ಕಬಿನಿ ಜಲಾಶಯ
ಕಬಿನಿ ಜಲಾಶಯ | |
---|---|
ದೇಶ | ಭಾರತ |
ಸ್ಥಳ | ಮೈಸೂರು ಜಿಲ್ಲೆ |
ಅಕ್ಷಾಂಶ ರೇಖಾಂಶ | 11°58′25″N 76°21′10″E / 11.9735263°N 76.3527562°E |
ಉದ್ದೇಶ | ನೀರಾವರಿ, ಕುಡಿಯುವ / ನೀರು ಸರಬರಾಜು |
ಕಟ್ಟುವಿಕೆ ಪ್ರಾರಂಭ | ೧೯೭೪ |
ಯಜಮಾನ್ಯ | ಕರ್ನಾಟಕ ಸರ್ಕಾರ |
Operator(s) | ಕರ್ನಾಟಕ ಸರ್ಕಾರ ನೀರಾವರಿ ಇಲಾಖೆ/ಲೋಕೋಪಯೋಗಿ ಇಲಾಖೆ |
Dam and spillways | |
Type of dam | ಮಣ್ಣಿನ / ಗ್ರಾವಿಟಿ ಅಣೆಕಟ್ಟು |
Height (thalweg) | ೧೬೬ ಅಡಿ |
ಉದ್ದ | ೧೨೯೨೭ ಅಡಿ (೬೯೬ ಮೀಟರ್) |
Width (crest) | ೨೧೪೧.೯ ಚದರ ಅಡಿ |
Width (base) | ೨೫೦ ಅಡಿ |
ಸ್ಪಿಲ್ವೇಸ್ | ೪ |
Spillway type | ರೇಡಿಯಲ್ |
ಒಟ್ಟು ಸಾಮರ್ಥ್ಯ | ೨೮ ಟಿ ಎಂ ಸಿ |
ಆಣೆಕಟ್ಟು
ಬದಲಾಯಿಸಿ[೧] ಕಬಿನಿ ನದಿಯು ಕಾವೇರಿ ನದಿಯ ಉಪನದಿಯಾಗಿದೆ. ಮೈಸೂರು ಜಿಲ್ಲೆಯ ಹೆಗ್ಗಡೆದೇವನಕೋಟೆ ತಾಲ್ಲೂಕಿನ ಬೀಚನಹಳ್ಳಿ ಮತ್ತು ಬಿದರಹಳ್ಳಿ ಗ್ರಾಮಗಳ ಬಳಿ ಕಬಿನಿ ಅಣೆಕಟ್ಟನ್ನು ಕಟ್ಟಲಾಗಿದೆ. ಕಾವೇರಿ ನದಿಯ ಕೆಳಮುಖ ಭಾಗವಾಗಿ ಕಬಿನಿ ಆಣೆಕಟ್ಟನ್ನು ಪರಿಗಣಿಸಲಾಗುತ್ತದೆ.[೨] [೩]
ನಿರ್ಮಾಣ
ಬದಲಾಯಿಸಿಕಬಿನಿ ಅಣೆಕಟ್ಟನ್ನು ೧೯೭೪ ರಲ್ಲಿ ಮೈಸೂರು ಜಿಲ್ಲೆಯ ಹೆಗ್ಗಡೆದೇವನಕೋಟೆ ತಾಲ್ಲೂಕಿನ ಬೀಚನಹಳ್ಳಿಯ ಬಳಿ ಕಟ್ಟಲು ಕಾರ್ಯ ಆರಂಭವಾಯಿತು.
ಉಪಯೋಗ
ಬದಲಾಯಿಸಿಕಬಿನಿ ಅಣೆಕಟ್ಟನ್ನು ಸಾಗರೆದೊಡ್ಡಕೆರೆ (ಹುಲ್ಲುಮಲೆ ಗ್ರಾಮ) ಮತ್ತು ನುಗು (ಸಂಬೇಗೌಡನಹಳ್ಳಿ ಗ್ರಾಮ) ಎಂಬ ಎರಡು ಭಾಗವಾಗಿ ವಿಂಗಡಿಸಲಾಗಿದೆ.
ವಿಸ್ತೀರ್ಣ
ಬದಲಾಯಿಸಿಉದ್ದ: ೩೯೪೦ ಮೀಟರ್ (೧೨೯೨೭ ಅಡಿ)
ಎತ್ತರ: ೨೦.೧೧೬೮ ಮೀಟರ್ (೧೬೬ ಅಡಿ)
ಅಗಲ: ೬೯೬ ಮೇಟರ್ (೨೨೮೩.೪೬ ಅಡಿ)
ಸಂಗ್ರಹ ಸಾಮರ್ಥ್ಯ: ೧೦೫.೬೩ ಕೋಟಿ ಸಿಎಂ೩ (೨೮ ಟಿ ಎಂಸಿ)
ಗೇಟುಗಳು: ೪
ಅಚ್ಚುಕಟ್ಟು ಪ್ರದೇಶ: ೨೧೪೧.೯೦ ಚದರ ಕಿಮೀ. [೪]
ಮುಳುಗಡೆ ಪ್ರದೇಶ: ೪೬ ಹಳ್ಳಿಗಳು
ಉದ್ದೇಶಗಳು
ಬದಲಾಯಿಸಿಕಬಿನಿ ಆಣೆಕಟ್ಟಿನಲ್ಲಿ ಸಂಗ್ರಹವಾಗುವ ನೀರನ್ನು ನೀರಾವರಿ ಮತ್ತು ಕುಡಿಯುವ ನೀರುಬಳಕೆ - ಈ ಎರಡು ಉದ್ದೇಶಗಳಿಗೆ ಬಳಸಲಾಗುತ್ತಿದೆ.
ಸ್ವಾರಸ್ಯ
ಬದಲಾಯಿಸಿಮೈಸೂರು ಮಹಾರಾಜರ ಆಡಳಿತದಲ್ಲಿ ಕಬಿನಿ ವನ್ಯಮೃಗಗಳ ಬೇಟೆಗೆ ಹೆಸರುವಾಸಿಯಾಗಿತ್ತು. ಕಬಿನಿ ಜಲಾಶಯದ ಬಳಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ, ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಮಂಚೇಗೌಡನಹಳ್ಳಿ, ಕುಪ್ಪೆ ಬೆಟ್ಟ ಇವೇ ಮುಂತಾದ ವನ್ಯಮೃಗಗಳ ತಾಣಗಳಿವೆ.