತಮ್ಮ ಮಾತೃಭಾಷೆಯಲ್ಲಿ ಚೆನ್ನಾಗಿ ಕಲಿಯುತ್ತಾರೆ. ಆದ್ದರಿಂದ ಪ್ರಾಥಮಿಕ ಹಂತದಲ್ಲಿ ಅಂದರೆ ಐದನೇ ತರಗತಿಯ ತನಕವೂ ಮಾತೃಭಾಷೆಯೇ ಬೋಧನಾ ಮಾಧ್ಯಮವಾಗಿರಬೇಕು.
  • ೯.ಕನ್ನಡ ನಮ್ಮ ರಾಜ್ಯದ ಭಾಷೆ, ಅದು ಪಠ್ಯಕ್ರಮದ ಭಾಗವಾಗಿರಬೇಕು ಎಂಬುದರಲ್ಲಿ ಸಂಶಯವಿಲ್ಲ. ಇದರ ಜೊತೆಗೆ ಇಂಗ್ಲಿಷ್ ಕೂಡಾ ಇರಬೇಕು ಇದು ಶಿಕ್ಷಣದ ಒಟ್ಟಾರೆ ಗುರಿಯನ್ನು ಸಾಧಿಸುವುದಕ್ಕೆ ಅನುವು ಮಾಡಿಕೊಡುವಂತಿರಬೇಕು. ಪಠ್ಯಕ್ರಮದಿಂದ ಪುಸ್ತಕಗಳ ತನಕ, ಬೋಧನಾ ತಂತ್ರದಿಂದ ಶಾಲಾ ಸಂಸ್ಕೃತಿವರೆಗಿನ ಎಲ್ಲೆಡೆಯೂ ಇದು ಪ್ರತಿಬಿಂಬಿಸಬೇಕು. ಅಗತ್ಯ ಪರಿಣತಿ ಇರುವ ತಜ್ಞರನ್ನು ಒಳಗೊಂಡಿರುವ ಸ್ವತಂತ್ರ, ಸ್ವಾಯತ್ತ ಮತ್ತು ಸಶಕ್ತವಾಗಿರುವ ‘ರಾಜ್ಯ ಪಠ್ಯಕ್ರಮ ಪರಿಷತ್ತಿ’ನಂಥ ವ್ಯವಸ್ಥೆ ಇದ್ದರೆ ಈ ಗುರಿಯನ್ನು ಸಾಧಿಸಬಹುದು.
  • ೧೦.ದುರ್ಬಲ ವರ್ಗಗಳ ಸಮಸ್ಯೆ. ಎಲ್ಲರಿಗೂ ಎಲ್ಲೆಡೆಯೂ ಸಮಾನವಾದ ಶಿಕ್ಷಣವನ್ನು ನೀಡುವ ಗುರಿಯನ್ನು ಇಟ್ಟುಕೊಂಡೇ ಶೈಕ್ಷಣಿಕ ಯೋಜನೆಗಳನ್ನು ರೂಪಿಸಬೇಕು.[]

ಉಲ್ಲೇಖ

ಬದಲಾಯಿಸಿ