ಕನ್ನಡ ಪತ್ರಿಕೋದ್ಯಮ

ಕನ್ನಡ ಪತ್ರಿಕೋದ್ಯಮದ ಇತಿಹಾಸ ಪ್ರಾರಂಭವಾಗುವುದು ೧೮೪೩ರಲ್ಲಿ ಪ್ರಕಟವಾದ 'ಮಂಗಳೂರು ಸಮಾಚಾರ' ಪತ್ರಿಕೆಯಿಂದ. ಇದುವೇ ಕನ್ನಡದ ಮೊದಲ ಪತ್ರಿಕೆಯೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದನ್ನು ಪ್ರಾರಂಭಿಸಿದವರು ಹರ್ಮನ್ ಮೋಗ್ಲಿಂಗ್.

ಈ ೨೧ನೇ ಶತಮಾನದ ದಿನಪತ್ರಿಕೆಗಳಲ್ಲಿ ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಕನ್ನಡಪ್ರಭ, ಉದಯವಾಣಿ ಮತ್ತು ವಿಜಯ ಕರ್ನಾಟಕ ಪ್ರಮುಖವಾದವು.