ಕಯಾದು : ಭಕ್ತ ಪ್ರಹ್ಲಾದನ ತಾಯಿ, ಹಿರಣ್ಯಕಶಿಪುವಿನ ಹೆಂಡತಿ, ಜಂಭಾಸುರನ ಮಗಳು.

ಗರ್ಭಧರಿಸಿದ್ದ ಈಕೆಯನ್ನು ಸಮಯ ಕಾದು ಹಿರಣ್ಯ ಕಶ್ಶಪ್ಪು ತಪಸ್ಸಿಗೆ ಹೋಗಿದ್ದಾಗ ಇಂದ್ರ ಸೆರೆಹಿಡಿಯುತ್ತಾನಾದರೂ ನಾರದನ ಸಲಹೆಯಂತೆ, ಪೀಡಿಸದೆ ಅವನ ಬಳಿಯೇ ಬಿಡುತ್ತಾನೆ. ನಾರದ ಆಕೆಗಾಗಿ ಗಂಗಾತೀರದ ಬಳಿ ಒಂದು ಆಶ್ರಮವನ್ನು ನಿರ್ಮಿಸಿ ಅಲ್ಲಿ ಈಕೆಗೆ ಮಂತ್ರೋಪದೇಶ ಮಾಡುತ್ತಾನೆ. ಮಂತ್ರೋಪದೇಶ ಪಡೆದ ಈಕೆ ಮಹಾವಿಷ್ಣುವಿನ ಧ್ಯಾನದಲ್ಲಿ ನಿರತಳಾಗುತ್ತಾಳೆ. ಅಷ್ಟರಲ್ಲಿ ಹಿರಣ್ಯಕಶ್ಶಪ್ಪು ತಪಸ್ಸಿನಿಂದ ಹಿಂತಿರುಗುತ್ತಾನಾಗಿ ನಾರದ ಕಯಾಧುವನ್ನು ಒಪ್ಪಿಸುತ್ತಾನೆ. ಇವರ ಮಗ ಪ್ರಹ್ಲಾದ ನಾರದನ ಮಂತ್ರೋಪದೇಶದಿಂದಾಗಿ ಮುಂದೆ ಮಹಾವಿಷ್ಣುಭಕ್ತನಾಗುತ್ತಾನೆ.



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕಯಾದು&oldid=1169717" ಇಂದ ಪಡೆಯಲ್ಪಟ್ಟಿದೆ