ಕದಿರು (ನೂಲು ತಯಾರಿಕೆ)
ಕದಿರು ಎಂದರೆ ಉಣ್ಣೆ, ಅಗಸೆ, ಸೆಣಬು, ಹತ್ತಿ ನಾರುಗಳನ್ನು ನೂಲುಗಳಾಗಿ ನೂಲುವುದಕ್ಕೆ, ಹೊಸೆಯುವುದಕ್ಕೆ ಬಳಸಲಾದ ಸಾಮಾನ್ಯವಾಗಿ ಕಟ್ಟಿಗೆಯಿಂದ ತಯಾರಿಸಲಾದ ನೇರವಾದ ಚೂಪು ತುದಿಯ ವಸ್ತು. ಇದಕ್ಕೆ ಹಲವುವೇಳೆ ಕೆಳಗೆ, ಮಧ್ಯದಲ್ಲಿ, ಅಥವಾ ಮೇಲೆ, ಸಾಮಾನ್ಯವಾಗಿ ಕದಿರು ಬಿಲ್ಲೆ ಎಂದು ಕರೆಯಲ್ಪಡುವ ದುಂಡು ಬಿಲ್ಲೆ ಅಥವಾ ಗೋಳಾಕಾರದ ವಸ್ತುವಿನ ಭಾರ ಲಗತ್ತಿಸಲಾಗುತ್ತದೆ. ಆದರೆ ಕದಿರು ಬಿಲ್ಲೆಯ ಭಾರವನ್ನು ಲಗತ್ತಿಸಲಾಗದ ಅನೇಕ ಕದಿರುಗಳು ಇವೆ. ಇವುಗಳ ಆಕಾರವನ್ನು ಕೆಳಗಡೆಗೆ ದಪ್ಪವಾಗಿಸಲಾಗುತ್ತದೆ, ಉದಾಹರಣೆಗೆ ಆರೆನ್‍ಬರ್ಗ್ ಮತ್ತು ಫ಼್ರೆಂಚ್ ಕದಿರುಗಳು. ನೂಲಿಗೆ ಮಾರ್ಗ ತೋರಿಸಲು ಕದಿರು ಮೇಲ್ಗಡೆ ಕೊಕ್ಕೆ, ಜಾಡು, ಅಥವಾ ಕಚ್ಚನ್ನು ಕೂಡ ಹೊಂದಿರಬಹುದು. ಒಬ್ಬರು ನೂಲಲು ಬಯಸುವ ನೂಲಿನ ದಪ್ಪವನ್ನು ಆಧರಿಸಿ ಕದಿರುಗಳು ಅನೇಕ ಭಿನ್ನ ಗಾತ್ರಗಳು ಮತ್ತು ತೂಕಗಳಲ್ಲಿ ಬರುತ್ತವೆ.
ಕದಿರುಗಳು ಸಾಮಾನ್ಯವಾಗಿ ಮೂರು ಭಾಗಗಳನ್ನು ಹೊಂದಿರುತ್ತವೆ: ಹಿಡಿ, ಕದಿರು ಬಿಲ್ಲೆ ಮತ್ತು ಕದಿರುಂಡೆ. ಕದಿರಿನ ಹಿಡಿಗಳನ್ನು ಅನೇಕ ವಿವಿಧ ವಸ್ತುಗಳಿಂದ ತಯಾರಿಸಬಹುದು, ಉದಾಹರಣೆಗೆ ಕಟ್ಟಿಗೆ, ಲೋಹ, ಮೂಳೆ ಅಥವಾ ಪ್ಲಾಸ್ಟಿಕ್. ಇವು ಬಹಳ ಸ್ವಲ್ಪ ಆಕಾರವನ್ನು ಹೊಂದಿರಬಹುದು ಅಥವಾ ಕದಿರು ಬಿಲ್ಲೆಯ ಭಾಗವನ್ನು ರಚಿಸಲು ನಾಟಕೀಯವಾದ ಆಕಾರವನ್ನು ಹೊಂದಿರಬಹುದು. ಹಿಡಿಗಳನ್ನು ಸರಳವಾಗಿ ಬಿಟ್ಟಿರಬಹುದು ಅಥವಾ ಚಿತ್ರಕಲೆ ಅಥವಾ ಕೆತ್ತನೆಯಿಂದ ಅಲಂಕರಿಸಿರಬಹುದು. ಹಿಡಿಯನ್ನು ಬೆರಳುಗಳ ನಡುವೆ ತಿರುಗಿಸುವ ಮೂಲಕ ಅಥವಾ ಅದನ್ನು ಕೈ ಮತ್ತು ತೊಡೆಯಂತಹ ತಮ್ಮ ಶರೀರದ ಮತ್ತೊಂದು ಭಾಗದ ನಡುವೆ ಉರುಳಿಸುವ ಮೂಲಕ ಹಿಡಿಯಿಂದ ನೂಲವವನು ತಿರುಚನ್ನು ಸೇರಿಸುತ್ತಾನೆ. ಹಿಡಿಯ ದಪ್ಪವು ಎಷ್ಟು ವೇಗವಾಗಿ ಕದಿರು ನೂಲುತ್ತದೆ ಎಂಬುದರ ಮೇಲೆ ಪ್ರಭಾವ ಬೀರುತ್ತದೆ ಮತ್ತು ಹೆಚ್ಚು ತೆಳ್ಳಗಿನ ಹಿಡಿಗಳು ಹೆಚ್ಚು ವೇಗವಾಗಿ ನೂಲುವ ಕದಿರಿಗೆ ಕೊಡುಗೆ ನೀಡುತ್ತವೆ.[೧]
ಕದಿರು ಬಿಲ್ಲೆ ಎಂದರೆ ಅನೇಕ ಪ್ರಕಾರಗಳ ಕದಿರುಗಳಿಗೆ ಸೇರಿಸಲಾದ ಒಂದು ತೂಕ. ಇದನ್ನು ಕಟ್ಟಿಗೆ, ಲೋಹ, ಗಾಜು, ಪ್ಲಾಸ್ಟಿಕ್, ಕಲ್ಲು, ಜೇಡಿಮಣ್ಣು ಅಥವಾ ಮೂಳೆ ಸೇರಿದಂತೆ ಅನೇಕ ವಿವಿಧ ವಸ್ತುಗಳಿಂದ ತಯಾರಿಸಬಹುದು. ಕದಿರು ಬಿಲ್ಲೆಗಳನ್ನು ಅಲಂಕರಿಸಬಹುದು ಅಥವಾ ಸರಳವಾಗಿ ಬಿಡಬಹುದು, ಮತ್ತು ಅವನ್ನು ಶಾಶ್ವತವಾಗಿ ಹಿಡಿಗೆ ಲಗತ್ತಿಸಬಹುದು ಅಥವಾ ಅವು ತೆಗೆಯಬಲ್ಲವಾಗಿರಬಹುದು. ಕದಿರುಂಡೆಯು ಆರಂಭದಲ್ಲಿ ಕದಿರಿನ ಒಂದು ಸ್ವಾಭಾವಿಕ ಭಾಗವಾಗಿರುವುದಿಲ್ಲ, ಆದರೆ, ಅದರ ರಚನೆಯಾದಂತೆ ಕದಿರಿನ ರಚನೆಯಲ್ಲಿ ಪಾತ್ರವಹಿಸುತ್ತದೆ ಒಂದು ಸ್ವಲ್ಪ ಉದ್ದದ ನೂಲು ಅಥವಾ ದಾರವನ್ನು ಹೊಸೆಯಲಾದಾಗ ಅದನ್ನು ಕದಿರಿನ ಹಿಡಿ ಅಥವಾ ಕದಿರು ಬಿಲ್ಲೆಯ ಸುತ್ತ ಕದಿರುಂಡೆಯನ್ನು ರಚಿಸಲು ಸುತ್ತಲಾಗುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ Franquemont, Abby (2009). Respect the Spindle. USA: Interweave Press. pp. 26–32. ISBN 978-1-59668-155-2.