ಕನ್ನೆಸೊಪ್ಪಿನ ಕುಟುಂಬ
Commelineae | |
---|---|
Commelina maculata in Narsapur, Medak district, India. | |
Scientific classification | |
ಸಾಮ್ರಾಜ್ಯ: | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಉಪಕುಟುಂಬ: | |
ಪಂಗಡ: | Commelineae Meisner, 1842
|
Genera | |
ನ್ನೆಸೊಪ್ಪಿನ ಕುಟುಂಬ : ಏಕದಳ ಸಸ್ಯಗಳ ಗುಂಪಿಗೆ ಸೇರಿದ ಕಮಲ್ಯನೇಸೀ ಎಂಬ ಶಾಸ್ತ್ರೀಯ ಹೆಸರಿನ ಒಂದು ಕುಟುಂಬ. ಇದರಲ್ಲಿ 28 ಜಾತಿಗಳು, ಸು. 400 ಪ್ರಭೇದಗಳು ಇವೆ. ಬಹುಪಾಲು ಸಸ್ಯಗಳು ಉಷ್ಣವಲಯದ ಏಷ್ಯ ಖಂಡದ ಪ್ರದೇಶಗಳಲ್ಲೂ ಮತ್ತು ಯುರೋಪಿನ ಕೆಲವು ದೇಶಗಳಲ್ಲೂ ಬೆಳೆಯುತ್ತವೆ.
ಲಕ್ಷಣಗಳು
ಬದಲಾಯಿಸಿಸಸ್ಯಗಳು ರಸಭರಿತವಾದ ವಾರ್ಷಿಕ ಅಥವಾ ಬಹುವಾರ್ಷಿಕ ಮೂಲಿಕೆಗಳು, ಕೆಲವು ಹಂಬಿನಂತೆ ಬೆಳೆಯುತ್ತವೆ. ಕಾಂಡದಲ್ಲಿ ಹಲವಾರು ಗಿಣ್ಣುಗಳಿವೆ. ಬೇರುಗಳಿವೆ ತೊಡಕು ಬೇರಿನ ವರ್ಗಕ್ಕೆ ಸೇರಿವೆ.ಎಲೆಗಳು ಸರಳ ರೀತಿಯವು, ಪರ್ಯಾಯವಾಗಿ ಜೋಡಣೆಗೊಂಡಿವೆ. ಎಲೆಗಳ ಬುಡದ ಸುತ್ತ ಒಂದು ರೀತಿಯ ಕವಚವಿದೆ. ಎಲೆಯ ನರವಿನ್ಯಾಸ ಸಮಾನಾಂತರ ಮಾದರಿಯದು.ಹೂಗೊಂಚಲು ಮಧ್ಯಾರಂಭಿ (ಸೈಮೋಸ್) ರೀತಿಯದು. ಇದು ಗಿಡದ ತುದಿಯಲ್ಲೋ ಎಲೆಯ ಕಂಕುಳುಗಳಲ್ಲೋ ಇರುತ್ತದೆ. ಕೆಲವು ಸಸ್ಯಗಳಲ್ಲಿ ಏಕಪಾಶರ್ವ್ ಮಧ್ಯಾರಂಭಿಯಾಗಿಯೂ ಕೆಲವು ವೇಳೆ ಪರ್ಯಾಯ ಪಾಶರ್ವ್ ಮಧ್ಯಾರಂಭಿಯಾಗಿಯೂ ಮತ್ತೆ ಕೆಲವು ಸಸ್ಯಗಳಲ್ಲಿ ಸಂಕೀರ್ಣ ಮಾದರಿಯಂತೆಯೂ ಇರುವುದುಂಟು.ಹೂಗಳು ದ್ವಿಲಿಂಗಿಗಳು. ಬಹುಪಾಲು ದೋಣಿಯಾಕಾರದವು. ಬಣ್ಣ ನಸುನೀಲಿ, ಬಿಳುಪು ಅಥವಾ ನಸುಗೆಂಪು. ಪ್ರತಿಯೊಂದು ಹೂವು ಪರಿಪುರ್ಣವಾಗಿದ್ದು ಬ್ರ್ಯಾಕ್ಟ್ ಮತ್ತು ಬ್ರ್ಯಾಕ್ಟಿಯೋಲುಗಳನ್ನು ಪಡೆದಿರುತ್ತದೆ. ಹೂಗಳು ಆರೀಯ ಸಮಾಂಗತೆ ಅಥವಾ ಉಭಯಪಾಶರ್ವ್‌ಸಮಾಂಗತೆ ಉಳ್ಳವು.ಹೂಗಳಲ್ಲಿ ಪುಷ್ಪಪತ್ರಗಳಾಗಲೀ ದಳಗಳಾಗಲೀ ಬೇರೆ ಬೇರೆಯಾಗಿಲ್ಲ. ಒಂದೇ ಬಗೆಯ ಪೆರಿಯಾಂತುಗಳೆಂಬ 6 ಬಿಡಿ ಭಾಗಗಳುಂಟು. ಇವು ಎರಡು ಸುತ್ತುಗಳಲ್ಲಿ ಜೋಡಣೆಗೊಂಡಿದ್ದು ಒಂದೊಂದು ಸುತ್ತಿನಲ್ಲಿ ಮೂರು ಭಾಗಗಳಿವೆ. ಹೊರಸುತ್ತಿನ ದಳಗಳು ಹಸಿರು ಬಣ್ಣದವು. ಒಳಸುತ್ತಿನವು ನೀಲಿ, ಬಿಳುಪು ಅಥವಾ ನಸುಗೆಂಪು ಬಣ್ಣದವು. ಹೂವಿನಲ್ಲಿ ಸಾಮಾನ್ಯವಾಗಿ 6 ಕೇಸರಗಳಿವೆ. ಒಂದೊಂದು ವಲಯದಲ್ಲಿ ಮೂರು ಮೂರರಂತೆ ಎರಡು ವಲಯಗಳಲ್ಲಿ ಜೋಡಣೆಯಾಗಿವೆ. ಸಾಧಾರಣವಾಗಿ ಎಲ್ಲ ಕೇಸರಗಳೂ ಫಲಕಾರಿಯಾಗಿರುವುದುಂಟು. ಆದರೆ ಕೆಲವು ಸಾರಿ 3 ಕೇಸರಗಳೂ ಫಲಕಾರಿಯಾಗಿದ್ದು, ಉಳಿದ ಮೂರು ಬರಡಾಗಿರುತ್ತವೆ. ಅಪರೂಪಕ್ಕೆ ಒಂದೇ ಒಂದು ಕೇಸರ ಮಾತ್ರ ಫಲಕಾರಿಯಾಗಿರುವುದೂ ಉಂಟು. ಕೇಸರ ತಂತುವಿಗೆ (ದಂಡ) ಅನೇಕ ವೇಳೆ ರೋಮಮಯವಾದ ಮಣಿಯಂಥ ಉಪಾಂಗಗಳ (ಅಪೆಂಡೇಜ್) ಬೆಳೆವಣಿಗೆಗಳಿರುತ್ತವೆ. ಪರಾಗಕೋಶಗಳು ಎರಡು. ಇವು ಬಲಿತಾಗ ಅವುಗಳ ತುದಿಯಲ್ಲಿರುವ ರಂಧ್ರದಿಂದಲೋ ಅಥವಾ ಉದ್ದುದ್ದಕ್ಕೆ ಬಿರಿದೋ ಪರಾಗವನ್ನು ಹೊರಚೆಲ್ಲುತ್ತವೆ. ಅಂಡಾಶಯ ಮೂರು ಕಾರ್ಪೆಲುಗಳಿಂದಾದ ಸಂಯುಕ್ತ ಮಾದರಿಯದು. ಕೆಲವು ವೇಳೆ ಒಂದೇ ಕಾರ್ಪೆಲಿರುವುದೂ ಉಂಟು. ಉಚ್ಚಸ್ಥಾನದ ಇದರಲ್ಲಿ ಮೂರು ಕೋಣೆಗಳಿವೆ. ಅಪರೂಪಕ್ಕೆ ಎರಡೇ ಕೋಣೆಗಳಿರಬಹುದು. ಒಂದೊಂದು ಕೋಣೆಯಲ್ಲೂ ಹಲವಾರು ಅಂಡಕಗಳಿವೆ. ಶಲಾಕೆ ಸರಳರೂಪದ್ದು. ಶಲಾಕಾಗ್ರ 3 ಭಾಗಗಳಾಗಿ ಒಡೆದಿದೆ. ಫಲ ಒಡೆಯುವ ಅಥವಾ ಒಡೆಯದಿರುವ ಸಂಪುಟ (ಕ್ಯಾಪ್ಸ್ಯುಲ್) ಮಾದರಿಯದು. ಕೆಲವೊಮ್ಮೆ ಫಲದ ಸುತ್ತ ರಸಭರಿತವಾದ ಪುಷ್ಪಪತ್ರಗಳಿರುವುದುಂಟು. ಬೀಜಗಳು ಅನೇಕ. ಎಲ್ಲವೂ ಭ್ರೂಣಾಹಾರಪೂರಿತ.
ಪ್ರಭೇದಗಳು
ಬದಲಾಯಿಸಿಕನ್ನೆಗಿಡದ ಕುಟುಂಬದ ಕೆಲವು ಮುಖ್ಯ ಪ್ರಭೇದಗಳು ಇವು : ಕಮಲೈನ ಕಮ್ಯೂನಿಸ್ (ಕನ್ನೆಸೊಪ್ಪು, ಗುಬ್ಬಚ್ಚಿಬಾಳೆ), ಕಮಲೈನ ಒಬ್ಲಿಕ (ಕಲ್ಡಾಳು), ಕಮಲೈನ ಸ್ಯಾಲಿಸಿಪೋಲಿಯ, ಏನಯಿಲಿಮ ನ್ಯೂಡಿಪ್ಲೋರಮ್ (ನೆಲಚೇಳು ಸೊಪ್ಪು). ರಿಯೋ ಡಿಸ್ಕಲರ್, ಟ್ರಾಡೆಸ್ಕ್ಯಾನ್ಯಿಯ ಡಿಸ್ಕಲರ್ ಮತ್ತು ಸೈನೋಟಿಸ್ ಅಕ್ಸಿಲ್ಯಾರಿಸ್.
ಉಪಯೋಗಗಳು
ಬದಲಾಯಿಸಿಆರ್ಥಿಕವಾಗಿ ಈ ಕುಟುಂಬದ ಸಸ್ಯಗಳೇನೂ ಅಷ್ಟೊಂದು ಉಪಯುಕ್ತವಾಗಿಲ್ಲ. 8-10 ಜಾತಿಗಿಡಗಳನ್ನು ಅಲಂಕಾರದ ಸಸ್ಯಗಳಾಗಿ ತೋಟಗಳಲ್ಲಿ ಬೆಳೆಸುತ್ತಾರೆ.