ಕನ್ನಡ ಸಂಘ, ಟೊರಾಂಟೋ

ಟೊರಾಂಟೋ ನಗರದಲ್ಲಿ 'ಕನ್ನಡ ಸಂಘ, ವರ್ಷ ೧೯೭೩ ರ, ಜುಲೈ, ೮ ನೇತಾರೀಖಿನಂದು ಸ್ಥಾಪಿಸಲ್ಪಟ್ಟಿತು. ಕನ್ನಡ ಮಾತಾಡುವ ಹಲವಾರು ಕನ್ನಡಿಗರು ಒಟ್ಟಾಗಿಸೇರಿ, 'ಕನ್ನಡಸಂಘ, ಟೊರಾಂಟೋ'ವನ್ನು, 'ಗ್ರೇಟರ್ ಟೊರಾಂಟೋ ಏರಿಯಾ'ದಲ್ಲಿ ಸ್ಥಾಪಿಸುವ ಶುಭಾರಂಭವನ್ನು ಮಾಡಿದರು. ಸಂಘದ ಪ್ರಮುಖ ಉದ್ದೇಶ್ಯ, ನಗರದ ಕನ್ನಡಿಗರನ್ನು ಒಟ್ಟಾಗಿಸಿ, ಕರ್ನಾಟಕದ ಭವ್ಯ ಪರಂಪರೆಗಳ ಬಗ್ಗೆ ಯುವಜನತೆಗೆ ತೋರಿಸಿ ನಮ್ಮ ಸಾಹಿತ್ಯ, ಕಲೆ, ನೃತ್ಯ, ಸಂಗೀತ, ನಾಟಕ ಕಲೆಗಳನ್ನು ತಿಳಿಸಿಕೊಡುವ, ಸಮಾಲೋಚಿಸುವ, ಮತ್ತು ಅವರೂ ಆವಲಯದಲ್ಲಿ ತಮ್ಮ ಕೊಡುಗೆಯನ್ನು ಕೊಡಲು ಪ್ರೋತ್ಸಾಹಿಸುವುದು, ಕನ್ನಡಪರ ಚಟುವಟಿಕೆಗಳನ್ನು ಆಯೋಜಿಸುವುದು, ಈಗಾಗಲೇ ಪ್ರಸಿದ್ಧರಾಗಿರುವ ಕಲಾವಿದರನ್ನು ಆದರಿಸುವುದು, ಉದಯೋನ್ಮುಖ ಕಲಾವಂತರಿಗೆ ಪ್ರೋತ್ಸಾಹ ಕೊಟ್ಟು,ವೇದಿಕೆಯನ್ನು ಕಲ್ಪಿಸುವುದು, ಇದೇಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

೬೦ ರ ದಶಕದಲ್ಲಿ

ಬದಲಾಯಿಸಿ

ಟೊರಾಂಟೋ ನಗರದ ಕನ್ನಡಿಗರು, ೬೦ ರ ದಶಕದಲ್ಲಿ ತಮ್ಮತಮ್ಮಮನೆಗಳಲ್ಲೇ ಯುಗಾದಿ, ಸಂಕ್ರಾಂತಿ, ಗೌರಿ-ಗಣೇಶನ ಹಬ್ಬ, ದೀಪಾವಳಿ, ಕ್ರಿಸ್ಮಸ್, ಮೊದಲಾದ ಹಬ್ಬಗಳನ್ನು ಆಚರಿಸುತ್ತಿದ್ದರು. ಸನ್,೧೯೬೮ ರಲ್ಲಿ ಶ್ರೀಮತಿ. ರಾಜಲಕ್ಷ್ಮಿ, ಡಾ.ಬಿ.ರಾಮಸ್ವಾಮಿ, ಶ್ರೀಮತಿ. ಉಮಾ, ಡಾ.ಎಸ್.ಸತ್ಯನಾರಾಯಣ, ಶ್ರೀಮತಿ.ವಸಂತಾ, ಶ್ರೀ. ಎಸ್. ರಾಘವೇಂದ್ರ ರಾವ್, ಪರಿವಾರದವರು ಒಟ್ಟಾಗಿ ಬೆರೆತು, ಈ ಹಬ್ಬಗಳನ್ನು ಆಚರಿಸುತ್ತಿದ್ದರು. ಮುಂದೆ, ೧೯೬೮ ರ ಮಾರ್ಚ್ ೩೦ ರಂದು, ಟೊರಾಂಟೋನಗರದ 'ಶೆರ್ ಬೊರ್ನ್ ಸ್ಟ್ರೀಟ್' ಮತ್ತು 'ಕಾರ್ಲ್ಟನ್ ಸ್ಟ್ರೀಟ್' (ಅಲನ್ ಗಾರ್ಡನ್ ಸಮೀಪದಲ್ಲೇ)ದಕ್ಷಿಣ ಪಶ್ಚಿಮ ಭಾಗದ ಕೊನೆಯಲ್ಲಿರುವ 'ಸೇಂಟ್ ಲ್ಯೂಕ್ಸ್ ಯುನೈಟೆಡ್ ಚರ್ಚ್' ನ 'ಬೇಸ್ಮೆಂಟ್' ನಲ್ಲಿ 'ಕನ್ನಡ ಸಂಘ' ಸ್ಥಾಪಿಸುವ ಬಗ್ಗೆ ಮೊದಲ ಮೀಟಿಂಗ್ ನಲ್ಲಿ ಪಾಲ್ಗೊಳ್ಳಲು ಒಟ್ಟು ೩೦ ಜನ ಸೇರಿದ್ದರು. ಹೀಗೆ ಮೊದಲ ಯುಗಾದಿ ಹಬ್ಬ, ಟೊರಾಂಟೋನಗರದ ಕನ್ನಡಿಗರಿಂದ, ಬಹಳ ಸಂಭ್ರಮದಿಂದ ಹಮ್ಮಿಕೊಳ್ಳಲಾಯಿತು. ಅವರಲ್ಲಿ ಭಾಗವಹಿದ್ದ ಕನ್ನಡ ಮಾತಾಡುವ ಸದಸ್ಯರಲ್ಲಿ ಪ್ರಮುಖರು :

  • Mrs Rajalakshmi and Dr. B. Ramaswamy,
  • Mrs. Uma and Dr. S. Satyanarayana,
  • Mrs. Ramaa and Dr. S Nagaraja Rao
  • Mrs. Vasantha and Mr. S. Raghavendra Rao

ಕನ್ನಡ ಸಂಘ, ಟೊರಾಂಟೋ ಸ್ಥಾಪನೆ

ಬದಲಾಯಿಸಿ

೧೯೬೮ ರ ಬೇಸಿಗೆಯಲ್ಲಿ 'ಪ್ರಾವಿನ್ಷಿಯಲ್ ಪಾರ್ಕ್' ಗೆ ಪಿಕ್ನಿಕ್ ಕಾರ್ಯಕ್ರಮ, ಈತರಹದ ಮಿಲನ ಮತ್ತು ಸದಸ್ಯರ ಒಡನಾಟ ೫ ವರ್ಷ ಹೀಗೆಯೇ ಸಾಗಿತ್ತು. ಪ್ರತಿ ಕನ್ನಡಿಗನಿಗೂ, ಯುಗಾದಿಯ ಹಬ್ಬ ಹಾಗೂ ಅದರ ಜೊತೆಗೆ ಹಮ್ಮಿಕೊಳ್ಳಲಾಗುತ್ತಿದ್ದ ಪಿಕ್ ನಿಕ್ ಎಂದು ಬರೂತ್ತೋ ಎಂದು ಕಾಯ್ಯುವಷ್ಟು ಆಸಕ್ತಿ ಹುಟ್ಟಿತು. ಹೊಸಬರು ಸಂಘಕ್ಕೆ ಬರಲಾರಂಭಿಸಿದರು. ಅವರಲ್ಲಿ ಮುಖ್ಯರು :

  • Mrs. and Prof. K Iswaran,
  • Mrs and Mr. G. Baichwal,
  • Mrs. and Dr. H S Radhakrishna,
  • Mrs. and Dr. J Islur,
  • Mrs and Mr. K Venkataraman.

೧೯೭೨ ರ ನಂತರ

ಬದಲಾಯಿಸಿ

೬೮-೭೨ ರ ಸಮಯದಲ್ಲಿ ಪ್ರತಿವರ್ಷವೂ 'ಪಿಕ್ ನಿಕ್' ಜರುಗುತ್ತಿತ್ತು. ಕನ್ನಡ ಸಂಘದ ಸ್ಥಾಪನೆ ಮಾಡುವ ಬಗ್ಗೆ ಎಲ್ಲರೂ ಆಶಿಸಿದರು. ಮತದಾನದಿಂದ ಎಲ್ಲರೂ ಚುನಾಯಿಸಿದ ಪ್ರತಿನಿಧಿಗಳು, ಮತ್ತು ಆ ಪ್ರತಿನಿಧಿಗಳಿಂದ ಆರಿಸಿದ ಸಮಿತಿ, ಮತ್ತು ಎಲ್ಲರೂ ಜವಾಬ್ದಾರಿಯನ್ನು ಹೊತ್ತುಕೊಂಡು ಕಾರ್ಯಕ್ರಮಗಳನ್ನು ಆಯೋಜಿಸುವ ಅಗತ್ಯತೆಯನ್ನು ಮನಗಂಡರು. ನಮ್ಮ ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರ, ಮತ್ತು ಕೇರಳಾ ರಾಜ್ಯದ ಸಂಘಗಳು, ಕೆಲಸಮಾಡುತ್ತಿವೆ. ಟೊರಾಂಟೋದಲ್ಲಿ ಭಾರತೀಯರ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಿದೆ. ಈ ಬೆಳವಣಿಗೆಗಳಿಂದ ಪ್ರಭಾವಿತರಾದ ಕನ್ನಡಿಗರಿಂದ ೩೦ ಚಾರ್ಲ್ಸ್ ಸ್ಟ್ರೀಟ್ (ಪ)ಟೊರಾಂಟೋ.೧೯೭೩ ರ ಚಳಿಗಾಲದಲ್ಲಿ, ಕನ್ನಡ ಸಂಘದ ಸ್ಥಾಪನೆಯಾಗಿ ಟೊರಾಂಟೋ ನ ಎಡ್ವರ್ಡ್ಸ್ ಗಾರ್ಡನ್ ನಲ್ಲಿ, ೧೯೭೩ ರ, ಜುಲೈ ೨೨, ರಂದು, 'ಮೊಟ್ಟಮೊದಲ ಜನರಲ್ ಬಾಡಿ ಮೀಟಿಂಗ್' ಆಯೋಜಿಸಲಾಯಿತು; ಹೀಗೆ ಕೆಲವೇ ಕನ್ನಡಿಗರ ಮನೆಯ ಹಬ್ಬಗಳು, ಮೊದಲಿನಿಂದಲೂ ಶ್ರಮಿಸಿದ ಪರಿವಾರಗಳು ಇಂದಿಗೂ ಮುಂಚೂಣಿಯಲ್ಲಿದ್ದು ಮಾರ್ಗದರ್ಶನ ಮಾಡುತ್ತಿವೆ.

ಈಗ ಕನ್ನಡ ಸಂಘ ಎತ್ತರಕ್ಕೆ ಬೆಳೆದಿದೆ

ಬದಲಾಯಿಸಿ

ಹೀಗೆ ಮೊದಲು ಕೆಲವು ಹತ್ತಾರು ಕನ್ನಡಾಸಕ್ತರಿಂದ ಆರಂಭವಾಗಿ, ಈಗ ೫೦೦ ಜನ ಸದಸ್ಯರ ಒಕ್ಕೂಟವಾಗಿದೆ. ಸಂಘದ ಮನಸ್ಸಿನಲ್ಲಿದ್ದ ಪ್ರಮುಖ ಕಾರ್ಯಕ್ರಮಗಳು :

  • ಕರ್ನಾಟಕದ/ರಾಷ್ಟ್ರದ ಹಬ್ಬಗಳ ಆಯೋಜನೆ : ಸ್ವತಂತ್ರ್ಯ ದಿನಾಚರಣೆ, ಗಣೇಶನ ಹಬ್ಬ, ಯುಗಾದಿ ಹಬ್ಬ, ದೀಪಾವಳಿ, ಮೊದಲಾದ ಹಬ್ಬ-ಹರಿದಿನಗಳ ಆಚರಣೆ.
  • ೪ ವರ್ಷದ ಹಸುಳೆಗಳಿಂದ, ಎಲ್ಲಾ ವಯೋಮಾನದವರಿಗೂ ಭಾಗವಹಿಸಲು ಅವಕಾಶ ಕಲ್ಪಿಸುವುದು. ಸ್ಥಾನೀಯ ಕಲಾವಿದರಿಗೆ ರಂಗಮಂಚವನ್ನು ಒದಗಿಸುವುದು,
  • ಕ್ರೀಡೆಗಳ ಆಯೋಜನೆ,ಗಾಲ್ಫ್, ಕ್ರಿಕೆಟ್, ಟೇಬಲ್ ಟೆನ್ನಿಸ್, ಕೇರಂ, ಚೆಸ್, ಮೊದಲಾದ ಆಟ ಸ್ಪರ್ಧೆಗಳ ಆಯೋಜನೆ.
  • ಎಲ್ಲರಿಗೂ, ಜಾತಿ, ಮತ, ವರ್ಗದ ಭೇದಭಾವವಿಲ್ಲದೆ ಬೆರೆಯಲು ಅನುವುಮಾಡಿಕೊಡುವುದು ಒಂದು ಉದ್ದೇಶ್ಯ.
  • ಯುವ ಪ್ರತಿಭೆಗಳನ್ನು ಗುರುತಿಸಿ,ಅವರನ್ನು ಬೆಳೆಸಲು ಹಮ್ಮಿಕೊಂಡ ಯೋಜನೆಗಳು,
  • ಒಳ್ಳೆಯ ಸಂಗೀತ ಕಛೇರಿಗಳ ಆಯೋಜನೆ,
  • ಸದಸ್ಯರಿಗೆ 'ಇ-ಮಾಹಿತಿಪತ್ರದ ವಿತರಣೆಯ ಯೋಜನೆ',[]
  • 'ಕ್ಯಾಸಿಲೋಮ ಟ್ರಿಪ್,'
  • ಹೊಸ ಸದಸ್ಯರ ಮಿಲನ,
  • ಹಿರಿಯರ ಕೂಟ,
  • ಟೊರಾಂಟೊ ಕನ್ನಡ ವಾಣಿ ಪತ್ರಿಕೆ []

೨೦೧೧ ರ, ಕನ್ನಡ ರಾಜ್ಯೋತ್ಸವದಿನದ ಆಚರಣೆ

ಬದಲಾಯಿಸಿ

ಸನ್, ೨೦೧೧ ರ, ಕನ್ನಡ ರಾಜ್ಯೋತ್ಸವ ಸಂಧರ್ಭದಲ್ಲಿ 'ಟೊರಾಂಟೋ ಕನ್ನಡ ಸಂಘ,'[] ಒಂದು ಸಮಾರಂಭವನ್ನು ಆಯೋಜಿಸಿತ್ತು. ಆಗ '೮ ನೇ ಜ್ಞಾನಪೀಠ ಪ್ರಶಸ್ತಿ ವಿಜೇತ', ಡಾ.ಚಂದ್ರಶೇಖರ ಕಂಬಾರ ರನ್ನು ಆದರಪೂರ್ವಕವಾಗಿ ಬರಮಾಡಿಕೊಂಡು, ಅವರನ್ನು ಸನ್ಮಾನಿಸಲಾಯಿತು.

ಸನ್.೨೦೧೩ ರಲ್ಲಿ 'ರತ್ನ ಮಹೋತ್ಸವಾಚರಣೆ'

ಬದಲಾಯಿಸಿ

ಸಂಪರ್ಕಿಸಿ:

ಡಾ.ಚಂದ್ರಶೇಖರ ಕಂಬಾರರ ಸಂದೇಶ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. Executive committee-2020-21
  2. 'ಟೊರಾಂಟೊ ಕನ್ನಡ ವಾಣಿ ಪತ್ರಿಕೆ' ಜೂನ್,೨೦೧೫
  3. kannada sangha toronto