ಕನ್ನೇಲಿ ಶಿಲಾಶಾಸನ
ಕನ್ನೇಲಿ ಶಿಲಾಶಾಸನವು ಬೆಂಗಳೂರಿನ ಕೆಂಗೇರಿಯ ಸಮೀಪದ ಚೆನ್ನಿಗರಾಯ ದೇವಾಲಯದ ಮುಂಬಾಗದಲ್ಲಿದೆ. ಈ ಶಾಸನ ಸುಮಾರು ಕ್ರಿ.ಶ ೧೪೦೮ರಲ್ಲಿ ಸ್ಥಾಪನೆಯಾಗಿದೆ. ಇದರ ಗಾತ್ರ 4’ 6” x 2’. ಇದು ಕನ್ನಡ ಲಿಪಿಯಲ್ಲಿ ಇದೆ. ಈ ಶಾಸನದಲ್ಲಿ ಕನ್ನೇಲಿ ಊರಿನ ಅಧಿಕಾರಿ ಹಯಕಾಸ ದೇವರಾದ ತಿರುಮಲನಾಥನಿಗೆ ದಾನವಾಗಿ ಕೊಟ್ಟ ಮಗ್ಗದ ಬಗ್ಗೆ ಬರವಣಿಗೆಯಲ್ಲಿ ತಿಳಿಸಲಾಗಿದೆ.
ಕನ್ನೇಲಿ ಶಿಲಾಸನ | |
---|---|
ಸ್ಥಳ | ಕನ್ನೇಲಿಯ ಚೆನ್ನಿಗರಾಯ ದೇವಾಲಯ (ಕೆಂಗೇಲಿ ಸಮೀಪ) |
ಎತ್ತರ | 4.6 feet (1.4 m) |
ನಿರ್ಮಾಣ | CE1408 |
ಶಾಸನ ಪಠ್ಯ
ಬದಲಾಯಿಸಿಎಪಿಗ್ರಾಫಿಯ ಕರ್ನಾಟಿಕದ ಒಂಭತ್ತನೇ ಸಂಪುಟದಲ್ಲಿ ಈ ಶಾಸನವು BN122 ಸಂಖ್ಯೆಯಡಿ ದಾಖಲಾಗಿರುವ ಪಠ್ಯ ಈ ರೀತಿ ಇದೆ. [೧]
ಅದೇ ಹೋಬಳಿ ಕನ್ನೆಲ್ಲಿ ಗ್ರಾಮದ ಚನ್ನಿಗರಾಯ ದೇವಾಲಯದ ಮುಂದೆ ನೆಟ್ಟ ಕಲ್ಲಿನಲ್ಲಿ.
1ಸ್ವಸ್ತಿಶ್ರೀಸಕವೆರುಸಂ
2ಗಳ1330ನೆಯಸವ್ರ್ಯಧಾರಿ
3ಸಂವತ್ಸರದಚೈತ್ರಶು5ಶೂ
4ಲುಶ್ರೀಮಂನ್ಮಹಾರಾಜಾಧಿ
5ರಾಜರಾಜಪರಮೇಶ್ವರಶ್ರೀ
6ವೀರದೇವರಾಯಮಹಾರಾಯ
7ರುಪ್ರಿಥ್ವೀರಾಜ್ಯಂಗೆಯಿಉತ್ತಿರ
8ಲು ಅಧಿಕಾರಿಹಯಕನವರು
9ಕುಕ್ಕಲನಾಡಕಂನ್ನೆಲ್ಲಿಯತಿರು
10ಮಲೆನಾಥದೇವರಿಗೆನಂಮ
11ದೇವರಿಗೆಆಕಂನ್ನೆಲ್ಲಿಯಲುಯೆರ
12ಡುಮಗ್ಗವನುಸುಂಕಮಾನ್ಯ
13ವಾಗಿಆಚಂದ್ರಾಕ್ರ್ಕಸ್ಥಾಯಿಯಾ
14ಗಿಕೊಟ್ಟಧಮ್ರ್ಮಶಾಸನ
--ಹಿಂಭಾಗ--
15ದಾನಪಾಲನಯೋಮ್ರ್ಮ
16ಯೇದಾನಾಛ್ರೇಯೋನುಪಾ
17ಲನಂದಾನಾತ್ಸ್ಯಗ್ರ್ಗ
18ಮವಾವ್ನೋತಿಪಾಲ
19ನಾದಚ್ಯುತಂಪದಂ||
20ಸ್ಯದತ್ತಾದ್ದ್ಯಿಗುಣಂಪು
21ಣ್ಯಂಪರದತ್ತಾನುಪಾಲ
22ನಂ | ಪರದತ್ತಾಸಹಾ
23ರೇಣಸ್ಯದತ್ತಂನಿಷ್ಪಲಂ
24ಭವೇತ್ ||
ಅರ್ಥ
ಬದಲಾಯಿಸಿThe inscription records the donation of two looms to the god Thirumalenatha by an officer named Hayakasa in the town of Kanneli within the province of Kukkala-nad.
ಉಲ್ಲೇಖಗಳು
ಬದಲಾಯಿಸಿ- ↑ Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology.
{{cite book}}
: CS1 maint: unrecognized language (link)
ಹೊರಕೊಂಡಿಗಳು
ಬದಲಾಯಿಸಿ- ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮
- Inscription stones of city now on Google Maps, K.Sarumathi, The Hindu, 19May2018
- Inscription Stone of Bangalore, A physical verification project by Uday Kumar P L