ಕರೀಲಿಯಾ
ಕರೀಲಿಯ : ಸೋವಿಯತ್ ಸಮಾಜವಾದಿ ಸ್ವಯಮಾಡಳಿತ ಗಣರಾಜ್ಯ. ರಷ್ಯನ್ ಸೋವಿಯತ್ ಸಂಯುಕ್ತ ಸಮಾಜವಾದಿ ಗಣರಾಜ್ಯದ ಒಂದು ಅಂಗ. ಐರೋಪ್ಯ ರಷ್ಯದ ವಾಯವ್ಯ ಭಾಗದಲ್ಲಿದೆ. ಪಶ್ಚಿಮದಲ್ಲಿ ಫಿನ್ಲೆಂಡ್, ಪುರ್ವದಲ್ಲಿ ಬಿಳಿಯ ಸಮುದ್ರ, ದಕ್ಷಿಣದಲ್ಲಿ ಲ್ಯಾಡೊಗ ಸರೋವರ, ಉತ್ತರದಲ್ಲಿ ಕ್ಯಾಂಡಲಾಕ್ಷ ಖಾರಿ-ಇವುಗಳ ನಡುವೆ ಇರುವ ಈ ರಾಜ್ಯದ ವಿಸ್ತೀರ್ಣ 172,400 ಚ. ಕಿಮೀ.
ನೈಸರ್ಗಿಕ ಲಕ್ಷಣಗಳು
ಬದಲಾಯಿಸಿಕರೀಲಿಯದ ನೆಲ ಪಶ್ಚಿಮದಿಂದ ಪುರ್ವಕ್ಕೆ ಇಳಿಜಾರು. ಕರಾವಳಿಯ ನೆಲವಂತೂ ಜೌಗಿನಿಂದ ಕೂಡಿದೆ. ಇಲ್ಲಿಯ ಭೂಭಾಗ ಪುರಾತನ ಗಟ್ಟಿಶಿಲೆಗಳಿಂದ ಕೂಡಿದ್ದು ಪರ್ವತಗಳು ನಿಸರ್ಗ ಬಲಗಳ ಪ್ರಭಾವಕ್ಕೆ ಸಿಕ್ಕಿ ಸವೆದು ತಗ್ಗಿವೆ. ನೆಲದ ಎತ್ತರ ಸಾಮಾನ್ಯವಾಗಿ ಸಮುದ್ರ ಮಟ್ಟಕ್ಕಿಂತ 300'-1,500'. ಹಿಮಯುಗದ ಪ್ರಭಾವದಿಂದ ಈ ಪ್ರದೇಶ ರೂಪುಗೋಂಡಿತು. ಅನೇಕ ಹಿಮನದಿಗಳೂ ಸರೋವರಗಳೂ ಇಲ್ಲಿಯ ವಾಯವ್ಯ ಭಾಗವನ್ನು ಆಕ್ರಮಿಸಿವೆ. ಇಲ್ಲಿ ಒಟ್ಟು 50,000 ಸರೋವರಗಳುಂಟು. ದಕ್ಷಿಣದ ಲ್ಯಾಡೋಗ ಮತ್ತು ಒನೆಗ ಸರೋವರಗಳೂ ಉತ್ತರದ ವ್ಯೂಪೊಜೆರೊ, ಸೆಗೊಜೆರೊ, ಟಾಪ್-ಒಜೆರೊ ಮತ್ತು ಕ್ಯೂಯಿಟೊ ಸರೋವರಗಳೂ ಮುಖ್ಯವಾದವು. ವಿವಿಧ ಎತ್ತರಗಳಲ್ಲಿರುವ ಇಲ್ಲಿಯ ಸರೋವರಗಳನ್ನು ಅನೇಕ ನದಿಗಳು ಕೂಡಿಸುತ್ತವೆ. ಈ ನದಿಗಳಿಂದ ವಿದ್ಯುತ್ತನ್ನು ಹೇರಳವಾಗಿ ಉತ್ಪಾದಿಸಬಹುದು. ಕರೀಲಿಯದ ನೆಲ ಹಿಮಶಿಲಾಚಯಗಳಿಂದಾವೃತವಾಗಿದ್ದರೂ ಅನೇಕ ಭಾಗಗಳಲ್ಲಿ ಇದು ಬೂದುಬಣ್ಣದ ಮಣ್ಣುಗಳಿಂದ ಕೂಡಿದೆ. ಆದರೆ ಜೌಗಿನಿಂದಾಗಿ ಬೇಸಾಯಕ್ಕೆ ಅನುಕೂಲವಾಗಿಲ್ಲ.
ವಾಯುಗುಣ
ಬದಲಾಯಿಸಿಇಲ್ಲಿಯ ಹವಾಗುಣ ಬಲು ಶೀತಕರ. ಆದರೆ ಆಗಾಗ್ಗೆ ಥಟ್ಟನೆ ಅಟ್ಲಾಂಟಿಕ್ ಸಾಗರದಿಂದ ಬೀಸುವ ಆವರ್ತಮಾರುತದಿಂದಾಗಿ ಚಳಿಗಾಲದಲ್ಲೂ ಬೆಚ್ಚನೆಯ ಹವೆ ಸಂಭವಿಸಿ ಹಿಮ ಕರಗುವುದುಂಟು. ಫೆಬ್ರುವರಿ ಅತ್ಯಂತ ಚಳಿಯ ತಿಂಗಳು. ಆಗಿನ ಉಷ್ಣತೆ ದಕ್ಷಿಣದಲ್ಲಿ-90 ಸೆಂ. (150ಫ್ಯಾ.), ಉತ್ತರದಲ್ಲಿ 140ಸೆಂ. (570ಫ್ಯಾ.). ಉತ್ತರದಿಂದ ಚಳಿಗಾಳಿ ಬೀಸಿದಾಗ ಹವಾ ಇನ್ನೂ ತಣ್ಣಗಾಗಬಹುದು. ಬೇಸಗೆ ಬಲು ಚುಟುಕು. ಆಗ ದಕ್ಷಿಣದಲ್ಲಿ ಉಷ್ಣತೆ ಸು. 160 ಸೆಂ. (610 ಫ್ಯಾ.), ಉತ್ತರದಲ್ಲಿ ಸು. 130 ಸೆಂ. (550 ಫ್ಯಾ.) ಅವಪಾತದ್ರವ ವಾರ್ಷಿಕ ಪರಿಮಾಣ ದಕ್ಷಿಣದಲ್ಲಿ 21' ಉತ್ತರದಲ್ಲಿ 16'. ಇದು ಮುಖ್ಯವಾಗಿ ಹಿಮರೂಪದಲ್ಲಿ ಬೀಳುತ್ತದೆ.
ಅರಣ್ಯಗಳು
ಬದಲಾಯಿಸಿಟೈಗ ಮಾದರಿಯವು. ಪೈನ್ಸ್ಟ್ರೂಸ್ ಮತ್ತು ಬರ್ಜ್ ಮರಗಳಿವೆ. ಕಂದುಕರಡಿ, ನರಿ, ತೋಳ ಮತ್ತು ಹಿಮಸಾರಗಗಳು ಪ್ರಾಣಿಗಳು.
ಉದ್ಯಮ
ಬದಲಾಯಿಸಿಕಬ್ಬಿಣದ ಕೈಗಾರಿಕೆಯೇ ಇಲ್ಲಿಯ ಹಳೆಯ ಉದ್ಯಮ. ಸು. 17ನೆಯ ಶತಮಾನದಿಂದಲೂ ಇದು ಬೆಳೆದುಬಂದಿದೆ. ರಷ್ಯದ ಪೀಟರ್ ಚಕ್ರವರ್ತಿ ಇದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದ. ಪೆಟ್ರೋಜವೊಟ್ಸ್ಕದಲ್ಲಿ ಇದನ್ನು ಸ್ಥಾಪಿಸಿದ. ಪೀಟರ್ನ ಕಾರ್ಖಾನೆ ಎಂದೇ ಈ ಹೆಸರಿನ ಅರ್ಥ. ಇಲ್ಲಿ ಮಾತ್ರವೇ ಅಲ್ಲದೆ ಪೊವೆ ನೆಟ್ಸ್ ಮತ್ತು ಕಾಂಚಿಜೆ಼ರೊಗಳಲ್ಲೂ ಇವನಿಂದ ಕಬ್ಬಿಣದ ಕಾರ್ಖಾನೆಗಳು ಸ್ಥಾಪಿತವಾದವು. ಒನೆಗ ಸರೋವರದ ಬಳಿಯ ಪ್ಯುಡೋಜ್ನಲ್ಲೂ ಮಧ್ಯ ಕರೀಲಿಯದ ಜಿ಼ಮೊಲಿಯಲ್ಲೂ ಈಗ ಕಬ್ಬಿಣದ ಅದಿರನ್ನು ತೆಗೆಯಲಾಗುತ್ತಿದೆ. ಪೆಟ್ರೋಜವೊಟ್ಸ್‌್ಕ ಮತ್ತು ವ್ಯಟರ್ಸ್‌ಲ್ಯಗಳು ಲೋಹ ಕೈಗಾರಿಕೆ ಕೇಂದ್ರಗಳು. ತಾಮ್ರ ಮತ್ತು ಪೆಗ್ಮಟೈಟ್ ಇತರ ಖನಿಜಗಳು. ಮರ ಕಡಿದು ಸಾಗಿಸುವುದೂ ಅದರ ಉತ್ಪನ್ನಗಳನ್ನು ತಯಾರಿಸುವುದೂ ಇಲ್ಲಿಯ ಅತ್ಯಂತ ದೊಡ್ಡ ಉದ್ಯಮ. ಕಾಗದ ಮತ್ತು ಮರದ ತಿಳ್ಳುಗಳು ಸೆಗೆಜ. ಕೊಂಡೊಪೊಗ, ಸ್ಯೂವರ್ವಿ, ಷಿಟ್ಕ್ಯರಂಟ, ಖಾರ್ಲು ಮತ್ತು ಲ್ಯಾಸ್ಕೆಲ್ಯಗಳಲ್ಲಿ ತಯಾರಾಗುತ್ತವೆ. ಪೆಟ್ರೊಜವೊಟ್ಸ್‌್ಕ ಇವಕ್ಕೂ ಪ್ರಸಿದ್ಧ. ಒಟ್ಟು ನೆಲದಲ್ಲಿ ಶೇ. 1 ರಷ್ಟು ಮಾತ್ರ ಸಾಗುವಳಿಗೆ ಒಳಪಟ್ಟಿದೆ. ರೈ, ಓಟ್ಸ್ ಮತ್ತು ತರಕಾರಿಗಳು ಬೆಳೆಯುತ್ತವೆ. ಇನ್ನು ಕೆಲವು ಕಡೆ ಹೈನು ಉದ್ಯಮವುಂಟು. ನದೀ ಸರೋವರಗಳಲ್ಲೂ ಬಿಳಿಯ ಸಮುದ್ರದಲ್ಲೂ ಮೀನುಗಾರಿಕೆ ಮುಖ್ಯ. ಬೆಲೊಮಾಸ್ರ್ಕ್ ಮತ್ತು ಕೆಂ ಮುಖ್ಯ ಮೀನುಗಾರಿಕೆ-ರೇವುಗಳು. ಒಂದನೆಯ ಮಹಾ ಯುದ್ಧ ಕಾಲದಲ್ಲಿ ಲೆನಿನ್ಗ್ರಾಡಿನಿಂದ ಪೆಟ್ರೊಜವೋಟ್ಸ್‌್ಕ ಮೂಲಕ ಬೆಲೊ ಮಾಸ್ರ್ಕ್‌ಗೂ ಬಿಳಿಯ ಸಮುದ್ರದ ದಂಡೆಗುಂಟ ಕ್ಯಾಂಡಲಾಕ್ಷ ಮತ್ತು ಮರ್ಮನ್ಸ್‌ಗಳಿಗೂ ನಿರ್ಮಿಸಲಾದ ರೈಲು ಮಾರ್ಗದ ಮೇಲೆ ಬಹುತೇಕ ಎಲ್ಲ ಪಟ್ಟಣಗಳೂ ಇವೆ. ಬಿಳಿಯ ಸಮುದ್ರದ ಕಾಲುವೆ ಇನ್ನೂಂದು ಮುಖ್ಯ ಸಂಚಾರಮಾರ್ಗ. ಇದನ್ನು ಬಿಳಿಯ ಸಮುದ್ರದ ಮೇಲೂ ಬೆಲೊಮಾಸ್ರ್ಕ್‌ನಿಂದ ಒನೆಗೆ ಸರೋವರದ ದಡದ ಪೊವೆನಟ್ಸ್‌ಗೆ 1931-33ರಲ್ಲಿ ನಿರ್ಮಿಸಲಾಯಿತು. ಇದರಿಂದಾಗಿ ಬಾಲ್ಟಿಕ್ ಮತ್ತು ಬಿಳಿಯ ಸಮುದ್ರಗಳಿಗೆ ಸಂಪರ್ಕ ಸಾಧಿಸಿದೆ. ಸಾಗರಗಾಮಿ ಹಡಗುಗಳು ಇದರಲ್ಲಿ ಸಂಚರಿಸಬಹುದಾದ್ದರಿಂದ ವಾಣಿಜ್ಯ ಮತ್ತು ಆಯಕಟ್ಟಿನ ದೃಷ್ಟಿಯಿಂದ ಇದರ ಪ್ರಾಮುಖ್ಯ ಅಧಿಕವಾಗಿದೆ. ಕರೀಲಿಯ ಜನಸಂಖ್ಯೆ 643,548 (2010). ಇವರಲ್ಲಿ ಶೇ 64 ಮಂದಿ ಪಟ್ಟಣ ಪ್ರದೇಶವಾಸಿಗಳು, ಕರೀಲಿಯದ ರಾಜಧಾನಿ ಪೆಟ್ಟೊಜವೊಟ್ಸ್‌್ಕ (ಜನಸಂಖ್ಯೆ 261,987 (2010). ಬೆಲೊವಹಸ್ರ್ಕ್, ಕಂ, ಮೆಡ್ವಜೆ಼್ಯಗಸ್ರ್ಕ್, ಕೊಡೊಪೊಗ ಮತ್ತು ಸೊರ್ತವಾಲ ಇತರ ನಗರಗಳು.