ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ

ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಕಲಿನಾ ಕ್ಯಾಂಪಸ್ ನಲ್ಲಿದೆ. ಇದು ೧೯೭೯-೮೦ನೆಯ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭವಾಯಿತು. ಡಾ| ಚಿದಂಬರ ದೀಕ್ಷಿತರು ಈ ವಿಭಾಗವನ್ನು ಮೊದಲು ಕಟ್ಟಿ ಬೆಳೆಸಿದರು. ಇಲ್ಲಿ ಸುಮಾರು ೭೦ ಮಂದಿ ಪ್ರತಿ ವರ್ಷ ಅಧ್ಯಯನ ಮಾಡುತ್ತ ಬಂದಿದ್ದಾರೆ. ಇಲ್ಲಿ ಕನ್ನಡದಲ್ಲಿ ಎಂ.ಎ., ಎಂ.ಫಿಲ್., ಪಿಎಚ್.ಡಿ., ಸರ್ಟಿಫಿಕೇಟ್ ಮತ್ತು ಡಿಪ್ಲೊಮ ತರಗತಿಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.

ವಿಶ್ವವಿದ್ಯಾಲಯದ ಐತಿಹ್ಯ ಬದಲಾಯಿಸಿ

  • ಕರ್ನಾಟಕದ ರಾಜಧಾನಿ ಬೆಂಗಳೂರನ್ನು ಬಿಟ್ಟರೆ ಅತಿ ಹೆಚ್ಛು ಕನ್ನಡಿಗರಿರುವ ಪ್ರದೇಶವೆಂದರೆ ಮುಂಬಯಿ. ಮಹಾರಾಷ್ಟ್ರ ನೆಲದಲ್ಲಿ ಕನ್ನಡಿಗರ ಆಶೋತ್ತರಗಳನ್ನು ಪ್ರತಿನಿಧಿಸುತ್ತಿರುವ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಹಲವಾರು ಮಹತ್ತರ ಸಾಧನೆಯನ್ನು ಮಾಡುತ್ತಿದೆ.

ಮುಂಬಯಿ ಒಂದು ವಾಣಿಜ್ಯ ಮಹಾನಗರ. ಇದು ಈ ರಾಷ್ಟ್ರದ ಆರ್ಥಿಕ ಆಗುಹೋಗುಗಳ ಕೇಂದ್ರಬಿಂದುವಾಗಿದೆ. ಸುಮಾರು ೧೪ ರಿಂದ ೧೫ ಲಕ್ಷ ಕನ್ನಡಿಗರು ಇಲ್ಲಿ ನೆಲೆಸಿದ್ದಾರೆ. ಇಲ್ಲಿರುವ ೮೦ ಪ್ರತಿಶತ ಹೋಟೇಲುಗಳು ಕನ್ನಡಿಗರದು.

  • ಮುಂಬಯಿಯಲ್ಲಿ ಕನ್ನಡ ಸಂಸ್ಥೆಗಳು, ಶಾಲೆ-ಕಾಲೇಜುಗಳು, ವಿಶ್ವವಿದ್ಯಾಲಯದ ಕನ್ನಡ ವಿಭಾಗ ಹೀಗೆ ದಿನವಿಡೀ ಒಂದಲ್ಲ ಒಂದು ಸಾಂಸ್ಕ್ರುತಿಕ ಅಸ್ಮಿತೆಯನ್ನು ಬಿಂಬಿಸುತ್ತಿದೆ. ಈ ವಾಣಿಜ್ಯ ಮಹಾನಗರದಲ್ಲಿಯ ಕನ್ನಡ ಸಂಸ್ಕ್ರುತಿಗೆ ತನ್ನದೇ ಆದ ಒಂದು ಚಾರಿತ್ರಿಕ ಮಹತ್ವವಿದೆ.

ಇತಿಹಾಸ:- ಬ್ರಿಟಿಷರು ತಮ್ಮ ಆಡಳಿತದ ಅನುಕೂಲಕ್ಕಾಗಿ ಭಾರತವನ್ನು ಹಲವು ಪ್ರಾಂತ್ಯಗಳನ್ನಾಗಿ ವಿಭಜಿಸಿದರು. ಇದರಿಂದಾಗಿ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳು (ಬೆಳಗಾವಿ, ಬಿಜಾಪುರ, ಧಾರವಾಡ, ಉತ್ತರ ಕನ್ನಡ ಜಿಲ್ಲೆ) ಮುಂಬಯಿ ಪ್ರಾಂತಕ್ಕೆ ಸೇರಿಕೊಂಡವು. *ಅಂದಿನಿಂದಲೇ ಮುಂಬಯಿಗೆ ಕನ್ನಡದ ಸಂಪರ್ಕ ಒದಗಿ ಬಂದಿತು. ಕ್ರಿ.ಶ ೧೮೫೭ ರಲ್ಲಿ ರಾಷ್ಟ್ರದಲ್ಲೇ ಮೊದಲ ಬಾರಿಗೆ ಮೂರು ವಿಶ್ವವಿದ್ಯಾಲಯಗಳು ಸ್ಥಾಪನೆಯಾದವು. ಅವುಗಳಲ್ಲಿ ಮುಂಬಯಿ ಸಹ ಒಂದು. ಈ ಕಾರಣದಿಂದ ವಾಣಿಜ್ಯ ನಗರವಾಗಿದ್ದ ಮುಂಬಯಿ ಶೈಕ್ಷಣಿಕ ಕೇಂದ್ರವೂ ಆಯಿತು. ಉತ್ತರ ಕರ್ನಾಟಕದದ ಜನ ಸಹಜವಾಗಿಯೇ ಇತ್ತ ಮುಖ ಮಾಡುವಂತಾಯಿತು. ಇನ್ನೊಂದು ಕಡೆ ಕಡಲ ಸಂಚಾರ ಸಂಪರ್ಕದಿಂದಾಗಿ ಕರಾವಳಿ ಕರ್ನಾಟಕದ ಜನ ನಾನಾ ಕಾರಣಗಳಿಗೆ ಮುಂಬಯಿಗೆ ವಲಸೆ ಬಂದರು. ಕ್ರಮೇಣ ಇಲ್ಲಿ ಕನ್ನಡಿಗರ ಸಾಂಸ್ಕೃತಿಕ ಚಟುವಟಿಕೆಗಳು ಬಲಗೊಂಡವು.

ಹೊರನಾಡಿನ ಕನ್ನಡ ವಿಭಾಗಗಳು ಬದಲಾಯಿಸಿ

ಹೊರನಾಡಿನಲ್ಲಿರುವ ಕನ್ನಡ ವಿಭಾಗಗಳಲ್ಲಿ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗಕ್ಕೆ ವಿಶಿಷ್ಟವಾದ ಸ್ಥಾನಮಾನವಿದೆ. ೧೯೭೯ ರಲ್ಲಿ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ಶಿಕ್ಷಣದೊಡನೆ ಮುಂಬಯಿ ವಿಶ್ವವಿದ್ಯಾಲಯದ ಸಂಬಂಧ ಬೆಳೆಯುತ್ತಾ ಬಂದಿರುವುದು ಇತಿಹಾಸಕ್ಕೆ ಸೇರಿದ ಸಂಗತಿಯಾಗಿರುತ್ತದೆ. ಕಳೆದ ಮೂವತ್ತು ವರ್ಷಗಳಲ್ಲಿ ವಿಭಾಗ ಅನೇಕ ಮಹತ್ವದ ಸಾಧನೆಗಳನ್ನು ಗೈದಿದೆ. ಇಲ್ಲಿ ಕೇವಲ ಎಂ.ಎ, ಎಂ.ಫಿಲ್, ಪಿಎಛ್.ಡಿ ಅಧ್ಯಯನವಲ್ಲದೆ, ಪೂರಕವಾಗಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕ್ರುತಿಯ ಉಳಿವಿಗಾಗಿ ಮಾಡಬೇಕಾದ ಕಾರ್ಯವೇನೆಂದು ಯೋಚಿಸುತ್ತಾ ಮತ್ತಷ್ಟು ಅದರ ಬೆಳವಣಿಗೆಗಾಗಿ ಪ್ರಯತ್ನಿಸುತ್ತಿದೆ.[೧]

ಪೂರ್ಣ ಪ್ರಮಾಣದ ಕನ್ನಡ ವಿಭಾಗ ಬದಲಾಯಿಸಿ

  • ೧೯೭೯-೮೦ರ ಶೈಕ್ಷಣಿಕ ವರ್ಷದಲ್ಲಿ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಪೂರ್ಣ ಪ್ರಮಾಣದ ಕನ್ನಡ ವಿಭಾಗ ಆರಂಭವಾಯಿತು. ಅದಕ್ಕೂ ಹಿಂದೆ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನಕ್ಕೆ ಅವಕಾಶವಿತ್ತು. ೧೯೨೨ರಿಂದಲೇ ಮುಂಬಯಿ ವಿಶ್ವವಿದ್ಯಾಲಯದಲ್ಲಿ ವ್ಯಾಪ್ತಿಯಲ್ಲಿ ವಿವಿಧ ಕಾಲೇಜು ಗಳಲ್ಲಿ ಕನ್ನಡ ಅಧ್ಯಯನಕ್ಕೆ ಅವಕಾಶ ದೊರಕಿತು. ೧೯೫೪ರಿಂದ ೧೯೭೯ರವರೆಗೆ ರೂಪಾರೇಲ್ ಕಾಲೇಜಿನಲ್ಲಿ ಕನ್ನಡದ ಬೆಳವಣಿಗೆಯನ್ನು ಯಶಸ್ವಿಯಾಗಿ ನಡೆಸಿಕೊಂಡುಬಂದ ಪ್ರಾಧ್ಯಾಪಕ, ಕವಿ, ಘನ ವಿದ್ವಾಂಸ, ಪ್ರೊ.ಚಿದಂಬರ ದೀಕ್ಷಿತರು.
  • ಇವರು ಕನ್ನಡ ವಿಭಾಗದ ಮೊದಲ ಮುಖ್ಯಸ್ಥರಾಗಿ ನೇಮಕಗೊಂಡರು. ಎಂ.ಎ ತರಗತಿಗಳು ನಿಯಮಿತವಾಗಿ ಆರಂಭಗೊಂಡವು. ಕನ್ನಡ ವಿಭಾಗದ ಬೆಳವಣಿಗೆಗೆ ಭದ್ರ ಅಡಿಪಾಯವನ್ನು ಹಾಕಿ ಬೇಕಾದ ರೂಪುರೇಷೆಯನ್ನು ಹಾಕಿಕೊಟ್ಟವರು ಪ್ರೊ.ದೀಕ್ಷಿತ್ ಅವರು. ನಂತರ ೧೯೮೪ರಲ್ಲಿ ಡಾ. ಶ್ರೀನಿವಾಸ ಹಾವನೂರರು ಕನ್ನಡ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿ ನಿಯುಕ್ತರಾದರು. ವಿಭಾಗದ ಅಭಿವೃದ್ಧಿಯಲ್ಲಿ ಡಾ.ಶ್ರೀನಿವಾಸ್ ಹಾವನೂರರು ತಮ್ಮನ್ನು ತಾವು ತೊಡಗಿಸಿಕೊಂಡರು.
  • ೧೮೮೬ ರಲ್ಲಿ ಡಾ. ತಾಳ್ತಜೆ ವಸಂತ ಕುಮಾರರು ವಿಭಾಗದಲ್ಲಿ ಪ್ರವಾಛರಾಗಿ ನೇಮಕಗೊಂಡರು. ಇವರು ಕನ್ನಡವನ್ನು ಕಟ್ಟಿ ಬೆಳೆಸುವಲ್ಲಿ ಮಾಡಿದ ಪ್ರಯತ್ನಗಳು ಶ್ಲಾಘನೀಯ. ನಂತರ ಒಬ್ಬ ಉತ್ಸಾಹಿ, ಯುವ ಉಪನ್ಯಾಸಕರಾಗಿ ಡಾ. ಜಿ.ಎನ್.ಉಪಾಧ್ಯರು, ತಮ್ಮ ಗುರುಗಳಾದ ಡಾ. ತಾಳ್ತಜೆ ವಸಂತ ಕುಮಾರ್ ಮುನ್ನಡೆಸಿದ ಕನ್ನಡ ವಿಭಾಗವನ್ನು ಯಶಸ್ವೀ ಪಥದತ್ತ ಸಾಗಿಸಲು ಸತತವಾಗಿ ಪರಿಶ್ರಮವನ್ನು ಪಟ್ಟರು.
  • ಡಾ. ಜಿ.ಎನ್.ಉಪಾಧ್ಯ ಇವರ ಕಾರ್ಯಾವಧಿಯಲ್ಲಿ ಎಂ.ಎ, ಎಂ.ಫಿಲ್, ಪಿಎಚ್.ಡಿಯ ಅಧ್ಯಯನಕ್ಕಾಗಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಛಿತು. ಮುಂಬಯಿ ಮಾತ್ರವಲ್ಲದೆ ಕರ್ನಾಟಕದ ವಿದ್ಯಾರ್ಥಿಗಳನ್ನೂ ಆಕರ್ಷಿಸುವಲ್ಲಿ ಕನ್ನಡ ವಿಭಾಗ ಯಶಸ್ವಿಯಾಗಿದೆ ಎನ್ನುವುದು ಉಲ್ಲೇಖನೀಯ ಅಂಶ. ಸದ್ಯ ಅವರು ವಿಭಾಗದ ಮುಖ್ಯಸ್ಥರಾಗಿ, ವಿಭಾಗದ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ವಿಸ್ತಾರಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
  • ಕನ್ನಡ ವಿಭಾಗದ ಬೆಳವಣಿಗೆಯಲ್ಲಿ ಸ್ಥಳೀಯ ಕಾಲೇಜುಗಳ ಕನ್ನಡ ಪ್ರಾಧ್ಯಾಪಕರು ಕೈ ಜೋಡಿಸಿದ್ದಾರೆ. ಡಾ. ಜಿ.ಡಿ.ಜೋಶಿ, ಡಾ.ಸುನೀತಾ ಶೆಟ್ಟಿ, ಡಾ.ಕೆ.ವಿಶ್ವನಾಥ ಕಾರ್ನಾಡ, ಡಾ.ಜೀವಿ.ಕುಲಕರ್ಣಿ, ಡಾ ರಘುನಾಥ, ಡಾ.ರೇಖಾ, ಅವರು ವಿಭಾಗದ ಸಂದರ್ಶಕ ಪ್ರಾಧ್ಯಾಪಕರಾಗಿ ಮಹತ್ವದ ಕೊಡಿಗೆಯನ್ನಿತ್ತಿದ್ದಾರೆ. ದಿ.ಡಾ ಸಂಜೀವ ಶೆಟ್ಟಿಯವರು ವಿಭಾಗದ ಸಹಪ್ರಾಧ್ಯಪಕರಾಗಿ ಕನ್ನಡ ಭಾಷೆಗಾಗಿ ಅವಿರತವಾಗಿ ಹೋರಾಡಿದ್ದರು.
  • ಶ್ರೀಮತಿ ಪೂರ್ಣಿಮಾ ಸುಧಾಕರಶೆಟ್ಟಿ ಕನ್ನಡೇತರರಿಗೆ, ಕನ್ನಡ ಬಾರದವರಿಗೆ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ನಡೆಸುವ ಕನ್ನಡ ಸರ್ಟಿಫಿಕೇಟ್ ಕೋರ್ಸ್ ನ ಸಂಚಾಲಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪೂರ್ಣಿಮಾ .ಎಸ್.ಶೆಟ್ಟಿ, ಜ್ಯೋತಿ ಸತೀಶ್, ಹಾಗೂ ಶಿವರಾಜ್ ಎಂ.ಜಿ, ಕನ್ನಡ ವಿಭಾಗದಲ್ಲಿ ಸಂಶೋಧನ ಸಹಾಯಕರಾಗಿ ನೇಮಕಗೊಂಡಿದ್ದಾರೆ.

ಅವಕಾಶಗಳು ಬದಲಾಯಿಸಿ

  • ಸ್ನಾತಕೋತ್ತರ ಕನ್ನಡ ಎಂ.ಎ, ಎಂ.ಫಿಲ್, ಪಿಎಚ್.ಡಿ ಅಧ್ಯಯನಕ್ಕೆ ವಿಭಾಗದಲ್ಲಿ ಅವಕಾಶವಿದೆ. ಇದುವರೆಗೆ- ಸುಮಾರು ೩೪ ಮಂದಿ ಡಾಕ್ಟರೇಟ್ ಪದವಿಯನ್ನೂ, ೪೯ ಮಂದಿ ಎಂ.ಫಿಲ್ ಪದವಿಯನ್ನು ಪಡೆದಿದ್ದಾರೆ. ಪಾಠ ಪ್ರವಚನಗಳ ಜೊತೆಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮುಖ್ಯಸ್ಥರಾದ ಡಾ.ಜಿ.ಎನ್.ಉಪಾಧ್ಯ ಅನೇಕ ಸಂಪನ್ಮೂಲ ವ್ಯಕ್ತಿಗಳನ್ನು ಕರ್ನಾಟಕದಿಂದಲೂ ಬರಮಾಡಿಕೊಂಡು ವಿಚಾರ ಸಂಕ್ರಣ, ಕಮ್ಮಟ, ಸಾಹಿತ್ಯ ಸಂವಾದ ಮೊದಲಾದ ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.
  • ಕನ್ನಡ ವಿಭಾಗದಲ್ಲಿ ಕುವೆಂಪು ಸಾಹಿತ್ಯೋತ್ಸವವನ್ನು ಅದ್ದೂರಿಯಾಗಿ ನಡೆಸಿತ್ತು. ಈ ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ಮುಖ್ಯಮಂತ್ರಿ ಚಂದ್ರು (ಮುಖ್ಯ ಅತಿಥಿಗಳಾಗಿ ಪ್ರೊ. ಎಂ.ಎಛ್ ಕ್ರಷ್ಣಯ್ಯ, ಅಧ್ಯಕ್ಷರು, (ಕನ್ನಡ ಸಾಹಿತ್ಯ ಅಕಾಡೆಮಿ, ಬೆಂಗಳೂರು), ಡಾ. ಪ್ರಧಾನ ಗುರು ದತ್ (ಅಧ್ಯಕ್ಷ್ಕರು, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ), ಖ್ಯಾತ ಸಾಹಿತಿ ನಾಡೋಜ, ಡಾ.ಹಂಪನಾ, ಖ್ಯಾತ ಸಾಹಿತಿ ನಾಡೋಜ ಡಾ. ಕಮಲಾ ಹಂಪನಾ, ಚಂದ್ರಶೇಖರ ನಂಗಲಿ (ಖ್ಯಾತ ವಿಮರ್ಶಕರು), ಲಿಂಗದೇವರು ಹಳೆಮನೆ (ನಿರ್ದೇಶಕರು ರಂಗಾಯಣ), ಮನುದೇವ, ಡಾ.ಜಿ.ಕೆ ರಮೇಶ್ ಮೊದಲಾದವರು ಭಾಗನವಹಿಸಿದ್ದರು. ಇವೆಲ್ಲದರ ಜೊತೆ ಜೊತೆಯಲ್ಲಿ ವಿಭಾಗ ಸಂಶೋಧನಾ ಯೋಜನೆಗಳಲ್ಲೂ ತೊಡಗಿಕೊಂಡಿದೆ.
  • ಈಗಾಗಲೇ 'ಮೂರು ಯುಜಿಸಿ ಮೇಜರ್ ಪ್ರೊಜೆಕ್ಟ್' ಹಾಗೂ 'ಐದು ಮೈನರ್ ರಿಸರ್ಚ್ ಯೋಜನೆ'ಗಳನ್ನು ವಿಭಾಗ ಯಶಸ್ವಿಯಾಗಿ ಮುಗಿಸಿದೆ. ವಿಭಾಗ ನಡೆಸಿಕೊಂಡು ಬರುತ್ತಿರುವ ಕನ್ನಡ ಸರ್ಟಿಫಿಕೇಟ್ ಹಾಗೂ ಡಿಪ್ಲೋಮಾ ಕೋರ್ಸ್. ಕನ್ನಡೇತರರಿಗೆ, ಕನ್ನಡ ಬಾರದವರಿಗೆ ಕನ್ನಡ ಕಲಿಸುವ ಈ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ಕನ್ನಡ ಸಂಘ ನವಿಮುಂಬಯಿ, ಪನ್ವೇಲ್ ಕರ್ನಾಟಕ ಸಂಘ ಕನ್ನಡ ವಿಭಾಗಕ್ಕೆ ಸಹಕಾರ ನೀಡುತ್ತಿರುವುದು ಗಮನೀಯ ಅಂಶ.
  • ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ತನ್ನ ಅಸ್ತಿತ್ವಕ್ಕೆ ಬಂದಂದಿನಿಂದ ನಿರಂತರ ತನ್ನ ಚಟುವಟಿಕೆಗಳನ್ನು ಕ್ರೀಯಾಶೀಲವಾಗಿ ಹೆಚ್ಚಿಸುತ್ತಲೇ ಬಂದಿದೆ. ಭಾರತದ ಇತರ ಕನ್ನಡ ವಿಭಾಗಗಳೊಡನೆ ಹೋಲಿಸಿದಾಗ ಕನ್ನಡ ವಿಭಾಗದ ಹಿರಿಮೆ ಗರಿಮೆಯ ಮಟ್ಟ ಮೇರುಸ್ತರದಲ್ಲಿ ಇರುವುದನ್ನು ಮನಗಾಣಬಹುದು. ವಿಭಾಗವು ಸ್ಥಳೀಯ ಕನ್ನಡ ಸಂಘ-ಸಂಸ್ಥೆಗಳೊಂದಿಗೆ ಸೇರಿಕೊಂಡು ವಿಚಾರ ಸಂಕಿರಣ, ದತ್ತಿ ಉಪನ್ಯಾಸ ಮೊದಲಾದ ಕಾರ್ಯಕ್ರಮಗಳನ್ನು ಅನೂಚೂನವಾಗಿ ನಡೆಸಿಕೊಂಡು ಬರುತ್ತಿದೆ. ವಿಭಾಗದಲ್ಲಿ ಸದ್ಯ ಏಳು ದತ್ತಿ ನಿಧಿಗಳು ಸ್ಥಾಪನೆಯಾಗಿವೆ.

ಕನ್ನಡ ವಿಭಾಗವನ್ನು ತಲುಪಲು ಬದಲಾಯಿಸಿ

ವಿದ್ಯಾನಗರಿ ಕ್ಯಾಂಪಸ್ ನ, ಕನ್ನಡ ವಿಭಾಗ, 'ರಾನಡೆ ಭವನ'ದ ಮೊದಲ ಅಂತಸ್ತಿನಲ್ಲಿದೆ. ವಿದ್ಯಾನಗರಿ ಕ್ಯಾಂಪಸ್, ವಿದ್ಯಾನಗರಿ ಮಾರ್ಗ್ ನಲ್ಲಿದೆ.(C.S.T. Road) ಕಲಿನಾ ಎಂದು ಕರೆಯುವ ಕಲಿನ.ಸೆಂಟ್ರೆಲ್ ಮತ್ತು ವೆಸ್ಟರ್ನ್ ರೈಲ್ವೆ ದಾರಿಯಲ್ಲಿದೆ. ಬಿ.ಇ.ಎಸ್ಟಿ ಬಸ್ ನಂಬರ್, ೩೧೮, ೩೧೩, ೯೧ ಮತ್ತು ೩೭ ಕುರ್ಲಾ (ಪ) ದಿಂದ ೩೧೮, ೩೧೩ ಹಾಗೂ ೩೦೬ ಸಾಂತಾಕ್ರುಝ್ (ಪೂ) [ಪಶ್ಚಿಮ ರೈಲ್ವೆ] ವಿದ್ಯಾನಗರಿಯ ಮುಖಾಂತರ ಹೋಗುತ್ತವೆ. ಕಲಿನಾ ಕ್ಯಾಂಪಸ್ ನ, ಮುಖ್ಯದ್ವಾರದಿಂದ ಕನ್ನಡ ವಿಭಾಗಕ್ಕೆ ನಡೆದು ಹೋದರೆ ೫ ನಿಮಿಷಗಳು ಹಿಡಿಯುತ್ತವೆ.

ಇತಿಹಾಸ ಬದಲಾಯಿಸಿ

ಈಗಿನ ಮುಖ್ಯಸ್ಥರು ಬದಲಾಯಿಸಿ

ಡಾ. ಜಿ. ಎನ್. ಉಪಾಧ್ಯ

ಹಿಂದಿನ ಮುಖ್ಯಸ್ಥರು ಬದಲಾಯಿಸಿ

  1. ಪ್ರೊ.ಚಿದಂಬರ ದೀಕ್ಷಿತ
  2. ಡಾ.ಶ್ರೀನಿವಾಸ ಹಾವನೂರ
  3. ಡಾ.ತಾಳ್ತಜೆ ವಸಂತಕುಮಾರ

ಕೋರ್ಸ್ ಗಳು ಬದಲಾಯಿಸಿ

ಸಂಪರ್ಕ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. "Arts, Languages, Linguistics, Literature,Depts. of Kannade". Archived from the original on 2014-02-21. Retrieved 2015-04-13.

ಬಾಹ್ಯ ಸಂಪರ್ಕ ಬದಲಾಯಿಸಿ