ಕರ್ನಾಟಕದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ


ಕರ್ನಾಟಕದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ

ಹೊಸ ಶಿಕ್ಷಣ ಪದ್ದತಿಯ ಆರಂಭ

ಬದಲಾಯಿಸಿ
  • ಪ್ರಾಥಮಿಕ ವಿದ್ಯಾಭ್ಯಾಸವು ಕಲಿಕೆಯ ಮೊದಲ ಹಂತ ; ಕ್ರಮೇಣ ಅದಕ್ಕೆ ನರ್ಸರಿ , ಪ್ರಿ-ನರ್ಸರಿ ಎಂಬ ಆಟ-ಪಾಠದ ಎರಡು ವರ್ಷದ ಶಿಕ್ಷಣವನ್ನು ನಾಲ್ಕು ಮತ್ತು ಐದನೇ ವರ್ಷದ ಮಕ್ಕಳಿಗಾಗಿ ಸೇರಿಸಲಾಯಿತು. ನಮ್ಮ ಶಿಕ್ಷಣ ಪದ್ದತಿಯು,17, 18 ನೇ ಶತಮಾನದಲ್ಲಿ ಮನೆ/ಕುಟುಂಬ ಮತ್ತು ಮಠದ/ಗುರುಕುಲದ ಕೇಂದ್ರವಾಗಿ ಇದ್ದದ್ದು, ಅಧಿಕೃತ ಶಾಲಾ ಮಂದಿರಗಳಿಗೆ ಸ್ಥಳಾಂತರವಾಯಿತು. ಇದು ಬ್ರಿಟಿಷರ ಯೋಜನೆ. ಕ್ರಮೇಣ ಮಠ-ಮಂದಿರಗಳ/ಗುರುಕುಲ ಶಿಕ್ಷಣ ವ್ಯವಸ್ಥೆ ಕೊನೆಗೊಂಡು ಶಾಲಾಶಿಕ್ಷಣ ಪದ್ದತಿ ನೆಲೆಗೋಡಿತು . ಸರ್ಕಾರಗಳೇ ಶಿಕ್ಷಣದ ಹೊಣೆಯನ್ನು ಹೊತ್ತುಕೊಂಡು ನಾಡಿನಾದ್ಯಂತ ಶಾಲೆಗಳನ್ನು ಆರಂಭಿಸಿ ಒಂದೇ ಬಗೆಯ ಶಿಕ್ಷಣ ಸಾರ್ವತ್ರಿಕವಾಗಿ ಸಿಗುವಂತೆ ಮಾಡಿದವು. ಅದರ ಜೊತೆ ಜತೆಜೊತೆಯಲ್ಲಿಯೇ ಸರ್ಕಾರೇತರ ಸಂಸ್ಥೆಗಳು ವ್ಯಕ್ತಿಗಳು ಶಾಲಾ ಶಿಕ್ಷಣ ಕೇಂದ್ರಗಳನ್ನು ಸ್ವಲ್ಪ ಅದೇ ಮಾದರಿಯಲ್ಲಿ ಆರಂಭಿಸಿದವು. ಆದರೆ ಕೇಂದ್ರ ರಾಜ್ಯ ಸರ್ಕಾರಗಳು ಪ್ರತಿಯೊಬ್ಬರಿಗೂ ಶಿಕ್ಷಣ ಒದಗಿಸುವುದು ಅದರ ಒಂದು ಆದ್ಯ ಅಗತ್ಯ ಕರ್ತವ್ಯವೆಂದು ಕಡ್ಡಾಯ ಶಿಕ್ಷಣದ ಕಾನೂನು ತಂದವು. ಅದರಲ್ಲಿ ರಾಜ್ಯ ಸರ್ಕಾರದ ಪಾತ್ರ ಹಿರಿದು.

ಮೆಕಾಲೆ ಶಿಕ್ಷಣ

ಬದಲಾಯಿಸಿ

ಮೊಟ್ಟಮೊದಲಿಗೆ ಅದಕ್ಕೆ ಒಂದು 'ಓದು- ಬರೆಹ-ಗಣಿತ ಈ ಅತಿ ಅಗತ್ಯದ ಶಿಕ್ಷಣಕ್ಕೆ ರೂಪು-ರೇಶೆ ಕೊಟ್ಟವನು ಭಾರತಕ್ಕೆ ಬಂದ ಲಾರ್ಡ ಮೆಕಾಲೆ; ಕಂಪನಿಯ ಆಡಳಿತ, ಗೌ.ಜನರಲ್ ಲಾರ್ಡ್ ವಿಲಿಯಂ ಬೆಂಟಿಂಕ್ ಕಾಲ (1828-35) ಇಂಗ್ಲಿಷ್ ನ ಶಿಕ್ಷಣವನ್ನು ಜಾರಿಗೆ ತರಬೇಕೆಂದು ಗೌರ್ನರ್ ಜನರಲ್`ನು ಲಾರ್ಡ ಮೆಕಾಲೆಗೆ ಅದರ ರೂಪು ರೇಷೆಯ ಹೊಣೆ ಹೊರಿಸಿದನು ಪ್ರಾಥಮಿಕ ಶಿಕ್ಷಣ-ಮಾಧ್ಯಮಿಕ-(ದೇಶೀ ಭಾಷೆ-4+4 ನಂತರ ಇಂಗ್ಲಿಷ್ ಮಾಧ್ಯಮ;-ಪ್ರೌಢ ಶಿಕ್ಣಣ ಇಂಗ್ಲಿಷ್ -3 ಇಂಟರ್`ನಿಡಿಯೇಟ್-1 ವರ್ಷ, ನಂತರ 3 ವರ್ಷ ಪದವಿ ಶಿಕ್ಷಣ. ಈ ಶಿಕ್ಷಣ ಪದ್ದತಿಯಿಂದ ಭಾರತದ ವಿದ್ಯಾವಂತ ಜನರಿಗೆ, ಹೊಸ ಚಿಂತನೆಯ, -ವಿಜ್ಞಾನದ, ಪಾಶ್ಚಿಮಾತ್ಯರ ಲೋಕದೊಳಗೆ ಪ್ರವೇಶ ಮಾಡುವಂತಾಯೊತು.ದಕ್ಷಿಣ ಭಾರತದ ತುದಿಯಿಂದ ಉತ್ತರದವರೆಗೆ ಒಂದು ಸಂಪರ್ಕ ಭಾಷೆ ಭಾರತೀಯರಿಗೆ ಒದಗಿತು.(ಇಂದಿಗೂ ಅದು ಹಾಗೇ ಉಳಿದಿದೆ). ಆದುನಿಕ ಚಿಂತನೆಯ-ರಾಷ್ರೀಯವಾದ-ಸಮಾಜವಾದ-ಸಮಾಜ ಸುಧಾರಣೆ, ಮಾನವತಾವಾದದ ಕನಸಿನ ಒಂದು ಹೊಸ ಉತ್ಸಾಹಿ ಪೀಳಿಗೆ ಅಥವಾ ಯುವ ತಂಡವೇ ಭಾರತದಲ್ಲಿ ಉದಯಿಸಿ, ಭಾರತದ ಇತಿಹಾಸ-ಮತ್ತು ಭವಿಷ್ಯದ ದಿಕ್ಕನ್ನೇ ಬದಲಿಸಲು ಕಾರಣವಾಯಿತು ಎಂಬುದು ಇತಿಹಾಸಕಾರರ ಅಭಿಪ್ರಾಯ. ಇಂದಿಗೂ ಲಾರ್ಡ ಮೆಕಾಲೆಯ ಹೆಸರು ಆ ಶಿಕ್ಷಣ ಪದ್ದತಿಗೆ ಅಂಟಿಕೊಂಡಿದೆ. ಈಗ ಅದು ಬಹಳ ವಿಸ್ತೃತಗೊಂಡು ಭಾರತೀಯ ಪದ್ದತಿಯನ್ನು ಅಳವಡಿಸಿಕೊಂಡಿದೆ. ಮತ್ತು ಶಿಕ್ಷಣವನ್ನು ಮಗುವಿನ ಒಂದು ಹಕ್ಕೆಂದು ಪರಿಗಣಿಸಲಾಗಿದೆ. ಹಾಗಾಗಿ ಸರ್ಕಾರದ ಶಿಕ್ಷಣದ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿದೆ.

ಕರ್ನಾಟಕ ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣ

ಬದಲಾಯಿಸಿ
  • ರಾಜ್ಯ­ದಲ್ಲಿ 44,615 ಸರ್ಕಾರಿ ಪ್ರಾಥಮಿಕ ಶಾಲೆ­ಗಳು ಮತ್ತು 4,452 ಸರ್ಕಾರಿ ಪ್ರೌಢಶಾಲೆಗಳು ಇವೆ. ಆದರೆ ಸರ್ಕಾರಿ ಶಾಲೆಗಳಿಗೆ ಮಕ್ಕಳ ಕೊರತೆ ಆರಂಭವಾಗಿದೆ. ಆದ್ದರಿಂದ 2013-2014;2015 ರಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದ 539 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಇತರ ಶಾಲೆ­ಗಳೊಂದಿಗೆ ವಿಲೀನಗೊಳಿಸಲಾಗಿದೆ.! ಶಾಲೆಗಳ ಸ್ಥಿತಿ ಅಷ್ಟು ಚೆನ್ನಾಗಿಲ್ಲ. ಆದ್ದರಿಂದ ಸರ್ಕಾರ 2014–15ನೇ ಸಾಲಿನಲ್ಲಿ 180 ಅನೇಕ ಕಿರಿಯ ಪ್ರಾಥಮಿಕ ಶಾಲೆಗಳ ಕಟ್ಟಡ ದುರಸ್ತಿಗೆ ₨ 2.31 ಕೋಟಿ ಮತ್ತು 300 ಹಿರಿಯ ಪ್ರಾಥಮಿಕ ಶಾಲೆಗಳ ಕಟ್ಟಡ ದುರಸ್ತಿಗೆ ₨ 3 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಪ್ರಾಥಮಿಕ ಶಾಲೆಗಳಲ್ಲಿ (+ಮಾಧ್ಯಮಿಕಸೇರಿ) ಎಸ್.ಟಿ.ಎಸ್.ಟಿ ಹಿಂದುಳಿದ ವರ್ಗಗಳ ಶಾಲೆ -346 ಶಾಲೆಗಳು ವಸತಿ ಶಾಲೆಗಳು; 171 ಶಾಲೆಗಳಿಗೆ ಸ್ವಂತ ಕಟ್ಟಡ ಇಲ್ಲ. ಅವುಗಳಲ್ಲಿ 105ಕ್ಕೆ ಶೌಚಾಲಯ ,ಸ್ನಾನ ಗೃಹಗಳು ಇಲ್ಲ.ಕಟ್ಟಡ , ಶೌಚಾಲಯ, ಸ್ನಾನ ಗೃಹಗಳನ್ನು ಒದಗಿಸಲು 1088.5 ಕೋಟಿ ರೂ. ಅಗತ್ಯವಿದೆ.ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್‌.ಆಂಜನೇಯ ಅವರು ವಿಧಾನ ಪರಿಷತ್ತಿನಲ್ಲಿ ಹೇಳಿಕೆ -ಪ್ರಜಾವಾಣಿ ೮-೭-೨೦೧೪)
  • ಕರ್ನಾಟಕ ರಾಜ್ಯದಲ್ಲಿ ಈ ವರ್ಷ ಶಾಲೆಬಿಟ್ಟ ಮಕ್ಕಳ ಸಂಖ್ಯೆ 1,68,621. ಕಳೆದ ಮೂರು ವರ್ಷಗಳಿಂದ ಶಾಲೆಬಿಟ್ಟ ಮಕ್ಕಳ ಸಂಖ್ಯೆ 2,43,356 ಆಗಿದೆ. (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಮಾಹಿತಿ ನೀಡಿದ್ದಾರೆ.ಪ್ರಜಾವಾಣಿ ೨೬-೬=-೨೦೧೪)
  • (ಶಾಲೆಬಿಟ್ಟ ಮಕ್ಕಳನ್ನು ಗುರುತಿಸಲು 2013–14ನೇ ಸಾಲಿನಲ್ಲಿ ಶಾಲಾ ಸಮೀಕ್ಷೆ ಮತ್ತು ಕುಟುಂಬ ಸಮೀಕ್ಷೆ ಎಂದು ಎರಡು ಹಂತದಲ್ಲಿ ನಡೆಸಲಾಗಿದೆ. ಶಿಕ್ಷಣ ಇಲಾಖೆಯು ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಸಮೀಕ್ಷೆ ನಡೆಸಿತ್ತು. ಶಾಲೆ ದುರಸ್ತಿಗೆ ₨ 3 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಕೆಲವು

ಶಾಲೆಗಳಿಗೆ ಮೂಲಸೌಕರ್ಯ ಒದಗಿಸಲು ನೀಡುತ್ತಿರುವ ಅನುದಾನ ಸಾಲದು. ಹಲವು ಶಾಲೆ­ಗಳ ಸ್ಥಿತಿ ಶೋಚನೀಯವಾಗಿದೆ ಎಂಬುದು ಸಾರ್ವಜನಿಕರ ದೂರು.(ನೋಡಿ)

ಸಣ್ಣಶಾಲೆಗಳ ಸಮಸ್ಯೆ

ಬದಲಾಯಿಸಿ
  • ಸಣ್ಣ ಶಾಲೆಗಳ ಕುರಿತಂತೆ ಪ್ರತ್ಯೇಕವಾದ ನೀತಿ ನಮ್ಮ ರಾಷ್ಟ್ರದ ಹಂತದಲ್ಲಾಗಲೀ ಅಥವಾ ರಾಜ್ಯದ ಹಂತದಲ್ಲಾಗಲೀ ಇಲ್ಲ. ಶಿಕ್ಷಣ ಇಲಾ­ಖೆಯ ೨೦೧೩-–೧೪ನೇ ಸಾಲಿನ ಅಧಿಕೃತ ಅಂಕಿ-–ಅಂಶಗಳ ಪ್ರಕಾರ ರಾಜ್ಯದಲ್ಲಿ ಒಟ್ಟು ೨೬,೦೫೮ ಕಿರಿಯ ಪ್ರಾಥಮಿಕ ಶಾಲೆಗಳಿದ್ದು, ಅವುಗಳ ಪೈಕಿ ೧೪,೫೪೮ ಶಾಲೆಗಳಲ್ಲಿ (ಶೇ ೫೫.೮) ಮಕ್ಕಳ ದಾಖಲಾತಿ ೩೦ಕ್ಕಿಂತ ಕಡಿಮೆ ಇದ್ದು, ಸಣ್ಣ ಗಾತ್ರದ ಶಾಲೆಗಳಾಗಿವೆ. ಈ ಶಾಲೆಗಳ ಪೈಕಿ ತಲಾ ೫ ಮಕ್ಕಳಿಗಿಂತ ಕಡಿಮೆ ಇರುವ ಶಾಲೆಗಳು ೪೫೬ ಇದ್ದು, ೬ ರಿಂದ ೧೦ ಮಕ್ಕಳಿರುವ ಶಾಲೆ­ಗಳು ಒಟ್ಟು ೧,೯೨೩ ಇವೆ. ಅಂದರೆ ರಾಜ್ಯದ ಒಟ್ಟು ೨,೩೭೯ ಶಾಲೆಗಳಲ್ಲಿ ೧೦ಕ್ಕಿಂತ ಕಡಿಮೆ ಮಕ್ಕಳಿದ್ದಾರೆ. ಇಂತಹ ಶಾಲೆಗಳನ್ನು ಅತೀ ಸಣ್ಣ ಶಾಲೆಗಳೆನ್ನಬಹುದು.
  • ಇನ್ನು ರಾಜ್ಯದಲ್ಲಿರುವ ಒಟ್ಟು ೩೪,೪೨೭ ಹಿರಿಯ ಪ್ರಾಥಮಿಕ ಶಾಲೆಗಳ ಪೈಕಿ ತಲಾ ೭೦ ಮಕ್ಕಳಿಗಿಂತ ಕಡಿಮೆ ಮಕ್ಕಳಿರುವ ಒಟ್ಟು ಶಾಲೆ­ಗಳು ೭,೧೨೮ (ಶೇ ೨೦.೭೦). ರಾಜ್ಯದ ಒಟ್ಟು ೧,೮೮೯ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ತಲಾ ೩೫ ಮಕ್ಕಳಿಗಿಂತಲೂ ಕಡಿಮೆ ವಿದ್ಯಾರ್ಥಿಗಳಿದ್ದು, ಇವು ಅತಿ ಸಣ್ಣ ಶಾಲೆಗಳಾಗಿವೆ.
  • ಪ್ರೌಢಶಾಲಾ ಹಂತದಲ್ಲಿ ರಾಜ್ಯದಲ್ಲಿರುವ ಒಟ್ಟು ೧೪,೪೦೯ ಶಾಲೆಗಳ ಪೈಕಿ ತಲಾ ೮೦ ಮಕ್ಕ­ಳಿ­ಗಿಂತ ಕಡಿಮೆ ಇರುವ ೫,೪೬೭ (ಶೇ ೩೭.೭೮) ಪ್ರೌಢಶಾಲೆಗಳನ್ನು ಸಣ್ಣ ಶಾಲೆಗಳೆನ್ನ­ಬಹುದು. ಇದೇ ರೀತಿ ಒಟ್ಟು ಮಕ್ಕಳ ದಾಖಲಾತಿ ೪೦ಕ್ಕಿಂತ ಕಡಿಮೆ ಇರುವ ಪ್ರೌಢಶಾಲೆಗಳು ೧,೦೨೭ (ಶೇ ೭) ಇದ್ದು, ಇವುಗಳನ್ನು ಅತಿ ಸಣ್ಣ ಶಾಲೆಗಳೆನ್ನ­ಬಹುದು.
  • ಸರ್ಕಾರಿ ಒಡೆತನದ ಶಾಲೆಗಳಲ್ಲಿ ಸಣ್ಣ ಮತ್ತು ಅತಿ ಸಣ್ಣ ಶಾಲೆಗಳ ಸಂಖ್ಯೆ ಹೆಚ್ಚಿದೆ. ಹಾಸನ, ಚಿಕ್ಕ­ಮಗಳೂರು, ಉತ್ತರ ಕನ್ನಡ, ಸಿರ್ಸಿ, ಶಿವ­ಮೊಗ್ಗ, ಬೆಂಗಳೂರು ಗ್ರಾಮಾಂತರ, ರಾಮ­ನಗರ, ಚಿಕ್ಕ­ಬಳ್ಳಾಪುರ, ಕೊಡಗು, ಕೋಲಾರ, ತುಮಕೂರು ಶೈಕ್ಷಣಿಕ ಜಿಲ್ಲೆಗಳಲ್ಲಿ ಸಣ್ಣ ಹಾಗೂ ಅತಿಸಣ್ಣ ಶಾಲೆಗಳು ಹೆಚ್ಚಾಗಿವೆ

(ಅಭಿಮತ›ಸಂಗತ: ಅತಿ ಸಣ್ಣ ಶಾಲೆಗಳ ಸವಾಲುಗಳು.-ಡಾ.ಎಚ್.ಬಿ. ಚಂದ್ರಶೇಖರ್ ಬೆಂಗಳೂರು, 09/18/2014;ಪ್ರಜಾವಾಣಿ;)

ಕರ್ನಾಟಕದಲ್ಲಿ ಪ್ರಾಥಮಿಕ ಶಾಲೆಗಳ ವಿವರ

ಬದಲಾಯಿಸಿ
  • 28-2-2014 ಕ್ಕೆ--[೩]
  • ರಾಜ್ಯದಲ್ಲಿ ಸರ್ಕಾರಿ ಶಾಲೆಗಳು 56305;
  • ಖಾಸಗಿ ಅನುದಾನಿತ ಶಾಲೆಗಳು 3160;
  • ಖಾಸಗಿ ಅನುದಾನ ರಹಿತ ಶಾಲೆಗಳು --11386;
  • ಶೇ. 87 ಪ್ರಾಥಮಿಕ ಶಾಲೆಗಳು ಗ್ರಾಮೀಣ ಭಾಗದಲ್ಲಿವೆ.;
  • ಶೇ. 89 ರಷ್ಟು ಭಾಗ ಗ್ರಾಮೀಣ ಪ್ರಾಥಮಿಕ ಶಾಲೆಗಳು ಸರ್ಕಾರಿ ಶಾಲೆಗಳು ;.
  • ಸರ್ಕಾರಿ ಶಾಲೆಗಳಲ್ಲಿ ರುವ ಶಿಕ್ಷಕರು 2,28,681 ;
  • ಇವರ ವೇತನ ಒಟ್ಟು ವೆಚ್ಚ -- ರೂ.3,292 ಕೋಟಿ ರೂ .
  • ಹೆಸ ಆರ್ ಟಿ ಇ ಕಾಯಿದೆ ಪ್ರಕಾರ ಆರ್ಥಿಕವಾಗಿ , ಹಾಗೂ ಸಾಮಾಜಿಕವಾಗಿ ಹಿಂದುಳಿದ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಶೇ. 25 ಮೀಸಲಾತಿ ಇಡಬೇಕಾಗಿದೆ .
  • ಕುಸ್ಮಾ ಸರ್ಕಾರಿ ಶಾಲೆಗಳಲ್ಲಿ ಸೀಟುಗಳು ಭರ್ತಿಯಾಗಿ ಇನ್ನೂ ಮಕ್ಕಳು ಉಳಿದಿದ್ದಲ್ಲಿ ಖಾಸಗೀ ಶಾಲೆಗಳಲ್ಲಿ ಅವಕಾಶ ನೀಡಲಾಗುವುದೆಂದು ತಿಳಿಸಿದ್ದಾರೆ.
  • ಕರ್ನಾಟಕ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘವು /ಅದರಲ್ಲಿ (ಕುಸ್ಮಾ)(1800 ಶಾಲೆಗಳ ಸದಸ್ಯತ್ವ ಹೊಂದಿದೆ.)
  • ೨೮-೫-೨೦೧೫/೧೬:
  • ಕರ್ನಾಟಕ ರಾಜ್ಯದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳು:26118
  • ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು :34795
  • ಸರ್ಕಾರಿ ಪ್ರೌಢ ಶಾಲೆಗಳು :15140.
  • ಖಾಸಗಿ ಪ್ರಾಥಮಿಕ ಶಾಲೆಗಳು :4082.
  • ಖಾಸಗಿ ಹಿರಿಯ ಪ್ರಾಥಮಿಕ ಶಾಲೆಗಳು :8809.
  • ಖಾಸಗಿ ಪ್ರೌಢ ಶಾಲೆಗಳು : 6013.[]*[೧] Archived 2016-06-05 ವೇಬ್ಯಾಕ್ ಮೆಷಿನ್ ನಲ್ಲಿ.

ಸರ್ಕಾರಿ ಶಾಲೆಗಳ ದುಸ್ಥಿತಿ

ಬದಲಾಯಿಸಿ
  • ನಮ್ಮ ದೇಶದಲ್ಲಿ ಸುಮಾರು 15 ಲಕ್ಷ ಶಾಲೆಗಳಿವೆ, ಅದರಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಸುಮಾರು 11 ಲಕ್ಷ. ಇದರಲ್ಲಿ 4.20 ಲಕ್ಷ ಶಾಲೆಗಳಲ್ಲಿ (33%), 50ಕ್ಕೂ ಕಡಿಮೆ ಮಕ್ಕಳು ನೋಂದಾವಣೆಯಾಗಿದ್ದಾರೆ (ಕೇಂದ್ರ ಸರ್ಕಾರದ District Information System for Education (DISE)- 2015-16 ರ ಅಂಕಿ ಅಂಶಗಳ ಪ್ರಕಾರ). ಸುಮಾರು ಒಂದು ಲಕ್ಷ ಸರ್ಕಾರಿ ಶಾಲೆಗಳಲ್ಲಿ, 20ಕ್ಕೂ ಕಡಿಮೆ ಮಕ್ಕಳು ಇದ್ದಾರೆ. ಅಂದರೆ ಒಂದು ತರಗತಿಯಲ್ಲಿ 5 ಅಥವಾ ಅದಕ್ಕಿಂತ ಕಡಿಮೆ ಮಕ್ಕಳು ಇದ್ದಹಾಗೆ.
  • ಕರ್ನಾಟಕದಲ್ಲಿ 49,430 ಸರ್ಕಾರಿ ಶಾಲೆಗಳ ಪೈಕಿ ಇಂತಹ ಸಣ್ಣ ಮತ್ತು ಅತಿ ಸಣ್ಣ (ಮಕ್ಕಳ ನೋಂದಣಿ ಪ್ರಕಾರ) ಶಾಲೆಗಳ ಸಂಖ್ಯೆ 10,420 (2015–16ರಲ್ಲಿ). ಇದಷ್ಟೇ ಅಲ್ಲ, ಪ್ರತಿ ವರ್ಷಕ್ಕೂ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಲೇ ಇದೆ. ಈಗಾಗಲೇ ಸುಮಾರು 5000 ಶಾಲೆಗಳಲ್ಲಿ ಮಕ್ಕಳೇ ಇಲ್ಲ! ಇದರಿಂದ ಸರ್ಕಾರಿ ಶಾಲೆಗಳ ಉಳಿವಿನ ಬಗ್ಗೆ ದೊಡ್ಡ ಪ್ರಶ್ನೆ ಎದ್ದಿದೆ.

ಸರ್ಕಾರಿ ಶಾಲೆಯ ಇತಿಹಾಸ

ಬದಲಾಯಿಸಿ
  • 1. ಶಾಲಾವಕಾಶ ನೀತಿ (Policy of access to schools): ದೇಶದ ಎಲ್ಲಾ ಮಕ್ಕಳಿಗೂ ಕಡ್ಡಾಯ ಶಿಕ್ಷಣ ಒದಗಿಸಬೇಕು ಮತ್ತು ಎಲ್ಲರಿಗೂ ಶಾಲಾವಕಾಶ ಇರಬೇಕು ಎಂಬ ಪ್ರಯತ್ನ ಸ್ವತಂತ್ರಪೂರ್ವದಿಂದ ನಡೆದಿದೆ. 1911ರಲ್ಲಿ ಗೋಖಲೆ ಅವರು ಇಂಪೀರಿಯಲ್ ಲೆಜಿಸ್ಲೇಟಿವ್ ಅಸೆಂಬ್ಲಿಯಲ್ಲಿ (Imperial Legislative Assembly), 6– 10 ವರ್ಷದ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವ ನೀತಿ ಜಾರಿಗೊಳಿಸಬೇಕು ಎಂಬ ಪ್ರಸ್ತಾಪ ಮಂಡಿಸಿದರು. ಅಂದಿನ ಬ್ರಿಟಿಷ್ ಇಂಡಿಯಾ ಸರ್ಕಾರ ಇದಕ್ಕೆ ಒಪ್ಪಲಿಲ್ಲ. ಅವರ ಕನಸು ನನಸಾಗಲು ಸುಮಾರು ನೂರು ವರ್ಷಗಳೇ ಬೇಕಾಯ್ತು! 1947 ರಲ್ಲಿ, ಬರೀ 33% ಮಕ್ಕಳು ಪ್ರಾಥಮಿಕ ಶಾಲೆಯಲ್ಲಿದ್ದರು. ಸ್ವಾತಂತ್ರ್ಯದ ನಂತರ ಇಂದಿನವರೆಗೆ, ಸರ್ಕಾರದ ಬಹುತೇಕ ಶೈಕ್ಷಣಿಕ ನೀತಿಗಳು ಎಲ್ಲ ಮಕ್ಕಳಿಗೆ ಶಾಲೆಯಲ್ಲಿ ಓದುವ ಅವಕಾಶ ನೀಡುವ ದಿಶೆಯಲ್ಲಿವೆ.
  • ಕಳೆದ 70 ವರ್ಷಗಳಲ್ಲಿ ಅನೇಕ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು ಪ್ರಾರಂಭವಾದವು. ಇವೆಲ್ಲದರ ಫಲವಾಗಿ, ಈಗ ಶೇಕಡ 98ರಷ್ಟು ಹಳ್ಳಿ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಒಂದು ಕಿಲೋಮೀಟರ್ ಮಿತಿಯಲ್ಲಿ ಕನಿಷ್ಠ ಒಂದು ಶಾಲೆ ಇದೆ ಹಾಗೂ 3 ಕಿ.ಮೀ. ಮಿತಿಯಲ್ಲಿ ಒಂದು ಹಿರಿಯ ಪ್ರಾಥಮಿಕ ಶಾಲೆ ಕಂಡುಬರುತ್ತದೆ.

ಮಕ್ಕಳ ಕೊರತೆಗೆ ಕಾರಣ

ಬದಲಾಯಿಸಿ
  • ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದು (Demographic decline of population): ಭಾರತದಲ್ಲಿ ಈಗ ಮಕ್ಕಳ ಜನ್ಮ ದರ (Fertility Rate) ಕಡಿಮೆ ಆಗುತ್ತಿದೆ. ಈಗಾಗಲೇ ಸಂಪೂರ್ಣ ಜನ್ಮ ದರ (Total Fertility Rate– TFR, ಜನಸಂಖ್ಯಾ ಸ್ಥಿರತೆಗೆ ಬೇಕಾದ 2.1ಕ್ಕಿಂತ ಕಡಿಮೆ ಆಗಿದೆ. ಇದರಿಂದ ನಮ್ಮ ದೇಶದ 6-14 ವಯಸ್ಸಿನ ಮಕ್ಕಳ ಸಂಖ್ಯೆ 20.7 ಕೋಟಿ (2011), 2031ರಲ್ಲಿ 17.5 ಕೋಟಿಗೆ ಇಳಿಯಲಿದೆ. ಕರ್ನಾಟಕದ TFR ಎಂದರೆ ಮಕ್ಕಳ ಜನ್ಮ ದರ 1.8 ಇದೆ (ರಾಷ್ಟ್ರೀಯ ಆರೋಗ್ಯ ಸಮೀಕ್ಷೆ- 4, 2015-16 ಪ್ರಕಾರ). ಇದರಿಂದ ಕರ್ನಾಟಕದ ಮಕ್ಕಳ ಸಂಖ್ಯೆ 2011ರ 88 ಲಕ್ಷದಿಂದ, 2031ರಲ್ಲಿ 76 ಲಕ್ಷಕ್ಕೆ ಇಳಿಯಲಿದೆ. ಹೀಗಾಗಿ ಮುಂದೆ ನಮ್ಮ ಶಾಲೆಗಳಲ್ಲಿ ಹೆಚ್ಚು ಮಕ್ಕಳಿರುವುದಿಲ್ಲ.
  • ಖಾಸಗಿ ಶಾಲೆಗಳ ವಿಸ್ತರಣೆ: ಕಳೆದ 10–15 ವರ್ಷಗಳಿಂದ ನಮ್ಮ ದೇಶದಲ್ಲಿ ಖಾಸಗಿ ಶಾಲೆಗಳ ಸಂಖ್ಯೆ ವಿಪರೀತ ಏರಿದೆ. ಇದರಲ್ಲೂ ಅನೇಕ ಕಡಿಮೆ ವೆಚ್ಚದ ಶಾಲೆಗಳು ಕೂಡ ನಿಮಾರ್ಣವಾಗಿವೆ. ಹೀಗಾಗಿ ಈಗ ಖಾಸಗಿ ಶಾಲೆಗಳು ಸಮಾಜದ ಎಲ್ಲ ವರ್ಗಗಳಿಗೂ ಎಟುಕುವಂತಿವೆ. ಈಗ ಅತೀ ಬಡ ಕುಟುಂಬದವರು ಮಾತ್ರ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಿದ್ದಾರೆ. ಬಹುತೇಕ ಜನರಲ್ಲಿ ಖಾಸಗಿ ಶಾಲೆಗಳ ಗುಣಮಟ್ಟ ಹೆಚ್ಚು ಎಂಬ ನಂಬಿಕೆ ಇರುವುದೇ ಇದಕ್ಕೆ ಪ್ರಮುಖ ಕಾರಣ. ಇತ್ತೀಚಿನ ಒಂದು ಅಧ್ಯಯನದ ಪ್ರಕಾರ 2011ರಿಂದ 2015ರ ಒಳಗೆ, ಖಾಸಗಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಸುಮಾರು 1.7 ಕೋಟಿಯಷ್ಟು ಹೆಚ್ಚಾಯಿತು. ಇದೇ ಸಮಯದಲ್ಲಿ ಸರ್ಕಾರಿ ಶಾಲೆಗಳು 1.3 ಕೋಟಿ ಮಕ್ಕಳನ್ನು ಕಳೆದುಕೊಂಡವು! ಆದರೆ ಶೈಕ್ಷಣಿಕ ತಜ್ಞರ ಪ್ರಕಾರ ಅನೇಕ ಖಾಸಗಿ ಶಾಲೆಗಳ ಗುಣಮಟ್ಟ, ಮಕ್ಕಳ ಕಲಿಕೆ, ಸರ್ಕಾರಿ ಶಾಲೆಗಳಿಗಿಂತ ಹೆಚ್ಚೇನೂ ಇಲ್ಲ. ಖಾಸಗೀಕರಣ ಹೆಚ್ಚಾದಂತೆ ಸರ್ಕಾರಿ ಶಾಲೆಗಳಲ್ಲಿ ದಾಖಲೆ ಕಡಿಮೆಯಾಗುವದು ಸಹಜ.

ಪರಿಹಾರ

ಬದಲಾಯಿಸಿ
  • ಹಲವು ನೆರೆಹೊರೆಯ ಶಾಲೆಗಳನ್ನು ಒಟ್ಟುಗೂಡಿಸಿ, ಒಂದು ಒಳ್ಳೆ ಮಾದರಿ ಸರ್ಕಾರಿ ಶಾಲೆಯನ್ನು ಹೇಗೆ ಮಾಡಬಹುದು ಎಂದು ನಾವು ಅಧ್ಯಯನ ಮಾಡಿದ್ದೇವೆ. ಗ್ರಾಮಾಂತರ ಪ್ರದೇಶಗಳಲ್ಲಿ ಅಕ್ಕಪಕ್ಕದ 5-10 ಶಾಲೆಗಳನ್ನು ಒಂದುಗೂಡಿಸಿದರೆ, ಪ್ರತಿದರ್ಜೆಯಲ್ಲೂ ಹೆಚ್ಚು ಮಕ್ಕಳು ಕಂಡು ಬರುತ್ತಾರೆ. ಎಲ್ಲ ಶಿಕ್ಷಕರನ್ನೂ ಒಟ್ಟುಗೂಡಿಸುವುದರಿಂದ, ಪ್ರತೀ ತರಗತಿಗೂ ಒಂದು ಅಥವಾ ಒಂದಕ್ಕಿಂತ ಹೆಚ್ಚು ಶಿಕ್ಷಕರನ್ನು ಹಾಗೂ ವಿಷಯ ಸಂಬಂಧಿತ ಶಿಕ್ಷಕರನ್ನು ನೇಮಿಸುವ ಸಾಧ್ಯತೆ ಇದೆ. ಆದರೆ ಚಿಕ್ಕ ಮಕ್ಕಳಿಗೆ ಪ್ರಯಾಣ ಸೌಕರ್ಯ ಒದಗಿಸುವ ಸಮಸ್ಯೆ ಇದೆ. ಇದನ್ನು ಸರ್ಕಾರವೇ ವ್ಯವಸ್ಥೆಮಾಡಬೇಕು.
  • ಮಧ್ಯಾಹ್ನ ಭೋಜನ ನಡೆಸುವ ಕಾರ್ಯ ಹಾಗೂ ಗುಣಮಟ್ಟ ಮೇಲ್ವಿಚಾರಣೆ ಸುಲಭವಾಗುತ್ತದೆ. ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಒಂದೇ ಜಾಗದಲ್ಲಿ ನಡೆಸುವ ಸಾಧ್ಯತೆ ಹೆಚ್ಚಿ, ಮಕ್ಕಳು 1-10ರ ತನಕ ಶಾಲೆ ಮುಗಿಸಬಹುದು. ಇವೆಲ್ಲದರಿಂದ ಶಾಲೆ ನಡೆಸುವ ವೆಚ್ಚ ಕಡಿಮೆಯಾಗಿ ಸರ್ಕಾರಕ್ಕೂ ಬಹಳ ಉಳಿತಾಯ ಆಗುತ್ತದೆ ಹಾಗೂ ದಕ್ಷ ಶಾಲಾ ಆಡಳಿತಕ್ಕೆ ಅವಕಾಶ ಕೊಡುತ್ತದೆ.[]

ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ)

ಬದಲಾಯಿಸಿ
  • ಈ ಕಾಯಿದೆಯ ಪ್ರಕಾರ ಎಲ್ಲಾ ಮಕ್ಕಳಿಗೂ ಶಿಕ್ಷಣದ ಹಕ್ಕು ದೊರೆಯುವುದು. ಸರ್ಕಾರಿ ಅನುದಾನಿತ ಮತ್ತು ಅನುದಾನಿತವಲ್ಲದ ಶಾಲೆಗಳೂ ಮಕ್ಕಳನ್ನು ಕಡ್ಡಾಯವಾಗಿ ಸೇರಿಸಿಕೊಳ್ಳಬೇಕಾಗುವುದು. ಶಾಲೆಯ ಆಯ್ಕೆಗೆ ಲಾಟರಿ ಮೂಲಕ ಆಯ್ಕೆ ನಿರ್ಧರಿಸಲಾಗುವುದು.
  • ಕರ್ನಾಟಕದಲ್ಲಿ ೨೦೧೮-೧೯ರ ಸಾಲಿಗೆ ಆಯ್ಕೆ ಆರಂಬವಾಗಿದ್ದು ಅದರಲ್ಲಿ, ಆರ್‌ಟಿಇಗೆ ಸಲ್ಲಿಸಿದ ಅರ್ಜಿಗಳಲ್ಲಿ 2,33,242 ಅರ್ಜಿಗಳು ಅರ್ಹತೆ ಪಡೆದುಕೊಂಡಿವೆ. ೨೦೧೮-೧೯ರಲ್ಲಿ ಆರ್‌ಟಿಇ ಅಡಿ ಬರುವ 14,107 ಶಾಲೆಗಳಲ್ಲಿ, 79,685 ಎಲ್‌ಕೆಜಿ ಸೀಟ್‌ಗಳು, 74,232 ಒಂದನೇ ತರಗತಿ ಸೀಟ್‌ಗಳಾಗಿವೆ. ಇವುಗಳಲ್ಲಿ 1,52,117 ಸೀಟ್‌ಗಳು ಲಭ್ಯವಿವೆ.ಆರ್‌ಟಿಇ ಪ್ರಕಾರ ರಾಜ್ಯ ಪಠ್ಯಕ್ರಮದ ಅಡಿಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಸರ್ಕಾರವೇ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ನೀಡುತ್ತದೆ. ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಶಾಲೆಯಲ್ಲಿ ಓದುವ ಮಕ್ಕಳಿಗೆ ಶಾಲೆಯವರೇ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ಖರೀದಿಸಿ ನೀಡಬೇಕು’ಎಂಬ ನಿಯಮ ಇದೆ.ಒಟ್ಟು ಶಾಲೆಗಳು- ಅನುದಾನಿತ: 2,058; ಅನುದಾನ ರಹಿತ: 12,049; ಆರ್.ಟಿ.ಇ. ಪ್ರಕಾರ ಅರ್ಜಿಗಳು: 2,38,724; ಅರ್ಹತೆ ಪಡೆದು ಶಾಲೆಗೆ ಸೇರುವ ಮಕ್ಕಳು (ಅರ್ಜಿಗಳು): 2,33,242.[]

ಉಲ್ಲೇಖ

ಬದಲಾಯಿಸಿ
  1. ಆಧಾರ:ಸಾರ್ವಜನಿಕ ಶಿಕ್ಷಣ ಇಲಾಖೆ:೨೮-೫-೨೦೧೬;ಪ್ರಜಾವಾಣಿ:
  2. "ನಮ್ಮ ಸರ್ಕಾರಿ ಶಾಲೆಗಳಿಗೆ ಭವಿಷ್ಯವಿದೆಯೇ? ಶಿವಕುಮಾರ ಜೋಳದ್;ಲೇಖಕ: ಗಾಂಧಿನಗರದ ಐಐಟಿಯಲ್ಲಿ ಸಹಾಯಕ ಪ್ರಾಧ್ಯಾಪಕ". Archived from the original on 2017-07-29. Retrieved 2017-07-29.
  3. http://www.prajavani.net/news/article/2018/04/22/567739.html ಆರ್‌ಟಿಇ: ಲಾಟರಿ ಮೂಲಕ ಸೀಟು ಹಂಚಿಕೆ
  • ೧.ಅಂಕಿ ಅಂಶಗಳು ವಿಧಾನಸಭೆ ಕಲಾಪ-೨೪-೬-೨೦೧೪;ಪ್ರಜಾವಾಣಿ ವರದಿ -೨೬-೬-೨೦೧೪;
  • ೨.ಹಿಂದೂದೇಶದ ಚರಿತ್ರೆ-ಈಸ್ಟ್ ಇಂಡಿಯಾ ಕಂಪನಿಯ ಆಡಳಿತ; E.W.Thomson,M.A`
  • ೩.ಕರ್ನಾಟಕ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘವು /ಅದರ (ಕುಸ್ಮಾ) ಸಂಘದ ವಕೀಲರ ಹೇಳಿಕೆ . (ಪ್ರಜಾವಾಣಿ 28-2-2014)