ಕರಿಹಾವು(Coluber constrictor)
Coluber constrictor anthicus.jpg
Buttermilk Racer
Coluber constrictor anthicus
Conservation status
Egg fossil classification
Kingdom:
Animalia
Phylum:
Chordata
Subphylum:
Class:
Order:
Suborder:
Family:
Subfamily:
Genus:
Species:
C. constrictor
Binomial nomenclature
Coluber constrictor
Linnaeus, 1758
Coluber constrictor distribution.png
Synonym (taxonomy)

ಕರಿಹಾವು : ಉತ್ತರ ಅಮೆರಿಕದಲ್ಲಿ ಇದು ಸಾಮಾನ್ಯವಾಗಿರುವ, ವಿಷರಹಿತ ಹಾವು.

ವೈಜ್ಞಾನಿಕ ವರ್ಗೀಕರಣಸಂಪಾದಿಸಿ

ಕೊಲ್ಯೂಬ್ರಿಡೀ ಕುಟುಂಬಕ್ಕೆ ಸೇರಿದ ಕಾಲ್ಯುಬರ್ ಕನ್ಸ್ಟ್ರಿಕ್ಟರ್ ಎಂಬ ಶಾಸ್ತ್ರೀಯ ಹೆಸರಿನ ಹಾವು.

ಪ್ರಭೇದಗಳುಸಂಪಾದಿಸಿ

ಇದರಲ್ಲಿ ಹಲವಾರು ಉಪಪ್ರಭೇದಗಳಿವೆ. ಇವುಗಳಲ್ಲಿ ಅಮೆರಿಕದ ಸಂಯುಕ್ತಸಂಸ್ಥಾನಗಳ ಮಧ್ಯಭಾಗದಲ್ಲಿ ಕಾಣಬರುವ ಬ್ಲೂ ರೇಸರ್ ಹಾಗೂ ಆಗ್ನೇಯ ಭಾಗದಲ್ಲಿ ಕಾಣಬರುವ ದಕ್ಷಿಣದ ಬ್ಲ್ಯಾಕ್ ರೇಸರ್ ಮುಖ್ಯವಾದುವು.

ಲಕ್ಷಣಗಳುಸಂಪಾದಿಸಿ

ತೆಳು ಹಾಗೂ ನೀಳದೇಹದ ಈ ಹಾವು ಸು. 4-5 ಅಡಿ ಉದ್ದ ಬೆಳೆಯುತ್ತದೆ. ದೇಹದ ಮೇಲ್ಭಾಗ ಕಪ್ಪು, ತಳಭಾಗ ನಸುಬಿಳುಪು ಅಥವಾ ಹಳದಿ. ಬಾಯಿಯ ತಳಭಾಗ ಬಿಳಿಬಣ್ಣದ್ದಾಗಿದೆ. ಇದು ಬಹಳ ವೇಗವಾಗಿ ಚಲಿಸಬಲ್ಲುದಲ್ಲದೆ ಮರ ಹತ್ತುವುದಲ್ಲೂ ಈಜುವುದರಲ್ಲೂ ಪ್ರಾವೀಣ್ಯ ಪಡೆದಿದೆ. ಗಾಬರಿಗೊಂಡಾಗ ಬಾಲದ ತುದಿಯನ್ನು ಅಲುಗಾಡಿಸುತ್ತದೆ.

ಆಹಾರಸಂಪಾದಿಸಿ

ಕಪ್ಪೆ ಇತರ ಸಣ್ಣ ಗಾತ್ರದ ಹಾವುಗಳು, ಚಿಕ್ಕ ಸ್ತನಿಗಳು, ಹಕ್ಕಿಗಳು ಮೊಟ್ಟೆಗಳು ಇದರ ಆಹಾರ.

ಸಂತಾನಾಭಿವೃದ್ಧಿಸಂಪಾದಿಸಿ

ಇವು ವಸಂತ ಋತುವಿನಲ್ಲಿ ಕೂಡಿ 10-35 ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಯಿಡುವ ಕಾಲ ಮೇ-ಜುಲೈ, ಮೊಟ್ಟೆಗಳ ಮೇಲೆ ಸಣ್ಣ ಮರಳಿನಂಥ ಕಣಗಳಿಂದಾದ ಹೊದಿಕೆಯುಂಟು. 7-9 ವಾರಗಳಲ್ಲಿ ಮೊಟ್ಟೆಗಳೊಡೆದು ಮರಿಗಳು ಹೊರಬರುತ್ತವೆ.

ಛಾಯಾಂಕಣಸಂಪಾದಿಸಿ

ಉಲ್ಲೇಖಗಳುಸಂಪಾದಿಸಿ

  1. Stejneger, L.H., and T. Barbour. 1917. A Check List of North American Amphibians and Reptiles. Harvard University Press. Cambridge, Massachusetts. 125 pp. (Coluber constrictor, p. 79)
  2. The Reptile Database. www.reptile-database.org.

ಬಾಹ್ಯ ಸಂಪರ್ಕಗಳುಸಂಪಾದಿಸಿ

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕರಿಹಾವು&oldid=689809" ಇಂದ ಪಡೆಯಲ್ಪಟ್ಟಿದೆ