ಕಪುರ್ಥಾಲಾ ಆಕರ್ಷಣೆಗಳು


ಜಗತ್ ಜಿತ್ ಅರಮನೆ ಬದಲಾಯಿಸಿ

ಸೈನಿಕ್ ಸ್ಕೂಲ್ ಎಂದು ಪ್ರಸಿದ್ದವಾದ ಜಗತ್ ಜಿತ್ ಅರಮನೆಯನ್ನು ಮಹಾರಾಜ ಜಗತ್ ಜಿತ್ ಸಿಂಗ್ ಕಪುರ್ಥಾಲಾವನ್ನು 1900 ರಿಂದ 1908 ರವರೆಗೆ ಆಳಿದ ಸಮಯದಲ್ಲಿ ಕಟ್ಟಿದ. ಅರಮನೆಯನ್ನು ಫ್ರೆಂಚ್ ವಾಸ್ತುಶಿಲ್ಪಿ ಎಂ.ಮಾರ್ಸೆಲ್ ಮತ್ತು ಅಲ್ಲಾಹ್ ದಿತ್ತಾ ವಿನ್ಯಾಸ ಮಾಡಿದರು. ಗ್ರೇಟ್ ದರ್ಬಾರ್ ಹಾಲ್ ಮತ್ತು ಸುಂಕೇನ್ ಉದ್ಯಾನವನ ಪ್ರವಾಸಿಗರ ಮನಸೆಳೆಯುತ್ತದೆ. ಯೂರೋಪಿಯನ್ ಮತ್ತು ಭಾರತೀಯ ಶಿಲ್ಪಿಗಳು ಅರಮನೆಯ ಒಳಾಂಗಣವನ್ನು ಅಲಂಕರಿಸಿದ್ದಾರೆ. ಫ್ರಾನ್ಸ್, ಇಟಲಿ ಮತ್ತು ಹಾಲೆಂಡ್ ದೇಶಗಳಿಂದ ಪ್ರಾಚೀನ ಕಲಾಕೃತಿಗಳನ್ನು ತಂದಿಡಲಾಗಿದೆ.

ಎಲಿಸಿ ಅರಮನೆ ಬದಲಾಯಿಸಿ

ಕಪುರ್ಥಾಲಾದ ಪ್ರಸಿದ್ದ ಎಲಿಸಿ ಅರಮನೆ ಶಾಲೆಯಾಗಿ ಬಳಸಲ್ಪಡುತ್ತದೆ. ಇದನ್ನು 1862 ರಲ್ಲಿ ಕನ್ವರ್ ಬಿಕ್ರಮ್ ಸಿಂಗ್ ಕಟ್ಟಿಸಿದ. ಫ್ರೆಂಚ್ ರಿಪಬ್ಲಿಕ್ ನ ಅಧ್ಯಕ್ಷನ ಹಸೆರನ್ನಿಡಲಾಗಿದೆ.ಇದು ಫ್ರೆಂಚ್ ವಾಸ್ತುಶಯಲ್ಲಿದೆ.

ಗುರುದ್ವಾರ ಬೇರ್ ಸಾಹೀಬ್ ಬದಲಾಯಿಸಿ

ಗುರುದ್ವಾರ ಬೇರ್ ಸಾಹೀಬ್ ಸಿಖ್ಖರಿಗೆ ಪ್ರಸಿದ್ದ ಧಾರ್ಮಿಕ ಕೇಂದ್ರ. ಸುಲ್ತಾನಪುರ್ ಲೋಧಿಯಲ್ಲಿದೆ. ಮೊದಲ ಸಿಖ್ ಗುರು ಗುರುನಾನಕ್ ದೇವಜಿ ಇಲ್ಲಿ ತಮ್ಮ ಬದುಕಿನ 14 ವರ್ಷಗಳನ್ನು ಕಳೆದರೆಂದು ನಂಬಲಾಗುತ್ತದೆ. ಜೊತೆಗೆ ಇದೇ ಸ್ಥಳದಲ್ಲಿ ಗುರು ನಾನಕರು ಬೇರ್ ಎಂದು ಕರೆಯಲ್ಪಡುವಲ್ಲಿ ಸ್ನಾನ ಮಾಡುತ್ತಿದ್ದಾಗ ಜ್ನಾನೋದಯವೂ ಆಯಿತೆಂದು ಪ್ರತೀತಿಯಿದೆ. ಸಿಖ್ ಗುರು ಬೇರ್ ಮರವನ್ನು ಇಲ್ಲಿ ನೆಟ್ಟ ನಂತರ ಈ ಸ್ಥಳಕ್ಕೆ ಈ ಹೆಸರು ಬಂತು. ಪ್ರಸ್ತುತ ರಚನೆಯನ್ನು ಮಹಾರಾಜ ಜಗತ್ ಜಿತ್ ಸಿಂಗ್ ಕಟ್ಟಿಸಿದ್ದು ವಿವಿಧ ಕೋನಗಳಿಂದ ಕೂಡಿದೆ. ಮಾಳಿಗೆಯ ರಚನೆಗಳು ಹಲವು ಬಗೆಗಗಳಿಂದ ಕೂಡಿದೆ. ಗುರು ನಾನಕ್ ದೇವಜಿಯವರ ಜಯಂತಿಯನ್ನು ಇಲ್ಲಿ ಪ್ರತಿವರ್ಷ ಹಬ್ಬದ ರೀತಿ ಆಚರಸಿಲಾಗುತ್ತದೆ.

ಮೀರ್ ನಾಸಿರ್ ಅಹಮದ್ ಮಝರ್ ಬದಲಾಯಿಸಿ

ಮೀರ್ ನಾಸಿರ್ ಅಹಮದ್ ಮಝರ್ ಅರ್ಪಿತವಾಗಿರುವುದು ಸಂಗೀತದ ದಂತಕಥೆ ಹಾಡುಗಾರ ಮೀನ್ ತಾನ್ಸೇನ್ ನ ಅನುಯಾಯಿ ಮೀರ್ ನಾಸಿರ್ ಅಹಮದ್ ಗೆ ಅರ್ಪಿತವಾಗಿದೆ. ಮೀರ್ ನಾಸಿರ್ ಅಹಮದ್ ಕಪೂರ್ಥಾಲಾ ಘರಾನಾ ಪ್ರಾರಂಭಿಸಿದರು. ಪಂಜಾಬ್ ಗೆ ತಾನ್ಸೇನ್ ನ ಸೇನಿಯಾ ಬೀನಕರ್ ಸಂಪ್ರದಾಯವನ್ನು ಪರಿಚಯಿಸಿದರು. ಇಲ್ಲಿನ ಕಮಾನು ಮತ್ತು ಗೊಮ್ಮಟಗಳು ಸುಂದರವಾದ ಭಾರತೀಯ ಮತ್ತು ಮುಘಲ್ ವಾಸ್ತುಶೈಲಿಯ ಸಮ್ಮಿಳತವಾಗಿವೆ.

ಮೂರಿಷ್ ಮಸೀದಿ ಬದಲಾಯಿಸಿ

ಮೂರಿಷ್ ಮಸೀದಿ ನಗರದ ಹ್ರದಯ ಭಾಗದಲ್ಲಿದ್ದು ಆಳ್ವಿಕೆ ನಡೆಸಿದವರ ವಿಶಾಲ ಮನೋಭಾವ ಮತ್ತು ಸಹನಶಿಲತೆಯ ಸಂಕೇತ.ಭಾರತೀಯ ಪುರಾತತ್ವ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಮೂರಿಷ್ ಮಸೀದಿಯನ್ನು ರಾಷ್ಟ್ರೀಯ ಸ್ಮಾರವನ್ನಾಗಿ ಘೋಷಿಸಲಾಗಿದೆ. ಫ್ರೆಂಚ್ ವಾಸ್ತುಶಿಲ್ಪಿ ಎಂ.ಮ್ಯಾಂಟಾಕ್ಸ್ ಮಸೀದಿಯ ರಚನೆಯನ್ನು ಮಾಡಿದ್ದು ಮೊರೊಕ್ಕೋದಲ್ಲಿರುವ ಮರಕೇಶ್ ಮಸೀಸಿಯನ್ನು ಪ್ರತಿಬಿಂಬಿಸುತ್ತದೆ. ಲಾಹೋರಿನ ಮಯೋ ಸ್ಕೂಲ್ ಆಫ್ ಆರ್ಟ್ ನ ಹಲವು ಕಲಾವಿದರು ಗುಮ್ಮಟದ ರಚನೆಯನ್ನು ಸಿಂಗರಿಸಿದ್ದಾರೆ. ಶುದ್ದ ಭಾರತೀಯ ಮಾರ್ಬಲ್ ನಿಂದ ಮಸೀದಿಯನ್ನು ರಚಿಸಲಾಗಿದ್ದು ಒಂದು ಭವ್ಯತೆಯ ನೋಟ ಸಿಕ್ಕಿದೆ. ಇತಿಹಾಸ ಮತ್ತು ಕಲೆಯಲ್ಲಿ ಆಸಕ್ತಿಯುಳ್ಳ ಪ್ರವಾಸಿಗರ ಗಮನ ಖಂಡಿತ ಸೆಳೆಯುತ್ತದೆ.

ಪಂಚ ಮಂದಿರ ಬದಲಾಯಿಸಿ

ಪಂಚ ಮಂದಿರ ಎನ್ನುವುದು ಹಲವು ಹಿಂದೂ ದೇವ ದೇವತೆಗಳಿಗೆ ಅರ್ಪಿತವಾದ ಸಣ್ಣ ಸಣ್ಣ ಮಂದಿರಗಳು ಸಂಕೀರ್ಣ. ಸರದಾರ್ ಪತೇಹ್ ಸಿಂಗ್ ಅಹ್ಲುವಾಲಿಯಾ ಕಾಲದಲ್ಲಿ ಇವುಗಳನ್ನು ನಿರ್ಮಿಸಲಾಗಿದ್ದು ಐತಿಹಾಸಿಕ ವಾಸ್ತು ರಚನೆಗೆ ಉದಾಹರಣೆಯಾಗಿವೆ. ಏಕ ಕಾಲಕ್ಕೆ ಭಕ್ತರು ಒಂದೇ ನೋಟದಲ್ಲಿ ಐದೂ ದೇವಸ್ಥಾನಗಳನ್ನು ನೋಡಲಾಗುವಂತೆ ಪ್ರವೇಶ ದ್ವಾರವನ್ನು ಕಟ್ಟಲಾಗಿದೆ. ಭಾರತದಲ್ಲಿ ಸೂರ್ಯ ದೇವರನ್ನು ಪೂಜಿಸುವ ಎರಡು ದೇವಸ್ಥಾನಗಳಲ್ಲಿ ಇದೂ ಕೂಡ ಒಂದು. ಇಲ್ಲಿಯೇ ಬ್ರಹ್ಮ ದೇವನ ಮೂರ್ತಿಯನ್ನೂ ನೋಡಬಹುದು. ಪ್ರತಿದಿನ ನೂರಾರು ಭಕ್ತರು ಇಲ್ಲಿ ಭೇಟಿ ನೀಡುತ್ತಾರೆ.

ಶಾಹಿ ಸಮಾಧಾನ್ ಬದಲಾಯಿಸಿ

ಶಾಹಿ ಸಮಾಧಾನ್ ಎನ್ನುವುದು ಪ್ರಸಿದ್ದ ಶಾಲಿಮಾರ್ ಉದ್ಯಾನವನದ ಒಂದು ಭಾಗ. ನೀರಿನ ಕೊಳ, ಉದ್ಯಾನ ಮತ್ತು ಗ್ರಂಥಾಲಯಗಳಿಂದ ಕೂಡಿರುವ ಶಾಹಿ ಸಮಾಧಾನ್ ಅನ್ನು . ಮಾರ್ಬಲ್ ನಲ್ಲಿ ಕಟ್ಟಲಾದ ಬ್ರಹತ್ ಗಾತ್ರದ ರಚನೆಯಲ್ಲಿ ಖಾರಕ್ ಸಿಂಗ್, ಜಗತ್ ಜಿತ್ ಸಿಂಗ್ ಮತ್ತು ಪರಮಜಿತ್ ಸಿಂಗ್ ನ ಸಮಾಧಿಯಿದೆ. ಉದ್ಯಾನವನ ಮತ್ತು ಸಮಾಧಿಯ ರಚನೆಗಳು ರಾಜಮನೆತನದ ಸಾಂಪ್ರದಾಯಿಕ ಶೈಲಿಯ ವಾಸ್ತು ರಚನೆಯನ್ನು ಹೊಂದಿವೆ. ಇದೇ ಉದ್ಯಾನವನದಲ್ಲಿ ಬಸಂತ್ ಪಂಚಮಿ ಮೇಳ ಆಚರಿಸಲಾಗುತ್ತಿದ್ದು ಬಹಳ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುತ್ತದೆ. ಮಹಾರಾಜ ರಂಜಿತ್ ಸಿಂಗ್ ಮತ್ತು ಮಹಾರಾಜ ಫತೇಹ್ ಸಿಂಗ್ ಮೊದಲ ಬಾರಿಗೆ ಭೆಟಿಯಾಗಿದ್ದರು ಎನ್ನಲಾದ ಪ್ರಸಿದ್ದ ಬರದರಿಯೂ ಕೂಡ ಇಲ್ಲಿಯೇ ಇದೆ.

ಬುಗ್ಗೇ ಖಾನಾ ಬದಲಾಯಿಸಿ

ಬುಗ್ಗೇ ಖಾನಾ ಅಥವಾ ಬುಗ್ಗಿ ಖಾನಾದಲ್ಲಿ ಕಪುರ್ಥಾಲಾ ಆಡಳಿತಗಾರರ ಮೋಟಾರ್ ಕಾರುಗಳನ್ನು ಇರಿಸಲಾಗಿದೆ. ಕಪುರ್ಥಾಲಾದ ಭಲ್ಲೆಯವರು ಕುದುರೆಗಳನ್ನು ಕಟ್ಟಲು ಈ ಮನೆಯನ್ನು ಬಳಸುತ್ತಿದ್ದರು. ವ್ರತ್ತಾಕಾರದಲ್ಲಿ ಬುಗ್ಗೆ ಖಾನಾವನ್ನು ಕಟ್ಟಲಾಗಿದ್ದು ಇದರ ವಾಸ್ತು ರಚನೆಯನ್ನು ಪ್ರವಾಸಿಗರು ಪ್ರಶಂಸಿಸುತ್ತಾರೆ.

ಸ್ಟೇಟ್ ಗುರುದ್ವಾರ ಬದಲಾಯಿಸಿ

ಸುಲ್ತಾನಪುರ ರಸ್ತೆಯಲ್ಲಿ ನಗರಕ್ಕೆ ಸೂಕ್ತವಾದ ಸ್ಥಳದಲ್ಲಿ ಸ್ಟೇಟ್ ಗುರುದ್ವಾರವಿದೆ. 1915ರಲ್ಲಿ ಗುರುದ್ವಾರವನ್ನು ಕಟ್ಟಲಾಗಿದ್ದು ಇಂಡೋ ಸಾರ್ಸೆನಿಕ್ ಶೈಲಿಯಲ್ಲಿ ಕೆಂಪು ಮರಳುಶಿಲೆಯನ್ನು ಬಳಸಿ ಕಟ್ಟಲಾಗಿದೆ. ಇತ್ತೀಚೆಗಷ್ಟೇ, ಗುರುದ್ವಾರಕ್ಕೆ ಬಿಳಿಯ ಬಣ್ಣ ಬಳಿಯಲಾಗಿದೆ. ರಚನೆಯ ಭವ್ಯತೆ ಮತ್ತು ಪ್ರಶಾಂತತೆ ನೂರಾರು ಭಕ್ತರು ಮತ್ತು ಪ್ರವಾಸಿಗರನ್ನು ಸೆಳೆಯುತ್ತದೆ

ದರ್ಬಾರ್ ಹಾಲ್ ಬದಲಾಯಿಸಿ

ದರ್ಬಾರ್ ಹಾಲ್ ನಗರದ ಹ್ರದಯ ಭಾಗದಲ್ಲಿದೆ. ಇಂಡೋ ಸಾರ್ಸೆನಿಕ್ ಶೈಲಿಯ ರಚನೆ ಇಲ್ಲಿದೆ. ಜಿಲ್ಲಾ ನ್ಯಾಯಾಲಯ ಮತ್ತು ಸೆಷನ್ಸ್ ನ್ಯಾಯಾಧೀಶರ ಕಚೇರಿಯು ಜಿಲ್ಲಾಧಿಕಾರಿ ಕಚೇರಿಯೂ ಇಲ್ಲಿದೆ. ಇಲ್ಲಿನ ಪ್ರತಿ ರಚನೆಯೂ ಕಪುರ್ಥಾಲಾ ಆಡಳಿತಗಾರರ ಕಲಾಪ್ರೇಮವನ್ನು ಬಿಂಬಿಸುತ್ತದೆ. ಕಲ್ಲಿನಲ್ಲಿ ಕೆತ್ತಲಾದ ಕಲಾಕ್ರತಿಗಳು ಕಟ್ಟಡದ ವಾತಾವರಣಕ್ಕೆ ರಾಜವೈಭೋಗವನ್ನು ನೀಡವೆ. ಇಲ್ಲಿ ಕಪುರ್ಥಾಲಾ ರಾಜಮನೆತನಕ್ಕೆ ಸೇರಿದ ಕಂಚಿನ ಪ್ರತಿಮೆಯನ್ನು ಇಲ್ಲಿ ಸ್ಥಾಪಿಸಲಾಗಿದೆ.

ಘಂಟೆ ಮನೆ ಬದಲಾಯಿಸಿ

ಘಂಟೆಮನೆಯನ್ನು ನೂರು ವರ್ಷಕ್ಕಿಂತಲೂ ಹಿಂದೆ ಅಂದರೆ 1901 ರಲ್ಲಿ ನಿರ್ಮಿಸಲಾಯಿತು. ಆಶ್ಚರ್ಯವೆಂಬಂತೆ ಈ ಗಡಿಯಾರ ಗೋಪುರ 1949ರಲ್ಲಿ ಮಹಾರಾಜ ಜಗತ್ ಜಿತ್ ಸಿಂಗ್ ನಿಧನದ ನಂತರ ಸ್ಥಗಿತಗೊಂಡಿತು. ಕೆಂಪು ಕಲ್ಲಿನ ಗಡಿಯಾರ ಗೋಪುರದ ವ್ಯವಸ್ಥೆಯನ್ನು ಇದೀಗ ಭಾರತೀಯ ಪುರಾತತ್ವ ಇಲಾಖೆ ನೋಡಿಕೊಳ್ಳುತ್ತಿದೆ.

ಜಗತ್ ಜಿತ್ ಕ್ಲಬ್ ಬದಲಾಯಿಸಿ

ಗ್ರೀಕೋ ರೋಮನ್ ಶೈಲಿಯಲ್ಲಿ ಕಟ್ಟಲಾದ ಜಗತ್ ಜಿತ್ ಕ್ಲಬ್ ನಗರದ ಮಧ್ಯದಲ್ಲಿದೆ. ಇಲ್ಲಿನ ಕಟ್ಟಡದ ವೈಭವೋಪೇತ ರಚನೆ ಅಥೆನ್ಸ್ ನ ಅಕ್ರೋಪೋಲೀಸ್ ರಚನೆಯ ಪ್ರತಿಬಿಂಬಿಸುತ್ತದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ರಾಜಮನೆತನದ ಮೋಟ್ಟೋ ರಾಜನಿಗೆ ಮತ್ತು ದೇಶಕ್ಕೆ ಎಂಬ ಬರಹ ಗೋಚರಿಸುತ್ತದೆ. 19ನೇ ಶತಮಾನಕ್ಕೆ ಮೊದಲು ಈ ಸ್ಥಳ ಚರ್ಚ್ ಆಗಿ ಬಳಸಲ್ಪಡುತ್ತಿತ್ತು. ನಂತರದ ವರ್ಷಗಳಲ್ಲಿ ಅಂದರೆ 194 ರ ಸುಮಾರಿನಲ್ಲಿ ಸಿನೆಮಾ ಹಾಲ್ ಆಗಿಯೂ ಇತ್ತೀಚಿನ ದಿನಗಳಲ್ಲಿ ಕ್ಲಬ್ ಆಗಿ ಬಳಸಲ್ಪಡುತ್ತದೆ.

ಕಂಜ್ಲಿ ವೆಟ್ ಲ್ಯಾಂಡ್ ಬದಲಾಯಿಸಿ

ಕಂಜ್ಲಿ ವೆಟ್ ಲ್ಯಾಂಡ್ ಕಪುರ್ಥಾಲಾದಿಂದ 5ಕಿಮೀ ದೂರದಲ್ಲಿ ಕಾಲಿ ಬೀನ್ ನದಿ ದಂಡೆಯಲ್ಲಿದೆ. ವಿವಿಧ ಬಗೆಯ ಸಂಪಧ್ಬರಿತ ಸಸ್ಯ ಮತ್ತು ಪ್ರಾಣಿಗಳಿಂದ ಕೂಡಿದ್ದು 40-50 ವಲಸೆ ಬಂದ ಕ್ಷಿಗಳಿಗೆ ಆಶ್ರಯ ಒದಗಿಸುತ್ತದೆ.ವನ್ಯಜೀವಿ ಛಾಯಾಗ್ರಾಹಕರು ಮತ್ತು ಪ್ರಾಣಿಪಕ್ಷಿ ಸಂರಕ್ಷಕರಿಗೆ ದೋಣಿವಿಹಾರಗಳಿಗೆ ಇದು ಸೂಕ್ತ ತಾಣ.

ವಿಲ್ಲಾ ಬ್ಯುನಾ ವಿಸ್ತಾ ಬದಲಾಯಿಸಿ

ವಿಲ್ಲಾ ಬ್ಯುನಾ ವಿಸ್ತಾ ಮಹಾರಾಜ ಜಗತ್ ಜಿತ್ ಸಿಂಗ್ ರ ಮೊಮ್ಮಗನ ಖಾಸಗಿ ಸ್ವತ್ತು. ಇದು ವಿಲ್ಲಾ ಎಂದೇ ಪ್ರಸಿದ್ದವಾಗಿದ್ದು ನಗರದಿಂದ ಸುಮಾರು 4ಕಿಮೀ ದೂರದಲ್ಲಿದೆ. ಇದನ್ನು ರಚನೆಮಾಡಿದ್ದು 1899ರಲ್ಲಿ ಜೆಓಎಸ್ ಎಲ್ಮೋರ್. ಮೊದಲು ಇದು ರಾಜಮನೆತನದ ಬೇಟೆಯ ಮನೆಯಾಗಿತ್ತು. ನಂತರದ ದಿನಗಳಲ್ಲಿ ಇದನ್ನು ಮಹಾರಾಜ ಜಗತ್ ಜಿತ್ ಸಿಂಗನ ಸ್ಪ್ಯಾನಿಶ್ ಹೆಂಡತಿ ಅನಿತಾ ಡೆಲ್ಗ್ರಾಡಾ ಅವರ ವಸತಿಯನ್ನಾಗಿ ಬದಲಾಯಿಸಲಾಯಿತು. ಪ್ರಸ್ತುತ ೀ ವಿಲ್ಲಾ ಪ್ರಸಿದ್ದ ವಿಹಾರ ತಾಣವಾಗಿದೆ ಮತ್ತು ಇಲ್ಲಿ ದೋಣಿ ವಿಹಾರ ಮತ್ತ ಮೀನುಗಾರಿಕೆ ನಡೆಸಲಾಗುತ್ತದೆ.

ಜುಬಿಲಿ ಸಭಾಭವನ ಬದಲಾಯಿಸಿ

ಜುಬಿಲ್ ಸಭಾಭವನವನ್ನು 1916ರಲ್ಲಿ ಮಹಾರಾಜ ಜಗತ್ ಜಿತ್ ಸಿಂಗ್ ನ ಇಪ್ಪತ್ತೈದನೇ ವರ್ಷದ ಆಳ್ವಿಕೆಯ ನೆನಪಿಗೆ ಕಟ್ಟಲಾಗಿದೆ. ಮಹಾರಾಜ ಜಗತ್ ಜಿತ್ ಸಿಂಗ್ ನ ದರ್ಬಾರ್ ಸಭಾಂಗಣ ಪ್ರಸ್ತುತ ನವಾಬ್ ಜಸ್ಸಾ ಸಿಂಗ್ ಅಹ್ಲುವಾಲಿಯಾ ಸರ್ಕಾರಿ ಕಾಲೇಜಿನ ಕಾರ್ಯಕ್ರಮಗಳಿಗೆ ಬಳಕೆಯಾಗುತ್ತಿದೆ. ಸುಂದರ ರಚನೆಯಿಂದ ಈ ಕಟ್ಟಡ ಕಪುರ್ಥಾಲಾಕ್ಕೆ ಪ್ರವಾಸಿಗರನ್ನು ಸೆಳೆಯುತ್ತದೆ. ಇಲ್ಲಿನ ಹಸಿರು ಹೊದ್ದ ವಾತಾವರಣ ಪ್ರವಾಸಿಗರಲ್ಲಿ ಪ್ರಸಿದ್ದ.

ಯುದ್ದ ಸ್ಮಾರಕ ಬದಲಾಯಿಸಿ

ಯುದ್ದ ಸ್ಮಾರಕವನ್ನು 1923ರಲ್ಲಿ ಕಟ್ಟಲಾಗಿದ್ದು ಕ್ಯಾಪ್ಟನ್ ಜಗ್ಗರ್ ಸಿಂಗ್ ವಾರ್ ಸ್ಮ್ರತಿಯಾಗಿ ಪ್ರಸಿದ್ದಿ ಪಡೆದಿದೆ. ಇಂಡೋ ಸಾರ್ಸೆನಿಕ್ ಶೈಲಿಯಲ್ಲಿ ಕೆಂಪು ಮರಳುಶಿಲೆಯನ್ನು ಬಳಸಿ ಕಟ್ಟಲಾಗಿರುವ ಸ್ಮ್ರತಿಯಲ್ಲಿ ಕಪುರ್ಥಾಲಾದ ಸೈನಿಕನ ಕಂಚಿನ ಪ್ರತಿಮೆಯಿದೆ. ಹಸಿರುವನಗಳಿಂದ ಸುತ್ತುವರೆದಿದ್ದು ಆರಾಮದಾಯಕ ತಾಣ.

ಉಲ್ಲೇಖಗಳು ಬದಲಾಯಿಸಿ