ದಡ

(ಕರೆ ಇಂದ ಪುನರ್ನಿರ್ದೇಶಿತ)

ಭೂಗೋಳ ಶಾಸ್ತ್ರದಲ್ಲಿ, ಸಾಮಾನ್ಯವಾಗಿ ದಡ ಶಬ್ದವು ಒಂದು ಜಲಸಮೂಹದ ಪಕ್ಕದಲ್ಲಿರುವ ನೆಲವನ್ನು ಸೂಚಿಸುತ್ತದೆ. ಕೆಳಗೆ ಹೇಳಿದಂತೆ, ಭೂಗೋಳ ಶಾಸ್ತ್ರದ ಭಿನ್ನ ಕ್ಷೇತ್ರಗಳಲ್ಲಿ ಭಿನ್ನ ರಚನೆಗಳನ್ನು ದಡಗಳೆಂದು ಸೂಚಿಸಲಾಗುತ್ತದೆ. ಸರೋವರ ವಿಜ್ಞಾನದಲ್ಲಿ (ಒಳನಾಡಿನ ನೀರಿನ ಅಧ್ಯಯನ), ಹೊಳೆಯ ದಡ ಅಥವಾ ನದಿಯ ದಡ ಎಂದರೆ ಒಂದು ನದಿ, ಹಳ್ಳ, ಅಥವಾ ಹೊಳೆಯ ಪಕ್ಕದಲ್ಲಿರುವ ಭೂಭಾಗ.[] ದಡವು ಜಲಮಾರ್ಗದ ತಟಗಳನ್ನು ಒಳಗೊಂಡಿರುತ್ತದೆ, ಈ ತಟಗಳ ನಡುವೆ ಹರಿವು ಸೀಮಿತವಾಗಿರುತ್ತದೆ. ನದಿ ಸಂಬಂಧಿ ಭೂಗೋಳ ಶಾಸ್ತ್ರದಲ್ಲಿ, ಹೊಳೆಯ ದಡಗಳು ವಿಶೇಷ ಆಸಕ್ತಿಯ ವಿಷಯವಾಗಿವೆ. ಇದು ನದಿಗಳು ಮತ್ತು ಹೊಳೆಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಮತ್ತು ಅವುಗಳಿಂದ ಸೃಷ್ಟಿಯಾದ ನಿಕ್ಷೇಪಗಳು ಹಾಗೂ ಭೂರೂಪಗಳನ್ನು ಅಧ್ಯಯನಿಸುತ್ತದೆ.

ವಿವರಣಾತ್ಮಕ ಪದಗಳಾದ ಎಡ ದಡ ಮತ್ತು ಬಲ ದಡ ಪದಗಳು ನದಿಯ ದಿಕ್ಕಿನಲ್ಲಿ ನೋಡುತ್ತಿರುವ ವೀಕ್ಷಕನಿಗೆ ಸಾಪೇಕ್ಷವಾಗಿವೆ, ಮತ್ತು ಬಲ ದಡವು ವೀಕ್ಷಕನ ಬಲಕ್ಕೆ ಇರುತ್ತದೆ. ಕೊಳಗಳು, ಜೌಗುಗಳು, ನದೀಮುಖಗಳು, ಜಲಾಶಯಗಳು ಅಥವಾ ಸರೋವರಗಳ ತೀರರೇಖೆಯು ಕೂಡ ಸರೋವರ ವಿಜ್ಞಾನದಲ್ಲಿ ಆಸಕ್ತಿಯ ವಿಷಯವಾಗಿವೆ ಮತ್ತು ಇವನ್ನು ಕೆಲವೊಮ್ಮೆ ದಡಗಳು ಎಂದು ಸೂಚಿಸಲಾಗುತ್ತದೆ. ಈ ಎಲ್ಲ ದಡಗಳು ಅಥವಾ ತೀರರೇಖೆಗಳ ಇಳುಕಲು ಲಂಬ ಇಳಿಜಾರಿನಿಂದ ಆಳವಲ್ಲದ ಇಳಿಜಾರಿನವರೆಗೆ ಬದಲಾಗಬಹುದು.

ಸಿಹಿನೀರು ಪರಿಸರ ವಿಜ್ಞಾನದಲ್ಲಿ, ದಡಗಳು ನದಿತೀರದ ಆವಾಸಸ್ಥಾನಗಳ ನೆಲೆಗಳಾಗಿ ಆಸಕ್ತಿಯ ವಿಷಯವಾಗಿವೆ. ನದೀತೀರದ ವಲಯಗಳು ಒಳನಾಡು ಮತ್ತು ಕೆಳನಾಡು ನದಿ ಮತ್ತು ಹೊಳೆ ತಳಗಳ ಉದ್ದಕ್ಕೆ ಇರುತ್ತವೆ. ಹಾಗೆಯೇ, ತಗ್ಗು ನೆಲ, ಜೌಗು, ಕೆಸರು ಭೂಮಿ, ಅಥವಾ ನದೀಮುಖದ ಸುತ್ತಲಿನ ಮತ್ತು ಅವುಗಳನ್ನು ಅವಲಂಬಿಸಿದ ಪರಿಸರ ವಿಜ್ಞಾನವನ್ನು ಕೆಲವೊಮ್ಮೆ ದಡವೆಂದು ಕರೆಯಲಾಗುತ್ತದೆ ಮತ್ತು ಇದನ್ನು ಸಿಹಿನೀರಿನ ಪರಿಸರ ವಿಜ್ಞಾನದಲ್ಲಿ ಅಧ್ಯಯನಿಸಲಾಗುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. Luna B. Leopold; M. Gordon Wolman; John P. Miller (1995). Fluvial processes in geomorphology. New York: Dover Publications. ISBN 978-0-486-68588-5.


"https://kn.wikipedia.org/w/index.php?title=ದಡ&oldid=877333" ಇಂದ ಪಡೆಯಲ್ಪಟ್ಟಿದೆ